ಪ್ರಚಲಿತ

ಮೂರು ಭಾರತೀಯ ಮಸೂದೆಗಳಿಗೆ ರಾಷ್ಟ್ರಪತಿಗಳ ಅಂಕಿತ

ಭಾರತದ ಆಡಳಿತ ಚುಕ್ಕಾಣಿ ಪ್ರಧಾನಿ ಮೋದಿ ಅವರ ಕೈ ಸೇರಿದ ಬಳಿಕ ದೇಶದಲ್ಲಿ ಹಲವಾರು ರೀತಿಯ ಬದಲಾವಣೆಗಳು ಸಂಭವಿಸಿದೆ. ಭಾರತದ ಅಭಿವೃದ್ಧಿಯ ನಾಗಲೋಟಕ್ಕೆ ಇಂದು ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟು, ಭಾರತದಿಂದ ಸಲಹೆ – ಸೂಚನೆಗಳನ್ನು ಪಡೆದುಕೊಳ್ಳುವಷ್ಟರ ಮಟ್ಟಿಗೆ ಭಾರತ ಬೆಳವಣಿಗೆ ಹೊಂದಿದೆ. ಇಂತಹ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳ ರೂವಾರಿ ಪ್ರಧಾನಿ ನರೇಂದ್ರ ಮೋದಿ ಅವರೇ ಎಂದರೂ ಅತಿಶಯವಾಗಲಾರದೇನೋ.

ಭಾರತದಲ್ಲಿ ಅಪರಾಧ ಕೃತ್ಯಗಳ ಪ್ರಮಾಣ ಇಳಿಮುಖವಾಗಬೇಕು ಎನ್ನುವ ದೃಷ್ಟಿಯಿಂದಲೂ ಕೇಂದ್ರದ ಪ್ರಧನಿ ಮೋದಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿರುವುದು ನಮ್ಮೆಲ್ಲರಿಗೂ ತಿಳಿದ ವಿಚಾರ. ಮೊನ್ನೆಯಷ್ಟೇ ನಡೆದ ಸಂಸತ್ ಚಳಿಗಾಲದ ಅಧಿವೇಶನದಲ್ಲಿಯೂ ಕೇಂದ್ರ ಸರ್ಕಾರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ಮಹತ್ವದ ಕ್ರಮಗಳನ್ನು ಒಳಗೊಂಡ ಮಸೂದೆಗಳನ್ನು ಮಂಡನೆ ಮಾಡಿ, ಧ್ವನಿ ಮತದ ಮೂಲಕ ಅಂಗೀಕಾರ ಸಹ ಪಡೆದಿತ್ತು.

ಇದೀಗ ಆ ಮಹತ್ವದ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುವ ಮೂಲಕ ಅವುಗಳನ್ನು ಊರ್ಜಿತಗೊಳಿಸಿದ್ದಾರೆ.

ಸಂಸತ್ತಿನಲ್ಲಿ ಅನುಮೋದನೆ ಮಾಡಲಾದ ಮಹತ್ವದ ಮೂರು ಕಾನೂನುಗಳಿಗೆ ಈಗ ರಾಷ್ಟ್ರಪತಿಗಳ ಅಂಕಿತ ಬಿದ್ದಿರುವುದಾಗಿದೆ‌. ಆ ಮೂಲಕ ಭಾರತ ಈಗ ಹೊಸ ಮೂರು ಕಾನೂನುಗಳನ್ನು ಪಡೆದಂತಾಗಿದೆ. ರಾಷ್ಟ್ರಪತಿಗಳು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಮಸೂದೆಗಳಿಗೆ ತಮ್ಮ ಸಹಿಯನ್ನು ಹಾಕುವ ಮೂಲಕ ಸಮ್ಮತಿ ಸೂಚಿಸಿದ್ದಾರೆ.

ಭಾರತೀಯ ದಂಡ ಸಂಹಿತೆ, ಭಾರತೀಯ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, ಎವಿಡನ್ಸ್ ಆ್ಯಕ್ಟ್ ಅನ್ನು ಬದಲಾವಣೆ ಮಾಡುವ ಮೂರು ಕ್ರಿಮಿನಲ್ ಮಸೂದೆ, ರಾಷ್ಟ್ರಪತಿ ಅವರ ಹಸ್ತಾಕ್ಷರ ಬಿದ್ದ ಕಾರಣಕ್ಕೆ ಭಾರತದಲ್ಲಿ ಕಾನೂನುಗಳಾಗಿ ಜಾರಿಗೆ ಬಂದಿವೆ. ಈ ಮೂರು ಮಸೂದೆಗಳನ್ನು ಸಂಸತ್ತಿನ ಉಭಯ ಸದನಗಳ ಅಧಿವೇಶನದಲ್ಲಿಯೂ ಅಂಗೀಕಾರ ಮಾಡಲಾಗಿತ್ತು.

Tags

Related Articles

Close