ಪ್ರಚಲಿತ

ಸಿದ್ದರಾಮಯ್ಯ ಸಹಿತ ರಾಜ್ಯ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಿದ ಜೆಡಿಎಸ್..! ಸರಕಾರ ರಚನೆಗೂ ಮೊದಲೇ ಶೀತಲ ಸಮರ ಆರಂಭ..!

ಮಾಜಿ ಮುಖ್ಯಮಂತ್ರಿ, ಶಾಸಕನಾಗಿರುವ ಸಿದ್ದರಾಮಯ್ಯನವರು ಮುಂದಿನ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಚುನಾವಣೆ ಮುಗಿದ ನಂತರದ ಬೆಳವಣಿಗೆ ಗಮನಿಸಿದರೆ ಸಿದ್ದರಾಮಯ್ಯನವರ ಆರ್ಭಟವೂ ಕಡಿಮೆಯಾಗಿದೆ ಮತ್ತು ಸದ್ಯ ಮೈತ್ರಿ ಮಾಡಿಕೊಂಡು ಭಾಯಿ-ಭಾಯಿ ಎಂದು ಕೈ ಕೈ ಹಿಡಿದುಕೊಂಡ ಜೆಡಿಎಸ್ ಕೂಡಾ ಸಿದ್ದರಾಮಯ್ಯನವರ ಜೊತೆಗೆ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲು ಆರಂಭಿಸಿದ್ದಾರೆ. ಯಾಕೆಂದರೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಅಪವಿತ್ರ ಮೈತ್ರಿ ಸ್ವತಃ ಕಾಂಗ್ರೆಸ್‌ಗೆ ಇಷ್ಟವಿರಲಿಲ್ಲ, ಆದರೂ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡಿದೆ. ಇವೆಲ್ಲ ನಡೆದು ಇಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ತಯಾರಿ ನಡೆಸುತ್ತಿದ್ದರೆ , ಇತ್ತ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿದ್ದಾರೆ..!

ಜೆಡಿಎಸ್ ಜಾಹೀರಾತುಗಳಲ್ಲಿ ಲೆಕ್ಕಕ್ಕಿಲ್ಲದ ಕಾಂಗ್ರೆಸ್..!

ಕೇವಲ ತೋರ್ಪಡಿಕೆಗಾಗಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಬಹಿರಂಗವಾಗಿ ಕಿತ್ತಾಡಿಕೊಳ್ಳದೇ ಇದ್ದರೂ ಕೂಡ ಒಳಗಿಂದೊಳಗೆ ತಂತ್ರ ರೂಪಿಸುತ್ತಲೇ ಇದ್ದರು. ಆದರೂ ಕುಮಾರಸ್ವಾಮಿ ಇಂದು ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವುದಕ್ಕೆ ಶುಭಾಶಯ ಕೋರಿ ಜಾಹೀರಾತು ನೀಡುತ್ತಿದ್ದರೆ, ಕಾಂಗ್ರೆಸ್ ನಾಯಕರು ಯಾರೂ ಈ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿಲ್ಲ. ತಾವು ನೀಡಿರುವ ಜಾಹೀರಾತುಗಳಲ್ಲಿ ಕೇವಲ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಿಗೆ ಮತ್ತು ಜೆಡಿಎಸ್‌ ನ ಕುಮಾರಸ್ವಾಮಿ ಮತ್ತು ದೇವೇಗೌಡರ ಫೋಟೋಗಳನ್ನು ಮಾತ್ರ ಹಾಕಲಾಗಿದೆ. ಈ ಮೂಲಕ ಜೆಡಿಎಸ್‌ ಇನ್ನು ಮುಂದೆ ಕಾಂಗ್ರೆಸ್ ಹೈಕಮಾಂಡ್ ಜೊತೆ ನೇರವಾಗಿ ಸಂಪರ್ಕದಲ್ಲಿ ಇರುತ್ತದೆ ಎಂಬುವುದನ್ನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಹಿರಂಗವಾಗಿಯೇ ತೋರಿಸಿಕೊಟ್ಟಿದ್ದಾರೆ..!

ಸಂಪುಟ ಸಭೆಯಲ್ಲೂ ಕಾಂಗ್ರೆಸ್‌ಗಿಲ್ಲ ಮಾನ್ಯತೆ..?

ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಸಚಿವ ಸ್ಥಾನದ ಹಂಚಿಕೆ ವಿಚಾರದ ಬಗ್ಗೆ ಚರ್ಚಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ ಮುಖಂಡರು ಸರಿಯಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದರು. ಆದರೆ ಇದೀಗ ಅಧಿಕಾರಕ್ಕೆ ಏರಲು ಸಿದ್ದತೆ ನಡೆಸಿರುವ ಕುಮಾರಸ್ವಾಮಿ ಅವರು ತಮ್ಮ ಸಚಿವ ಸಂಪುಟ ಸಭೆಯಲ್ಲಿ ಜೆಡಿಎಸ್‌ ನಾಯಕರಿಗೆ ಹೆಚ್ಚಿನ ಸ್ಥಾನ ನೀಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ಸಂಪೂರ್ಣವಾಗಿ ನೆಲಕಚ್ಚಿದ್ದು ಪ್ರಾತಿನಿಧ್ಯ ಸಿಗೋದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಕೆಲವು ಜಿಲ್ಲೆಗಳಲ್ಲಿ ಉಸ್ತುವಾರಿಗಳಾಗಿ ಬೇರೆ ಜಿಲ್ಲೆಯ ಮುಖಂಡರನ್ನು ನೇಮಿಸುವ ಚರ್ಚೆಯೂ ಜೆಡಿಎಸ್‌ ವಲಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಚುನಾವಣೆಗೂ ಮೊದಲೂ ಕಿತ್ತಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ ಇದೀಗ ಮೈತ್ರಿ ಮಾಡಿಕೊಂಡರೂ ಒಳಗಿಂದೊಳಗೆ ಅಧಿಕಾರಕ್ಕಾಗಿ ಕುತಂತ್ರ ನಡೆಯುತ್ತಲೇ ಇದೆ. ಇತ್ತ ಜೆಡಿಎಸ್‌ಗಿಂತ ಹೆಚ್ಚು ಸ್ಥಾನ ಪಡೆದಿರುವ ಕಾಂಗ್ರೆಸ್ ತಮಗೆ ಹೆಚ್ಚು ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದರೆ, ಇನ್ನೊಂದೆಡೆ ಜೆಡಿಎಸ್‌ ನ ಸಹಾಯವಿಲ್ಲದೆ ಕಾಂಗ್ರೆಸ್ ಮೇಲೇರಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ಮುಖಂಡರಿಗೆ ಹೆಚ್ಚಿನ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಾರೆಯಾಗಿ ಮಾಡಿಕೊಂಡ ಮೈತ್ರಿ ಹೆಚ್ಚು ದೂರ ಸಾಗುವುದಿಲ್ಲ ಎಂಬೂದಂತೂ ಸತ್ಯ..!

–ಅರ್ಜುನ್

Tags

Related Articles

Close