ಪ್ರಚಲಿತ

ಯೋಗಿಯ ಭಾಷಣ ನೋಡಲು ಹೋದವರಿಗೆ ಶಾಕ್ ನೀಡಿದ ಯುವ ಸಂಸದ! ಈ ಸಂಸದನ ಭಾಷಣಕ್ಕೆ ಕರಾವಳಿಯ ಹಿಂದೂ ಕಾರ್ಯಕರ್ತರು ಹುಚ್ಚೆದ್ದು ಕುಣಿದಿದ್ಯಾಕೆ..?

ಕಳೆದ 5 ವರ್ಷಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ರಾಜ್ಯ ಯಾವ ಪರಿಸ್ಥಿತಿಯನ್ನು ತಲುಪಿದೆ ಎಂಬುವುದನ್ನು ಮನದಟ್ಟು ಮಾಡಲು ರಾಜ್ಯ ಭಾರತೀಯ ಜನತಾ ಪಕ್ಷ ಜನ ಸುರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ನಡೆಯುತ್ತಿರುವ ಈ ಜನಸುರಕ್ಷಾ ಯಾತ್ರೆ ಕರಾವಳಿಯಲ್ಲೂ ಭರ್ಜರಿಯಾಗಿಯೇ ನಡೆದಿದೆ. ಮಂಗಳೂರು ಚಲೋ ಎಂಬ ಹೆಸರಿನ ಈ ಜನಸುರಕ್ಷ ಯಾತ್ರೆ ಕರಾವಳಿ ಕರ್ನಾಟಕದಲ್ಲೇ ಹೊಸ ಐತಿಹಾಸಿಕ ದಾಖಲೆಯನ್ನೇ ಮಾಡಿದೆ.

4 ಜಿಲ್ಲೆಗಳನ್ನು ಒಗ್ಗೂಡಿಸಿದ ಮಂಗಳೂರು ಚಲೋ…

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಮೈಸೂರು-ಕೊಡಗು ಜಿಲ್ಲೆಗಳ ಒಗ್ಗೂಡುವಿಕೆಯಲ್ಲಿ ಮಂಗಳೂರು ಚಲೋ ಎಂಬ ಕಾರ್ಯಕ್ರಮ ಭಾರೀ ಯಶಸ್ಸನ್ನೇ ಕಂಡಿದೆ. ಮಡಿಕೇರಿಯ ಕುಶಾಲ ನಗರದಿಂದ ಹಾಗೂ ಉತ್ತರ ಕನ್ನಡದ ಅಂಕೋಲದಿಂದ ಹೊರಟಿದ್ದ ಈ ಮಂಗಳೂರು ಚಲೋ ಭಾರತೀಯ ಜನತಾ ಪಕ್ಷದ ಜಾಥಾವು ಮಂಗಳೂರು ತಲುಪಿತ್ತು. ಮಡಿಕೇರಿಯ ಕುಶಾಲ ನಗರದಿಂದ ಸುಳ್ಯ, ಪುತ್ತೂರು, ಮೂಡುಬಿದಿರೆ ಮಾರ್ಗವಾಗಿ ಮಂಗಳೂರು ತಲುಪಿದ್ದರೆ, ಅಂಕೋಲದಿಂದ ಹೊರಟಿದ್ದ ಜಾಥಾ ಉಡುಪಿ, ಕಾಪು, ಸುರತ್ಕಲ್ ಮಾರ್ಗವಾಗಿ ಮಂಗಳೂರು ತಲುಪಿತ್ತು. ಮಂಗಳೂರಿನಲ್ಲಿ ಇತಿಹಾಸವೇ ಸೃಷ್ಟಿಯಾಗಿತ್ತು. ಸಾವಿರ ಸಾವಿರ ಸಂಖ್ಯೆಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ಮಂಗಳೂರು ತುಂಬಿ ತುಳುಕಿ ಹೋಗಿತ್ತು. ಮಂಗಳೂರಿಗೆ ಮಂಗಳೂರೇ ಸಂಪೂರ್ಣ ಕೇಸರಿಮಯವಾಗಿತ್ತು. ಎತ್ತ ನೋಡಿದರತ್ತ ಹಾರುವ ಕಮಲವನ್ನು ತುಂಬಿಕೊಂಡಿದ್ದ ಕೇಸರಿ ಧ್ವಜಗಳು ಮಂಗಳೂರನ್ನು ರಂಗಾಗಿಸಿದ್ದವು. ಸೂರ್ಯ ಮುಳುಗುವ ವೇಳೆಯಲ್ಲಿ ಜಗತ್ತೆಲ್ಲಾ ಕೇಸರಿಯಾಗುವಂತೆ ಮಂಗಳೂರೆಲ್ಲಾ ಕೇಸರಿ ಮಯವಾಗಿತ್ತು. ನೋಡ ನೋಡುತ್ತಲೇ 50 ಸಾವಿರಕ್ಕೂ ಅಧಿಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಂಗಳೂರನ್ನು ತುಂಬಿಕೊಂಡಿದ್ದರು.

