ಪ್ರಚಲಿತ

ನೋಟು ಅಮಾನ್ಯೀಕರಣದ ಬಳಿಕ ನೋಂದಾಯಿಸಲ್ಪಡದ 73,000 ಕಂಪನಿಗಳಿಂದ ಬ್ಯಾಂಕ್ ಗಳಿಗೆ ಹರಿದು ಬಂತು 24 ಸಾವಿರ ಕೋಟಿ ರೂಪಾಯಿ!! ಮತ್ತೊಮ್ಮೆ ಮೋದಿ ರಾಕ್ಸ್, ಪಿಡ್ಡಿ ಗ್ಯಾಂಗ್ ಶಾಕ್ಸ್!!

“ಪಿಡ್ಡಿ ಗ್ಯಾಂಗ್” ಹೊಟ್ಟೆ ಉರ್ಕೊಳ್ಳುವಂತಾಗುವ ಸುದ್ದಿ ಇದು. ನೋಟ್ ಅಮಾನ್ಯೀಕರಣದ ನಂತರ ಗಲ್ಲಿ ಗಲ್ಲಿಗಳಲ್ಲಿ ಮೋದಿಗೆ ಬಯ್ಯುತ್ತಾ ತಿರುಗುತ್ತಿದ್ದ ಪಿಡ್ಡಿ ಗ್ಯಾಂಗ್ ಗೆ ಶ್ಯಾಣೆ ಶಾಕ್ ಕೊಟ್ಟು ಮತ್ತೊಮ್ಮೆ ತಾವು ರಾಕ್ ಸ್ಟಾರ್ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಮೋದಿ!! 2016 ರ ನವೆಂಬರ್ 8 ರಂದು ಘೋಷಿಸಲ್ಪಟ್ಟ ನೋಟು ಅಮಾನ್ಯೀಕರಣದ ಬಳಿಕ 73,000 ನೋಂದಾಯಿಸದ ಕಂಪನಿಗಳು 24000 ಕೋಟಿ ರೂಪಾಯಿಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದೆ ಎಂದು ಸರಕಾರವು ಬಿಡುಗಡೆ ಮಾಡಿದ ಡೇಟಾದಿಂದ ತಿಳಿದು ಬಂದಿದೆ ಎನ್ನುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹದಿನೈದು ಲಕ್ಷ ಬಂತಾ? ಅಚ್ಛೆ ದಿನ್ ಬಂತಾ? ಊಹೂಂ ಬಂದಿಲ್ಲ!! ಹೇಗೆ ಬರೋಕೆ ಸಾಧ್ಯ? ಕಳ್ಳ-ಸುಳ್ಳ-ಮಳ್ಳರಿಗಂತೂ ಮೋದಿ ಬಂದ ಮೇಲೆ ‘ಬುರೆ ದಿನ್’ ಶುರುವಾಗಿದೆ. ಪಾಪ ಪಿಡ್ಡಿಗೆ ಏಳೂವರೆ ಶನಿ ಕಾಟ ಬೇರೆ , ಅಚ್ಛೆ ದಿನ್ ಬಂದರೂ ಕಣ್ಣಿಗೆ ಕಾಣಂಗಿಲ್ಲ ಬಿಡಿ!

ಡೇಟಾ ವರದಿಯ ಪ್ರಕಾರ ಐನೂರು ಮತ್ತು ಒಂದು ಸಾವಿರ ರುಪಾಯಿಗಳ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ, ಇದುವರೆಗೂ ನೋಂದಾಯಿಸಲ್ಪಡದ 2.26 ಲಕ್ಷ ಕಂಪನಿಗಳಲ್ಲಿ 1.68 ಲಕ್ಷ ಕಂಪನಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ಠೇವಣಿ ಮಾಡಿವೆ ಎಂದು ತಿಳಿದು ಬಂದಿದೆ. ಕಂಪನಿಗಳು ನಿಧಿಗಳನ್ನು ವಾಣಿಜ್ಯ ವ್ಯವಹಾರಕ್ಕೆ ಬಳಸದೆ, ಅಕ್ರಮ ಮತ್ತು ಶಂಕಿತ ಚಟುವಟಿಕೆಗಳಿಗೆ ಬಳಸುತ್ತಿದ್ದುದ್ದರಿಂದ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು 2.26 ಲಕ್ಷ ಕಂಪನಿಗಳ ನೋಂದಣಿಯನ್ನು ರದ್ದುಗೊಳಿಸಿತ್ತು. ಕಂಪನಿ ಆಕ್ಟ್ ಪ್ರಕಾರ ಇಂತಹ ನೋಂದಾಯಿಸಲ್ಪಡದ ಕಂಪನಿಗಳನ್ನು ತನ್ನ ಲಿಸ್ಟಿನಿಂದ ಒಡೆಯುವ ಸಂಪೂರ್ಣ ಅಧಿಕಾರ ಸರಕಾರಕ್ಕಿರುತ್ತದೆ. ಈ ಆಕ್ಟ್ ಪ್ರಕಾರ ನೋಂದಾಯಿಸಲ್ಪಡದ ಕಂಪನಿಗಳ ನೋಂದಣಿಯನ್ನೇ ಸರ್ಕಾರ ರದ್ದುಗೊಳಿಸಿತ್ತು.

