ಅಂಕಣ

‘ಮೋದಿ ಸಹೃದಯಿ, ಅವರ ವ್ಯಕ್ತಿತ್ವದಲ್ಲಿ ಯಾವ ಸುಳ್ಳಿಲ್ಲ’ : ಮೋದಿ, ಹಿಂದುತ್ವ ಹಾಗೂ ಕಾಂಗ್ರೆಸ್ ಬಗ್ಗೆ ಸುಬ್ರಮಣಿಯನ್ ಸ್ವಾಮಿಯವರ ಹೃದಯದಾಳದ ಮಾತುಗಳನ್ನೊಮ್ಮೆ ಕೇಳಿಬಿಡಿ!

ಬಿಜೆಪಿ ಮುಖಂಡರಾಗಿರುವ ಸುಬ್ರಮಣಿಯನ್ ಸ್ವಾಮಿಯವರು ಈಗಾಗಲೇ ಹಫ್ಪಿಂಗ್ಟನ್ ಪೋಸ್ಟ್ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ, ಮೋದಿಯವರ ಬಗ್ಗೆ ಮಾತಾನಾಡಿದ್ದಲ್ಲದೇ ಉತ್ತರಪ್ರದೇಶ ಚುನಾವಣೆ ಮತ್ತು ಹಿಂದುತ್ವದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ, ತನ್ನ ನೇರನುಡಿಯಿಂದ ಮಾತಾನಾಡಿ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಲ್ಲದೇ ಮುಕ್ತಮನಸ್ಸಿನಿಂದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಒಂದು ಉತ್ತಮ ಸಂವಾದ ಕಾರ್ಯಕ್ರಮ ಇದಾಗಿದೆ ಎಂದು ಪರಿಗಣಿಸಲಾಗಿದೆ. ಅಲ್ಲದೇ ಸಂವಾದದಲ್ಲಿ ಸ್ವಲ್ವ ಚುಚ್ಚುಮಾತು, ಸ್ವಲ್ವ ವಿನೋದದ ಮಾತುಗಳನ್ನು ಹಾಸ್ಯಸ್ಪದವಾಗಿ ಮಾತಾನಾಡಿದ ಸಂವಾದ ಕಾರ್ಯಕ್ರಮ ಇದಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿಯಾಗಿ ಜಯ ಸಾಧಿಸುತ್ತೆ ಎನ್ನುವ ನಿರೀಕ್ಷೆ  ನಿಮ್ಮಲ್ಲಿತ್ತಾ?

ನಾನು ಮೊದಲ ಸುತ್ತಿನ ನಂತರ ಜಯಸಾಧಿಸುತ್ತೆ ಎನ್ನುವ ನಿರೀಕ್ಷೆಯನ್ನೇ ಮಾಡಿರಲಿಲ್ಲ. ಆದರೆ ಆಡಳಿತವು ಚುನಾವಣೆಯಲ್ಲಿ ವಿಜಯವನ್ನು
ಸಾಧಿಸುವುದು ಅವಶ್ಯವಾದರೂ . ಆದರೆ ನಿಮಗೆ ಬೇಕಾಗಿರುವುದು ಭಾವನಾತ್ಮಕ ವಿಚಾರಗಳು ಅಷ್ಟೇ. ಆದರೆ ನಮಗೆ ಬಿಜೆಪಿಗೆ ಭಾವನಾತ್ಮಕ ವಿಷಯ ಅಂದರೆ  ಹಿಂದೂತ್ವ. ಮತ್ತು ನಾವು ಅದನ್ನು ಸ್ಪಷ್ಟಪಡಿಸದೇ ಇದ್ದರೆ ನಾವು ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ.

ನಾನು ಉದಾಹರಣೆಗಳನ್ನು ಕೊಡುವುದಾದರೆ ಮೊರಾರ್ಜಿ ದೇಸಾಯಿ ಅವರಿಗೆ ಆಡಳಿತದ ಬಗೆಗೆ ಅದ್ಭುತವಾದ ಚಿಂತನೆಗಳಿದ್ದರು ಕೂಡ ಅವರು ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವಾಗಲಿಲ್ಲ; ಭಾರತೀಯ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ರೂಪಾಂತರಿಸಿದ ನರಸಿಂಹ ರಾವ್ ಚುನಾವಣೆಯನ್ನು ಕಳೆದುಕೊಂಡರು; ಮತ್ತು ಅಟಲ್‍ಬಿಹಾರಿ ವಾಜಪೇಯಿ ಅವರು ಭಾರತವನ್ನು ಹೊಗಳಿ ಮಾತಾನಾಡಿ ಕೊನೆಯಾದಾಗಿ ಆಡಳಿತವನ್ನು ಕಳೆದುಕೊಂಡರು.