ಯೋಗಿಗಾಗಿ ಬಂದ ಜನರನ್ನು ಮೋಡಿ ಮಾಡಿದ್ದ ಆ ಯುವ ಸಂಸದ..!

ಹೌದು… ಮಂಗಳೂರಿಗೆ ಆಗಮಿಸಿದ್ದ ಅಷ್ಟೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೂ ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರ ಭಾಷಣವನ್ನು ಕೇಳಲು ಆಗಮಿಸಿದ್ದವರೆ. ಉತ್ತರ ಪ್ರದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗ ಭಾರತೀಯ ಜನತಾ ಪಕ್ಷದ ಮಾಸ್ ಲೀಡರ್. ಹೀಗಾಗಿ ಅವರ ಭಾಷಣವನ್ನೇ ಕೇಳಲು ಅದೆಷ್ಟೋ ಮಂದಿ ಕಾರ್ಯಕರ್ತರು ಆಗಮಿಸಿದ್ದರು. ಅದರೊಂದಿಗೆ ಕನ್ನಡದ ಯೋಗಿ ಎಂದೇ ಹೆಸರಾಗಿರುವ ಕರ್ನಾಟಕದ ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆಯವರ ಭಾಷಣವನ್ನೂ ಕೇಳಲು ಪಕ್ಷದ ಕಾರ್ಯಕರ್ತರ ದಂಡೇ ಹರಿದು ಬರುತ್ತಿತ್ತು. ಆದರೆ ಅಲ್ಲಿ ನಡೆದ ಚಮತ್ಕಾರವೇ ಬೇರೆ ಆಗಿತ್ತು.

ಎಲ್ಲರೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಾಯುತ್ತಾ ಕುಳಿತಿರುವಾಗಲೇ ಓರ್ವ ಯುವ ಸಂಸದ ವೇದಿಕೆಯಲ್ಲಿ ತನ್ನ ಭಾಷಣವನ್ನು ಆರಂಭಿಸುತ್ತಾನೆ. ಆತ ಭಾಷಣ ಆರಂಭಿಸುವಾಗ ಸಾಮಾನ್ಯವಾಗಿಯೇ ಇದ್ದಂತಹ ಕೇಸರಿ ಸಾಗರದಲ್ಲಿ ಬೃಹತ್ ಅಲೆಗಳೇ ಮೇಲೇಳತೊಡಗಿದವು. ಆ ಯುವ ಸಂಸದ ಕಾಂಗ್ರೆಸ್ ವಿರುದ್ಧ ಆರ್ಭಟಿಸಿದ ಆರ್ಭಟಕ್ಕೆ ಭಾರತೀಯ ಜನತಾ ಪಕ್ಷದ ಕಡಲಿನಲ್ಲಿ ಸುನಾಮಿಯೇ ಏರ್ಪಟ್ಟಿತ್ತು. ಸಮಾವೇಶ ಅಕ್ಷರಷಃ ಹಿಂದೂ ಝೇಂಕಾರದ ಶಂಖನಾದವನ್ನೇ ಮೊಳಗಿಸಿತ್ತು. ಸಾವಿರಾರು ಕಾರ್ಯಕರ್ತರ ಘೋಷಣೆಗಳು ಮುಗಿಲೆತ್ತರಕ್ಕೆ ಹಾರಿ ಹೋಗಿತ್ತು.

ಮ್ಯಾಜಿಕ್ ಮಾಡಿದ “ಶ್ರೀ ರಾಮ”…!

