ಪ್ರಚಲಿತ

ವಿರೋಧಿಗಳಿಗೆ ಹೆದರಿ ಪ್ರಧಾನಿ ಮೋದಿ ಕೈಕಟ್ಟಿ ಕೂರುವರೇ?

ಮಾಡುವ ಕೆಲಸದಲ್ಲಿ ಯಾವುದೇ ತಪ್ಪುಗಳು ಕಾಣದೇ ಹೋದಲ್ಲಿ ವ್ಯಕ್ತಿಯೊಬ್ಬರನ್ನು ವೈಯಕ್ತಿಕ ನೆಲೆಯಲ್ಲಾದರೂ ವಿರೋಧಿಸಿ, ಆ ವ್ಯಕ್ತಿಯ ಬಗ್ಗೆ ಅಪಪ್ರಚಾರ ಮಾಡುವ ಕಲೆ ಕಾಂಗ್ರೆಸ್ ಪಕ್ಷಕ್ಕೆ ಕರಗತ. ಸದ್ಯ ಬಿಜೆಪಿ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಕರ್ತವ್ಯದಲ್ಲಿ ಲೋಪ ಕಂಡು ಹುಡುಕಲು ಹೋಗಿ, ಅದರಿಂದ ನಿರಾಸೆ ಅನುಭವಿಸಿರುವ ಕಾಂಗ್ರೆಸಿಗರು ಅವರನ್ನು ವೈಯಕ್ತಿಕ ನಿಂದನೆಯ ಮೂಲಕ ತಮ್ಮ ಹತಾಶೆ ಹೊರ ಹಾಕಲು ಮುಂದಾಗಿರುವುದು ಖೇದಕರ.

ಅಂದ ಹಾಗೆ ನಿನ್ನೆ ಸಕ್ಕರೆ ನಾಡಿಗೆ ದೇಶದ ಅಕ್ಕರೆಯ ಪ್ರಧಾನಿ ಆಗಮಿಸಿ ಹಲವಾರು ಜನಸ್ನೇಹಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿಗಳಿಗೆ ದೊರೆತ ಅಭೂತಪೂರ್ವ ಜನ ಬೆಂಬಲ ಕಾಂಗ್ರೆಸಿಗರ, ಮೋದಿ ವಿರೋಧಿಗಳ, ಬಿಜೆಪಿ ವಿರೋಧಿಗಳ ಉರಿ ಹೆಚ್ಚಿಸಿದ್ದಂತೂ ಸುಳ್ಳಲ್ಲ. ಪ್ರಧಾನಿ ಮೋದಿ ಅವರು ಜನರಿಗೆ ಈ ಪರಿ ಆಪ್ತವಾಗಿರುವುದನ್ನು ಕಂಡ ವಿರೋಧಿ ಪಡೆ, ಅವರ ಕೆಲಸಗಳಲ್ಲಿ ತಪ್ಪುಗಳನ್ನು ಹುಡುಕುವುದರಲ್ಲಿ ವಿಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ವೈಯಕ್ತಿಕವಾಗಿ ವಾಗ್ದಾಳಿ ನಡೆಸುತ್ತಿರುವುದು ಮತ್ತು ಇದೇ ಕಾರಣಕ್ಕೆ ಸಾರ್ವಜನಿಕರಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ದರ ಹತಾಶ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ನಿನಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಅವರನ್ನು ತರಾಟೆಗೂ ತೆಗೆದುಕೊಂಡಿದ್ದರು. ಈ ವಿಚಾರವನ್ನಿಟ್ಟುಕೊಂಡು ಪ್ರಧಾನಿ ಮೋದಿ ಅವರನ್ನು ನಿಂದಿಸಿರುವ ಕಾಂಗ್ರೆಸ್, ನಿಮ್ಮನ್ನು ಟೀಕಿಸಿದರು ದೇಶವನ್ನು ಟೀಕಿಸಿದಂತೆಯೇ ಎಂದು ಪ್ರಶ್ನಿಸಿದೆ. ಅಲ್ಲದೆ ನೀವು ದೇಶವೂ ಅಲ್ಲ, ದೇವರೂ ಅಲ್ಲ, ಸೃಷ್ಟಿಕರ್ತನೂ ಅಲ್ಲ ಎನ್ನುವ ಮೂಲಕ ಭಾರತದ ಅವಹೇಳನವನ್ನು ಸಮರ್ಥನೆ ಮಾಡಿಕೊಂಡಿರುವುದು ಕಾಂಗ್ರೆಸ್‌ನ ಅಲ್ಪತನದ ಪರಮಾವಧಿ ಎನ್ನಬಹುದು.

