ಪ್ರಚಲಿತರಾಜ್ಯ

ಸಿದ್ದರಾಮಯ್ಯಗೀಗ ನಡುಕ!! ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ!!

ಇನ್ನೇನು ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಬಹುದೆಂದು ಎಲ್ಲರೂ ಕಾಯುತ್ತಿದ್ದಾರೆ! ರಾಜ್ಯದಲ್ಲಿ ಈಗಾಗಲೇ ಚುನಾವಣಾ ಪ್ರಚಾರಗಳೂ ಎರಡನೇ ಹಂತದಲ್ಲಿ ನಡೆಯುತ್ತ ಸಾಗಿದೆ!! ಈ ಸಲದ ಕರ್ನಾಟಕದ ಚುನಾವಣೆ ಮಾತ್ರ ಎಂದಿಗಿಂತಲೂ ಭಿನ್ನ!! ಯಾಕೆಂದರೆ, ೨೧ ರಾಜ್ಯಗಳಲ್ಲಿ ಎನ್ ಡಿ ಎ ಸ್ಥಾಪಿಸಬೇಕು ಎಂದು ಪಣತೊಟ್ಟಿರುವ ಭಾರತೀಯ ಜನತಾ ಪಕ್ಷಕ್ಕೆ ಕರ್ನಾಟಕವೆಂಬುದು ಎಲ್ಲದಕ್ಕಿಂತ ಪ್ರಮುಖವಾದರೆ, ಕಾಂಗ್ರೆಸ್ಸಿಗರಿಗೂ ಕೂಡ ಇದು ಅಷ್ಟೇ ಮುಖ್ಯ!! ಯಾಕೆ ಗೊತ್ತಾ?! ಕರ್ನಾಟಕದಲ್ಲೂ ಕಾಂಗ್ರೆಸ್ ಸೋತು ಹೋಯಿತೆಂದರೆ ಮರ್ಯಾದೆ ಮೂರು ಕಾಸಿಗೆ ಹರಾಜಾಗಿ ಹೋಗುತ್ತದೆ! ಅದರಲ್ಲಿಯೂ ಕೂಡ, ಕರ್ನಾಟಕವನ್ನು ತುಘಲಕ್ ರಾಜ್ಯ ಮಾಡಬೇಕೆಂದು ಬಹುದೊಡ್ಡ ಆಸೆ ಇಟ್ಟುಕೊಂಡಿರುವ ಕಾಂಗ್ರೆಸ್ ಮತ್ತು ರಾಜ್ಯದ ಸಿದ್ಧರಾಮಯ್ಯರವರಿಗೆ ಈ ರಾಜ್ಯದ ಗೆಲುವು ಪ್ರತಿಷ್ಟೆಯ ಲೆಕ್ಕ!!

ಬಿಡಿ! ಅಭಿವೃದ್ದಿಯಂತೂ ಆಗಲಿಲ್ಲ! ಹಿಂದೂಗಳ ಮಾರಣಹೋಮವಂತೂ ನಿಲ್ಲಲಿಲ್ಲ!! ಜೊತೆ ಜೊತೆಗೆ, ಜನರ ಬದುಕೂ ಸುಧಾರಿಸಲಿಲ್ಲ! ಐದು ವರ್ಷಗಳ ಆಡಳಿತದಲ್ಲಿ ಮಾಡಿದ್ದೇನೆಂದರೆ ರಾಜ್ಯದ ಜನರ ಮೇಲೆ ೩೮೦೦೦ ಗಟ್ಟಲೇ ಸಾಲ ಮಾಡಿದ್ದಷ್ಟೇ!! ಅದನ್ನು ಬಿಟ್ಟರೆ, ಪಿಎಫ್ ಐ, ಎಸ್ ಡಿ ಪಿ ಐ ಯಂತಹ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿ, ತನ್ಮೂಲಕ ರಾಜ್ಯ ವಿಧಾನ ಸಭೆ ಚುನಾವಣೆಗೆ ಮುಸ್ಲಿಂ ಮತಗಳನ್ನು ಹೆಚ್ಚಿಸುವ ದುರ್ಬುದ್ದಿ ಮಾಡಿದ್ದ ಸಿದ್ಧರಾಮಯ್ಯ ಮಾತ್ರ ರಾಷ್ಟ್ರಭಕ್ತ ಸಂಘಟನೆಗಳನ್ನು ಉಗ್ರ ಸಂಘಟನೆಗಳೆಂದು ಕರೆದಿದ್ದಲ್ಲದೇ, ತಾನೆಂತಹ ತುಘಲಕ್ ಬೆಂಬಲಿಗ ಎಂಬುದನ್ನು ತೋರಿಸಿಕೊಟ್ಟಾಗಲೇ ರಾಜ್ಯದ ಬಹುತೇಕ ಜನರಿಗೆ ಅರ್ಥವಾಗಿ ಹೋಗಿತ್ತು!! ಸಿದ್ಧರಾಮಯ್ಯನವರು ರಾಮ ರಾಜ್ಯದ ಕಲ್ಪನೆಯೊಂದು ತುಘಲಕ್ ರಾಜ್ಯದ ಕಲ್ಪನೆಯಾಗಿತ್ತೆಂಬುದು!!

