ಪ್ರಚಲಿತ

ಅಂಬೇಡ್ಕರರ ಹೆಸರಲ್ಲಿ ಜಾತ್ಯಾತೀತದ ಸೋಗು ಹಾಕುವ ಸೋಗಲಾಡಿಗಳು ಜಾತ್ಯಾತೀತಯೆ ಬಗ್ಗೆ ಅವರು ತಮ್ಮ ಪುಸ್ತಕದಲ್ಲಿ ಏನು ಬರೆದಿದ್ದಾರೆನ್ನುವುದನ್ನು ಹೇಳುವುದೇ ಇಲ್ಲ!!

ಈ ಸೋಗಲಾಡಿಗಳು ಗೋಸುಂಬೆಯ ಥರ. ತಮಗೆ ಬೇಕಾದಾಗಲೆಲ್ಲ, ಬೇಕು ಬೇಕಾದ ಬಣ್ಣ ಹಾಕಿಕೊಂದು ಜನರಿಗೆ ಮಂಕು ಬೂದಿ ಎರಚುವವರು. ತಮ್ಮ ಬೇಳೆ ಬೇಯಿಸಿಕೊಳ್ಳಲು ಇವರು ದೇಶ ಒಡೆಯಲೂ ತಯಾರಾಗಿರುತ್ತಾರೆ. ತಮ್ಮನ್ನು ತಾವು ಜಾತ್ಯಾತೀತರು, ಬುದ್ದಿಜೀವಿಗಳೆಂದು ಹೇಳಿಕೊಂಡು ಜೋಳಿಗೆ ಹಾಕಿ ತಿರುಗಾಡುವ ಇವರ ಸೋಗಿಗೆ ಬಲಿಯಾಗುವುದು ನಮ್ಮ ಸಂವಿಧಾನ ಮತ್ತು ಅದರ ಶಿಲ್ಪಿ ಅಂಬೇಡ್ಕರ್!! ಬಹುಶ ನಾವು ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡಿರುವುದಕ್ಕಿಂತ ಅಪಾರ್ಥ ಮಾಡಿಕೊಂಡಿದ್ದೇ ಹೆಚ್ಚೆನ್ನಬಹುದು. ಅದಕ್ಕೆ ಕಾರಣ ಈ ಮಿಟಕಲಾಡಿ ಜಾತ್ಯಾತೀತರು. ಅಂಬೇಡ್ಕರ್ ಅವರ ಆದರ್ಶಗಳನ್ನು ಇವರು ಓದಿದ್ದಾರೋ ಇಲ್ಲವೋ ಅಥವಾ ಓದಿಯೂ ಸತ್ಯವನ್ನು ಮುಚ್ಚಿಟ್ಟಿದ್ದಾರೋ ಆ ದೇವರೇ ಬಲ್ಲ.

ಅಂಬೇಡ್ಕರ್ ಒಬ್ಬ ಘೋರ ಹಿಂದೂ ವಿರೋಧಿ ಎಂದು ಬಂಬಡಾ ಬಜಾಯಿಸುವ ಜೋಳಿಗೆ ಬುದ್ದಿಜೀವಿಗಳು ಅವರು ಇಸ್ಲಾಂ ಮತ್ತು ಮುಸಲ್ಮಾನರ ಬಗ್ಗೆ ಎಂಥ ಅಭಿಪ್ರಾಯ ಹೊಂದಿದ್ದರೆನ್ನುವುದನ್ನು ಜನರಿಗೆ ಹೇಳುವುದೇ ಇಲ್ಲ. ಇಂಥಹ ಜಾತ್ಯಾತೀತರು ಒಮ್ಮೆ ಅಂಬೆಡ್ಕರ್ ಅವರು ಬರೆದ “Pakistan or the Partition of India” ಪುಸ್ತಕವನ್ನು ಓದುವುದು ಒಳಿತು. ತಮ್ಮ ಈ ಪುಸ್ತಕದಲ್ಲಿ ಅಂಬೇಡ್ಕರ್ ಹೀಗೆ ಬರೆಯುತ್ತಾರೆ.

