ಪ್ರಚಲಿತ

ಈ ದೇಶದಲ್ಲಿ ನೆಹರೂ-ಗಾಂಧಿಗಳ ಹೆಸರಿನಲ್ಲಿ ಒಟ್ಟು 37 ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿದ್ದರೂ ಮೇಡಮ್ ಜೀ ಮತ್ತಾಕೆಯ ಮಗ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಾರೆ ಯಾಕೆ?!

ಭಾರತದ ಗಲ್ಲಿ ಗಲ್ಲಿಗಳಲ್ಲಿಯೂ ಹಲವಾರು ಆಸ್ಪತ್ರೆಗಳಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಂತೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಭಾರತದ ಮೆಟ್ರೋ ನಗರಗಳಲ್ಲಿರುವ ಆಸ್ಪತ್ರೆಗಳು ಪಂಚತಾರಾ ಹೋಟಲುಗಳನ್ನೂ ನಾಚಿಸುವಂತಿರುತ್ತವೆ. ಎಲ್ಲೆಂದಲೂ ಬಂದು ಭಾರತದಲ್ಲಿ ಚಿಕಿತ್ಸೆ ಪಡೆಯುವ ಜನರಿದ್ದಾರೆ. ವಿದೇಶಗಳಲ್ಲಿ ಗುಣವಾಗದ ರೋಗಗಳನ್ನು ಭಾರತದ ವೈದ್ಯರು ಗುಣಪಡಿಸಿ ಭೇಶ್ ಎನ್ನಿಸಿಕೊಂಡಿದ್ದಾರೆ. ಹಾಗಿದ್ದರೂ ನಾಮಧಾರಿ ಗಾಂಧಿಗಳಿಗೆ ಮಾತ್ರ ಚಿಕಿತ್ಸೆ ಪಡೆಯಲು ವಿದೇಶದ ಆಸ್ಪತ್ರೆಗಳೇ ಬೇಕು, ಯಾಕೆ? ಇಲ್ಲಿನ ವೈದ್ಯರ ಮೇಲೆ ಅವರಿಗೆ ಭರವಸೆ ಇಲ್ಲವೋ? ಇಲ್ಲಿನ ಆಸ್ಪತ್ರೆಗಳ “ಸ್ಟ್ಯಾಂಡರ್ಡ್” ಅವರ ಘನಸ್ತಿಕೆಗೆ ತಕ್ಕುದಾದದ್ದಲ್ಲವೋ? ಭಾರತದ ಆಸ್ಪತ್ರೆಗಳ ಸೌಲಭ್ಯ ಇವರಿಗೆ ಸಾಲುವುದಿಲ್ಲವೋ?

ಭಾರತದಲ್ಲಿ ಕಾರ್ಯಕರ್ತರ ಚಾ-ಕಾಫಿಗೂ ಹಣವಿಲ್ಲದೆ ಪರದಾಡುತ್ತಾ “ಚಂದಾ” ಎತ್ತುತ್ತಿರುವ ಕಾಂಗ್ರೆಸಿನ ಬಳಿ ಮೇಡಮ್ ಜಿ ಯವರ ಚಿಕಿತ್ಸೆಗೆ ಹಣವಿದೆಯೆ? ಮೇಡಮ್ ಜಿಯ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಭಾರತ ಸರಕಾರ. ಕಳೆದ ಮೂರು ವರ್ಷಗಳಲ್ಲಿ ಶ್ರೀಮತಿ ಗಾಂಧಿಯವರ ವಿದೇಶಿ ಪ್ರವಾಸ ಮತ್ತು “ವಿದೇಶದಲ್ಲಿ ಚಿಕಿತ್ಸೆಗಾಗಿ” 1,880 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಇದೆಲ್ಲ ಯಾರ ಹಣ? ಯಾರದೋ ದುಡ್ಡು, ಅಮ್ಮ-ಮಗನ ವಿದೇಶ ಯಾತ್ರೆ!! ಏನು ಮಜಾ!!

