ಪ್ರಚಲಿತ

ಗಣರಾಜ್ಯೋತ್ಸವ ಯಶಸ್ವಿಗೆ ಮೋದಿ ಫಿದಾ!! ತಮ್ಮ ಲೇಖನದಲ್ಲಿ ಆಸಿಯಾನ್ ನಾಯಕರ ಬಗ್ಗೆ ಮೋದಿ ಏನಂದರು ಗೊತ್ತಾ?!!

ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿಸಲು ಪಣತೊಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ದೇಶಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ.
ಆರ್ಥಿಕ ವ್ಯವಸ್ಥೆಯಲ್ಲೂ ಭಾರತ ದಿನೇ ದಿನೇ ಪ್ರಗತಿ ಕಾಣುತ್ತಿದ್ದು ಜಗತ್ತಿನ ಇತರ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನವನ್ನು ಅಲಂಕರಿಸುವುದರಲ್ಲಿ ಸಂಶಯವಿಲ್ಲ…!

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ವಿದೇಶ ಪ್ರವಾಸ ಮಾಡುತ್ತಲೇ ಇರುವುದರಿಂದ ಭಾರತ ಇಂದು ಜಗತ್ತಿನ ಎಲ್ಲಾ ರಾಷ್ಟ್ರಗಳ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿದೆ. ಭಾರತದ ಜೊತೆ ಎಲ್ಲಾ ಬೆಳವಣಿಗೆಗಳಿಗೂ ಪಾಲುದಾರರಾಗಲು ಇಂದು ಜಗತ್ತೇ ಭಾರತದತ್ತ ಕೈ ಚಾಚಿದೆ!! ನರೇಂದ್ರ ಮೋದಿಯವರು ದಿಟ್ಟ ಕ್ರಮಗಳನ್ನು ಇಂದು ಕೆಲವೊಂದು ರಾಷ್ಟ್ರಗಳು ಅನುಸರಿಸುತ್ತಿರುವುದು ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರವೂ ಹೌದು…!

ಭಾರತದ ಪಾಲಿಗೆ ಸ್ವಾತಂತ್ರ್ಯ ದಿನ ಯಾವ ರೀತಿಯಲ್ಲಿ ಮಹತ್ವವಾದ ದಿನವೋ ಅದೇ ರೀತಿ ಗಣರಾಜ್ಯೋತ್ಸವ ದಿನವೂ ಬಹಳ ಪ್ರಮುಖವಾಗಿದೆ. ಪ್ರತೀ ವರ್ಷವೂ ಜನವರಿ ೨೬ರಂದು ನಡೆಯುವ ಗಣರಾಜ್ಯೋತ್ಸವ ಬಹಳ ವಿಜ್ರಂಬಣೆಯಿಂದ ನಡೆಯುತ್ತದೆ. ಆದರೆ ಈ ಬಾರಿಯ ಗಣರಾಜ್ಯೋತ್ಸವ ಬಹಳ ವಿಶೇಷವಾಗಿತ್ತು.

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಆಸಿಯಾನ ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು.
ಆಸಿಯಾನ್ ರಾಷ್ಟ್ರಗಳಾದ ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಮ್ಯಾನ್ಮಾರ್, ಕೊಲಂಬಿಯಾ, ಲಾವೋಸ್ ಮತ್ತು ಬ್ರುನೈ ರಾಷ್ಟ್ರಗಳ ಮುಖಂಡರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾರತದ ಪಾಲಿಗೆ ಬಹಳ ವಿಶೇಷವಾಗಿತ್ತು…!

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾರತೀಯ ಸೇನೆಯ ಬಿ ಎಸ್ ಎಫ್ ಪಡೆಯ ಮಹಿಳಾ ವಿಭಾಗವಾದ ‘ಸೀಮಾಭವಾನಿ’ಯು ತಮ್ಮ ಶಕ್ತಿ ಸಾಮರ್ಥ್ಯವನ್ನು ಪರೇಡ್ ನಲ್ಲಿ ನಡೆಸಿದ್ದು ಭಾರತದ ಪಾಲಿಗೆ ವಿಶೇಷವಾಗಿತ್ತು.
ಇದೇ ಮೊದಲ ಬಾರಿಗೆ ಮಹಿಳಾ ಸೈನಿಕರು ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿದ್ದು ಇದೂ ಭಾರತದ ಪಾಲಿಗೆ ಮಹತ್ವದ ದಿನವಾಗಿತ್ತು…!

ಆಸಿಯಾನ್ ರಾಷ್ಟ್ರಗಳ ಭಾರತ ಭೇಟಿಯ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಲೇಖನವನ್ನು ಬರೆದಿದ್ದಾರೆ. ನರೇಂದ್ರ ಮೋದಿಯವರು ಬರೆದ ಈ‌ ಅಗ್ರ ಲೇಖನ ದೇಶದ ೨೭ ಪತ್ರಿಕೆಗಳಲ್ಲಿ ಸುಮಾರು ೧೦ ಭಾಷೆಗಳಲ್ಲಿ ಪ್ರಕಟವಾಗಿದ್ದು ಅಪಾರ ಜನಪ್ರಿಯತೆ ಗಳಿಸಿದೆ…!