ಹೀಗೆ ನೋಂದಣಿ ರದ್ದುಗೊಳಿಸಲ್ಪ 73,000 ಕಂಪನಿಗಳಿಂದ ಬ್ಯಾಂಕ್ ಗಳಿಗೆ ಬರೋಬ್ಬರಿ 24 ಸಾವಿರ ಕೋಟಿ ರೂಪಾಯಿ ಠೇವಣಿ ಆಗಿದೆ. ಅಂದರೆ ಮೋದಿ ನೋಟ್ ಬ್ಯಾನ್ ಮಾಡಿದ್ದರಿಂದ ಕಳ್ಳ ಧನ ಹೊರಗೆ ಬಂತಾ? ಹೌದು ಬಂತು. ಆ ಹಣ ಎಲ್ಲಿಗೆ ಹೋಯಿತು? ದೇಶದಲ್ಲಿ ಆಗುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗವಾಯಿತು. ಜನಪರ ಯೋಜನೆಗಳಿಗೆ ಮೀಸಲಿಡಲಾಯಿತು. ಗಡಿ ಕಾಯುವ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್, ಆಧುನಿಕ ಶಸ್ತ್ರಾಸ್ತ್ರ ಕೊಡಿಸಲಾಯಿತು, ದಶಕಗಳಿಂದ ಬಾಕಿ ಇದ್ದ ಸೈನಿಕರ ಪೆಂಶನ್ ನೀಡಲಾಯಿತು. ಯೂಪಿಎ ವಿದೇಶಗಳಿಂದ ತೆಗೆದುಕೊಂಡ ಸಾಲದ ಒಂದು ಕಂತು ತೀರಿಸಲಾಯಿತು. ವಿದೇಶಗಳಲ್ಲಿ ಭಾರತ ನಡೆಸುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಉಪಯೋಗಿಸಲಾಯಿತು. ಹತ್ತು ವರ್ಷಗಳಲ್ಲಿ ಯೂಪಿಎ ತೋಡಿದ ಗುಂಡಿ ಮುಚ್ಚಲು ಹರಸಾಹಸ ಪಡುತ್ತಿದ್ದಾರೆ ಮೋದಿ. ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಹಗರಣವಿಲ್ಲ, ದೇಶದಲ್ಲಿ ವಿಕಾಸ ಪರ್ವ ಶುರುವಾಗಿದೆ ಎನ್ನುವುದು ಕಾಣುವುದಿಲ್ಲವೆ ಜನರಿಗೆ?

ಕಳೆದ ನಾಲ್ಕು ವರ್ಷಗಳಲ್ಲಿ ಸಚಿವಾಲಯದ ಸಾಧನೆಗಳನ್ನು ವಿವರಿಸುವ ದಾಖಲೆಗಳ ಪ್ರಕಾರ 68 ಕಂಪನಿಗಳು ರಾಡಾರ್ ನಲ್ಲಿವೆ. ಇವುಗಳಲ್ಲಿ ಗಂಭೀರ ಮೋಸದ ತನಿಖಾ ವಿಭಾಗ 19 ಕಂಪನಿಗಳ ತನಿಖೆ ನಡೆಸುತ್ತಿದ್ದರೆ, ಕಂಪನಿಗಳ ರಿಜಿಸ್ಟ್ರಾರ್ ಸಂಸ್ಥೆ 49 ಕಂಪನಿಗಳ ತನಿಖೆಯನ್ನು ಕೈಗೆತ್ತಿಕೊಂಡಿದೆ. ಹಿಂದೆ ಆಳಿ ಹೋದ ಯಾವ ಸರಕಾರ ಕಪ್ಪು ಹಣವನ್ನು ಹೊರತೆಗೆಯಲು ಇಷ್ಟು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ? ಮೋದಿ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಲೆ ಇದ್ದಾರೆ. ಆದರೆ ಜನರ ರಕ್ತದಲ್ಲೆ ಭ್ರಷ್ಟಾಚಾರ ಹರಿಯುತ್ತಿದೆ. ದೇಶಕ್ಕಿಂತಲೂ ಹಣವೇ ಮುಖ್ಯ ಎನ್ನುವ ಸ್ವಾರ್ಥಿಗಳೇ ತುಂಬಿರುವಾಗ ಯಾರೇನು ಮಾಡಲು ಸಾಧ್ಯ. ಕಡೆ ಪಕ್ಷ ಮೋದಿ ಭಾರತವನ್ನು ಭ್ರಷ್ಟಾಚಾರ ಮುಕ್ತವಾಗಿಸಲು ಪ್ರಯತ್ನವನ್ನಾದರೂ ಮಾಡುತ್ತಿದ್ದಾರೆ. ಅವರ ಕೈ ಬಲ ಪಡಿಸುವುದರ ಬದಲಿಗೆ ಅವರನ್ನು ಸೋಲಿಸುವ ಹುನ್ನಾರದಲ್ಲಿದ್ದಾರೆ ಜನರು. ಇದಕ್ಕಿಂತ ದೌರ್ಭಾಗ್ಯ ಬೇರಿನ್ನೇನಿರಲು ಸಾಧ್ಯ?

-ಶಾರ್ವರಿ

Tags

Related Articles

Close