ಪ್ರಚಲಿತ

ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ: ಒಂದು ಕೋಟಿಗೂ ಅಧಿಕ ಆಯುಷ್ಮಾನ್ ಕಾರ್ಡ್ ರಚಿಸಿದ ಕೇಂದ್ರ ಸರ್ಕಾರ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ದೇಶದಲ್ಲಿ ಆರ್ಥಿಕತೆ ಮಾತ್ರ ಅಭಿವೃದ್ಧಿ ಹೊಂದುತ್ತಿರುವುದಲ್ಲ‌. ಬದಲಾಗಿ ಈ ದೇಶದ ಜನರ ಭವಿಷ್ಯ, ಆರೋಗ್ಯದ ಕಾಳಜಿಯನ್ನು ಸಹ ಕೇಂದ್ರ ಸರ್ಕಾರ ಮಾಡುತ್ತಿದೆ.

ದೇಶದ ಎಲ್ಲಾ ಜನರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಮಹತ್ವದ ಗುರಿಯನ್ನು ಸಹ ಸಾಧಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸದ್ಯ ನಡೆಯುತ್ತಿರುವ ವೀಕ್ಷಿತ್ ಭಾರತ್‌ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಈ ವರೆಗೂ ಒಂದು ಕೋಟಿಗೂ ಅಧಿಕ ಆಯುಷ್ಮಾನ್ ಕಾರ್ಡ್‌ಗಳನ್ನು ರಚಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ಸು ಸಾಧಿಸಿದೆ.

ವೀಕ್ಷಿತ್ ಭಾರತ್‌ನ ಅಡಿಯಲ್ಲಿ 79,487 ಆರೋಗ್ಯ ಶಿಬಿರಗಳನ್ನು ಕೇಂದ್ರ ಸರ್ಕಾರ ನಡೆಸಿದ್ದು, ಈ ಶಿಬಿರದಲ್ಲಿ ಒಂದು ಕೋಟಿಯ ಮೂವತ್ತೊಂದು ಲಕ್ಷಕ್ಕೂ ಹೆಚ್ಚಿನ ಜನರು ಭಾಗಿಗಳಾಗಿದ್ದಾರೆ. ಇದರ ಮೂಲಕ ಒಂದು ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡುಗಳನ್ನು ರಚನೆ ಮಾಡಿರುವುದಾಗಿ ಕೇಂದ್ರದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಯಾತ್ರೆಯಡಿ ಯೋಜನಾ ಶಿಬಿರಗಳನ್ನು 3,462 ಗ್ರಾಮ ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಸಲಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ದೇಶದ ಎಲ್ಲಾ ಜನರನ್ನು ತಲುಪುವಂತೆ ಮಾಡುವ ಸದುದ್ದೇಶದಿಂದ ಈ‌ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದರು. 

ಹಾಗೆಯೇ ಈ ರಾತ್ರಿಯ ಸಂದರ್ಭದಲ್ಲಿ ಆರೋಗ್ಯ ಶಿಬಿರಗಳ ಆಯೋಜನೆ, ಈ ಶಿಬಿರಗಳಲ್ಲಿ ಆಯುಷ್ಮಾನ್ ಕಾರ್ಡುಗಳ ರಚನೆ, ಟಿ ಬಿ ರೋಗಿಗಳ ತಪಾಸಣೆ, ಶಂಕಿತ ಟಿ ಬಿ ಪ್ರಕರಣಗಳನ್ನು ಹೆಚ್ಚಿನ ತಪಾಸಣೆಗೆ ಕಳುಹಿಸುವ ಕೆಲಸವೂ ನಡೆಯುತ್ತಿದೆ.  ಪ್ರಧಾನ ಬುಡಕಟ್ಟು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಸಿಕಲ್ ಸೆಲ್ ಡಿಸೀಸ್ ಪತ್ತೆ ಗಾಗಿ ಅರ್ಹ ಜನಸಂಖ್ಯೆಯ ತಪಾಸಣೆ ಕಾರ್ಯಗಳು ಸಹ ನಡೆಸಲಾಗುತ್ತಿದೆ. 

ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಈ ವರೆಗೆ ಐದು ಲಕ್ಷಕ್ಕೂ ಅಧಿಕ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಇಪ್ಪತ್ತೊಂದು ಸಾವಿರಕ್ಕೂ ಅಧಿಕ ಜನರಿಗೆ ಪಾಸಿಟಿವ್ ಬಂದಿದೆ. ಅವರನ್ನು ಹೆಚೇಚಿನ ಚಿಕಿತ್ಸೆಗೆ ಕಳುಹಿಸಿರುವುದಾಗಿಯೂ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Tags

Related Articles

Close