ನರೇಂದ್ರ ಮೋದಿಯವರು ಬರೆದ ಈ ಲೇಖನದಲ್ಲಿ “ಆಸಿಯಾನ್ ರಾಷ್ಟ್ರಗಳ ಮುಖಂಡರು ಭಾರತದ ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಿರುವುದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣ” ಎಂದು ತಮ್ಮ ಲೇಖನದಲ್ಲಿ ಬಣ್ಣಿಸಿದ್ದಾರೆ.

ಭಾರತ ಆಸಿಯಾನ್ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಆಸಿಯಾನ್ ನ ಎಲ್ಲಾ ರಾಷ್ಟ್ರಗಳು ಸ್ಪರ್ಧೆಗಳು ಹಾಗೂ ಹಕ್ಕುಗಳನ್ನು ಮೀರಿ ಒಂದು ಸೌಹಾರ್ದಯುತವಾದ ಸ್ನೇಹ ಗಳಿಸಿವೆ. ಭಾರತ ಅದನ್ನು ಎಂದಿಗೂ ಕಾಪಾಡಿಕೊಳ್ಳುತ್ತದೆ ಎಂದು ನರೇಂದ್ರ ಮೋದಿ ತಮ್ಮ ಲೇಖನದಲ್ಲಿ ಬರೆದಿದ್ದಾರೆ…!

 

ಬರೀ ಸ್ನೇಹವೊಂದೇ ಅಲ್ಲ , ಆಸಿಯಾನ್ ನ ಎಲ್ಲಾ ರಾಷ್ಟ್ರಗಳ ಗುರಿಯೂ ಒಂದೇ ಆಗಿದೆ.
ನಾವೆಲ್ಲರೂ ರಾಷ್ಟ್ರಗಳ ಬದ್ಧತೆ ಹಾಗೂ ಸಮಗ್ರತೆಯ ಆಧಾರದ ಮೇಲೆ ದೇಶ ಕಟ್ಟುವ ಗುರಿ ಹೊಂದಿದ್ದೇವೆ.
ಯಾವುದೇ ರಾಷ್ಟ್ರಗಳ ಕೇವಲ ಗಾತ್ರ , ಜನಸಂಖ್ಯೆಯನ್ನು ಅಳೆಯದೆ ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವವನ್ನು ಕಾಪಾಡುವುದೇ ನಮ್ಮೆಲ್ಲರ ಆಶಯವಾಗಿದೆ ಎಂದು “ಶೇರ್ಡ್ ವ್ಯಾಲ್ಯುವ್ಸ್ , ಕಾಮನ್ ಡೆಸ್ಟಿನಿ” ಎಂಬ ತಲೆಬರಹದಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಲ್ಲೇಖಿಸಿದ್ದಾರೆ…!

ಇವೆಲ್ಲದಕ್ಕಿಂತಲೂ ಅಚ್ಚರಿಯ ಸಂಗತಿ ಏನೆಂದರೆ , ಆಸಿಯಾನ್ ರಾಷ್ಟ್ರಗಳೆಲ್ಲವೂ ಒಗ್ಗೂಡಿ ವಿಶ್ವದ ಪ್ರಮುಖ ವ್ಯಾಪಾರ ನಡೆಸುವ ರಾಷ್ಟ್ರಗಳ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ…! ವಿಶೇಷವೆಂದರೆ ಭಾರತವೊಂದೇ ಸೇರಿದರೂ 7ನೇ ಸ್ಥಾನ ಪಡೆಯುತ್ತದೆ…! ವಿಶ್ವದಲ್ಲೇ ಭಾರತ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ ಎಂದು ಪ್ರಧಾನಿ ಮೋದಿಯವರು ಹೊಗಳಿದ್ದಾರೆ.

ನರೇಂದ್ರ ಮೋದಿಯವರು ತಮ್ಮ ಲೇಖನದಲ್ಲಿ ದಕ್ಷಿಣ ಏಷ್ಯಾ ಮತ್ತು ಅಂತರರಾಷ್ಟ್ರೀಯ ಸಂಬಂಧ, ವ್ಯಾಪಾರ ಸೇರಿ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ…!

ನರೇಂದ್ರ ಮೋದಿಯವರು ಭಾರತದ ಪ್ರಧಾನಿ ಆಗುತ್ತಲೇ ದೇಶದಲ್ಲಿ ಮಾತ್ರವಲ್ಲದೇ ಇಡೀ ಜಗತ್ತಿನಲ್ಲೇ ಹೆಗ್ಗಳಿಕೆ ಗಳಿಸಿಕೊಳ್ಳುವ ಮೂಲಕ ಜಗತ್ತಿನ ಬಲಿಷ್ಠ ನಾಯಕರ ಸಾಲಿನಲ್ಲಿ ಮೋದಿ ಅಗ್ರಸ್ಥಾನಕ್ಕೇರುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ…!

  • ಅರ್ಜುನ್
Tags

Related Articles

Close