ಪ್ರಚಲಿತ

ದೇಶ-ವಿದೇಶದ ವಿಜ್ಞಾನಿಗಳಿಗೂ ಬಗೆಹರಿಸಲಾಗದ ಪುರಿ ಜಗನ್ನಾಥ ಮಂದಿರದ ರಹಸ್ಯಗಳ ಬಗ್ಗೆ ತಿಳಿದರೆ ಬುದ್ದಿಜೀವಿ ಮತ್ತು ನಾಸ್ತಿಕರೂ ದಂಗಾಗುವರು!!

ಭಾರತದಲ್ಲಿ ಎಷ್ಟೋ ಅಭೇದ್ಯ ರಹಸ್ಯಗಳಿವೆ. ದೇಶ ಮಾತ್ರವಲ್ಲ, ವಿದೇಶದ ವಿಜ್ಞಾನಿಗಳಿಗೂ ಸವಾಲಾಗಿರುವ ಹಲವಾರು ಪ್ರಕೃತಿ ದತ್ತ ಸ್ಥಳ ಮತ್ತು ಮಾನವ ನಿರ್ಮಿತ ಸ್ಮಾರಕಗಳಿವೆ. ಶತಮಾನಗಳ ಹಿಂದೆಯೇ ನಿರ್ಮಿಸಲಾದ ಈ ಮಂದಿರ-ಸ್ಮಾರಕಗಳ ಅದ್ಭುತ ವಾಸ್ತುಕಲೆ ಮತ್ತು ನಿರ್ಮಾಣ ರಹಸ್ಯಗಳು ಆಧುನಿಕ ತಂತ್ರಜ್ಞಾನಕ್ಕೂ ಸವಾಲಾಗಿವೆ. ಇಂತಹುದೇ ಒಂದು ಅದ್ಭುತ ಪುರಿಯ ಜಗನ್ನಾಥ ಮಂದಿರ. ವಿಶ್ವ ಪ್ರಸಿದ್ದ ಈ ಮಂದಿರ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ. ವರ್ಷಕ್ಕೊಮ್ಮೆ ನಡೆಯುವ ರಥಯಾತ್ರೆ ವಿದೇಶೀ ಭಕ್ತಾದಿಗಳನ್ನೂ ತನ್ನತ್ತ ಬರಸೆಳೆಯುತ್ತದೆ. ಈ ಮಂದಿರದ ರಹಸ್ಯದ ಬಗ್ಗೆ ಕೇಳಿದರೆ ನಾಸ್ತಿಕರೂ ಜಗನ್ನಾಥನಿಗೆ ಶರಣೆಂಬರು!! ಹದಿನೆರಡನೇ ಶತಮಾನದಲ್ಲಿ ಗಂಗಾನದಿಯ ಪೂರ್ವ ತಟದ ರಾಜನಾದ ಅನಂತವರ್ಮನ್ ಚೋಢಗಂಗಾ ದೇವ ಈ ಮಂದಿರವನ್ನು ಕಟ್ಟಿಸಿದ್ದೆನ್ನಲಾಗುತ್ತದೆ.

ಮಂದಿರದ ಭಗವಾ ಧ್ವಜ:

ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ಮಂದಿರಕ್ಕೆ ಯಾವುದೇ ಸಮಯದಲ್ಲಿ ಬೇಕಾದರೂ ಭೇಟಿ ಕೊಡಿ, ಮಂದಿರದ ಧ್ವಜ ಗಾಳಿಯ ವಿರುದ್ಧ ದಿಕ್ಕಿನಲ್ಲೇ ಹಾರಾಡುತ್ತಿರುತ್ತದೆ. ಎಂತೆಂಥಹ ಬಲಾಢ್ಯ ವಸ್ತುಗಳೂ ಗಾಳಿಯ ದಿಕ್ಕಿನಲ್ಲೇ ತೇಲುತ್ತವೆ ಆದರೆ ಒಂದು ಧ್ವಜ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುವುದಾದರೂ ಎಂತು? ಈ ರಹಸ್ಯದ ಬಗ್ಗೆ ಆಧುನಿಕ ವಿಜ್ಞಾನಕ್ಕೂ ವ್ಯಾಖ್ಯೆ ನೀಡಲಾಗುತ್ತಿಲ್ಲ.