” ಹಿಂದೂ ಸಮಾಜದಲ್ಲಿರುವಂತಹ ದುಷ್ಟ ಪದ್ಧತಿಗೆ ಸಮಾನಾದ ದುಷ್ಟ ಪದ್ಧತಿಗಳು ಮುಸ್ಲಿಂ ಸಮಾಜದಲ್ಲೂ ಇದೆಯೆನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ವಾಸ್ತವಾಗಿ ಹಿಂದೂ ಕುರೀತಿಗಳಿಗಿಂತಲೂ ಹೆಚ್ಚು ಕುರೀತಿಗಳು ಮುಸಲ್ಮಾನರಲ್ಲಿವೆ. ಆ ಕುರೀತಿಗಳಲ್ಲಿ ಒಂದು ಮುಸಲ್ಮಾನ ಮಹಿಳೆಯರಿಗೆ ಪರ್ದಾ ವ್ಯವಸ್ತೆ”

“ಮುಸ್ಲಿಮರಲ್ಲಿ ಈ ದುಷ್ಟತನದ ಅಸ್ತಿತ್ವವು ಸಾಕಷ್ಟು ತೊಂದರೆಗೀಡುಮಾಡುತ್ತದೆ. ಆದರೆ ಇದಕ್ಕಿಂತಲೂ ಸಂಕಷ್ಟದ ವಿಚಾರವೆಂದರೆ ಈ ದುಷ್ಟ ಪದ್ದತಿಗಳನ್ನು ನಿವಾರಿಸಲು ಮತ್ತು ಸಾಮಾಜಿಕ ಸುಧಾರಣೆ ಮಾಡಲು ಮುಸ್ಲಮಾನರಲ್ಲಿ ಸಂಘಟಿತ ಚಳುವಳಿಗಳಿಲ್ಲ. ಹಿಂದೂಗಳಲ್ಲಿ ಸಾಮಾಜಿಕ ಪಿಡುಗುಗಳಿವೆ ಆದರೆ ಸಂತೋಷದಾಯಕ ವಿಚಾರವೆಂದರೆ ಅವರಲ್ಲಿ ಅದರ ಬಗ್ಗೆ ಹಲವರಿಗೆ ಅರಿವಿದೆ ಮತ್ತು ಹಲವರು ಅದನ್ನು ನಿವಾರಿಸಲು ಆಂದೋಳನ ಕೈಗೊಂಡಿದ್ದಾರೆ. ಮತ್ತೊಂದೆಡೆ, ಮುಸ್ಲಿಮರಿಗೆ ದುಷ್ಟ ಪದ್ದತಿಗಳ ಅರಿವೇ ಇಲ್ಲ ಮತ್ತು ಅದರ ಉನ್ಮೂಲನಗೆ ಅವರು ಯಾವುದೇ ಚಳುವಳಿ ಕೈಗೊಂಡಿಲ್ಲ. ವಾಸ್ತವವಾಗಿ, ಅವರು ತಮ್ಮಲ್ಲಿ ಅಸ್ತಿತ್ವದಲ್ಲಿರುವ ಅಭ್ಯಾಸಗಳಲ್ಲಿ ಯಾವುದೇ ತೆರನಾದ ಬದಲಾವಣೆಯನ್ನು ವಿರೋಧಿಸುತ್ತಾರೆ. ”

ಭಾರತದಲ್ಲಿ ನಡೆಸಲಾಗುವ ಗೋಹತ್ಯೆಯ ವಿಚಾರವಾಗಿ ಅಂಬೇಡ್ಕರ್ ಬರೆಯುತ್ತಾರೆ, ” ಮುಸ್ಲಿಮರಲ್ಲಿ ಗಮನಾರ್ಹವಾದ ನಡವಳಿಕೆಯೆಂದರೆ ಹಿಂದೂಗಳ ದೌರ್ಬಲ್ಯಗಳನ್ನು ದುರ್ಬಳಕೆ ಮಾಡುವುದು. ಹಿಂದೂಗಳು ಏನನ್ನಾದರೂ ಆಕ್ಷೇಪಿಸಿದರೆ, ಮುಸ್ಲಿಮರು ಅದನ್ನು ಒತ್ತಾಯಪೂರ್ವಕವಾಗಿ ಮಾಡುವಂತೆ ತೋರುತ್ತದೆ, ಹಿಂದೂಗಳು ಏನಾದರೂ ಬೆಲೆ ತೆರಲು ಸಿದ್ದರಾಗಿದ್ದಾಗ ಮಾತ್ರ ಮುಸಲ್ಮಾನರು ರಿಯಾಯಿತಿಗಳನ್ನು ನೀಡುತ್ತಾರೆ. ಇಸ್ಲಾಮಿಕ್ ಕಾನೂನು ಬಲಿದಾನಕ್ಕಾಗಿ ಹಸುವಿನ ಹತ್ಯೆಯ ಮಾಡುವಂತೆ ಒತ್ತಾಯ ಮಾಡುವುದಿಲ್ಲ ಮತ್ತು ಮುಸಲ್ಮಾನರು, ಹಜ್ ಪ್ರವಾಸಕ್ಕೆ ಹೋದಾಗ, ಮೆಕ್ಕಾ ಅಥವಾ ಮದೀನಾದಲ್ಲಿ ಹಸುವನ್ನು ಬಲಿದಾನವಾಗಿ ನೀಡುವುದಿಲ್ಲ. ಆದರೆ ಭಾರತದಲ್ಲಿ, ಬೇರೆ ಪ್ರಾಣಿಗಳ ಬಲಿದಾನದಿಂದ ಅವರು ಸಂತುಷ್ಟರಾಗುವುದಿಲ್ಲ. ”