ಹಿಂದುತ್ವದ ಅಜೆಂಡವನ್ನು ಮೋದಿ ಪ್ರತಿಪಾದಿಸುತ್ತಾರಾ?

ಪ್ರಧಾನ ಮಂತ್ರಿ ಆರ್‍ಎಸ್‍ಎಸ್‍ನ ಪ್ರಚಾರಕರು. ಹಾಗಾಗಿ, ಅದರ ಹೊರಪದರ ಹಿಂದುತ್ವವೇ ಆಗಿದೆ. ಅವರು ಅವರ ಕಲ್ಪನೆಯನ್ನು ಈಗಾಗಲೇ ಹೊರತಂದಿದ್ದಾರೆ, ನೀವು ಅದನ್ನು ವಿಸ್ತರಿಸಬೇಕಷ್ಟೇ.

ಯಾರು ಚುನಾವಣೆಯನ್ನು ಗೆದ್ದಿರುವುದು, ಬಿಜೆಪಿ ಅಥವಾ ಮೋದಿ ?

ಮೋದಿಯವರನ್ನು ಹೊರತುಪಡಿಸಿದರೆ ಇದು ನಮ್ಮಿಂದ(ಬಿಜೆಪಿ)ಸಾಧ್ಯವಾಗುತ್ತಿರಲಿಲ್ಲ ಯಾಕೆಂದರೆ ಅವರೊಬ್ಬ ಪ್ರಬಲ ವ್ಯಕ್ತಿ ಅಲ್ಲದೇ ಯಾರೋ ಮಾಡದ ಹೆಸರನ್ನು ಮಾಡಿದ ವ್ಯಕ್ತಿ, ಅವರಲ್ಲಿ ಉತ್ತಮ ಹವ್ಯಾಸಗಳಿವೆ, ಅವರೊಬ್ಬ ಉತ್ತಮ ವ್ಯಕ್ತಿ. ನಾವು ಅವರ ಬಗ್ಗೆ ಒಳ್ಳೆಯದನ್ನೇ ಯೋಚಿಸುತ್ತೇವೆ. ಅವರು ಆಡಳಿತದ ಬಗ್ಗೆಯೇ ಮಾತಾನಾಡುತ್ತಾರೆ ಆದರೆ ಅದು ಸಾಲಾದು. ಹಾಗಾಗಿ ನಾನು ಹೇಳುತ್ತೇನೆಂದರೆ, ಮೋದಿ ಹಿಂದುತ್ವದ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ಭ್ರಷ್ಟಚಾರದ ವಿರೋಧಿಯಾಗಿದ್ದಾರೆ.

2014ರ ಚುನಾವಣೆ ಪ್ರಚಾರದಲ್ಲಿ ಸರಾಗವಾಗಿ ಮೋದಿ ಹಿಂದೂತ್ವದ ವಿಚಾರವಾಗಿ ಅದರ ಅಂಶಗಳನ್ನು ಉದ್ದೇಶಿಸಿ ಮಾತಾನಾಡಿದ್ದಾರೆಯೇ ಹೊರತು ನಂತರದ ದಿನಗಳಲ್ಲಿ ಅದು ಕಾಣಲಿಲ್ಲ, ಅದು ಯಾಕೆ?

ಬಹುಶಃ ಅವರ ಸ್ನೇಹಿತರು ಹೇಳಿರಬಹುದು. ದೆಹಲಿ ಒಂದು ವಿಚಿತ್ರದ ಸ್ಥಳವಾಗಿದೆ ಎಂದು. ಗುಜರಾತ್‍ನಲ್ಲಿ ಯಾರು ಹೇಳಿರಲಿಲ್ಲ. ಟ್ರಂಪ್ ಅವರ ವಿದ್ಯಮಾನ ಈಗ ನೀವು ತಿಳಿದಿರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬಹುದಾಗಿದೆ. ಈಗ, ರಾಜಕೀಯ ವ್ಯವಸ್ಥೆಯಲ್ಲಿ ಹೆಚ್ಚು ಸಮಯ ಸದ್ಗುಣವೇ ತುಂಬಿರಲು ಸಾಧ್ಯವಿಲ್ಲ. ಯಾಕಂದರೆ ರಾಜಕೀಯದಲ್ಲಿ ಯಥಾರ್ಥೆ ಎನ್ನುವುದೇ ಸತ್ತು ಹೋಗಿದೆ.