ಎಸ್… ಮಂಗಳೂರಿನಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಮಂಗಳೂರು ಚಲೋ ಕಾರ್ಯಕ್ರಮದಲ್ಲಿ ಇಡೀ ಸಭೆಯನ್ನೇ ಒಮ್ಮೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡಿದ ಆ ಯುವ ಸಂಸದ ಮತ್ಯಾರೂ ಅಲ್ಲ. ಅವರೇ ಬಳ್ಳಾರಿ ಸಂಸದ ಶ್ರೀ ರಾಮುಲು… ಈ ಪುಣ್ಯಾತ್ಮ ಭಾಷಣಕ್ಕೆ ನಿಲ್ಲೋವಾಗ ಯಾವೊಬ್ಬನೂ ಶ್ರೀ ರಾಮುಲು ಈ ರೀತಿ ಆರ್ಭಟಿಸುತ್ತಾರೆ ಅಂತ ಅಂದುಕೊಳ್ಳಲೇ ಇಲ್ಲ. ವೇದಿಕೆಯ ಮೈಕ್ ಬಳಿಗೆ ಬಂದಿದ್ದ ಶ್ರೀ ರಾಮುಲು ಅಬ್ಬರಿಸಿದ್ದೇ ಅಬ್ಬರಿಸಿದ್ದು, ಇಡೀ ಜನಸಾಗರವೇ ಶ್ರೀ ರಾಮುಲು ಭಾಷಣಕ್ಕೆ ಘೋಷಣೆಗಳ ಮಹಾಪೂರವನ್ನೇ ಸುರಿಸಿಟ್ಟಿತ್ತು. ತಮ್ಮ ಭಾಷಣದುದ್ದಕ್ಕೂ ಭಾರತೀಯ ಜನತಾ ಪಕ್ಷದ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲಿನ ಪೊಲೀಸ್ ದಬ್ಬಾಳಿಕೆಯ ಬಗ್ಗೆಯೇ ಮಾತನಾಡಿದ್ದ ಶ್ರೀ ರಾಮುಲು ನೆರೆದಿದ್ದ ಅಸಂಖ್ಯಾತ ಯುವ ಸಮುದಾಯದ ರೋಲ್ ಮೋಡೆಲ್ ಆಗಿ ಬಿಟ್ಟಿದ್ದರು. ಉತ್ತರ ಕರ್ನಾಟಕದ ಓರ್ವ ಸಂಸದ ಕರಾವಳಿಯ ಜನತೆಯ ನಾಡಿ ಮಿಡಿತವನ್ನು ಅರಿತು ಮಾತನಾಡಿದ ಶೈಲಿ ಇಡೀ ರಾಜ್ಯದಲ್ಲೇ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

 

 

