ಪ್ರಚಲಿತ

ಪ್ರಧಾನಿ ಮೋದಿಯ ಕಾಲೆಳೆಯಲು ಹೋಗಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ!! ಟ್ವೀಟಾಪತಿಗಳಿಂದ ಹಿಗ್ಗಾಮುಗ್ಗಾ ತರಾಟೆ!!

ಕೇಂದ್ರ ಮಾಹಿತ ತಂತ್ರಜ್ಞಾನ, ಯುವಜನ ಮತ್ತು ಕ್ರೀಡಾಸಚಿವ ರಾಜ್ಯವರ್ಧನ ಸಿಂಗ್ ರಾಠೊಡ್ ಅವರ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಧ್ಯೇಯ ವಾಕ್ಯದಡಿ ಫಿಟ್‍ನೆಸ್ ಚಾಲೆಂಜ್ ಅಭಿಯಾನದಲ್ಲಿ ಕೊಹ್ಲಿ ಅವರು ಪ್ರಧಾನಿ ಮೋದಿ ಅವರಿಗೆ ವಿಡಿಯೋ ಅಪ್‍ಲೋಡ್ ಮಾಡುವಂತೆ ಸವಾಲೆಸೆದಿದ್ದರು. ಕೊಹ್ಲಿ ಹಾಕಿದ ಸವಾಲನ್ನು ಎಲ್ಲರಿಗಿಂತ ಮೊದಲಾಗಿಯೇ ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದು ಈ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡ ಅವರು, ಸವಾಲನ್ನು ಸ್ವೀಕರಿಸಿದ್ದೇನೆ, ನಾನು ಕೂಡಾ ವೀಡಿಯೋ ಮಾಡಿ ಟ್ವಿಟ್ಟರ್ನಲ್ಲಿ ಬಿತ್ತರಿಸುತ್ತೇನೆ ಎಂದು ಬರೆದುಕೊಂಡಿದ್ದರು!! ಪ್ರಧಾನಿ ನರೆಂದ್ರ ಮೋದಿ ಅವರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಫಿಟ್‍ನೆಸ್ ಸವಾಲನ್ನು ಸ್ವೀಕರಿಸಿದ ಬೆನ್ನಲ್ಲೇ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದೀಜೀಯವರಿಗೆ ಮತ್ತೊಬ್ಬ ಧೈರ್ಯವಂತ ಚಾಲೆಂಜ್ ಅನ್ನು ನೀಡಿದ್ದಾರೆ!! ಸರಿ ಯಾರಾದರೂ ಊಹಿಸಲು ಸಾಧ್ಯವಾದರೆ ಒಮ್ಮೆ ಒಮ್ಮೆ ಊಹಿಸಿ ನೋಡಬಹುದು!! ಅವರು ಯಾರೆಂದು…. ಅದು ಬೇರಾರು ಅಲ್ಲ!! ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ!!

Image result for modi virat kohli

ಮೋದಿಜೀಗೆ ಸವಾಲು ಹಾಕಿದ ರಾಹುಲ್ ಗಾಂಧಿ!!

ವಿರಾಟ್ ಕೋಹ್ಲಿಯ ಸವಾಲನ್ನು ಸ್ವೀಕರಿಸಿದ ಮೋದೀಜೀಗೆ ಅದರ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ”ನೀವು ಕೊಹ್ಲಿ ಅವರ ಸವಾಲು ಸ್ವೀಕರಿಸಿದ್ದು ನೋಡಿ ಖುಷಿಯಾಯಿತು. ನನ್ನ ದೊಂದು ಸವಾಲಿದೆ. ಇಂಧನ ಬೆಲೆಗಳನ್ನು ಇಳಿಸಿ ಇಲ್ಲವಾದಲ್ಲಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಚಳುವಳಿ ನಡೆಸಿ ಬೆಲೆ ಇಳಿಸುವಂತೆ ಮಾಡುತ್ತದೆ. ನಾನು ನಿಮ್ಮ ಉತ್ತರಕ್ಕಾಗಿ ಎದುರು ನೋಡುತ್ತಿದ್ದೇನೆ” ಎಂದು ಬರೆದಿದ್ದಾರೆ. !!

ಪ್ರಧಾನಿ ನರೇಂದ್ರ ಮೋದಿಯವರು ಯಾವ ಚಾಲೆಂಚ್ ಎದುರಾದರೂ ಅದನ್ನು ನಿಭಾಯಿಸುವಷ್ಟು ಸಾಮಥ್ರ್ಯ ಮೋದೀಜೀಗಿದೆ ಎಂಬುವುದನ್ನು ನಿಮಗೆ ಯಾರೂ ಅಥೈಸಬೇಕಂತಿಲ್ಲ!! ಯಾಕೆಂದರೆ ಮೋದಿ ಅಪ್ರತಿಮ ವೀರ ಯಾವುದಕ್ಕೂ ಹೆದರುವುದೇ ಇಲ್ಲ!! ಅದೂ ಕೂಡಾ ನೀವು ಕೊಟ್ಟ ಚಾಲೆಂಜನ್ನು ಎಷ್ಟು ಬ್ಯೂಸಿಯಿದ್ದರೂ ನಿಭಾಯಿಸಲು ರೆಡಿಯಿದ್ದಾರೆ ನಮ್ಮ ಮೋದೀಜೀ!! ಆದರೆ ಇಂತಹ ಟ್ವೀಟ್ ಇನ್ನು ಯಾವತ್ತೂ ಮಾಡಬೇಡಿ!! ಎಲ್ಲರೂ ನಿಮ್ಮ ಹುಚ್ಚು ಟ್ವೀಟ್‍ಗೆ ಈಗಾಗಲೇ ಟ್ವಿಟರ್‍ನಲ್ಲಿ ಬೈಗುಳದ ಸುರಿಮಳೆಯೇ ಸುರಿಸುತ್ತಿದ್ದಾರೆ!!