ಅದಕ್ಕೇ ಈ ಸಲ ಭಾರತೀಯ ಜನತಾ ಪಕ್ಷ ಮಾತ್ರ ಸೀದಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರನ್ನೇ ನೇರವಾಗಿ ಚುನಾವಣೆಗೆ ತಂದು ನಿಲ್ಲಿಸಿದೆ!! ಹಾ!!ಈ ಬಾರಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸಂಘ ಪರಿವಾರವನ್ನು ಅಧಿಕೃತವಾಗಿ ಕಣಕ್ಕಿಳಿಸಲು ಆರೆಸ್ಸೆಸ್ ನಿರ್ಧರಿಸಿದೆ. ಕೇಶವ ಕೃಪಾದಲ್ಲಿ ಶನಿವಾರ ನಡೆದಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ!!

ಕಾರ್ಯಸೂಚಿಯೇ ಅಚ್ಚರಿ ಹುಟ್ಟಿಸುವಂತಿರುವಾಗ, ಇನ್ನು ರಾಜ್ಯದ ಮುಖ್ಯಮಂತ್ರಿಗೆ ತಲೆಬಿಸಿ ಆಗದೇ ಇರುತ್ತದೆಯೇ?! ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂಘ ಪರಿವಾರದ ಕಾರ್ಯಕರ್ತರಿಗೂ ಚುನಾವಣಾ ಜವಾಬ್ದಾರಿ ವಹಿಸಲಾಗುತ್ತದೆ. ಪ್ರತೀ ಬೂತಿಗೂ ಒಬ್ಬೊಬ್ಬ ಆರೆಸ್ಸೆಸ್ ನಾಯಕರನ್ನು ಉಸ್ತುವಾರಿಯನ್ನಾಗಿ ನಿಯೋಜಿಸಲು ನಿರ್ಧರಿಸಲಾಗಿದೆ.

ವಿಷಯ ಇಷ್ಟೇ!! ಕೇವಲ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಮಾತ್ರ ಚುನಾವಣೆಯ ಜವಾಬ್ದಾರಿ ನೀಡುತ್ತಿಲ್ಲ! ಪ್ರತಿ ಹಿಂದೂ ಸಂಘಟನೆಗಳೂ ಕೂಡ, ಈ ಸಲ ಬಿಜೆಪಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲೇಬೇಕು ಎನ್ನುವ ಪಣ ತೊಟ್ಟಿದ್ದಾರೆ! ಆದ್ದರಿಂದ, ಉಳಿದೆಲ್ಲ ಸಂಘಟನೆಗಳ ಕಾರ್ಯಕರ್ತರು ಚುನಾವಣೆಯ ಜವಾಬ್ದಾರಿಯನ್ನು ಹೊರಲೇಬೇಕಿದೆ! ಇದಕ್ಕೂ, ಮುಂಚೆ ನರೇಂದ್ರ ಮೋದಿಯನ್ನು ಪ್ರಧಾನಿಯ ಸ್ಥಾನಕ್ಕೆ ಗೆಲ್ಲಿಸಬೇಕೆಂಬ ಮಹದಾಸೆಯೊಂದಕ್ಕೆ ಮತ್ತದೇ ಸಂಘ ನೀರೆರೆದಿತ್ತು! ಈಗ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಸರಕಾರ ಅಸ್ತಿತ್ವಕ್ಕೆ ಬರಬೇಕೆಂಬ ಹಠ ಮತ್ತೆ ಸಂಘವನ್ನು ಬಡಿದೆಬ್ಬಿಸಿದೆ! ಕೇವಲ ನಿರ್ಧಾರ ಸುದ್ದಿ ಕೇಳಿಯೇ ಬೆಚ್ಚಿರುವ ಬಿಜೆಪಿಯ ವಿರೋಧ ಪಕ್ಷಗಳು ಈಗ ಮತ್ತಷ್ಟು ರೊಚ್ಚಿಗೇಳುವ ಸಾಧ್ಯತೆಯಿದ್ದರೂ ಸಹ ಸಂಘ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದು ಅಸಾಧ್ಯವೇ!

ಕೇವಲ ಆರ್ ಎಸ್ ಎಸ್ ಎಸ್ ಮಾತ್ರವಲ್ಲ, ಬದಲಾಗಿ ಭಜರಂಗದಳ, ವಿಶ್ವ ಹಿಂದೂ ಪರಿಷತ್, ಎಬಿವಿಪಿ ಮುಂತಾದ ಸಂಘ ಪರಿವಾರದ ಕಾರ್ಯಕರ್ತರಿಗೂ ಚುನಾವಣಾ ಜವಾಬ್ದಾರಿ ಹಂಚಲು ಆರೆಸ್ಸೆಸ್ ತೀರ್ಮಾನಿಸಿದೆ. ಇದರೊಂದಿಗೆ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಲು ಆರೆಸ್ಸೆಸ್ ರಣತಂತ್ರ ಹೆಣೆಯುತ್ತಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಎದುರಿಸುವುದು ಬಿಜೆಪಿಗೆ ಕಠಿಣವಾಗಲಿದೆ ಎಂಬ ಕಾರಣಕ್ಕೆ ಆರೆಸ್ಸೆಸ್ ಅಖಾಡಕ್ಕಿಳಿಯಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲೇ ಪಕ್ಷ ಸಂಘಟನೆಗೆ ಸಂಘ ಪರಿವಾರದ ನಾಯಕರೇ ಮುಂದಾಗಿದ್ದಾರೆ.