ಶ್ರೀ ರಾಮುಲು ಹೇಳಿದ್ದಿಷ್ಟು…

“ನಮ್ಮ ಹಿಂದೂ ಕಾರ್ಯಕರ್ತರು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಾರ್ಗದರ್ಶನದಂತೆ ಪೊಲೀಸರು ಮನಬಂದಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕೇಸ್ ಮೇಲೆ ಕೇಸ್ ಹಾಕುತ್ತಿದ್ದಾರೆ. ಪೊಲೀಸರ ದಬ್ಬಾಳಿಕೆ ಮುಗಿಲು ಮುಟ್ಟಿದೆ. ಮಾನ್ಯ ಯಡಿಯೂರಪ್ಪನವರೇ… ನೀವು ಈ ಮಾತನ್ನು ನೆನಪಿಟ್ಟುಕೊಳ್ಳಬೇಕು… ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 24 ಗಂಟೆಯ ಒಳಗೆ ನಮ್ಮ ಕಾರ್ಯಕರ್ತರ ಎಲ್ಲಾ ಕೇಸ್‍ಗಳೂ ವಜಾ ಆಗಬೇಕು. ನಮ್ಮ ಕಾರ್ಯಕರ್ತರ ಮೇಲೆ ದಾಖಲಿಸಿದ ಅಷ್ಟೂ ಸುಳ್ಳು ಕೇಸ್‍ಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಲ್ಲೇ ವಾಪಾಸು ಪಡೆಯಬೇಕು. ಕೇವಲ ಹಿಂದೂ ಪರ ಘೋಷಣೆಗಳನ್ನು ಹಾಕಿದ್ದಕ್ಕೆ ಹಾಗೂ ದೇಶಪ್ರೇಮದ ಘೋಷಣೆಯನ್ನು ಮಾಡಿದ್ದಕ್ಕಾಗಿ ನಮ್ಮ ಯುವಕರ ಮೇಲೆ ಕೇಸ್ ಹಾಕಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿದ್ದ ಅಷ್ಟೂ ಮುಸಲ್ಮಾನರ ಕೇಸ್‍ಗಳನ್ನು ವಾಪಾಸು ಪಡೆಯಲಾಗಿತ್ತು. ಈ ಮೂಲಕ ತುಷ್ಟೀಕರಣದ ನೀತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಆರಂಭದ ಅವಧಿಯಲ್ಲೇ ಮಾಡಲಾರಂಭಿಸಿತ್ತು. ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು, ಶಾಸಕರು ಹಾಗೂ ಪೊಲೀಸರು ಏನು ದಬ್ಬಾಳಿಕೆಯನ್ನು ಮಾಡಿದ್ದರೋ, ಗೂಂಡಾಗಿರಿಯನ್ನು ತೋರಿದ್ದರೋ ಅವರ ಪಟ್ಟಿಯನ್ನು ಮಾಡಿ. ಬಿಡ ಬಾರದು ಯಡಿಯೂರಪ್ಪನವರೇ ಒಬ್ಬರನ್ನೂ ಬಿಡಬಾರದು. ಏನು ತಪ್ಪು ಮಾಡಿದ್ದಾರೆ ಇವತ್ತು ನಮ್ಮ ಕಾರ್ಯಕರ್ತರು? ನಾವೆಲ್ಲರೂ ನಿಮ್ಮ ಜೊತೆಗಿರುತ್ತೀವಿ. ನನ್ನ ವಿನಂತಿ ಇಷ್ಟೆ ಇವತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ್ರೋಹಿ ಪಿಎಫ್‍ಐ ಹಾಗೂ ಎಸ್.ಡಿ.ಪಿ.ಐ.ನವರು ಮಾಡಿರುವ ಅಷ್ಟೂ ಕೇಸುಗಳನ್ನು ವಜಾ ಮಾಡಿದ್ದಾರಲ್ಲಾ…! ನಮ್ಮ ಕರ್ನಾಟಕದ ಸುಮಾರು 10 ಸಾವಿರ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕ್ತಾ ಇದ್ದಾರೆ. ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ತಕ್ಷಣ ಆ ಎಲ್ಲಾ ಕೇಸುಗಳನ್ನು ವಜಾ ಮಾಡಬೇಕು. ನಮ್ಮ ಯುವಕರು, ಬಜರಂಗದಳದ ಕಾರ್ಯಕರ್ತರು, ಅವರೆಲ್ಲರ ಕೇಸುಗಳೂ ವಜಾ ಆಗುವಂತಹ ಕೆಲಸಗಳು ಆಗಬೇಕು. ಬಿಡಬಾರದು ಸ್ವಾಮಿ… ಅವರು (ಕಾಂಗ್ರೆಸ್) ಮಾಡಿದ್ದಾರಲ್ಲಾ ಇವತ್ತು, ಅವರೇನು ಸ್ವಾತಂತ್ರ್ಯ ತಂದು ಕೊಟ್ಟವರಾ? ನನ್ನ ಕಾರ್ಯಕರ್ತರ ಮೇಲಿರುವ ಆ ಎಲ್ಲಾ ಕೇಸುಗಳನ್ನು 24 ಗಂಟೆಯೊಳಗೆ ವಜಾ ಮಾಡುವ ಕೆಲಸಗಳು ಆಗಬೇಕು” ಎಂದು ಯಡಿಯೂರಪ್ಪನವರನ್ನು ಉದ್ಧೇಶಿಸಿ ಆರ್ಭಟಿಸಿದ್ದರು.