ಮೋದಿ ಹಿಂದುತ್ವದಿಂದ ದೂರವಿರುವುದರಿಂದ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕೋಪಗೊಂಡಿದ್ದಾರಾ?

ಅವರಲ್ಲಿ ಇವರೊಬ್ಬರು. ಅವರು ನನಗಿಂತಲೂ ಅವರಲ್ಲಿಯೇ ಒಬ್ಬರು. ನಾನು ಆರ್‍ಎಸ್‍ಎಸ್ ವ್ಯಕ್ತಿಯಲ್ಲ. ಆದರೆ ನಾವೆಲ್ಲ ಒಂದೇ ರೀತಿಯ ನಿಲುವನ್ನು ಹೊಂದಿದ್ದೇವೆ. ಇವರು ಅವರಿಗೆ ತರಬೇತಿಯನ್ನು ನೀಡುತ್ತಾರಲ್ಲದೇ, ಇವರೊಬ್ಬರು ಪ್ರಚಾರಕರು.

ಮೋದಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರಾ?

ಇಲ್ಲ, ಇಲ್ಲವೇ ಇಲ್ಲ. ಎನ್‍ಡಿ ಟಿವಿ ಮತ್ತು ಇತರರು ಸೃಷ್ಟಿಸಿದ ಕೊಲೆಗಡುಕ ಎನ್ನುವ ಚಿತ್ರಣದಿಂದ ಇವರು ದೂರವಿರಲು ಬಯಸುತ್ತಾರೆ. ಇವರ ಮೇಲೆ ಸುಳ್ಳು ಪ್ರಕರಣಗಳನ್ನು ಮತ್ತು ವಿಷಯಗಳನ್ನು ಸೃಷ್ಟಿಸಿ ಇವರನ್ನು ಹಿಂಬಾಲಿಸುತ್ತಿದ್ದಾರೆ.

ನಿಜವಾಗಿಯೂ, ಗುಜರಾತ್‍ನಲ್ಲಿ ಏನು ನಡೆಯಿತು ಎಂಬುದು ನನಗೆ ಗೊತ್ತು, ಮತ್ತು ಅವರು ಅದರಲ್ಲಿ ಭಾಗಿಯಾಗಿದ್ದೇ ಕಡಿಮೆ.

ಪ್ರಧಾನಿ ಯುಪಿ ವಿಜಯದ ನಂತರ ಹಿಂದುತ್ವದ ವಿಚಾರದಲ್ಲಿ ಇನ್ನೂ ಮುಂದೆ ಬರಲಿದ್ದಾರೆ ಎಂದು ಯೋಚಿಸುತ್ತೀರಾ?

ಇಲ್ಲ, ಅವರು ಎಂದೂ ಆ ರೀತಿಯ ನಿಲುವನ್ನು ಹೊಂದಿಲ್ಲ. ನಾವು (ಬಿಜೆಪಿ ಅಥವಾ ಆರ್‍ಎಸ್‍ಎಸ್)ಅದನ್ನು ನೋಡಿಕೊಳ್ಳುತ್ತೇವೆ.

ನೀವು ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ಶೀಘ್ರದಲ್ಲಿಯೇ ನನಸಾಗಿಸುವಿರಾ?