ಈ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ಇರಬಹುದು. ಅದರಲ್ಲಿ ಒಟ್ಟು 37 ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಕೇವಲ ನಾಮಧಾರಿ ಗಾಂಧಿಗಳ ಹೆಸರಿನಲ್ಲೆ ಇವೆ. ಸ್ವತಃ ಮೇಡಮ್ ಜಿ ಯ ಪತಿಯ ಹೆಸರಿನಲ್ಲೆ 15 ಆಸ್ಪತ್ರೆಗಳಿವೆ. ಇನ್ನು ಇಂಧಿರಾಗಾಂಧಿ, ಜವಾಹರ್ ಲಾಲ್ ನೆಹರೂ ಮತ್ತು ಅವರ ಹೆಂಡತಿ ಕಮಲ ನೆಹರೂರವರ ಹೆಸರಿನಲ್ಲೂ ಆಸ್ಪತ್ರೆಗಳಿವೆ. ಹಾಗಿದ್ದರೂ ಮೇಡಮ್ ಜಿ ಯಾಕೆ ವಿದೇಶದ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಕಳೆದ ಬಾರಿಯೂ “ಚಿಕಿತ್ಸೆ” ಯ ನೆಪದಲ್ಲಿ ಅಮೇರಿಕಾಕ್ಕೆ ತೆರಳಿದ ಮೇಡಮ್ ಜಿ ಅಲ್ಲಿ ದಾವೂದ್ ಗೆ ಸಂಬಂಧ ಪಟ್ಟ ವ್ಯಕ್ತಿಯೊಬ್ಬನ ಹೋಟೋಲಿನಲ್ಲಿ ತಂಗಿದ್ದರು ಎಂದು ಸುಬ್ರಮಣ್ಯನ್ ಸ್ವಾಮಿ ಆರೋಪ ಮಾಡಿದ್ದರು. ಹಾಗಾದರೆ ಅಮ್ಮ-ಮಗ ಅಲ್ಲಿ ದಾವೂದ್ ನ ಬಂಟರನ್ನು ಭೇಟಿಯಾಗಲು ಹೋಗುತ್ತಾರೆಯೆ? ಇಲ್ಲ ಭಾರತವನ್ನು ಹೇಗೆ ನಿರ್ನಾಮ ಮಾಡಬೇಕೆಂದು “ವೆಟಿಕನ್” ಟೀಚರ್ ಗಳ ಬಳಿ ಟ್ಯೂಷನ್ ತೆಗೆದುಕೊಳ್ಳಲು ಹೋಗುತ್ತಾರೆಯೆ? ಅಥವಾ ಭಾರತದಿಂದ ಗಂಟು ಕಟ್ಟಿದ ಹಣವನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲು ಹೋಗುತ್ತಾರೆಯೆ? ಭಾರತದಲ್ಲಿ ಗುಣಪಡಿಸಲಾಗದ ಅಂತಹ ಯಾವ ಖಾಯಿಲೆ ಮೇಡಮ್ ಜಿ ಅವರನ್ನು ಅಡರಿಕೊಂಡಿದೆ? ಆ ಖಾಯಿಲೆಗಳ ರಿಪೋರ್ಟ್ ಎಲ್ಲಿ?

ಭಾರತವನ್ನು ತನ್ನ ಪಿತ್ರಾರ್ಜಿತ ಆಸ್ತಿ ಎಂದು ಬಗೆದಿರುವ ನೆಹರೂ “ಖಾನ್ ದಾನ್” ದೇಶದ ಮೂಲೆ – ಮೂಲೆಗಳಲ್ಲಿ ತಮ್ಮ ಹೆಸರನ್ನು ಉಳಿಸಿಹೋಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಹೆಸರಂತೂ ಮಕ್ಕಳ ಪಾಠ ಪುಸ್ತಕದಿಂದಲೂ ಕಾಣೆಯಾಗಿವೆ!!

ಭಾರತದಲ್ಲಿ ನೆಹರೂ ಖಾನ್ ದಾನ್ ಹೆಸರಿನಲ್ಲಿ ಒಟ್ಟು 99 ಸಂಸ್ಥೆಗಳು ಮತ್ತು 66 ಯೋಜನೆಗಳು ಇವೆ!! ಅವು ಇಂತಿವೆ:

ಕೇಂದ್ರ ಸರಕಾರದ ಯೋಜನೆಗಳು – 17
ರಾಜ್ಯ ಸರ್ಕಾರದ ಯೋಜನೆಗಳು – 49
ಕ್ರೀಡೆ / ಪಂದ್ಯಾವಳಿಗಳು / ಟ್ರೋಫಿಗಳು – 26
ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣ – 17
ಪೀಕ್ಸ್ ಮತ್ತು ಭೌಗೋಳಿಕ ಹೆಗ್ಗುರುತುಗಳು – 4
ವಿಮಾನ ನಿಲ್ದಾಣಗಳು / ಬಂದರುಗಳು / ವಿಮಾನಯಾನ ಅಕಾಡೆಮಿಗಳು – 9
ಪವರ್ ಪ್ಲಾಂಟ್ಸ್ – 4
ವಿಶ್ವವಿದ್ಯಾನಿಲಯಗಳು / ಶಿಕ್ಷಣ ಸಂಸ್ಥೆಗಳು – 99
ಪ್ರಶಸ್ತಿಗಳು – 41
ವಿದ್ಯಾರ್ಥಿವೇತನ / ಫೆಲೋಶಿಪ್ – 17
ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು / ವಸ್ತುಸಂಗ್ರಹಾಲಯಗಳು – 17
ಆಸ್ಪತ್ರೆಗಳು / ವೈದ್ಯಕೀಯ ಸಂಸ್ಥೆಗಳು – 37
ಸಂಸ್ಥೆಗಳು / ಉತ್ಸವಗಳು – 35
ರಸ್ತೆಗಳು / ಕಟ್ಟಡಗಳು / ಸ್ಥಳಗಳು – 37