Image result for shreeramulu

ಕರಾವಳಿ ಕಾರ್ಯಕರ್ತರಿಗೆ ರಾಮುಲ್ ಫಿದಾ…

ಇನ್ನು ಕರಾವಳಿ ಭಾಗದ ತಮ್ಮ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಡಿದ ಶ್ರೀ ರಾಮುಲು ಆ ಭಾಗದ ಕಾರ್ಯಕರ್ತರಿಗೆ ನಾವಿದ್ದೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ. “ಕರಾವಳಿ ಭಾಗದ ಜನತೆ ಸರ್ಕಾರದಿಂದ ಭಾರೀ ಕಿರುಕುಳವನ್ನೇ ಅನುಭವಿಸುತ್ತಿದ್ದೀರಿ. ನೀವು ಇಲ್ಲಿ ಅನುಭವಿಸುವ ಪ್ರತಿ ಹಿಂಸೆಯ ಬಗ್ಗೆಯೂ ನಮಗೆ ಅರಿವಿದೆ. ನಿಮ್ಮ ಮೇಲೆ ಏನಾದರೂ ಅಹಿತಕರ ಘಟನೆ ನಡೆದರೆ ನಾವು ಉತ್ತರ ಕರ್ನಾಟಕದ ಜನ ಸುಮ್ಮನಿರೋಲ್ಲ. ನಿಮಗಾದ ಆ ನೋವಿಗೆ ನಾವು ಧಾವಿಸಿ ಬರುತ್ತೇವೆ. ಇಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ನಾವು ಸಿಡಿದೇಳುತ್ತೇವೆ. ನಿಮ್ಮನ್ನು ಯಾರಾದರೂ ಮುಟ್ಟಿ ನೋಡಲಿ, ನಾವು ಉತ್ತರ ಕರ್ನಾಟಕದ ಮಂದಿ ನಿಮ್ಮ ಪರವಾಗಿ ಧಾವಿಸಿ ಬರುತ್ತೇವೆ” ಎಂದು ಹೇಳಿದರು.

