ಪ್ರಚಲಿತ

ಚಾಮುಂಡೇಶ್ವರಿ ಮೇಲೆ ಗೌರವವಿಲ್ಲ!ತಾಯಿ ಭುವನೇಶ್ವರಿಗೆ ಮರ್ಯಾದೆ ಇಲ್ಲ! ಕರ್ನಾಟಕ ಸರಕಾರದಿಂದ ಕನ್ನಡ ನಾಡಿಗೇ ಅವಮಾನ!

ಹಣತೆಯೊಂದು ತಾನೇ ಎಂಬ ಅಹಂಕಾರಕ್ಕೆ ಒಳಗಾಯಿತಂತೆ! ಕತ್ತಲನ್ನು ದೂರವಾಗಿಸಿ ಬೆಳಕು ನೀಡಬೇಕಿದ್ದ ಹಣತೆಯೊಂದು ದೇವರ ಮೊಗ ಬೆಳಗುತ್ತಿರುವುದೇ ನನ್ನಿಂದ ಎನ್ನುವಾಗಲೇ ಜೋರಾಗಿ ಗಾಳಿ ಬೀಸಿದಾಗ, ಇನ್ನಷ್ಟು ಶಕ್ತಿವಂತನಾದೆ ಎಂದುಕೊಂಡ ಹಣತೆ ತನ್ನ ಸುತ್ತಲನ್ನು ಸುಡತೊಡಗಿದಂತೆ, ‘ತನ್ನಿಂದಲೇ ಬೆಳಕು’ ಎಂದು ಉಮೇದಿಗೆ ಒಳಗಾಗುವ ಹೊತ್ತಿಗೆ ಸೂರ್ಯಕಿರಣವೊಂದು ತಾಕಿತಂತೆ! ಅದನ್ನೂ ಸುಡಬೇಕೆಂದು ಬಯಸಿದ ಹಣತೆ ಇದ್ದ ಶಕ್ತಿ ಬಳಸಿ ಒಮ್ಮೆ ಜೋರಾಗಿ ಉರಿಯುತ್ತಲೇ ಆರಿಹೋಯಿತಂತೆ! ಪಾಪ! ಅಂತೆ ಕಂತೆಗಳು ನಿಜವಲ್ಲ ಎಂಬುದು ಒಮ್ಮೊಮ್ಮೆ ಸಾಬೀತಾಗುತ್ತವೆ! ಅದಕ್ಕೆ ಸರಿಯಾಗಿ, ಆರುವ ದೀಪ ಜೋರಾಗಿ ಉರಿಯುತ್ತದೊಮ್ಮೆ ಎನ್ನುವ ಗಾದೆಗೆ ಸಾಕ್ಷ್ಯವಹಿಸುತ್ತಲಿದೆ ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ!

ತನ್ನ ದಾಹಕ್ಕೆ ಭಾಷೆಯನ್ನೂ ಬಿಡಲಿಲ್ಲ! ಧರ್ಮವನೂ ಬಿಡಲಿಲ್ಲ!

ನೆನಪಿದೆಯೋ ಇಲ್ಲವೋ! ಇದೇ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುಂಚೆ, ‘ಕನ್ನಡ ತಾಯಿಯ ಮೇಲಾಣೆ! ಕನ್ನಡ ನಾಡಿನ ಅಭ್ಯುದಯಕ್ಕಾಗಿ ತಲೆ ಕೊಟ್ಟಾದರೂ ಸರಿಯೇ! ಶ್ರಮಿಸುತ್ತೇನೆ!” ಎಂದು ಹೋದ ಹೋದಲ್ಲೆಲ್ಲ ಒದರಿದ್ದನ್ನೇ ಜನ ನಂಬಿ, ಸಾಕ್ಷಾತ್ ಕೃಷ್ಣ ದೇವರಾಯನೇ ಧರೆಗಿಳಿದ ಹಾಗೆ ಸಿದ್ಧರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬ ಉದ್ದೇಶಕ್ಕೆ ಕಾಂಗ್ರೆಸ್ ಎನ್ನುವ ನೈತಿಕತೆ ಇಲ್ಲದ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ ಮುಹೂರ್ತಕ್ಕೆ ಸರಿಯಾಗಿಯೇ ಕರ್ನಾಟಕದ ಅಧಃಪತನಕ್ಕೆ ಮುಹೂರ್ತವಿಟ್ಟಂತಾಗಿತ್ತು ಬಿಡಿ! ತದನಂತರ, ಒದರಿಬಿಟ್ಟಿದ್ದೇನೆ ಎಂಬ ಪಶ್ಚಾತ್ತಾಪಕ್ಕೆ ಬಲಿಬಿದ್ದು ಒಂದೋ ಎರಡೋ ಬಾರಿ ಕನ್ನಡ ಭಾಷೆಗೆ ಸಂಬಂಧಿಸಿ ಸಿದ್ಧರಾಮಯ್ಯನ ಸರಕಾರ ಊಳಿಟ್ಟಿತ್ತಷ್ಟೇ! ಆದರೆ, ಪ್ರತೀ ಬಾರಿಯೂ ತುಷ್ಟೀಕರಣದಲ್ಲಿಯೇ ನಿರತವಾದ ಕರ್ನಾಟಕ ರಾಜ್ಯ ಸರಕಾರ ಮತಕ್ಕೋಸ್ಕರ ನಾಡನ್ನೇ ಅಡವಿಟ್ಟಿದ್ದು ಕರ್ನಾಟಕದ ದುರಂತವಲ್ಲದೇ ಮತ್ತೇನು?!

