ಪ್ರಚಲಿತ

ಸಮಾಜವಾದಿ ಸಿದ್ದರಾಮಯ್ಯ ದೇಶದ ಎಷ್ಟನೇ ಅತಿ ದೊಡ್ಡ ಕೋಟ್ಯಾಧೀಶ ಮುಖ್ಯಮಂತ್ರಿ ಗೊತ್ತಾ?! ಕಳಚಿತು ಕಂಬಳಿ ಹಿಂದಿನ ರಹಸ್ಯ!!

ಕಾಂಗ್ರೆಸ್ಸಿಗರು ಹಣ ಮಾಡುವುದರಲ್ಲಿಯೇ ನಿಸ್ಸೀಮರು ಎನ್ನುವುದಕ್ಕೆ ಇದೀಗ ದಾಖಲೆ ಸಮೇತವಾಗಿ ವರದಿಯೊಂದು ಬಿಡುಗಡೆಯಾಗಿದೆ. ತಾನೊಬ್ಬ ಸಮಾಜವಾದಿ, ಬಡವರ ಪರ, ಕುರುಬರ ಮುಖ್ಯಮಂತ್ರಿಯೆಂದು ಬೋಂಗು ಬಿಡುತ್ತಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಸ್ತಿಯ ವಿವರ ಕೇಳಿದರೆ ಒಂದು ಕ್ಷಣ ದಂಗಾಗುವಿರಿ!!

ಹೌದು… ಚುನಾವಣಾ ಸುಧಾರಣೆ ಮೇಲೆ ನಿಗಾ ಇಡುವ ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ(ಎಡಿಆರ್), ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಆಸ್ತಿಯ ಪಟ್ಟಿಯೊಂದನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ಸಿಗರೇ ಮೇಲುಗೈಯನ್ನು ಸಾಧಿಸಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಉದ್ಯಮಗಳಲ್ಲಾಗಲಿ ಅಥವಾ ಯಾವುದೇ ವ್ಯವಹಾರಗಳಲ್ಲಾಗಲಿ ಕಾಣಸಿಗದೇ, ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿದ್ದಾರೆ ಎಂದರೆ ಅದುನಂಬಲಸಾಧ್ಯ!!

ಆದರೆ ಇದನ್ನ ನಂಬಲೇ ಬೇಕು!! ಯಾಕೆಂದರೆ ಚುನಾವಣಾ ಸುಧಾರಣೆ ಮೇಲೆ ನಿಗಾ ಇಡುವ ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ(ಎಡಿಆರ್), ದೇಶದ ಮುಖ್ಯಮಂತ್ರಿಗಳ ಆಸ್ತಿಯ ಪಟ್ಟಿಯೊಂದನ್ನು ಸೋಮವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಂದಿದ್ದಾರೆ ಎನ್ನಲಾದ ಬೇನಾಮಿ ಆಸ್ತಿಯ ತನಿಖೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು!! ಆರ್.ಟಿ.ಐ ಕಾರ್ಯಕರ್ತ ರಾಮಮೂರ್ತಿ ಎಂಬವರು ದೂರು ನೀಡಿದ ಆಧಾರದ ಮೇಲೆ ಮುಖ್ಯಮಂತ್ರಿ ಆದ ಮೇಲೆ ಸಿದ್ದರಾಮಯ್ಯ ಕುಟುಂಬಸ್ಥರು ಹಾಗೂ ಸ್ನೇಹಿತರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಈ ಬೇನಾಮಿ ಆಸ್ತಿಗಳ ಮೌಲ್ಯ ನೂರಾರು ಕೋಟಿ ರೂ. ದಾಟುತ್ತದೆ. ಹೀಗಾಗಿ ಬೇನಾಮಿ ಕಾನೂನಿನ ಅಡಿಯಲ್ಲಿ ಸಿಎಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ರಾಮಮೂರ್ತಿ 1638 ಪುಟಗಳ ದಾಖಲೆ ಸಮೇತ ದೂರು ನೀಡಿದ್ದರು. ಆದರೆ ಇದೆಲ್ಲವೂ ಕೂಡ ಕಾಂಗ್ರೆಸ್ಸಿನ ಕರಾಮತ್ತಿನಿಂದ ಮುಚ್ಚಿಹೋಯಿತು!!

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 300 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ಕೈಬಿಟ್ಟಿರುವುದಾಗಿ ಬಿಜೆಪಿ ಗಂಭೀರವಾಗಿ ಆರೋಪಿಸಿತ್ತಲ್ಲದೇ ಭೂಹಗರಣದಲ್ಲಿ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ ಎನ್ನುವ ಮಾಹಿತಿಯನ್ನೂ ಹೊರಹಾಕಿತ್ತು!!