ಸಿಎಂ ಹಾಗೂ ರಮಾನಾಥ್ ರೈ ವಿರುದ್ಧವೂ ವಾಗ್ದಾಳಿ…

“ಮಾನ್ಯ ಮುಖ್ಯಮಂತ್ರಿಗಳೇ ನೀವೇನು ಮಾಡಿದ್ದೀರಿ? ಕರಾವಳಿ ಭಾಗದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಂತಹ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಡಾ.ಪ್ರಭಾಕರ ಭಟ್‍ರ ಶಾಲೆಯ ಮಕ್ಕಳಿಗೆ ಕೊಲ್ಲೂರಿನಿಂದ ಬರುತ್ತಿದ್ದ ಅನ್ನವನ್ನು ನಿಲ್ಲಿಸಿದ್ದೀರಿ. ಅನಂತ್ ಕುಮಾರ್ ಹೆಗಡೆಯವರು, ಸುನಿಲ್ ಕುಮಾರ್ ಅವರು, ಶೋಭಾ ಕರಂದ್ಲಾಜೆಯವರು ನಡು ಬೀದಿಯಲ್ಲಿ ಆ ಶಾಲೆಯ ಮಕ್ಕಳಿಗೆ ಭಿಕ್ಷೆ ಬೇಡುವ ಹಾಗೆ ಮಾಡಿದ್ದೀರಲ್ವಾ… ಮಕ್ಕಳಲ್ಲಿ ರಾಜಕಾರಣ ಮಾಡಬೇಡಿ ಅಂತ ಹೇಳಿದ್ರಲ್ಲಾ ಕೇಳಿದ್ರಾ ನೀವು? ಆ ಶಾಲೆಯ ಮಕ್ಕಳಿಗೆ ಬರುತ್ತಿದ್ದ ಅನ್ನವನ್ನು ತಡೆದ ನಿಮ್ಮನ್ನು ಆ ಕೊಲ್ಲೂರು ಮೂಕಾಂಬಿಕೆ ಸುಮ್ಮನೆ ಬಿಡುತ್ತಾಳೇನೋ..? ಎಷ್ಟು ದಿನ ಆಡಳಿತ ಮಾಡುತ್ತೀರಿ? ಸಿದ್ದರಾಮಯ್ಯ ಸರ್ಕಾರ ಅಥವಾ ಕಾಂಗ್ರೆಸ್ ಸರ್ಕಾರ ಏನು ಗೂಟಾ ಹೊಡ್ಕೊಂಡು ಕೂರುತ್ತಾ..? ಇನ್ನು ಕೇವಲ 60 ದಿನ… ಅಷ್ಟರಲ್ಲಿ ನಿಮ್ಮ ಸರ್ಕಾರ ಬಿದ್ದು ಹೋಗಲಿದೆ. ಸಮಸ್ತ ಹಿಂದೂ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೇ ಇನ್ನು 60 ವರ್ಷಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೆ. ನಂತರ ಈ ಸರ್ಕಾರದಲ್ಲಿ ಯಾರೆಲ್ಲಾ ಪಾಪಗಳನ್ನು ಮಾಡಿದ್ದಾರೋ ಅವರನ್ನೆಲ್ಲ ಜೈಲಿಗೆ ಕಳಿಸುವಂತಹ ಕೆಲಸಗಳನ್ನು ಮಾಡುತ್ತೇವೆ. ಈ ಭಾಗದ ಉಸ್ತುವಾರಿ ಸಚಿವರು (ರಮಾನಾಥ್ ರೈ) ಎಸ್.ಪಿ.ಯನ್ನು ಕರೆದು ಆದೇಶ ನೀಡುತ್ತಾರೆ. ಪ್ರಭಾಕರ್ ಭಟ್‍ರನ್ನು ಬಂಧಿಸಿ ಎಂದು ಆದೇಶಿಸುತ್ತಾರೆ. ನಾನು ರಮಾನಾಥ್ ರೈಗೆ ಸವಾಲು ಹಾಕುತ್ತೇನೆ. ನಿಮಗೆ ತಾಕತ್ತು ಅನ್ನೋದು ಇದ್ದದ್ದೇ ಆದರೆ ಪ್ರಭಾಕರ್ ಭಟ್‍ರವರನ್ನು ಮುಟ್ಟಿ ನೋಡೋಣ. ಒಂದು ವೇಳೆ ಮುಟ್ಟಿದ್ದೇ ಆದಲ್ಲಿ ನಾವು ಬಿಡ್ತೀವಾ ನಿಮ್ಮನ್ನ? ನೀವು ವಿಧಾನ ಸೌಧಾದಲ್ಲೇ ಇರಲಿ, ಕ್ಯಾಬಿನೆಟ್‍ನಲ್ಲಿಯೇ ಇರಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಿಮ್ಮನ್ನು ಹುಡುಕಿ ಹುಡುಕಿ—–ಅರ್ಥಮಾಡಿಕೊಳ್ಳಬೇಕು. ನಾವು ಬಳೆ ಹಾಕಿಕೊಂಡು ಕೂರೋ ವ್ಯಕ್ತಿಗಳಲ್ಲ. ನಮ್ಮ ರಕ್ತದಲ್ಲಿ ಭಾರತ ಭಾರತ ಭಾರತ, ನರೇಂದ್ರ ಮೋದಿ ನರೇಂದ್ರ ಮೋದಿ ನರೇಂದ್ರ ಮೋದಿ ಅನ್ನೋದಿದೆ” ಎಂದು ವಾಗ್ದಾಳಿ ನಡೆಸಿದರು.