ನಾಡಹಬ್ಬ ಮುಖ್ಯವಾಗಲೇ ಇಲ್ಲ!

ಕರ್ನಾಟಕದ ನಾಡಹಬ್ಬ ‘ದಸರಾ’ ವನ್ನು ಪ್ರತಿ ವರ್ಷವೂ ಅದೆಷ್ಟು ವೈಭವಯುತವಾಗಿ ಆಚರಿಸಲಾಗುತ್ತದೆಯೆಂಬುದು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರಲೇಬೇಕು! ಉಹೂಂ! ಕನ್ನಡಿಗ ಎಂದು ಅಧಿಕಾರದ ಗದ್ದುಗೆ ಏರಿದ ಸಿದ್ಧರಾಮಯ್ಯನ ಸರಕಾರ ಕಳೆದ ದಸರಾ ಉತ್ಸವದಲ್ಲಿ ತುಷ್ಟೀಕರಣದ ನೆಪದಲ್ಲಿ ಇಡೀ ಕರ್ನಾಟಕಕ್ಕೇ ಸದ್ದಿಲ್ಲದೇ ಅವಮಾನ ಮಾಡಿತು!

ಇವತ್ತಿಗೂ ಮೈಸೂರಿನ ಜನರಲ್ಲಿ ಟಿಪ್ಪುವಿನ ಬಗ್ಗೆ ತೀರಲಾರದ ದ್ವೇಷವಿದೆ! ಕೊಡವರು ಮನೆಯ ನಾಯಿಗೆ ಟಿಪ್ಪು ಮಾಡಿದ ಮಾರಣಹೋಮಕ್ಕೆ ಪ್ರತಿಯಾಗಿ ಹೆಸರಿಟ್ಟು ಕರೆಯುತ್ತಾರೆ! ಕನ್ನಡ ನಾಡಿನ ವಿಶ್ವವಿಖ್ಯಾತ ನಳಂದಾ ವಿಶ್ವವಿದ್ಯಾನಿಲಯವನ್ನು ಬೆಂಕಿಗಾಹುತಿ ಕೊಟ್ಟ ಟಿಪ್ಪು ಜಯಂತಿಯನ್ನು ಆಚರಿಸಲೇಬೇಕೆಂದು ಪಣ ತೊಟ್ಟ ಇದೇ ತುಘಲಕ್ ಸರಕಾರ ಟಿಪ್ಪು ಹುಟ್ಟಿದ ದಿನದ ಹತ್ತು ದಿನಗಳ ಮುಂಚೆಯೇ, ಎಂದರೆ ನವೆಂಬರ್ 10 ಕ್ಕೆ ಅದ್ದೂರಿಯಾಗಿ ಆಚರಿಸಿತು! ಕೇಳಿದರೆ ಆತನೊಬ್ಬ ದೇಶಕಂಡ ಮೊದಲ ಸ್ವತಂತ್ರ್ಯ ಹೋರಾಟಗಾರ ಎಂದ ಸಿದ್ದು ಸರಕಾರಕ್ಕೆ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದಾಗ ಈ ಟಿಪ್ಪು ಎಂಬುವವನೊಬ್ಬನ ಜನನವೇ ಆಗಿರಲಿಲ್ಲ ಎಂಬ ಸತ್ಯವೂ ಗೊತ್ತಾಗುತ್ತಿದ್ದ ಹಾಗೇ, “ಟಿಪ್ಪು ಕನ್ನಡವನ್ನು ರಕ್ಷಿಸಿದ್ದಾನೆ’ ಎಂದಾಕ್ಷಣ ತಾಯಿ ಭುವನೇಶ್ವರಿಯೇ ಅವಾಕ್ಕಾಗಿದ್ದಳು! ತನ್ನ ಆಡಳಿತಾವಧಿಯಲ್ಲಿ ಕನ್ನಡ ಭಾಷೆಯ ಬದಲು ಉರ್ದು ಭಾಷೆಯನ್ನೇ ಬಳಸಬೇಕೆಂದು ತಾಕೀತು ಮಾಡಿದ್ದ ಟಿಪ್ಪು ಕನ್ನಡವನ್ನು ರಕ್ಷಿಸಿದನೇ?!