ಅಷ್ಟೇ ಅಲ್ಲದೇ, ತಾನೊಬ್ಬ ಕುರುಬ ಸಿಎಂ ಎಂದು ಬೊಬ್ಬಿಡುತ್ತಿದ್ದ ಸಿದ್ದರಾಮಯ್ಯನವರು ತಾವು ಹೊದ್ದುಕೊಳ್ಳುವ ಕಂಬಳಿಗೆ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದ್ದು, ಕಂಬಳಿ ಹೊದ್ದುಕೊಂಡೇ ಜನಗಳನ್ನು ಮೋಡಿಮಾಡಿ ತಾನೊಬ್ಬ ಬಡ ಸಿಎಂ ಎನ್ನುವ ರೇಂಜಿಗೆ ಫೋಸ್ ನೀಡಿದ್ದರು!! ಆದರೆ ಸಿಎಂ ಸಿದ್ದರಾಮಯ್ಯನವರ ಆಸ್ತಿ ಪಾಸ್ತಿಗಳು ಕೇವಲ ಹಗರಣಗಳಿಂದ, ಬೇನಾಮಿ ಆಸ್ತಿಗಳಿಂದ ಮಾತ್ರ ಸಾರ್ವಜನಿಕರಿಗೆ ಗೊತ್ತಾಗಿದೇಯೇ ವಿನಾಃ ಯಾವುದೇ ಉದ್ಯಮದಿಂದಾಗಲಿ ಗಳಿಸಿದ್ದಲ್ಲ ಎನ್ನುವುದು ಸ್ಪಷ್ಟವಾಗಿದೆ.

ಅಷ್ಟಕ್ಕೂ ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ(ಎಡಿಆರ್) ನೀಡಿರುವ ಪಟ್ಟಿಯಲ್ಲಿರುವ ಸಿಎಂ ಆಸ್ತಿ ವಿವರ ಎಷ್ಟುಗೊತ್ತೇ?

ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹೊಂದಿರುವ ಆಸ್ತಿ, ವಿದ್ಯಾರ್ಹತೆ ಮತ್ತವರ ವಿರುದ್ಧವಿರುವ ಪ್ರಕರಣಗಳ ಬಗ್ಗೆ ಖಾಸಗಿ ಸಂಸ್ಥೆಯೊಂದು ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಶ್ರೀಮಂತ ಸಿಎಂ ಹಾಗೂ ತ್ರಿಪುರದ ಮಾಣಿಕ್ ಸರ್ಕಾರ್ ಅತ್ಯಂತ ಬಡ ಸಿಎಂ ಎಂದು ಸಂಸ್ಥೆಯ ವರದಿ ಹೇಳಿದೆ.

ಇದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್ ಆಧರಿಸಿ ಈ ವರದಿ ತಯಾರಿಸಲಾಗಿದ್ದು, ಅದರನ್ವಯ ಸಿಎಂ ಸಿದ್ದರಾಮಯ್ಯ 13 ಕೋಟಿ ರೂಪಾಯಿ ಆಸ್ತಿಯೊಂದಿಗೆ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ!! ಇನ್ನು ದೇಶದ ನಂ.1 ಸಿಎಂ ಎಂಬ ಪಟ್ಟ 177 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪಾಲಾಗಿದೆ. 26 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಕೊನೇ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ದೇಶದ 31 ರಾಜ್ಯಗಳ ಪೈಕಿ 28 ರಾಜ್ಯಗಳಲ್ಲಿ ಪುರುಷ ಸಿಎಂಗಳಿದ್ದರೆ, 3 ರಾಜ್ಯಗಳಲ್ಲಿ ಮಹಿಳೆಯರ ಆಡಳಿತವಿದೆ. ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು (35 ವರ್ಷ) ಅತ್ಯಂತ ಕಿರಿಯ ಸಿಎಂ ಮತ್ತು ಪಂಜಾಬ್ ಸಿಎಂ ಅಮರೀಂದರ ಸಿಂಗ್ (74) ಅತ್ಯಂತ ಹಿರಿಯ ಸಿಎಂ ಎಂದು ವರದಿ ಹೇಳಿದೆ.

ಯಾರ್ಯಾರ ಆಸ್ತಿ ಮೊತ್ತ ಎಷ್ಟು ಗೊತ್ತೇ ?

177 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮೊದಲ ಸ್ಥಾನವನ್ನು ಅಲಂಕರಿಸಿದ್ದರೆ, 129 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಇನ್ನು, 41 ಕೋಟಿ ರೂಪಾಯಿ ಆಸ್ತಿಯೊಂದಿಗೆ ಪಂಜಾಬ್ ಸಿಎಂ 3ನೇ ಸ್ಥಾನ, 15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ 4ನೇ ಸ್ಥಾನ, 14 ಕೋಟಿ ರೂಪಾಯಿ ಆಸ್ತಿಯೊಂದಿಗೆ ಮೇಘಾಲಯ ಸಿಎಂ ಮುಕುಲ್ ಸಂಗ್ಮಾ 5ನೇ ಸ್ಥಾನ ಪಡೆದಿದ್ದಾರೆ.