1800 ವರ್ಷಗಳ ಹಿಂದಿನ ಪದ್ಧತಿ:

ಕಳೆದ 1800 ವರ್ಷಗಳಿಂದ ಒಂದು ಪದ್ಧತಿ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ ಎಂದರೆ ನಂಬುತ್ತೀರಾ? ನಲ್ವತ್ತೈದು ಮಹಡಿಗಳ ಈ ಮಂದಿರದ ತುತ್ತ ತುದಿಯಲ್ಲಿರುವ ಭಗವಾ ಧ್ವಜವನ್ನು ನಿತ್ಯವೂ ಇಲ್ಲಿಯ ಪೂಜಾರಿ ಬದಲಾಯಿಸುತ್ತಾರೆ! ಅಷ್ಟು ಎತ್ತರದ ಮಂದಿರವನ್ನು ದಿನವೂ ಹತ್ತಿ ಇಳಿಯಬೇಕೆಂದರೆ ನೀವೇ ಯೋಚಿಸಿ ಅದು ಅದ್ಭುತವಲ್ಲದೆ ಬೇರೆ ಏನು? ಒಂದು ವೇಳೆ ಧ್ವಜವನ್ನು ಬದಲಾಯಿಸದಿದ್ದರೆ ಮುಂದಿನ ಹದಿನೆಂಟು ವರ್ಷಗಳ ಕಾಲ ಮಂದಿರ ಬಾಗಿಲನ್ನು ತೆಗೆಯುವಂತೆಯೇ ಇಲ್ಲವಂತೆ!

ಸುದರ್ಶನ ಚಕ್ರ:

ಮಂದಿರದ ತುದಿಯಲ್ಲಿ 20 ಫೀಟ್ ಎತ್ತರದ ಒಂದು ಟನ್ ಭಾರದ ಸುದರ್ಶನ ಚಕ್ರವಿದೆ. ಈ ಚಕ್ರವನ್ನು ಯಾವಾಗ, ಯಾರು, ಹೇಗೆ ಅಷ್ಟು ಎತ್ತರದಲ್ಲಿ ಪ್ರತಿಷ್ಠಾಪಿಸಿದರೆಂದು ಯಾರಿಗೂ ತಿಳಿದಿಲ್ಲ. ಈ ಚಕ್ರದ ವಿಶೇಷತೆಗಳೆಂದರೆ ಊರಿನ ಯಾವುದೇ ಮೂಲೆಯಲ್ಲಿ ನಿಂತೂ ಈ ಚಕ್ರವನ್ನು ಸ್ಪಷ್ಟವಾಗಿ ನೋಡಬಹುದು. ಮಾತ್ರವಲ್ಲ ನೀವು ಯಾವುದೇ ಕೋನದಲ್ಲಿ ನಿಂತು ಬೇಕಾದರೂ ಚಕ್ರವನ್ನು ನೋಡಿ ಅದು ನಿಮ್ಮನ್ನೇ ನೋಡುವಂತೆ ನಿಮಗೆ ಭಾಸವಾಗುತ್ತದೆ!

ಮಂದಿರದ ಸಂರಚನೆ:

ಯಾವ ಆಧುನಿಕ ಇಂಜಿನಿಯರಿಗೆ ಕೂಡಾ ಈ ಮಂದಿರದ ಸಂರಚನೆಯ ರಹಸ್ಯವನ್ನು ಭೇದಿಸಲಾಗಿಲ್ಲ. ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಹೋಗಿ ನೋಡಿ ಮಂದಿರದ ಮೂಲ ಗೋಪುರದ ನೆರಳು ಸುತ್ತ ಮುತ್ತ ಎಲ್ಲಿಯೂ ಕಾಣುವುದಿಲ್ಲ!! ನಿಮಗೆ ಗೊತ್ತು ಸೂರ್ಯನಿಗೆದುರಾದ ಒಂದು ಹುಲ್ಲು ಕಡ್ಡಿಯೂ ತನ್ನ ನೆರಳನ್ನು ಸೂಸುತ್ತದೆ. ಆದರೆ ನಲವತ್ತೈದು ಮಹಡಿಗಳಷ್ಟೆತ್ತರದ ಗೋಪುರದ ನೆರಳು ದಿನದ ಯಾವ ಸಮಯದಲ್ಲೂ ಭೂಮಿ ಮೇಲೆ ಬೀಳುವುದಿಲ್ಲವೆಂದರೆ ವಾಸ್ತುಕಲೆ ಮತ್ತು ವಿಜ್ಞಾನದ ಸಂಗಮವೂ ಎಂಥದ್ದಿರಬೇಕು.

ಗಾಳಿಯ ದಿಕ್ಕು:

ಪ್ರಪಂಚದ ಯಾವ ಮೂಲೆಗೆ ಬೇಕಾದರೂ ಹೋಗಿ ನೋಡಿ ದಿನದ ಸಮಯ ಸಮುದ್ರದಿಂದ ಗಾಳಿ ಭೂಮಿಯ ಕಡೆಗೆ ಬೀಸುತ್ತದೆ ಮತ್ತು ರಾತ್ರಿ ಭೂಮಿಯಿಂದ ಸಮುದ್ರದೆಡೆಗೆ. ಆದರೆ ಪುರಿ ಜಗನ್ನಾಥನ ಸನ್ನಿಧಾನದಲ್ಲಿ ಗಾಳಿ ವಿಪರೀತ ದಿಕ್ಕಿನಲ್ಲಿ, ಅಂದರೆ ಬೆಳಗ್ಗಿನ ಸಮಯ ಭೂಮಿಯಿಂದ ಸಾಗರದೆಡೆಗೆ ಮತ್ತು ರಾತ್ರಿ ಸಾಗರದಿಂದ ಭೂಮಿಯೆಡೆಗೆ ಬೀಸುತ್ತದೆ! ಇದು ತರ್ಕಕ್ಕೆ ನಿಲುಕದ ವಿಚಾರ. ಹೀಗೂ ಆಗಲು ಸಾಧ್ಯವೆ? ವಿಜ್ಞಾನಿಗಳು ಮತ್ತು ಬುದ್ದಿಜೀವಿಗಳು ಇದನ್ನು ವಿವರಿಸಲು ಸಾಧ್ಯವೆ?

ಮಂದಿರದ ಮೇಲಿಂದ ಹಕ್ಕಿಯೂ ಹಾರುವುದಿಲ್ಲ: ಅತೀ ವಿಚಿತ್ರ ಸಂಗತಿ. ಸಾಮಾನ್ಯವಾಗಿ ಯಾವುದೇ ಮಂದಿರವನ್ನು ನೋಡಿ ಅಲ್ಲಿ ಹಕ್ಕಿಗಳ ಕಲರವವಿರುತ್ತದೆ. ಆದರೆ ಜಗನ್ನಾಥ ಮಂದಿರದಲ್ಲಿ ಹಕ್ಕಿಗಳ ಕಲರವ ಬಿಡಿ, ಮಂದಿರದ ಮೇಲಿಂದ ಒಂದು ಸಣ್ಣ ಗುಬ್ಬಿಯೂ ಹಾರುವುದಿಲ್ಲ! ಮಾತ್ರವಲ್ಲ ವಿಮಾನಗಳು ಕೂಡಾ ಮಂದಿರದ ಮೇಲಿಂದ ಹಾದು ಹೋಗುವಂತಿಲ್ಲ.

