ಪ್ರಚಲಿತ

ಮೋದಿಯ ಮಾತಿಗೆ ತಲೆಬಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ವಿಶ್ವಬ್ಯಾಂಕ್!! ಪಾಕಿಸ್ತಾನದ ಸೊಕ್ಕು ಮುರಿದ ಮೋದೀಜಿ!!

ನರೇಂದ್ರ ಮೋದಿ ಅಧಿಕಾರವಹಿಸಿದಾಗಿನಿಂದ ನಮ್ಮ ದೇಶ ಬದಲಾವಣೆಯ ಪಥ ಸಾಗಿದೆ ಅಂತಾನೇ ಹೇಳಬಹುದು!! ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಕಾಲ್ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ ಈಗಾಗಲೇ ವಿಶ್ವದೆಲ್ಲೆಡೆ ಭಯೋತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ವಿಚಾರ ತಿಳಿದೇ ಇದೆ!! ಭಾರತ ತನ್ನಷ್ಟಕ್ಕೆ ತಾನು ಕುಳಿತಿದ್ದರೂ ಸಹ ಆ ಪಾಪಿ ಪಾಕಿಸ್ತಾನ ಮಾತ್ರ ಭಾರತದ ವಿರುದ್ಧ ಕಾಲ್ಕೆರೆದು ಬರುವುದಕ್ಕೇ ಹೊಂಚುಹಾಕುತ್ತನೇ ಬರುತ್ತಿದೆ!! ಭಯೋತ್ಪಾದನೆ ಎಂಬುವುದು ಯಾವ ರೀತಿಯಲ್ಲಿ ಜಗತ್ತಿಗೆ ಮಾರಕವಾಗಿದೆ ಎಂದರೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಭಯೋತ್ಪಾದಕ ಕೃತ್ಯಗಳಿಗೆ ತುತ್ತಾಗಿವೆ!! ದಿನ ಕಳೆದಂತೆ ಜಗತ್ತಿನಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು ಜಗತ್ತನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ! ಕೆಲವೊಂದು ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು ಶತ್ರು ರಾಷ್ಟ್ರಗಳ ವಿರುದ್ಧ ಉಗ್ರ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗುತ್ತಿದೆ..! ಒಂದು ಕಡೆಯಲ್ಲಿ ಭಯೋತ್ಪಾಕರನ್ನು ಪೋಷಿಸುತ್ತಿರುವ ರಾಷ್ಟ್ರ ಎಂದು ಎಲ್ಲಾ ರಾಷ್ಟ್ರಗಳು ದೂರ ತಳ್ಳುತ್ತಿದ್ದರೆ ಇನ್ನೊಂದು ಕಡೆಯಲ್ಲಿ ವಿಶ್ವಬ್ಯಾಂಕ್ ಕೂಡಾ ಪಾಕಿಸ್ತಾನಕ್ಕೆ ಖಡಕ್ಕಾಗಿಯೇ ಎಚ್ಚರಿಕೆ ನೀಡಿದ್ದು ಇದೀಗ ಪಾಕ್ ಮುದುಡಿ ಹೋಗಿದೆ!!

Related image

ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದ ಮೋದಿ!!

ಈಗಾಗಲೇ ಪ್ರಧಾನಿ ನರೇಂದ್ರ ಮೋದೀಜೀಯವರು ಪಾಕಿಸ್ತಾನದ ಸೊಕ್ಕು ಮುರಿಯಲು ಹಲವಾರು ಯೋಜನೆಗಳನ್ನೇ ಮಾಡಿದ್ದಾರೆ!! ಇದೀಗ ಸಿಂಧೂ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣ ಗಂಗಾ ನದಿ ಅಣೆಕಟ್ಟ ನಿರ್ಮಾಣ ವಿಷಯ ತಿಳಿಯುತ್ತಿದ್ದಂತೆಯೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದ್ದು, ಇದಕ್ಕೀಗ ತಕರಾರು ಎತ್ತುತ್ತಿದೆ!! 1960 ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರು ಹಂಚಿಕೆಯ ಒಪ್ಪಂದ ಉಲ್ಲಂಘನೆಯಾಗುತ್ತದೆ ಎಂಬ ತಗಾದೆಯನ್ನು ಎತ್ತುತ್ತಿದ್ದಾರೆ!! ಆದರೆ 1960ರಲ್ಲಿ ಯಾವುದೇ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಎಂದು ಈಗಾಗಲೇ ಮೋದೀಜೀಯವರು ಪಾಕಿಸ್ತಾನಕ್ಕೆ ಖಡಕ್ ಆಗಿಯೇ ಎಚ್ಚರಿಕೆಯನ್ನು ನೀಡಿದ್ದಾರೆ!!

Image result for modi

ವಿಶ್ವಬ್ಯಾಂಕ್‍ನ ಖಡಕ್ ಸಂದೇಶಕ್ಕೆ ಬೆದರಿದ ಪಾಕ್!!

