ಪ್ರಚಲಿತ

ಸೋನಿಯಾ,ರಾಹುಲ್‍ಗೆ ಶಾಕ್!ರಾಬರ್ಟ್ ವಾದ್ರಾ ಬಂಧನಕ್ಕೆ ಕ್ಷಣಗಣನೆ!25 ಕೋಟಿ ಕಟ್ಟದಿದ್ದರೆ ಅರೆಸ್ಟ್…!

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾನು ಆಡಿದ್ದೆ ಆಟ ಎಂದು ಅಹಂಕಾರದಿಂದ ರಾಷ್ಟ್ರದಲ್ಲಿ ಆಡಳಿತ ನಡೆಸಿ ತನಗೆ ಬೇಕಾದ ಹಾಗೆ ದುಡ್ಡು ನುಂಗುವ ಕೆಲಸವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮಾಡಿದ್ದ. ತನ್ನ ಪತ್ನಿ ಪ್ರಿಯಾಂಕ, ಅತ್ತೆ ಸೋನಿಯಾ ಗಾಂಧಿ ಹಾಗೂ ಮೈದ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಅಂದಿನ ಕಾಂಗ್ರೆಸ್ ಸರ್ಕಾರವನ್ನೇ ತನ್ನ ಕಪಿ ಮುಷ್ಟಿಯಲ್ಲಿ ಬಿಗಿದಿಟ್ಟುಕೊಂಡಿದ್ದ ರಾಬರ್ಟ್ ವಾದ್ರಾ ಮಾಡಿದ್ದ ಭ್ರಷ್ಟಾಚಾರ ಅಷ್ಟಿಷ್ಟಲ್ಲ. ಇದೀಗ ಆ ಎಲ್ಲ ಪ್ರಕರಣಗಳು ಬಯಲಾಗಿದ್ದು ಯಥಾ ಶೀಘ್ರ ಈ ನೆಹರೂ ಕುಟುಂಬದ ಅಳಿಯ ಜೈಲು ಪಾಲಾಗುವ ಸಾಧ್ಯತೆ ಇದೆ.

25 ಕೋಟಿ ಕಟ್ಟದಿದ್ದರೆ ಜೈಲುವಾಸ ಗ್ಯಾರಂಟಿ..!

ರಾಬರ್ಟ್ ವಾದ್ರಾಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಭರ್ಜರಿ ಗುನ್ನಾ ಇಟ್ಟಿದೆ. ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾಗೆ ಕೇಂದ್ರ ಸರ್ಕಾರ ಶೋಕಾಸ್ ನೋಟೀಸ್ ನೀಡಿದ್ದು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ದಂಡ ವಿಧಿಸಿದೆ. ಇದೇ ತಾರೀಕು 30ರೊಳಗೆ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಬರೋಬ್ಬರಿ 25 ಕೋಟಿ ರೂಗಳನ್ನು ದಂಡವಾಗಿ ಕಟ್ಟಬೇಕೆಂದು ಆದೇಶಿಸಿದೆ. ಒಂದೊಮ್ಮೆ ಕಟ್ಟದೇ ಇದ್ದರೆ ಜೈಲು ಕಂಬಿ ಎಣಿಸುವ ಎಚ್ಚರಿಕೆಯನ್ನೂ ಕೇಂದ್ರ ಸರ್ಕಾರ ನೀಡಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ 42 ಕೋಟಿ ರೂಪಾಯಿಗಳಷ್ಟು ಆಸ್ತಿಗಳನ್ನು ಗಳಿಸಿದ್ದರೂ ಕೇವಲ 34 ಕೋಟಿಯಷ್ಟು ಮಾತ್ರವೇ ದಾಖಲೆಗಳನ್ನು ನೀಡುತ್ತಿದ್ದ. ಈ ವಿಚಾರ ವಂಚನೆಯ ದಾಖಲೆಗಳನ್ನು ರಾಷ್ಟ್ರೀಯ ಸುದ್ಧಿ ವಾಹಿನಿ ರಿಪಬ್ಲಿಕ್ ನ್ಯೂಸ್ ಸವಿವರವಾಗಿ ಬಿತ್ತರಿಸಿತ್ತು. ಈ ಸುದ್ಧಿಯ ಬೆನ್ನತ್ತಿದ ಕೇಂದ್ರ ಸರ್ಕಾರ ಪರಿಶೀಲಿಸಿ ನಂತರ 25 ಕೋಟಿ ದಂಡ ಕಟ್ಟುವಂತೆ ಆದೇಶಿಸಿದೆ.

42 ಕೋಟಿಗಿಂತಲೂ ಅಧಿಕ ಆದಾಯವನ್ನು ಪಡೆದು ಉಧ್ಯಮ ನಡೆಸುತ್ತಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಆದಾಯ ತೆರಿಗೆ ಇಲಾಖೆಗೆ ನೀಡುತ್ತಿದ್ದು ಕೇವಲ 32 ಕೋಟಿಯಷ್ಟರ ಲೆಕ್ಕ ಮಾತ್ರವೇ ಆಗಿತ್ತು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವನ್ನುಂಟುಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದನ್ನು ರಾಷ್ಟ್ರೀಯ ಸುದ್ಧಿ ಸಂಸ್ಥೆ ರಿಪಬ್ಲಿಕ್ ಚಾನೆಲ್ ದಾಖಲೆ ಸಮೇತ ಬಹಿರಂಗ ಪಡಿಸಿತ್ತು. ಈ ದಾಖಲೆಯ ಮೂಲಕ ವಿಚಾರಣೆ ನಡೆಸಿದ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಇದೀಗ ರಾಬರ್ಟ್ ವಾದ್ರಾಗೆ ನೋಟೀಸ್ ನೀಡಿದೆ.

ಈ ನೋಟೀಸ್‍ಗೆ ಸಂಬಂಧಪಟ್ಟು ರಾಬರ್ಟ್ ವಾದ್ರಾ 25 ಕೋಟಿ ದಂಡವನ್ನು ಕಟ್ಟಬೇಕು. ಕಟ್ಟದೇ ಮೀನಾ ಮೇಷ ಎಳೆದರೆ ಈ ಬಾರಿ ಕಂಬಿ ಎಣಿಸುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇದು ಒಂದು ಪ್ರಕರಣವಾದರೆ ಇನ್ನೂ ಅನೇಕ ಪ್ರಕರಣಗಳು ರಾಬರ್ಟ್ ವಾದ್ರಾ ಬೆನ್ನು ಹತ್ತಿದೆ. ಕಾಂಗ್ರೆಸ್ ಆಡಳಿತ ಇದ್ದ ಸಂದರ್ಭದಲ್ಲಿ ತಮಗೆ ಬೇಕಾದ ಹಾಗೆ ಅಧಿಕಾರ ನಡೆಸುತ್ತಿದ್ದ ರಾಬರ್ಟ್ ವಾದ್ರಾಗೆ ಇದೀಗ ಪ್ರಧಾನಿ ಮೋದಿಯ ಆಡಳಿತ ವೈಖರಿ ಕಗ್ಗಂಟಾಗಿ ಪರಿಣಮಿಸಿದೆ.

-ಸುನಿಲ್ ಪಣಪಿಲ

Tags

Related Articles

Close