“ಇಸ್ಲಾಂ ಧರ್ಮದ ಸಹೋದರತ್ವವು ಮನುಷ್ಯನ ಸಾರ್ವತ್ರಿಕ ಸಹೋದರತ್ವವಲ್ಲ. ಈ ಸೋದರತ್ವ ಮುಸ್ಲಿಮರಿಂದ ಮುಸ್ಲಿಮರಿಗೆ ಮಾತ್ರವಾಗಿದೆ. ಅವರಲ್ಲಿ ಒಂದು ಸೋದರತ್ವವಿದೆ, ಆದರೆ ಅದರ ಲಾಭವು ಆ ನಿಗಮದೊಳಗೆ ಸೀಮಿತವಾಗಿದೆ. ” “ಇಸ್ಲಾಂ ಧರ್ಮದ ನ್ಯೂನತೆಯೆಂದರೆ ಇದು ಸಾಮಾಜಿಕ ಸ್ವ-ಆಡಳಿತದ ವ್ಯವಸ್ಥೆ ಅದು ಸ್ಥಳೀಯ ಸ್ವ-ಆಡಳಿತದೊಂದಿಗೆ ಹೊಂದಾಣಿಕೆಯಾಗುವುದಿಲ್ಲ, ಏಕೆಂದರೆ ಮುಸಲ್ಮಾನರ ನಿಷ್ಠೆ ಅವರ ವಾಸಸ್ಥಾನದ ಮೇಲಲ್ಲ, ಬದಲಾಗಿ ಅವರ ನಂಬಿಕೆಗಳ ಮೇಲಿರುತ್ತದೆ. ಎಲ್ಲೆಲ್ಲಾ ಇಸ್ಲಾಂನ ಆಳ್ವಿಕೆಯಿರುವುದೋ ಅದೇ ಅವನ ದೇಶವಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಜವಾದ ಮುಸ್ಲಿಂ ಭಾರತವನ್ನು ತನ್ನ ತಾಯಿನಾಡು ಎಂದು ಅಳವಡಿಸಿಕೊಳ್ಳಲು ಇಸ್ಲಾಂ ಎಂದಿಗೂ ಅನುಮತಿ ನೀಡುವುದಿಲ್ಲ ಮತ್ತು ಹಿಂದೂಗಳನ್ನು ಅವರ ಸಹೋದರರಂತೆ ಪರಿಭಾವಿಸಲು ಬಿಡುವುದಿಲ್ಲ.”