ಇದೇ ತಕರಾರನ್ನು ಪಾಕಿಸ್ತಾನ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲು ಚಿಂತನೆ ನಡೆಸಿತ್ತು. ಆಗ ಪ್ರಧಾನಿ ಮೋದಿಯವರು ಪ್ಲ್ಯಾನ್ ಮಾಡಿ ಉಭಯ ರಾಷ್ಟ್ರಗಳಿಗೆ ಅಣಿಕಟ್ಟಿನ ವಿನ್ಯಾಸ ಸಂಬಂಧಪಟ್ಟಿರುವುದರಿಂದ ತಟಸ್ಥ ತಜ್ಞರನ್ನು ನೇಮಿಸಿ ವಿವಾದವನ್ನು ಬಗೆಹರಿಸಿಕೊಳ್ಳೋಣ ಎಂದಿದ್ದರು. ಆದರೆ ಈ ಪ್ರಸ್ತಾಪವನ್ನು ಒಪ್ಪದ ಪಾಕಿಸ್ತಾನ ಅಂತರಾಷ್ಟ್ರೀಯ ಮೆಟ್ಟಿಲೇರುತ್ತೇವೆ ಎಂದು ಪಟ್ಟು ಹಿಡಿದಿತ್ತು!! ಈ ತಕರಾರಿಗೆ ವಿಶ್ವಬ್ಯಾಂಕ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದೆ.

ಭಾರತದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಿ ಎಂದು ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್ ಖಡಕ್ ಎಚ್ಚರಿಕೆಯನ್ನು ಕೊಟ್ಟಿದೆ. ಈ ಮೂಲಕ ಈ ವಿವಾದವನ್ನು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯದಂತೆ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್ ತಾಕೀತು ಮಾಡಿದೆ!! ಈ ಎಚ್ಚರಿಕೆಯನ್ನು ಸ್ವತಃ ವಿಶ್ವಬ್ಯಾಂಕಿನ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ಪಾಕಿಸ್ತಾನಕ್ಕೆ ಕೊಟ್ಟಿದ್ದಾರೆ!! ಈ ವರದಿಯನ್ನು ಕಳೆದ ವಾರ ಪಾಕಿಸ್ತಾನಿ `ಡಾನ್’ ಎಂಬ ಪತ್ರಿಕೆ ವರದಿ ಮಾಡಿದ್ದಾರೆ!!

Image result for jim yong kim

ಇದಕ್ಕಿಂತ ಮುಂಚಿತವಾಗಿ ವಿಶ್ವ ಬ್ಯಾಂಕ್ 2016ರಲ್ಲಿ ಈ ಪ್ರಕ್ರಿಯೆಯನ್ನು ಬಗೆಹರಿಸಲು ವಕೀಲರನ್ನು ಕೂಡಾ ನೇಮಿಸಿತ್ತು!! ಆದರೆ ಇದೀಗ ವಿಶ್ವಬ್ಯಾಂಕ್ ಪಾಕಿಸ್ಥಾನಕ್ಕೇ ಉಲ್ಟಾ ಹೊಡೆದಿದೆ!! ನ್ಯಾಯ ಸಿಗಲೇ ಬೇಕು ಎಂದು ಹಠ ಹಿಡಿದಿದ್ದ ಪಾಕ್ ವಿಶ್ವ ಸಂಸ್ಥೆಯ ಈ ನಿರ್ಧಾರದಿಂದ ಹಾಗೂ ಅವರ ಎಚ್ಚರಿಕೆ ಮಾತಿನಿಂದ ಇಂಗುತಿಂದ ಮಂಗನಂತಾಗಿದೆ!! ಪದೇ ಪದೇ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಆ ಪಾಪಿ ಪಾಕಿಸ್ತಾನಕ್ಕೆ ನಾವು ಯಾತಕ್ಕಾಗಿ ಅವರೊಂದಿಗೆ ಮೃದುತ್ವದಿಂದ ನಡೆದುಕೊಳ್ಳ ಬೇಕು!! ಗಡಿಯಲ್ಲಿ ನಮ್ಮ ಭಾರತೀಯ ಸೈನಿಕರು ಸುಮ್ಮನೆ ಇದ್ದರೂ ಅವರನ್ನು ಕೆರಳಿಸುವಂತೆ ಮಾಡಿರುವುದು ಪಾಕಿಗಳೇ ಅಂತವರಿಗೆ ನಾವು ನೀರು ಕೊಟ್ಟು ಅವರನ್ನು ಪೋಷಣೆ ಮಾಡಬೇಕೇ?.. ಇದು ಮೋದಿ ಯುಗ ಎನ್ನುವುದನ್ನು ನಾವು ಮರೆಯಬಾರದು!! ಪಾಕಿಸ್ತಾನಿಯರಿಗೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ತಮಗೆ ಇಷ್ಟ ಬಂದಂತೆ ವರ್ತಿಸಲು ಆಗುತಿತ್ತು!! ಆದರೆ ಇದೀಗ ಇದೆಲ್ಲಾ ಕಷ್ಟವಾಗಿ ಪರಿಣಮಿಸಿವೆ!!

source: www.nationalistviews.com

  • ಪವಿತ್ರ
Tags

Related Articles

Close