ಮಡಿದ ಕಾರ್ಯಕರ್ತರಿಗೆ ಮಿಡಿದ ರಾಮುಲು…

“ನಮ್ಮ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನಯ ಕಾರ್ಯಕರ್ತರು ಸಾಕಷ್ಟು ಮಂದಿ ತಮ್ಮ ಜೀವವನ್ನೇ ತೆತ್ತಿದ್ದಾರೆ. ಧರ್ಮಕ್ಕೋಸ್ಕರ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಮಡಿದ ತಾಯಂದಿರ ಕಣ್ಣೀರು ನಮಗೆ ಅರ್ಥವಾಗುತ್ತೆ. ಆ ತಾಯಂದಿರಿಗೆ ಸಾಂತ್ವನ ಹೇಳಬಹುದು, ಆ ಕುಟುಂಬಕ್ಕೆ ಸಾಂತ್ವನ ಹೇಳಬಹುದು, ಆ ತಾಯಿಯ ಕರುಳಿನ ನೋವು ಯಾರಿಗೆ ತಿಳಿಸಬೇಕು ಸ್ವಾಮಿ? ಆ ತಾಯಂದಿರ ಕಣ್ಣೀರಿಂದ ನಾಳೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ವನಾಶ ಆಗುತ್ತೆ ಅನ್ನುವ ಸಂದೇಶವನ್ನು ಸಾರುತ್ತೇನೆ. ನಾನು ಹಾಗೂ ನಮ್ಮ ರಾಜ್ಯದ ಭಾರತೀಯ ಜನತಾ ಪಕ್ಷದ ಸಂಸದರು ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ವಿ. ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದೆ. ಇದನ್ನು ತಾವು ಎನ್‍ಐಎ ತನಿಖೆಗೆ ಸೂಚಿಸಬೇಕು ಎಂದು ಕೇಳಿಕೊಂಡಿದ್ದೆವು. ಆವಾಗ ಅವರು ನಮಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಹಾಗೂ ಇದರ ಪ್ರಸ್ತಾವನೆ ರಾಜ್ಯ ಸರ್ಕಾರದಿಂದ ಬರಬೇಕು ಎಂದು ಹೇಳಿದ್ದಾರೆ. ಈ ಕಾರಣದಿಂದ ಮುಂದಿನ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬೇಕು, ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ನಮ್ಮ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ವಜಾ ಮಾಡಿ 24 ತಾಸಿನೊಳಗೆ ಕಾಂಗ್ರೆಸ್ ಜೊತೆ ಕೈಜೋಡಿಸಿರುವೆಲ್ಲಾ ದೇಶದ್ರೋಹಿಗಳ ವಿರುದ್ಧ ಕ್ರಮಕೈಗೊಳ್ಳುತ್ತಾರೆ. ಈ ಕಾರಣಕ್ಕಾಗಿ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿಕೊಡ್ರೀ” ಎಂದು ಹೇಳಿದ್ದಾರೆ.

ಕರಾವಳಿಗರನ್ನು ನೋಡಿ ಕಲಿಯಬೇಕು…

“ಉತ್ತರ ಕರ್ನಾಟಕದಲ್ಲಿ ನಾವು ನಿಮ್ಮ ಕರಾವಳಿ ಬಗ್ಗೆ ಮಾತನಾಡ್ತಾ ಇರ್ತೇವೆ. ದೇಶಭಕ್ತಿ ಅನ್ನೋದನ್ನು ಕರಾವಳಿ ಜನರನ್ನು ನೋಡಿ ಕಲಿಬೇಕು ಅನ್ನೋದನ್ನು ನಾವು ನಮ್ಮ ಭಾಗದ ಜನತೆಗೆ ಹೇಳ್ತಾ ಇರ್ತೇವೆ. ನೀವೆಲ್ಲರೂ ಕೂಡಾ ಕರ್ನಾಟಕ ರಾಜ್ಯಕ್ಕೆ ರೋಲ್ ಮಾಡೆಲ್ ಆಗಿದ್ದೀರಿ. ರಾಜಕೀಯಕ್ಕಿಂತ, ರಾಜಕೀಯ ಪಕ್ಷಕ್ಕಿಂತ ನಿಮಗೆ ದೇಶ ಮುಖ್ಯವಾಗಿದೆ. ದೇಶಕ್ಕಾಗಿ ನರೇಂದ್ರ ಮೋದಿಯವರು, ರಾಜ್ಯಕ್ಕಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಷ್ಟ ಪಡ್ತಾ ಇದ್ದಾರೆ. ಯುವಕರೆಲ್ಲರೂ ಒಂದಾಗಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ನಮ್ಮ ರಾಜ್ಯದ ರೈತರಿಗೆ, ಬಡ ಕೃಷಿಕರಿಗೆ ಸಹಿತ ಎಲ್ಲರಿಗೂ ಒಳ್ಳೆಯದಾಗುತ್ತೆ” ಎನ್ನುವ ಮೂಲಕ ಶ್ರೀ ರಾಮುಲು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾರೆ.