ಅವರು(ಕಾಂಗ್ರೆಸ್) ತಮ್ಮನ್ನು ತಾವೇ ಮಾಡುತ್ತಿದ್ದಾರೆ. ಇದುವೇ ಅವರ ದುಸ್ವಪ್ನವಾಗಿದೆ. ಒಂದೇ ಕುಟುಂಬದವರು ನಾಯಕರಾಗಿಯೇ ಆಯ್ಕೆಯಾಗುವುದನ್ನು ಎಲ್ಲಾದರೂ ನೋಡಿದ್ದೀರಾ? ಇದೇ ಭಾರತದ ವೈಫಲ್ಯತೆ, ಅವನತಿಯೆಡೆಗೆ ಹೋಗಲು ಕಾರಣವಾಗಿದೆ. ನಮಗೆ ಬೇಕಾದದ್ದು ಒಬ್ಬ ಪ್ರಬಲವ್ಯಕ್ತಿ ಅಂದರೆ ಜೀವನದ ಹಲವು ಮಜಲುಗಳನ್ನು ದಾಟಿ ಬಂದ ವ್ಯಕ್ತಿಯನ್ನು ನಾವು ಬಯಸುತ್ತೇವೆ. ಪ್ರಧಾನಿ ಒಮ್ಮೆ ಚಹಾ ಮಾರಾಟ ಮಾಡುತ್ತಿದ್ದರು. ಆದರೆ ಎಂತಹ ದೊಡ್ಡ ಸಾಮಾಜಿಕ ಪರಿವರ್ತನೆಯಾಗಿದೆ ಎಂಬುವುದನ್ನು ಈಗ ನಾವು ನೋಡುತ್ತಿದ್ದೇವೆ.

ಮೋದಿಯನ್ನು ಬಿಟ್ಟು ಬಿಜೆಪಿಯಲ್ಲಿ ಯಾರಾದರೂ ಮುನ್ನಡೆಸುವ ನಾಯಕರಿದ್ದಾರೆಯೇ? ಅವರ ನಂತರ ಏನಾಗುತ್ತೆ?

ಮೋದಿಯವರು ಬಿಜೆಪಿಯನ್ನು ನಿಯಂತ್ರಿಸುವುದಿಲ್ಲ. ನಾವು ಯಾವತ್ತೂ ಯಾರಾನ್ನಾದರೂ ಪಡೆಯುತ್ತೇವೆ ಎಂಬುವುದು ತಿಳಿದು ಇಲ್ಲ. ಈ ಪ್ರಶ್ನೆಯನ್ನು ವಾಜಪೇಯಿ ಅವರ ಸಂದರ್ಭದಲ್ಲಿಯೂ ಕೇಳಿದ್ದೇವೆ. ವಾಜಪೇಯಿ ನಂತರ ಬಿಜೆಪಿ ಏನು ಮಾಡಿತು? ಮೋದಿಯವರು ಪ್ರಧಾನಿಯಾಗಿ ಹೊರಹೊಮ್ಮಿದರು. ಪಕ್ಷ ಒಂದು ಕೊಳ ಇದ್ದಂತೆ, ಹಾಗಾಗಿ ಯಾರು ಆಯ್ಕೆಯಾಗುರೋ ಎಂದು ಹೇಳಲಾಗುವುದಿಲ್ಲ.

ಆ್ಯಂಟಿ-ರೋಮಿಯೋ ಸ್ಕಾಡ್ಸ್ ಬಗ್ಗೆ ನೀವು ಏನು ಹೇಳುತ್ತೀರಾ?

ಇದೊಂದು ಕೆಟ್ಟ ಹೆಸರು. ಇದನ್ನು ನಾವು ಕೊಡುವುದೇ ಇಲ್ಲ.

ಇದು ಬಿಜೆಪಿಯ ಘೋಷಣೆಯಾಗಿತ್ತಲ್ಲ?

ಸರಿ, ಹಾಗಾದರೆ ಯಾರಿಗೋ ಇಂಗ್ಲೀಷ್ ಗೊತ್ತಿಲ್ಲ. ರೋಮಿಯೋ ಬ್ಬ ಮಹಿಳೆಯ ಭದ್ರತೆಯಲ್ಲಿದ್ದ. ಅಲ್ಲದೇ ಒಬ್ಬ ಮನುಷ್ಯ ತನ್ನ ಪ್ರೀತಿಯನ್ನು ತ್ಯಾಗ
ಮಾಡಿದಂತಹುದು. ಒಂದು ವೇಳೆ ಸರ್ಕಾರದ ತಂಡವಾಗಿದ್ದರೆ ತೊಂದರೆ ಇಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ಜನರಿಗೆ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ.

