ಪ್ರಚಲಿತ

ಅಂದು ಹೀಯಾಳಿಸಿದ ಸಿದ್ದರಾಮಯ್ಯ ಇಂದು ಹೀನಾಯವಾದ ಸ್ಥಿತಿಗೆ ತಲುಪಿದ್ದು ಇದೇ ಕಾರಣಕ್ಕೆ.! ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು.!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಅಧಿಕಾರದ ಅವಧಿಯಲ್ಲಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿ ತನ್ನ ಅಧಿಕಾರದ ಅಲಂಕಾರವನ್ನು ಪ್ರದರ್ಶಿಸಿದ್ದರು. ಸಿದ್ದರಾಮಯ್ಯನವರಂತಹ ಅಹಂಕಾರಿ ಮುಖ್ಯಮಂತ್ರಿಯನ್ನು ನಾವು ಕಂಡೇ ಇಲ್ಲ ಎಂದು ಸ್ವತಃ ಕಾಂಗ್ರೆಸ್ ಹಿರಿಯ ಮುಖಂಡರೇ ಬಹಿರಂಗವಾಗಿ ಹೇಳಿಕೊಂಡಿದ್ದರು. ಯಾಕೆಂದರೆ ಸಿದ್ದರಾಮಯ್ಯನವರು ಸ್ವತಃ ಕಾಂಗ್ರೆಸ್ ಹೈಕಮಾಂಡನ್ನೇ ಕೇರ್ ಮಾಡುತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದಲೇ ಕೇವಲ ಐದು ವರ್ಷಗಳ ಅವಧಿಯಲ್ಲಿ ಇಡೀ ರಾಜ್ಯವನ್ನು ನರಕದ ಕೂಪವನ್ನಾಗಿ ಸೃಷ್ಟಿಸಿದ್ದರು. ಹಿಂದೂ ದೇವಾಲಯಗಳನ್ನು ಮತ್ತು ಹಿಂದೂ ಧರ್ಮವನ್ನು ಪದೇ ಪದೇ ಅವಮಾನ ಮಾಡುತ್ತಿದ್ದ ಸಿದ್ದರಾಮಯ್ಯನವರು ಇದೀಗ ಅದೇ ಹಿಂದೂ ದೇವಾಲಯದಲ್ಲಿ ಮೊಣಕಾಲೂರಿ ಕೂರುವಂತಾಗಿದೆ.!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮೀನು ಮಾಂಸ ತಿಂದು ದೇವಾಲಯ ಪ್ರವೇಶಿಸಿದ್ದರು. ಇದು ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾದರೆ, ಸಿದ್ದರಾಮಯ್ಯನವರ ವಿರುದ್ಧ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಆದರೂ ತಾನು ಮುಖ್ಯಮಂತ್ರಿ ಎಂಬ ಅಹಂಕಾರದಲ್ಲಿದ್ದ ಸಿದ್ದರಾಮಯ್ಯನವರು ಯಾರ ವಿರೋಧವನ್ನೂ ಕ್ಯಾರೇ ಅನ್ನದ, ನಾನು ಮಾಂಸ ತಿಂದು ದೇವಾಲಯ ಪ್ರವೇಶಿಸುತ್ತೇನೆ , ಏನೀವಾಗ? ಎಂದು ಅಹಂಕಾರಿತನದ ಮಾತುಗಳನ್ನಾಡಿದ್ದರು. ಯಾಕೆಂದರೆ ಸಿದ್ದರಾಮಯ್ಯನವರು ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದವರು, ಆದರೆ ಇದೀಗ ಯಾವ ಧರ್ಮಸ್ಥಳಕ್ಕೆ ಮಾಂಸ ತಿಂದು ಪ್ರವೇಶಿಸಿದ್ದರೋ ಅದೇ ದೇವಾಲಯದಲ್ಲಿ ಆರೋಗ್ಯ ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣವಾಗಿ ಮಾಂಸಹಾರ ತ್ಯಜಿಸಿದ್ದಾರೆ.!