ಈಗ ಶುರು ಮಜಾ! ಅತ್ತ ಕಾಂಗ್ರೆಸ್ ಡೋಲಾಯ ಮಾನ ಪರಿಸ್ಥಿತಿಯಲ್ಲಿದ್ದರೆ ಇತ್ತ ಜೆಡಿಎಸ್ ಕೂಡಾ ಮತ ಒಡೆಯಲು ಏನೆಲ್ಲ ಬೇಕೋ ಅದಷ್ಟನ್ನೂ ಮಾಡುತ್ತಿದೆ ಬಿಡಿ!! ಪಾಪ! ಸಿದ್ಧರಾಮಯ್ಯರವರೀಗ ಬೆವರತೊಡಗಿದ್ದಾರೆ! ಕಾರಣ ಇಷ್ಟೇ! ಅಕಸ್ಮಾತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರ್ಧಾರ ಯಶಸ್ವಿಯಾಯಿತೆಂದರೆ, ರಾಜ್ಯದಲ್ಲಿ ಹಿಂದೂಗಳ ಸಂಘಟನೆ ಬಲಗೊಳ್ಳುತ್ತದೆ! ಅದಲ್ಲದೇ, ರಾಷ್ಟ್ರೀಯ ಮುಸಲ್ಮಾನ ಮಂಚ್ ಇಂದಲೂ ಸಹ ಚುನಾವಣಾ ಪ್ರಚಾರ ನಡೆದರೆ, ಕಥೆ ಅರ್ಧ ಮುಗಿದಂತೆಯೇ!! ಕಾಂಗ್ರೆಸ್ ನ ಅರ್ಧಕ್ಕರ್ಧ ಮತಗಳು ಬಿಜೆಪಿಗೆ!! ಇನ್ನೊಂದಿಷ್ಟು ಜೆಡಿಎಸ್ ತೆಗೆದುಕೊಂಡಿತೆಂದಾದರೆ
ಕರ್ನಾಟಕ ಕಾಂಗ್ರೆಸ್ ಮುಕ್ತವಾಗಿ ಹೋಗುತ್ತದೆ! ಇನ್ನು ಸರಕಾರ ಸ್ಥಾಪಿಸಲು ಐದು ವರ್ಷಗಳು ಬೇಕಾಗುತ್ತದೆ!! ಅದೂ ಅಷ್ಟೊತ್ತಿಗೆ ಕಾಂಗ್ರೆಸ್ ಏನಾದರೂ ಇದ್ದರೆ!! ಅದಕ್ಕೇ, ಸಿದ್ಧರಾಮಯ್ಯ ಈಗ ಹಿಂದು ಮಂತ್ರಗಳನ್ನು ಇದ್ದರೆ ಹೇಳಿ! ಚುನಾವಣೆಗೆ ಬೇಕಾಗುತ್ತದೆ ಎನ್ನುತ್ತಿದ್ದಾರೆಂಬ ಗುಸುಗುಸು ಸುದ್ದಿ! ಅತ್ತ, ಕಾಂಗ್ರೆಸ್ ನ ಅಧ್ಯಕ್ಷರೆನ್ನಿಸಿಕೊಂಡವರು ಇಟಲಿಯ ಕಡೆ ಮುಖ ಮಾಡಿದ್ದಾರೆ! ರಾಹುಲ್ ಗಾಂಧಿಯನ್ನು ನಂಬಿ ಅದ್ಹೇಗೆ ನಾನೇ ಮುಂದಿನ ಮುಖ್ಯಮಂತ್ರಿ ಎಂದೆ ಸಿದ್ಧರಾಮಯ್ಯ ಹೇಳಿದರೋ ಗೊತ್ತಿಲ್ಲ! ಆದರೆ, ಕರ್ನಾಟಕ ಚುನಾವಣಾ ಉಸ್ತುವಾರಿ ಯಾಗಿರು ಪ್ರಕಾಶ್ ಜಾವ್ಡೇಕರ್ ಸ್ವತಃ ಕನ್ನಡ ಕಲಿತು “ಸಿದ್ಧ ಬಿದ್ದ” ಎಂದು ಗಹಗಹಿಸಿ ನಕ್ಕಿದ್ದಾರೆ! ಬೇಕಿತ್ತಾ ನಮ್ಮ ಸಿದ್ದರಾಮಯ್ಯರಿಗೆ ಇವೆಲ್ಲ?! ಪಾಪ!!

– ಪೃಥು ಅಗ್ನಿಹೋತ್ರಿ

Tags

Related Articles

Close