ಆದರೆ ನಿಮ್ಮ ಆಡಳಿತಾವಧಿಯಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ತನ್ನ ಮನೆಯಿಂದ ಎಳೆದುಕೊಂಡು….ಸರಿ, ಅದನ್ನು ಸರಿಪಡಿಸಬೇಕಾಗಿದೆ. ನಮ್ಮ ಜನರು ಕೈಯನ್ನು ಹೊರತಂದಿದ್ದಾರೆ. ಆದರೆ ಇದೀಗಾ ನಟಿಸುವ ಜನರು ನಮ್ಮೊಂದಿಗೆ ಇದ್ದಾರೆ. ಯಾರಾದರೂ ಇದ್ದರೆ ಅದರ ಅರ್ಥ ವಿಶ್ವ ಹಿಂದೂ ಪರಿಷತ್‍ನ ಭಾಗ ಎಂದರ್ಥವಲ್ಲ.

“ಲವ್ ಜಿಹಾದ್” ಸಿದ್ಧಾಂತವನ್ನು ನೀವು ನಂಬ್ತೀರಾ?

“ಲವ್ ಜಿಹಾದ್” ಸಿದ್ಧಾಂತವನ್ನು ಮೊದಲಿಗೆ ಹೊರತಂದಿದ್ದೇ ಕೇರಳ ಹೈಕೋರ್ಟ್, ಆದರೆ ಅದು ನಾವಲ್ಲ. ಅದು ಹೊರಬಂದಿದೆ ಕೂಡ. ಈಗ “ಲವ್ ಜಿಹಾದ್ಇದೆಯಾ? ಖಂಡಿತವಾಗಿಯೂ ಇಲ್ಲ.

ಇಲ್ಲ ಎನ್ನಲು ಏನು ಪುರಾವೆ ಇದೆ?

ನಿಮಗೆ ಪುರಾವೆ ಬೇಕಾ, ನಾನು ನಿಮಗೆ ಹತ್ತು ದಿನದಲ್ಲಿ ಕೊಡುತ್ತೇನೆ.

ಕಾಂಗ್ರೆಸ್ ಪಕ್ಷ ಚೇತರಿಸಿಕೊಳ್ಳುತ್ತಾ?

ಕಾಂಗ್ರೆಸ್ ಪಕ್ಷ ಚೇತರಿಸಿಕೊಳ್ಳಲಿದೆ, ಆದರೆ ಅದನ್ನು ಅವರು( ಗಾಂಧಿಕುಟುಂಬ) ಮುಗಿಸಿದ್ದಾರೆ. ಯಾರಾದರೂ ಬನ್ನಿ ಮತ್ತು ಅವರನ್ನು ಹೊರಗೆಸೆಯಿರಿ. ಇದು 2029ರ ಮುಂಚಿತವಾಗಿರುವುದಿಲ್ಲ. ಆದರೆ ನಾವು ಮಾಡಲೇಬೇಕು. ಅಷ್ಟರವರೆಗೆ ಹಿಂದುತ್ವ ನಮ್ಮನ್ನು ನೋಡಿಕೊಳ್ಳುತ್ತದೆ.

ನೀವು ಸಚಿವ ಸಂಪುಟದಲ್ಲಿ ಸ್ಥಾನವನ್ನು ಬಯಸುವುದಿಲ್ಲವೇ?

ಸಚಿವರನ್ನು ಆಯ್ಕೆಮಾಡುವುದು ಪ್ರಧಾನಿಯವರ ವಿಶೇಷ ಹಕ್ಕಾಗಿದೆ. ಅದಕ್ಕೆ ನಾನು ಅರ್ಹತೆಯನ್ನು ಪಡೆದಿದ್ದರೆ, ನಾನು ಸಮ್ಮತಿಯನ್ನು ಸೂಚಿಸುತ್ತೇನೆ. ಬಂದರೆ ನಾನು ಸರಕುಗಳೊಂದಿಗೆ ಬರುತ್ತೇನೆ ಯಾಕೆಂದರೆ ನನಗೆ ಸ್ವಂತ ಬುದ್ದಿ ಇದೆ. ನಾನು ಬೇರೆ ಮಂತ್ರಿಗಳು ಮಾಡಿದ್ದನ್ನು ನಾನು ಮಾಡಲು ಹೊರಟಿಲ್ಲ. ನಾಳೆ ನಾನು ಸಚಿವರಾಗಬಹುದು ಆದರೆ ಅದು ಯಾರಿಗೂ ತಿಳಿಯಲು ಸಾಧ್ಯವಾಗುವುದಿಲ್ಲ.