೧೦ ದಿನಗಳ ಕಾಲ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಎರಡು ದಿನಗಳನ್ನು ಚಿಕಿತ್ಸಾಲಯದಲ್ಲಿ ಕಳೆದಿದ್ದಾರೆ. ದಿನಾ ಮಾಂಸಹಾರವನ್ನೇ ಸೇವಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೀಗ ಸೊಪ್ಪು ತರಾಕಾರಿ ಸೇವನೆ ಮಾತ್ರ ನೀಡಲಾಗುತ್ತಿದೆ. ಬೆಳಿಗ್ಗೆ ಆರು ಗಂಟೆಗೆ ಎದ್ದು ಯೋಗ ಮಾಡುತ್ತಿರುವ ಸಿದ್ದಣ್ಣ , ಪ್ರಾಣಾಯಾಮದಂತಹ ಯೋಗಗಳನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಯಾವುದೇ ರೀತಿಯ ಖಾರ ಮತ್ತು ಹುಳಿ ಇರುವ ಪದಾರ್ಥಗಳನ್ನು ನೀಡಲಾಗುತ್ತಿಲ್ಲ. ಅನ್ನವೂ ಇಲ್ಲದೆ, ಕೇವಲ ಬೇಯಿಸಿದ ತರಕಾರಿ , ಚಪಾತಿ , ಮಜ್ಜಿಗೆ ಮತ್ತು ಪಪ್ಪಾಯದಂತಹ ಹಣ್ಣು ಹಂಪಲುಗಳನ್ನು ಮಾತ್ರ ಚಿಕಿತ್ಸಾಲಯದಲ್ಲಿ ನೀಡುತ್ತಿದ್ದಾರೆ. ಸರಿಯಾಗಿ ಊಟವೂ ಇಲ್ಲದೆ ಕೇವಲ ಸೊಪ್ಪು ತರಕಾರಿಗಳನ್ನೇ ಸೇವಿಸುತ್ತಿರುವ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಸೋತ ನಂತರ ಭಾರೀ ಕುಗ್ಗಿ ಹೋಗಿದ್ದರು. ಆದ್ದರಿಂದಲೇ ಜನರ ಜಂಜಾಟದಿಂದ ಬೇಸತ್ತಿದ್ದ ಸಿದ್ದರಾಮಯ್ಯ, ಇದೀಗ ಭಾರೀ ಆರಾಮವಾಗಿ ಯಾರ ಸಂಪರ್ಕಕ್ಕೂ ಸಿಗದೆ ಕಾಲ ಕಳೆಯುತ್ತಿದ್ದಾರೆ.!

ಇದರ ಜೊತೆಗೆ ಅತೀ ಹೆಚ್ಚು ವಿಶ್ರಾಂತಿಯನ್ನೇ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಲ ಚಿಕಿತ್ಸೆ, ಹೈಡ್ರೋಥೆರಫಿ, ಮಸಾಕ್ ಮಾಡಿಕೊಂಡು ಬಹಳ ಆರಾಮವಾಗಿ ಕಾಲ ಕಳೆದುಕೊಂಡು ಇದ್ದಾರೆ. ಹೋದಲ್ಲೆಲ್ಲಾ ನಿದ್ದೆ ಮಾಡುತ್ತಿದ್ದ ಸಿದ್ದಣ್ಣನಿಗೆ ಇದೀಗ ಕೆಲವೇ ಗಂಟೆಗಳ ನಿದ್ದೆಗೆ ಅವಕಾಶ ನೀಡಲಾಗುತ್ತಿದೆ. ಆದ್ದರಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಏನೆಲ್ಲಾ ಅಪಮಾನ ಮಾಡಿದ್ದರೋ ಅವೆಲ್ಲದರ ಫಲವನ್ನು ಇದೀಗ ಅನುಭವಿಸುವಂತಾಗಿದೆ. ಧರ್ಮಸ್ಥಳದ ಭೇಟಿಯ ವೇಳೆ ಮಾಂಸ ತಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇದೀಗ ಮಾಜಿ ಮುಖ್ಯಮಂತ್ರಿಯಾಗಿ ಅದೇ ಧರ್ಮಸ್ಥಳದಲ್ಲಿ ಆರೋಗ್ಯ ಚಿಕಿತ್ಸೆ ಪಡೆಯುವಂತಾಗಿದೆ ಎಂದರೆ ಕಾಲ ಯಾವ ರೀತಿಯಲ್ಲಿ ಆಟ ಆಡಿಸುತ್ತದೆ ಎಂಬುದು ತಿಳಿಯುತ್ತದೆ..

source :http://publictv.in/siddaramaiah-is-having-only-vegetarian-food/amp

–ಅರ್ಜುನ್

Tags

Related Articles

Close