ಪ್ರಚಲಿತರಾಜ್ಯ

ರಾತ್ರೋ ರಾತ್ರಿ ಸಿದ್ದರಾಮಯ್ಯನವರು ಮಾಡಿದ್ದೇನು ಗೊತ್ತಾ.! ಬಯಲಾಯ್ತು ಮುಖ್ಯಮಂತ್ರಿಗಳ ಖತರ್ನಾಕ್ ಐಡಿಯಾ.!!

ವಾಹ್ ,ಇಂತಹ ಮುಖ್ಯಮಂತ್ರಿ ಬಹುಶಃ ಯಾರೂ ಎಲ್ಲೂ ನೋಡಿರಲಿಕ್ಕಿಲ್ಲ. ಅದ್ಯಾವ ರೀತಿಯ ನಾಟಕ ಮಾಡುತ್ತಾರೆ ಎಂದರೆ ಯಾರೂ ಊಹಿಸಲೂ ಸಾಧ್ಯವಿಲ್ಲ. ಯಾಕೆಂದರೆ ಮುಖ್ಯಮಂತ್ರಿಯಾಗಿ ಏನೆಲ್ಲಾ ಮಾಡಬಾರದಿತ್ತೋ ಅದನ್ನೆಲ್ಲಾ ಮಾಡಿ ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಸಿದ್ದರಾಮಯ್ಯನವರು, ಇಡೀ ರಾಜ್ಯವನ್ನೇ ನರಕದ ಕೂಪವನ್ನಾಗಿ ಮಾಡಿಬಿಟ್ಟಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಎಂಬೂದು ಮರಿಚಿಕೆಯಾಗಿಬಿಟ್ಟಿದೆ. ಆದರೂ ಅಭಿವೃದ್ಧಿಯ ಕಡೆ ಒಂಚೂರು ಗಮನಹರಿಸದ ಸಿದ್ದರಾಮಯ್ಯನವರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಭಾರೀ ಮಸಲತ್ತು ಆರಂಭಿಸಿದ್ದಾರೆ.!

ಸಿದ್ದರಾಮಯ್ಯನವರಿಂದ ಮಧ್ಯರಾತ್ರಿ ಭಾರೀ ಸರ್ಕಸ್.!

ಸಿದ್ದರಾಮಯ್ಯನವರ ಆಡಳಿತ ಅವಧಿ ಇದೀಗ ಮುಗಿಯುತ್ತಾ ಬಂದಿದೆ. ಸಿದ್ದರಾಮಯ್ಯನವರಿಂದ ರಾಜ್ಯದಲ್ಲಿ ಅಭಿವೃದ್ಧಿಯ ಕೊಡುಗೆ ಶೂನ್ಯ. ಆದರೂ ನಂಬರ್ ಒನ್ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುತ್ತಿರುವ ಸಿದ್ದರಾಮಯ್ಯನವರು, ಇದೀಗ ಚುನಾವಣೆಗೆ ದಿನಾಂಕ ನಿಗಧಿಯಾಗುತ್ತಿದ್ದಂತೆ ಭಾರೀ ಕಸರತ್ತು ನಡೆಸಿದ್ದಾರೆ. ಈವರೆಗೆ ಯಾವುದೇ ಅಂಕಿತಗಳಿಗೆ ಸಹಿ ಹಾಕದ ಸಿದ್ದರಾಮಯ್ಯನವರು, ಇದೀಗ ಒಂದೇ ರಾತ್ರಿಯಲ್ಲಿ ಎಲ್ಲಾ ಬಾಕಿ ಇರುವ ದಾಖಲೆ ಪತ್ರಗಳಿಗೂ ಸಹಿ ಹಾಕಿ ಜಾಣತನ ಮೆತೆದಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಈವರೆಗಿನ ನಿರ್ಧಾರಗಳಿಗೆ ನಿನ್ನೆ ರಾತ್ರಿ ಸಹಿ ಹಾಕಿದ ಸಿದ್ದರಾಮಯ್ಯನವರು ತನ್ನ ಕುತಂತ್ರ ಬುದ್ಧಿ ಏನೆಂಬುದನ್ನು ಮತ್ತೆ ಪ್ರದರ್ಶಿಸಿದ್ದಾರೆ.

ಕೇಂದ್ರ ಬಿಡುಗಡೆಗೊಳಿಸುವ ಅನುದಾನವನ್ನು ರಾಜ್ಯ ಸರಕಾರದ ಹಣ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ಸಿದ್ದರಾಮಯ್ಯನವರು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಚ್ಚರಗೊಂಡಿದ್ದಾರೆ. ಇಂದು ಚುನಾವಣಾ ದಿನಾಂಕ ಪ್ರಕಟವಾಗುತ್ತದೆ ಎಂಬ ವಿಚಾರ ತಿಳಿದ ಸಿದ್ದರಾಮಯ್ಯನವರು ನಿನ್ನೆ ರಾತ್ರಿ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯ ಕಡತಗಳಿಗೆ ಅಂಕಿತಗೊಳಿಸಿದ್ದಾರೆ. ಕೇಂದ್ರ ಸರಕಾರ ಶಿಫಾರಸ್ಸು ಮಾಡಬೇಕಿರುವ ಕಡತಗಳಿಗೆ ಸಿಎಂ ಸಿದ್ದರಾಮಯ್ಯನವರು ಸಹಿ ಹಾಕಿದ್ದಾರೆ.

ಚುನಾವಣಾ ಆಯೋಗದಲ್ಲೂ ಕೈವಾಡ..!

ಇಡೀ ದೇಶವೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಹಳ ಕುತೂಹಲದಿಂದ ಕಾಯುತ್ತಿದ್ದರೆ, ಇತ್ತ ಸಿದ್ದರಾಮಯ್ಯನವರಿಗೆ ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನ ದಿನವೇ ಸಿದ್ದರಾಮಯ್ಯನವರಿಗೆ ತಿಳಿದದ್ದಾದರು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಯಾಕೆಂದರೆ ಚುನಾವಣಾ ಆಯೋಗ ಕೇಂದ್ರದ ಅಡಿಯಲ್ಲಿ ಬರುವಂತಹ ಇಲಾಖೆ. ಆದರೆ ಅದರಲ್ಲೂ ರಾಜ್ಯ ಸರಕಾರದ ಕೈವಾಡ ಇದೇಯೇ ಎಂಬ ಸಂಶಯ ವ್ಯಕ್ತವಾಗಿದೆ.!

ನಿನ್ನೆಯ ದಿನಾಂಕ ನಮೂದಿಸಿ ಕಡತಗಳಿಗೆ ಸಹಿ ಹಾಕಿದ ಸಿದ್ದರಾಮಯ್ಯನವರು, ರಾಜ್ಯದ ಜನತೆಯನ್ನು ಮರುಳು ಮಾಡಲು ಪ್ರಯತ್ನಿಸಿದ್ದಾರೆ.! ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯದೆಡೆಗೆ ಗಮನ ಹರಿಸದ ಸಿದ್ದರಾಮಯ್ಯನವರು ಇದೀಗ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಭಾರೀ ಉತ್ಸಾಹದಿಂದ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಹಾಕಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.!

–ಅರ್ಜುನ್

 

Tags

Related Articles

Close