ಇನ್ನು ಪ್ರಧಾನಿ ಮೋದಿ ಅವರನ್ನು ಅವರ ಕೆಲಸಗಳಿಂದಾಗಿ ತೆಗಳಲು ಯಾವುದೇ ಕಾರಣ ಸಿಗದ ಕಾಂಗ್ರೆಸ್, ಪ್ರಧಾನಿ ಮೋದಿ ಅವರು ಅವರಿಗೆ ಕೈ ಮುಗಿದರು, ಇವರಿಗೆ ಕೈ ಮುಗಿದರು, ರೌಡಿ ಶೀಟರ್‌ಗೆ ಕೈ ಮುಗಿದು ಪ್ರಧಾನಿ ಹುದ್ದೆಗೆಯೇ ಕಳಂಕ ತಂದರು ಎಂದೆಲ್ಲಾ ಅಪಪ್ರಚಾರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ. ಕೈ ಮುಗಿದು ಗೌರವಿಸಿದವರು ಯಾರೇ ಆಗಲಿ ಅವರಿಗೆ ಪ್ರತಿ ಗೌರವ ಸಲ್ಲಿಸುವುದು ಭಾರತೀಯ ಸಂಸ್ಕೃತಿ ಎನ್ನುವ ಕನಿಷ್ಠ ಜ್ಞಾನ ಸಹ ಕಾಂಗ್ರೆಸ್ ಗುಲಾಮರಿಗೆ, ಗಂಜಿ ಗಿರಾಕಿಗಳಿಗೆ ಇರದಿರುವುದು ದುರಾದೃಷ್ಟ.

ಪ್ರಧಾನಿ ಮೋದಿ ಅವರು ಕೈ ಮುಗಿದು ಪ್ರತಿ ಗೌರವ ಸಲ್ಲಿಸಿದ್ದನ್ನು ದೇಶದ್ರೋಹ ಎಂದು ಬಿಂಬಿಸುವ ಕಾಂಗ್ರೆಸ್‌ಗೆ, ತಾನು ಹಲವು ದಶಕಗಳಿಂದ ದೇಶವನ್ನು ಕೊಳ್ಳೆ ಹೊಡೆದ ಖದೀಮರಿಗೆಯೇ ಡೊಗ್ಗು ಸಲಾಂ ಹೊಡೆಯುತ್ತಿರುವುದು, ಇಟಲಿಯಮ್ಮನ ಕುಟುಂಬದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಥ್ ನೀಡಿ ದೇಶವನ್ನು ಲೂಟುವವರಿಗೆ ಸಪೋರ್ಟ್ ಮಾಡುತ್ತಿರುವುದು ಗಮನಕ್ಕೆ ಬಾರದಿರುವುದು ದುರಾದೃಷ್ಟ. ಅಂಧ ಗುಲಾಮರೇ, ವಿರೋಧಿಸುವ ಭರದಲ್ಲಿ ದೇಶದ ಅಭಿವೃದ್ಧಿಯ ನಾಗಲೋಟವನ್ನು ತಡೆಯುವಿರಿ ಎಂಬ ಭ್ರಮೆ ನಿಮ್ಮಲ್ಲಿದ್ದರೆ ಬಿಟ್ಟು ಬಿಡಿ.

ನಾಯಿ ಬೊಗಳಿದರೆ ದೇವ ಲೋಕ ಹಾಳಾಗಲಾರದು. ಕಾಂಗ್ರೆಸಿಗರು ಬೊಬ್ಬಿಟ್ಟರೆ ಪ್ರಧಾನಿ ಮೋದಿ ಅವರು ಹೆದರಿ ದೇಶದ ಅಭಿವೃದ್ಧಿಯ ಕಾರ್ಯಗಳನ್ನು ಸ್ಥಗಿತ ಮಾಡಲಾರರು. ನೆನಪಿಡಿ.

Tags

Related Articles

Close