ನೆಹರೂ ಪರಿವಾರದ ಯಾವೊಬ್ಬ ವ್ಯಕ್ತಿಯೂ ವಿದ್ಯಾವಂತನಲ್ಲ. ಎಲ್ಲಾ ಬೊಗಳೆ ಪಂಡಿತರು ಮತ್ತು ನಕಲಿ ಆಕ್ಸಫರ್ಡ್-ಕೇಂಬ್ರಿಡ್ಜ್ ಪದವೀಧರರು. ನೆಹರೂ- ಗಾಂಧಿ ಉಪನಾಮವೆ ನಕಲಿ ಎಂದಾದ ಮೇಲೆ ಪದವಿ ಅಸಲಿಯಾಗಿರುವುದಾದರೂ ಹೇಗೆ? ಐದು-ಹತ್ತನೆ ಕ್ಲಾಸಿನಲ್ಲಿ ಡುಮ್ಕಿ ಹೊಡೆದವರ ಹೆಸರಿನಲ್ಲಿ ವಿಶ್ವ ವಿದ್ಯಾಲಯಗಳು!! ಒಂದು ಮೈಲಿ ಓಡಿ ಚಿನ್ನ ಗೆಲ್ಲದವರ ಹೆಸರಿನಲ್ಲಿ ಕ್ರೀಡಾ ಪುರಸ್ಕಾರಗಳು!! ವೈದ್ಯಕೀಯದ ಗಂಧಗಾಳಿ ಇರದವರ ಹೆಸರಿನಲ್ಲಿ ಆಸ್ಪತ್ರೆಗಳು!! ಏನು ಸೋಜಿಗ!! ನಲ್ವತ್ತೆಂಟು ವರ್ಷಗಳಲ್ಲಿ ಗಾಂಧಿ ಪರಿವಾರ ಮಾಡಿದ್ದು ಬರೀ ಹಗರಣ. ಭ್ರಷ್ಟಾಚಾರ ಮಾಡುವುದರಲ್ಲಿ “ಸ್ಕ್ಯಾಮ್ ಗ್ರೆಸ್” ಅನ್ನು ಮೀರಿಸುವವರೆ ಇಲ್ಲ. ಭ್ರಷ್ಟಾಚಾರ ಮಾಡುವುದರಲ್ಲಿ ಸ್ಪರ್ಧೆ ಏರ್ಪಡಿಸಿದ್ದರೆ ಮೊದಲನೆ ಬಹುಮಾನ ನಿಶ್ಚಿತವಾಗಿಯೂ ಕಾಂಗ್ರೆಸಿಗೇ ಸಲ್ಲುತ್ತದೆ ಮತ್ತು ಮೇಡಮ್ ಜಿ ಗೆ ಗೋಲ್ಡ್ ಮೆಡಲ್ ದೊರೆಯುತ್ತದೆ.

ಅಧಿಕಾರಕ್ಕೆ ಬಂದು ಹದಿನಾರು ವರ್ಷಗಳಾಯಿತು. ಆದರೆ ಇದುವರೆಗೂ ಮೋದಿ “ಚಿಕಿತ್ಸೆಗಾಗಿ” ಅಥವಾ “ರಜಾ ದಿನಗಳನ್ನು” ಕಳೆಯಲಿಕ್ಕಾಗಿ ವಿದೇಶ ಯಾತ್ರೆ ಮಾಡಿದ್ದನ್ನು ಕಂಡು ಕೇಳಿಲ್ಲ. ವಯೋಸಹಜ ಖಾಯಿಲೆಗಳು ಮೋದಿ ಅವರಿಗೂ ಇರಬಹುದು ಆದರೆ ಅವರು ಯಾವತ್ತೂ ಅದನ್ನು ತೋರಿಸಿಕೊಂಡಿಲ್ಲ. ಸದಾ ಲವಲವಿಕೆ ಮತ್ತು ಚಟುವಟಿಕೆಯಿಂದ ಇರುವ ಮೋದಿ ಯುವಕರನ್ನೂ ನಾಚಿಸುತ್ತಾರೆ. ದೇಶದ ಒಂದು ರುಪಾಯಿಯನ್ನೂ ಪೋಲು ಮಾಡದ ಮೋದಿ ಅವರಂತಹ ನಾಯಕ ಸಿಕ್ಕಿರುವುದು ಈ ದೇಶದ ಪುಣ್ಯ. ಅರುವತ್ತು ವರ್ಷಗಳಿಂದ ಜನರ ಹಣವನ್ನು ನುಂಗಿ ನೀರು ಕುಡಿದ್ದದ್ದು ಕಾಂಗ್ರೆಸ್. ಜನರ ದುಡ್ಡಿನಲ್ಲಿ ಮೋಜು ಮಾಡುವ ಕಾಂಗ್ರೆಸಿನ ಗಾಂಧಿ ಪಾರಿವಾರ ಬೇಕೋ ಅಥವಾ ಹಗಲು ರಾತ್ರಿಯೆನ್ನದೆ ದುಡಿವ, ಜನರ ಹಣವನ್ನು ಜನರಿಗೇ ತಲುಪಿಸುವ ಮೋದಿ ಬೇಕೋ ತೀರ್ಮಾನಿಸಿ…

-ಶಾರ್ವರಿ

Source
A Suryaprakash
Tags

Related Articles

Close