ಮತ್ತು, ನೀವು ಯಾವ ಸಚಿವ ಹುದ್ದೆಯನ್ನು ಬಯಸುತ್ತೀರಿ?

ನಾನು ಹಣಕಾಸು ಮಂತ್ರಿಯಾಗಲು ಇಷ್ಟಪಡುತ್ತೇನೆ. ನಾನು ದೇಶವನ್ನು ಹಿಂತಿರುಗಿಸುತ್ತೇನೆ; ಆದರೆ ಇದು ಅವ್ಯವಸ್ಥೆಯಲ್ಲಿದೆ. ಇಂದು, ವಾಣಿಜ್ಯ ಸಚಿವಾಲಯದಿಂದ ಪ್ರಶ್ನೆ ಮತ್ತು ಉತ್ತರಗಳಿವೆ- ಕಳೆದ ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ರಫ್ತು ಮತ್ತು ಆಮದು ಏಕಕಾಲದಲ್ಲಿ ಇಳಿಕೆಯಾಗಿದೆ. ರಫ್ತು ಮತ್ತು ಆಮದು ಹೇಗೆ ಇಳಿಮುಖವಾಗಬಹುದು. ಇದರ ಅರ್ಥ ನಾವು ಘರ್ಷಣೆಯೆಡೆಗೆ ಹೋಗುತ್ತದ್ದೇವೆ. ಹಾಗಾಗಿ ಆರ್ಥಿಕತೆಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಭಾವಿಸುತ್ತೇನೆ.

ಮೂರು ವರ್ಷಗಳ ಅವಧಿಯಲ್ಲಿ ಮೋದಿ ಸರಕಾರದ ಎರಡು ಅಥವಾ ಮೂರು ಮೈಲಿಗಲ್ಲುಗಳು ಯಾವುವು?

ಕಳೆದ ಮೂರು ವರ್ಷದಿಂದ ಒಂದೇ ಒಂದು ರೀತಿಯ ಸರಕಾರದ ವಿರುದ್ಧ ಭ್ರಷ್ಟಚಾರದ ಆರೋಪಗಳಿಲ್ಲ. ಎರಡನೇಯದಾಗಿ ನಮ್ಮ ರಾಷ್ಟ್ರೀಯ ಭದ್ರತೆಯೊಂದಿಗೆ ಆಟ ಆಡಿದವರಿಗೆ ತಕ್ಕ ಪಾಠ ಕಲಿಸಲಾಗಿದೆ. ಮತ್ತು ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ.

ನೀವು ಪ್ರಧಾನಿಯಾಗಬೇಕೆಂದು ಬಯಸುತ್ತೀರಾ?

ಇದರಲ್ಲಿ ಇಷ್ಟಪಡುವ ಅಥವಾ ಇಷ್ಟಪಡದೇ ಇರುವ ಪ್ರಶ್ನೆಯೇ ಇಲ್ಲ… ಯಾಕೆಂದರೆ ನಾನು ಬೆಳೆದಿದ್ದು ಮಹಾನ್ ಸಾಧುವಾದ ಕಂಚಿಯ ಶಂಕರಾಚಾರ್ಯವರಿಂದ, ನೀವು ಯಾವುದರ ಬಗ್ಗೆಯೂ ಆಸೆ ಪಡಬಾರದೆಂದು ಹೇಳಿದ್ದಾರೆ. ಅಲ್ಲದೇ ನೀವು ಏನು ಪಡೆಯಬೇಕೆಂದಿದ್ದೀರಾ ಅದು ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತೆ ಎಂದು. ನಾನು ಪ್ರಧಾನಿ ಹುದ್ದೆ ಅಲಂಕರಿಸಬೇಕೆಂಬುವುದು ಇದ್ದರೆ ಅದು ಖಂಡಿತವಾಗಿಯು ನನ್ನನ್ನು ಅರಸಿ ಬರುತ್ತೆ ಆಗ ಅದನ್ನು ತೆಗೆದುಕೊಳ್ಳುತ್ತೇನೆ ಎಂದು.

– postcard team

Tags

Related Articles

Close