24 ಗಂಟೆಯೊಳಗೆ ಪತ್ರಿಕಾಗೋಷ್ಠಿಯನ್ನು ಮಾಡಿ ಜನಗಣಮನ ವನ್ನು ಬೈಹಾರ್ಟ್ ಮಾಡಲು ಸಾಧ್ಯವೇ ಎಂಬ ಚಾಲೆಂಜನ್ನು ಟ್ವೀಟರಿಗರೊಬ್ಬರು ರಾಹುಲ್ ಗಾಂಧಿಗೆ ಚಾಲೆಂಜ್ ಹಾಕಿದ್ದಾರೆ! ಅಷ್ಟು ಧೈರ್ಯವಿದ್ದರೆ ಆ ಚಾಲೆಂಜ್‍ನ್ನು ತೆಗೆದುಕೊಳ್ಳಲು ರೆಡಿಯಿದ್ದಾರಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ!! ಪ್ರಧಾನಿ ನರೇಂದ್ರ ಮೋದಿಜೀಗೆ ಚಾಲೆಂಜ್ ಹಾಕುವ ಮೊದಲು ನಿಮ್ಮನ್ನು ನೀವು ಮೊದಲು ನೋಡಿಕೊಳ್ಳುವುದು ಒಳಿತು!!

ಇದಾಗಲೇ ಪ್ರಧಾನಿ ನರೇಂದ್ರ ಮೋದಿಜೀಯವರು ಭಾರತದಿಂದ ಕಾಂಗ್ರೆಸ್ ಮುಕ್ತವನ್ನಾಗಿಸುವ ಸವಾಲನ್ನು ಪೂರೈಸುವಲ್ಲಿ ಬಗ್ಗೆ ಯೋಜಿಸುತ್ತಿದ್ದಾರೆ!! ಆದ್ದರಿಂದ ಈ ರೀತಿಯಾಗಿ ಅಸಂಬದ್ಧವಾಗಿ ಟ್ವೀಟ್ ಮಾಡುವುದನ್ನು ಇನ್ನಾದರೂ ನಿಲ್ಲಿಸಿ!! ಪ್ರಧಾನಿ ನರೇಂದ್ರ ಮೋದೀಜೀಯವರಿಗೆ ನಿಮ್ಮಂತವರು ಸವಾಲೆಸೆಯುವುದು ಸರಿಯಾಗಿಲ್ಲ!! ಪ್ರತೀ ಸೆಕುಂಡನ್ನು ದುರುಪಯೋಗಪಡಿಸದೆ ದೇಶದ ಅಭಿವೃದ್ಧಿಗಾಗಿ ದುಡಿಯುವ ಈ ಮೋದೀಜೀಗೆ ರಾಹುಲ್‍ಗಾಂಧಿಯಂತವರು ಸವಾಲೆಸುವ ಅಗತ್ಯವಿಲ್ಲ!! ಪೆಟ್ರೋಲ್ ಏರಿಕೆಯ ಬಗ್ಗೆ ನಿಗಾವಹಿಸಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಜೀಯವರು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ!!

ಪ್ರಧಾನಿ ನರೇಂದ್ರ ಮೋದಿಜೀಯವರು ವಿಶ್ವವನ್ನೇ ಗೆದ್ದ ನಾಯಕ. ಯಾವುದೇ ಸಮಸ್ಯೆ ಬಂದರೂ ಅದನ್ನು ನಾಜೂಕಾಗಿ, ಸಮಯೋಚಿತವಾಗಿ ಸರಿದೂಗಿಸುವ ಚಾಣಾಕ್ಯ. ದೇಶಪ್ರೇಮದ ವಿಚಾರದಲ್ಲಿ ಯಾವುದೇ ರಾಜಿಮಾಡಿಕೊಳ್ಳದ ಅಪ್ರತಿಮ ರಾಷ್ಟ್ರೀಯವಾದಿ!! ದೇಶದ ಜನರಿಗೆ ಯಾವುದೇ ಕಷ್ಟ ಬಂದರೂ ಅದನ್ನು ಯೋಚಿಸಿ ಸರಿದೂಗಿಸುವ ಸಾಮಥ್ರ್ಯ ಅವರಲ್ಲಿದೆ ಎಂಬುವುದನ್ನು ಎಂಬುವುದು ಎಲ್ಲರಿಗೂ ತಿಳಿದಿದೆ ಅದರಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ತಿಳಿದರೆ ಒಳಿತು!!

ಪವಿತ್ರ

Tags

Related Articles

Close