ಪ್ರಚಲಿತ

ಭಾರತವನ್ನು ನಕಲು ಮಾಡುವುದಾಗಿ ಶ್ರೀಲಂಕಾ ಅಧ್ಯಕ್ಷರು ಹೇಳಿದ್ದೇಕೆ?

ಭಾರತದ ಅಭಿವೃದ್ಧಿಯ ಕುರಿತಂತೆ ಶ್ರೀಲಂಕಾ ಶ್ಲಾಘನೆ ವ್ಯಕ್ತ ಪಡಿಸಿದ್ದು, ಭಾರತದ ಮಾದರಿಯನ್ನು ಶ್ರೀಲಂಕಾದಲ್ಲಿಯೂ ಅನುಕರಣೆ ಮಾಡುವುದಾಗಿ ತಿಳಿಸಿದೆ.

ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮ್‌ಸಿಂಘೆ ಅವರು, ಕೊಲಂಬೊದಲ್ಲಿ ಅಲ್ಲಿನ ಭಾರತದ ಹೈಕಮಿಷನ್ ಆಯೋಜನೆ ಮಾಡಿದ್ದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸಮಾವೇಶದಲ್ಲಿ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಸ್ಥಾನ ವಿಶ್ವದಲ್ಲಿಯೇ ಕೇಂದ್ರ ಸ್ಥಾನದಲ್ಲಿರಲಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಪಿಗ್ಗಿ ಬ್ಯಾಕ್ ಕ್ಷೇತ್ರದಲ್ಲಿ ಭಾರತ ಏನು ಮಾಡಿದೆಯೋ‌, ಅದನ್ನು ನಕಲು ಮಾಡುವುದು ಶ್ರೀಲಂಕಾದ ಹಿತಾಸಕ್ತಿಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

ತಾವು ಭಾರತಕ್ಕೆ ಕಳೆದ ವರ್ಷ ಭೇಟಿ ಇತ್ತ ಸಂದರ್ಭದಲ್ಲಿ ಶ್ರೀಲಂಕಾ ಎದುರಿಸುತ್ತಿರುವ ಸಮಸ್ಯೆಗಳು, ಸವಾಲು ಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸಲಾಗಿದೆ. ಹಾಗೆಯೇ ಪ್ರಸ್ತುತ ಶ್ರೀಲಂಕಾವು ದ್ವಿಪಕ್ಷೀಯ ಸಂಬಂಧಗಳಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಅಂಶಗಳನ್ನು ತರಲು ನಿರ್ಧಾರ ಕೈಗೊಂಡಿರುವುದಾಗಿಯೂ ಅವರು ಹೇಳಿದ್ದಾರೆ.

ಶ್ರೀಲಂಕಾ ಪ್ರಸ್ತುತ ವಿಷಮ ಪರಿಸ್ಥಿತಿಯಲ್ಲಿದ್ದು, ನಮ್ಮ ಸರ್ಕಾರಕ್ಕೆ ಈಗ ಬೆಂಬಲದ ಅಗತ್ಯತೆ ಇದೆ. ಡಿಪಿಐ‌ಗೆ ಸಂಬಂಧಿಸಿದ ಹಾಗೆ ನೆರವು ಪಡೆಯಲು ಭಾರತ ಅತ್ಯುತ್ತಮ ರಾಷ್ಟ್ರವಾಗಿದೆ ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ವಿಶ್ವದ ಹಲವು ರಾಷ್ಟ್ರಗಳಿಗೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನಡೆಸುತ್ತಿರುವ ಭಾರತ ಮಾದರಿಯಾಗಿದೆ. ಆದರ್ಶ, ಅನುರಕಣೀಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close