Image result for shreeramulu

ರಾಮುಲು ಮಾತಿಗೆ ಘೋಷಣೆಗಳ ಸುರಿಮಳೆ…

ಬಳ್ಳಾರಿ ಸಂಸದ ಈ ರೀತಿಯಾಗಿ ಮಾತನಾಡುತ್ತಾರೆ ಎಂದು ಸೇರಿದ್ದ ಅಷ್ಟೂ ಜನಸ್ತೋಮ ನಿರೀಕ್ಷಿಸಿಯೂ ಇರಲಿಲ್ಲ. ಶ್ರೀ ರಾಮುಲು ಮಾಡಿದ ಕೇವಲ ಹತ್ತೇ ಹತ್ತು ನಿಮಿಷದ ಆ ಭಾಷಣ ಸಾವಿರಾರು ಮಂದಿಯಲ್ಲಿ ಘೋಷಣೆಗಳ ಸುರಿಮಳೆಯನ್ನೇ ಮೊಳಗಿಸಿತ್ತು. ಶ್ರೀ ರಾಮುಲು ಹೇಳುತ್ತಿದ್ದ ಒಂದೊಂದು ವಾಕ್ಯಕ್ಕೂ ಜನರು ಶಿಳ್ಳೆ ಚಪ್ಪಾಳೆಯ ಉಡುಗೊರೆಯನ್ನೇ ನೀಡಿದ್ದರು. ಕರಾವಳಿ ಕಾರ್ಯಕರ್ತರಿಗೆ ಏನು ಬೇಕು ಎಂಬುವುದನ್ನು ಅರಿತು ಮಾತನಾಡಿದ್ದ ಸಂಸದ ಶ್ರೀ ರಾಮುಲು ಅವರ ಮಾತುಗಳು ಕರಾವಳಿ ಜನತೆ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

 

ಭಾಷಣದ ವೀಡಿಯೋ ಸಿಕ್ಕಾ ಪಟ್ಟೆ ವೈರಲ್…!

ಶ್ರೀ ರಾಮುಲು ಕರಾವಳಿಯಲ್ಲಿ ಮಾಡಿದ್ದ ಭಾಷಣ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಸಾಮಾಜಿಕ ಜಲತಾಣಗಳಲ್ಲಿ ಯುವ ಸಂಸದನ ಭಾಷಣ ಭಾರೀ ವೈರಲ್ ಆಗಿವೆ. ಭಾಷಣವನ್ನು ಫೇಸ್ ಬುಕ್, ವಾಟ್ಸಾಪ್ ಸಹಿತ ಇನ್ನಿತರ ಸಾಮಾಜಿಕ ಜಾಲತಾಣಗಳ ಮುಖಾಂತರ ಹಾಕಲಾಗಿದ್ದು ಭಾರೀ ಸದ್ದು ಮಾಡುತ್ತಿದೆ. ಬರೋಬ್ಬರಿ 50 ಸಾವಿರಕ್ಕೂ ಅಧಿಕ ಮಂದಿ ರಾಮುಲು ಭಾಷಣವನ್ನು ಶೇರ್ ಮಾಡಿದ್ದು, ಸುಮಾರು 1 ಕೋಟಿಗೂ ಅಧಿಕ ಮಂದಿ ರಾಮುಲು ಭಾಷಣವನ್ನು ವೀಕ್ಷಿಸಿದ್ದಾರೆ.

ಒಟ್ಟಾರೆ ಕರಾವಳಿಯಲ್ಲಿ ಶ್ರೀ ರಾಮುಲು ಮಾಡಿದ ಭಾಷಣ ಈಗ ಕರ್ನಾಟಕದ ಕಮಲದ ಕಾರ್ಯಕರ್ತರಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರ ಭಾಷಣವನ್ನು ವೀಕ್ಷಿಸಲು ತೆರಳಿದ್ದ ಸಾವಿರಾರು ಮಂದಿ ಶ್ರೀ ರಾಮುಲು ಭಾಷಣವನ್ನೇ ಬಿಟ್ಟ ಕಣ್ಣು ಬಿಟ್ಟಂಗೆ ನೋಡಿದ್ದು, ಈ ಪುಣ್ಯಾತ್ಮ ಈ ರೀತಿಯೂ ಮಾತಾಡ್ತಾನಾ ಎಂದು ಮೂಗಿನ ಮೇಲೆ ಬೆರಳಿಡುವಂತೆ ಆಗಿದ್ದಂತೂ ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close