ಮಂದಿರದ ಪ್ರಸಾದ:

ಇದೊಂದು ವಿಸ್ಮಯವೇ ಸರಿ. ದಿನದಲ್ಲಿ ಮಂದಿರಕ್ಕೆ ಎರಡು ಸಾವಿರದಿಂದ ಇಪ್ಪತ್ತು ಸಾವಿರದವರೆಗೆ ಭಕ್ತರು ಬರುತ್ತಾರೆ. ಆದರೆ ಒಂದೇ ಒಂದು ದಿನವೂ ಮಂದಿರದ ಪ್ರಸಾದ ಕಮ್ಮಿಯಾದ ಘಟನೆ ಇದುವರೆಗೂ ಕೇಳಿ ಬಂದಿಲ್ಲ. ಲಕ್ಷಾಂತರ ಜನರೇ ಬಂದರೂ ಪ್ರಸಾದ ಇದ್ದಷ್ಟೇ ಇರುವುದು ಒಂದು ಸೋಜಿಗವೇ ಸೈ. ಇನ್ನು ಈ ಪ್ರಸಾದವನ್ನು ಮಾಡುವ ವಿಧಾನವೂ ವಿಶಿಷ್ಟ. ಏಳು ಮಣ್ಣಿನ ಮಡಕೆಗಳನ್ನು ಒಲೆಯ ಮೇಲೆ ಒಂದರ ಮೇಲೊಂದು ಪೇರಿಸಿಡಲಾಗುತ್ತದೆ. ಎಲ್ಲಕ್ಕಿಂತ ಮೇಲಿನ ಮಡಕೆಯ ಪ್ರದಾದ ಮೊದಲು ಬೆಂದರೆ, ಕಡೆಯ ಮಡಕೆಯ ಪ್ರಸಾದ ಕಡೆಗೆ ತಯಾರಾಗುವುದು.

ಮಂದಿರದ ಸಿಂಹದ್ವಾರ:

ಮಂದಿರದೊಳಗೆ ಪ್ರವೇಶಿಸಲು ಒಟ್ಟು ನಾಲ್ಕು ದ್ವಾರಗಳಿವೆ. ಅದರಲ್ಲಿ ಸಿಂಹದ್ವಾರ ಪ್ರಮುಖವಾಗಿದೆ. ಈ ದ್ವಾರದಿಂದ ಒಳ ಪ್ರವೇಶಿಸುವಾಗ ಸಮುದ್ರದ ಅಲೆಗಳ ಸದ್ದು ಕಿಂಚಿತ್ತೂ ಕೇಳುವುದಿಲ್ಲ, ಆದರೆ ಅದೆ ಮಾರ್ಗವಾಗಿ ಹಿಂತಿರುಗಿ ಬಂದರೆ ಸಾಗರದಲೆಗಳ ಸದ್ದು ಕೇಳಿಸುತ್ತದೆ! ಮಂದಿರದ ಒಳಗಿರುವಷ್ಟು ಹೊತ್ತು ಹೊರಗಿನ ಸದ್ದು ಕೇಳುವುದೇ ಇಲ್ಲ ಆದರೆ ಹೊರಗಡಿಯಿಡುತ್ತಿದಂತೆಯೇ ಸದ್ದು ಕೇಳಲು ಶುರುವಾಗುತ್ತದೆ.

ಇಷ್ಟೆಲ್ಲಾ ಸಂಗತಿಗಳನ್ನು ತಿಳಿದ ಮೇಲೆ ಏನನ್ನಿಸುತ್ತದೆ ನಿಮಗೆ? ವಿಜ್ಞಾನ ಮಾತ್ರದಿಂದಲೇ ಈ ವಿಷಯಗಳನ್ನು ವಿವರಿಸುವುದು ಸಾಧ್ಯವೇ? ಭಾರತದಲ್ಲಿ ತರ್ಕಕ್ಕೆ ನಿಲುಕಲಾಗದ ಇಂತಹ ಹಲವಾರು ವಿಚಾರಗಳಿವೆ. ಪುರಿಯ ಮಂದಿರದ ರಹಸ್ಯ ಜಗನ್ನಾಥನ ಮಹಿಮೆಯಲ್ಲದೆ ಬೇರೆಯೇನೂ ಅಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ.

source: http://noisebreak.com/science-power-lord-jagannath-10-mysteries-puris-jagannath-temple-still-unexplained/

sharvari

Tags

Related Articles

Close