ಅಷ್ಟೇ ಅಲ್ಲದೇ, ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಹೊರತುಪಡಿಸಿ, 18 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯ ಯಾವೊಬ್ಬ ಸಿಎಂಗಳು ಸಹ ಟಾಪ್ 10 ಪಟ್ಟಿಯಲ್ಲಿ ಇಲ್ಲದಿರುವುದು ವಿಶೇಷ. ಹಾಗಾಗಿ ದೇಶದ 31 ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಸಿಎಂಗಳ ಸರಾಸರಿ ಆಸ್ತಿ 16.18 ಕೋಟಿ ರೂಪಾಯಿ ಎಂದು ವರದಿ ಹೇಳಿದೆ.

* ಎನ್.ಚಂದ್ರಬಾಬು ನಾಯ್ಡು- 177 ಕೋಟಿ ರೂ.
* ಪೆಮಾ ಖಂಡು- 129 ಕೋಟಿ ರೂ.
* ಕ್ಯಾ.ಅಮರೀಂದರ್ ಸಿಂಗ್- 48 ಕೋಟಿ ರೂ.
* ಕೆ.ಚಂದ್ರಶೇಖರ್ ರಾವ್- 15.15 ಕೋಟಿ ರೂ.
* ಮುಕುಲ್ ಸಂಗ್ಮಾ- 14.50 ಕೋಟಿ ರೂ.

ಬಡ ಸಿಎಂಗಳ ಪಟ್ಟಿ………..!!

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಎಂಬ ಖಾಸಗಿ ಸಂಸ್ಥೆಯು ಎಲ್ಲಾ 31 ಮುಖ್ಯಮಂತ್ರಿಗಳ ಬಗ್ಗೆ ವಿಶ್ಲೇಷಣಾತ್ಮಕ ವರದಿ ತಯಾರಿಸಿದೆ. ಈ ಪೈಕಿ ಚಂದ್ರಬಾಬು ನಾಯ್ಡು ಶ್ರೀಮಂತ ಸಿಎಂ, ಮಾಣಿಕ್ ಸರ್ಕಾರ್ ಅತ್ಯಂತ ಬಡ ಸಿಎಂ ಆಗಿದ್ದರೆ, ಬಿಹಾರದ ಮುಖ್ಯಮಂತ್ರಿ ನಿತಿನ್ ಕುಮಾರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.

ಆದರೆ ದೇಶದ ಬಡ ಸಿಎಂಗಳ ಪಟ್ಟಿಯಲ್ಲಿ 26 ಲಕ್ಷ ರೂಪಾಯಿ ಆಸ್ತಿಯೊಂದಿಗೆ ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಮೊದಲ ಸ್ಥಾನದಲ್ಲಿದ್ದು, 30 ಲಕ್ಷ ರೂಪಾಯಿ ಆಸ್ತಿ ಒಡತಿಯಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 2ನೇ ಬಡ ಸಿಎಂ ಆಗಿದ್ದಾರೆ. ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ(3ನೇ ಸ್ಥಾನ), ಹರ್ಯಾಣ ಸಿಎಂ ಮನೋಹರ್‍ಲಾಲ್ ಖಟ್ಟರ್ (4ನೇ ಸ್ಥಾನ), ಜಾರ್ಖಂಡ್ ಸಿಎಂ ರಘುವರ್ ದಾಸ್(5ನೇ ಸ್ಥಾನ) ಅಲಂಕರಿಸಿದ್ದಾರೆ.

* ಮಾಣಿಕ್ ಸರ್ಕಾರ್- 26 ಲಕ್ಷ ರೂ.
* ಮೆಹಬೂಬಾ ಮುಫ್ತಿ- 55.96 ಲಕ್ಷ ರೂ.
* ಮನೋಹರ ಲಾಲ್ ಖಟ್ಟರ್- 61.29 ಲಕ್ಷ ರೂ.
* ರಘುವರ್ ದಾಸ್- 72.72 ಲಕ್ಷ ರೂ.

ಅಂತೂ……….. ಪ್ರತಿ ಬಾರಿಯೂ ತಾನು ಬಡ ಮುಖ್ಯಮಂತ್ರಿ ಎಂದೆಲ್ಲಾ ಹೇಳಿ ಜನಗಳಿಗೆ ಮೋಸ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯನವರ ಆಸ್ತಿ ವಿವರ ಹೊರಬಿದ್ದಿದ್ದು, ಬಡ ಮುಖ್ಯಮಂತ್ರಿಗಳಾದ ಇವರು ಕೋಟ್ಯಾಧೀಶರಾಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ!! ಅಷ್ಟೇ ಅಲ್ಲದೇ, ಚಾ, ಕಾಫಿ, ಬಿಸ್ಕೆಟ್ ಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚುಮಾಡಿದ ಸಿಎಂ ಸಿದ್ದರಾಮಯ್ಯನವರ ಕಂಬಳಿಯ ಹಿಂದಿರುವ ರಹಸ್ಯಗಳು ಇನ್ನು… ಅದೆಷ್ಟಿವೆಯೋ ನಾ ಕಾಣೆ!!

– ಅಲೋಖಾ

Tags

Related Articles

Close