“ಯಥಾರ್ಥವಾದಿಗಳು ಗಮನಿಸಬೇಕಾದ ವಿಚಾರವೆಂದರೆ ಮುಸಲ್ಮಾನರು ಹಿಂದೂಗಳನ್ನು ಕಾಫಿರರೆಂದೂ, ಅವರನ್ನು ರಕ್ಷಣೆ ಮಾಡುವುದಕ್ಕಿಂತ ನಿರ್ನಾಮಮಾಡುವುದೇ ಒಳಿತು ಎಂದು ಪರಿಭಾವಿಸುತ್ತಾರೆ, ಮುಸಲ್ಮಾನರು ಯುರೋಪಿಯನ್ನರನ್ನು ಉನ್ನತ ಸ್ಥಾನದಲ್ಲಿ ಸ್ವೀಕರಿಸುವಾಗ, ಅವರು ಹಿಂದೂಗಳನ್ನು ತನ್ನ ಕೆಳಮಟ್ಟದಲ್ಲಿ ನೋಡುತ್ತಾರೆ ಎಂದು ವಾಸ್ತವತಾವಾದಿಯು ಗಮನಿಸಬೇಕು.” “ರಾಜಕೀಯದಲ್ಲಿ ಮುಸ್ಲಿಮರು ದಂಗೆಕೋರರ ವಿಧಾನವನ್ನು ಅಳವಡಿಸಿಕೊಳ್ಳುವುದು ಗಮನಾರ್ಹವಾದುದು. ಗಲಭೆಯೆಬ್ಬಿಸುವುದು ಅವರ ರಾಜಕೀಯ ಕೌಶಲ್ಯದ ಒಂದು ಭಾಗವಾಗಿದೆ ಎಂಬುದಕ್ಕೆ ಸಾಕಷ್ಟು ಸೂಚನೆಗಳಿವೆ. ಎಲ್ಲಿವರೆಗೆ ಮುಸ್ಲಿಮರು ಆಕ್ರಮಣಕಾರರಿದ್ದರು, ಹಿಂದೂಗಳು ನಿಷ್ಕ್ರಿಯರಾಗಿದ್ದರು ಮತ್ತು ಸಂಘರ್ಷದಲ್ಲಿ ಅವರು ಮುಸ್ಲಿಮರಿಗಿಂತ ಹೆಚ್ಚು ಅನುಭವಿಸಿದ್ದರು. ಆದರೆ ಅದು ಇನ್ನು ಮುಂದೆ ನಿಜವಲ್ಲ. ಹಿಂದೂಗಳು ಪ್ರತೀಕಾರ ನಡೆಸಲು ಕಲಿತಿದ್ದಾರೆ ಮತ್ತು ಮುಸಲ್ಮಾನರಿಗೆ ಪ್ರತಿರೋಧ ಮಾಡುವಲ್ಲಿ ಯಾವುದೇ ಸಂಧಾನ ಮಾಡುವುದಿಲ್ಲ. ದಂಗೆಯ ವಿರುದ್ಧ ದಂಗೆ ಎನ್ನುವ ಪ್ರತೀಕಾರತ್ಮಕ ನಡವಳಿಕೆ ಎನ್ನುವ ಕೊಳಕು ಪ್ರದರ್ಶನವು ನ್ಯಾಯೋಚಿತವಾಗಿದೆ. ”

ಜಾತ್ಯಾತೀತವಾದಿಗಳು ಅಂಬೇಡ್ಕರ್ ಅವರ ಈ ಪುಸ್ತಕವನ್ನೊಮ್ಮೆ ಓದುವುದು ಒಳಿತು. ಹಲವಾರು ವರ್ಷಗಳ ಹಿಂದೆಯೇ ಅಂಬೇಡ್ಕರ್ ಹೇಳಿರುವುದಕ್ಕೂ ಈಗ ನಡೆಯುತ್ತಿರುವುದಕ್ಕೂ ಒಂದಿನಿತೂ ವ್ಯತ್ಯಾಸವಿಲ್ಲ. ಜಾತ್ಯಾತೀತತೆ ಎನ್ನುವ ಸೋಗು ದೇಶದ ಅಖಂಡತೆಗೇ ಮಾರಕ. ಇದನ್ನ ಸ್ವತಃ ಸಂವಿಧಾನ ಶಿಲ್ಪಿಯೇ ಒಪ್ಪಿಕೊಂಡಿದ್ದಾರೆ. ನಂಬಿಕೆ ಬರದಿದ್ದರೆ ಅವರೇ ಅವರ ಕೈಯಾರೆ ಬರೆದ ಪುಸ್ತಕ ಓದಿ, ಮುಚ್ಚಿದ ಮಸ್ತಕದ ಹೆಬ್ಬಾಗಿಲನ್ನು ತೆರೆದುಕೊಳ್ಳಿ. ಜೈ ಭೀಮ್..

Source:http://www.opindia.com/2018/04/10-things-ambedkar-said-that-indian-secularists-wouldnt-bear-to-hear/

-ಶಾರ್ವರಿ

Tags

Related Articles

Close