ವಿಷಯ ಇಷ್ಟೇ! ನಾಡಹಬ್ಬಕ್ಕೆ ಪ್ರತಿಯಾಗಿ, ಮೊಘಲ ಸಾಮ್ರಾಜ್ಯಕ್ಕೆ ತಕ್ಕ ಹಾಗೇ ಆಡಳಿತ ನಡೆಸುತ್ತೇವೆಂದು ಕೈ ಬಿಸಿ ಮಾಡಿದೊಡನೆ ವಚನವಿತ್ತ ಈ ರಾಜ್ಯ ಸರಕಾರ ಹೇಗೆ ತಾನೇ ಕನ್ನಡನಾಡಿನ ಹಬ್ಬದ ವೈಭವವನ್ನು ನೋಡಿಕೊಂಡು ಸುಮ್ಮನೇ ಕುಳಿತೀತು?!

ಕನ್ನಡ ಭಾಷೆಯೊಂದನ್ನೇ ಅಲ್ಲ! ಕರ್ನಾಟಕ ತನ್ನ ಪರಂಪರೆ ಉಳಿಸಿಕೊಂಡಿದ್ದೇ ದಿವಾನ ಒಡೆಯರ್ ರಾಜ ಪರಂಪರೆಗಳಿಂದ! ಇದೇ ಟಿಪ್ಪು ದಿವಾನ್ ಪೂರ್ಣಯ್ಯನವರ ಮಗಳನ್ನೂ ಸಹ ಬಿಡದೇ ಬಲಾತ್ಕರಿಸಿದ್ದ ಎಂಬ ಉಲ್ಲೇಖವಿದೆ! ಅಂತದರಲ್ಲಿಯೂ ಸಹ ಟಿಪ್ಪು ಜಯಂತಿಯ ಮೂಲಕ ಕರ್ನಾಟಕದ ರಾಜ ಪರಂಪರೆಗೆ ಅವಮಾನ ಮಾಡಿದ್ದಲ್ಲದೇ, ಇನ್ನೂ ಮುಂದೆ ಹೋಗಿ, ದಿವಂಗತ ಮೈಸೂರು ರಾಜ ಒಡೆಯರ್ ರವರನ್ನು ಏಕವಚನದಲ್ಲಿ ಸಂಭೋಧಿಸಿದ್ದ ಇದೇ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೃಪಾಕಟಾಕ್ಷದಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂಬ ಹುದ್ದೆಗೆ ಪಾತ್ರವಾದ ಪ್ರೊ.ಚಂದ್ರಶೇಖರ್ ಪಾಟೀಲ್ ಎಂಹ ಚಂಚಾ! ಕ್ಷಮಿಸಿ! ಚಂಪಾ ಎಂಬ ತೋರಿಕೆಯ ನಾಸ್ತಿಕನೊಬ್ಬ ಮತ್ತೆ ತಾಯಿ ಭುವನೇಶ್ವರಿಗೆ ಅವಮಾನ ಮಾಡಿದ್ದು ತೀರಾ ಸಹಜವೇ ಬಿಡಿ!

ಮೊನ್ನೆ ಶುಕ್ರವಾರ ಸಾಹಿತ್ಯ ಸಮ್ಮೇಳನಾರ್ಥ ಮೆರವಣಿಗೆಯ ಮೊದಲು ತಾಯಿ ಭುವನೇಶ್ವರೀ ದೇವಿಗೆ ಪೂಜೆ ಸಲ್ಲಿಸಬೇಕೆಂದು ಸಂಘಟಕರು ನಿರ್ಧರಿಸಿದ್ದರು! ಸಮ್ಮೇಳನಾಧ್ಯಕ್ಷರಾದ ಚಂಪಾ ಭುವನೇಶ್ವರಿಯ ದರ್ಶನ ಪಡೆಯುವುದಕ್ಕೂ ನಿರಾಕರಿಸಿದ್ದಲ್ಲದೇ, ಮೈಸೂರು ಪೇಟ ತೊಡಲೂ ನಿರಾಕರಿಸಿದ್ದು ಯಾವ ಪುರುಷಾರ್ಥಕ್ಕೆ?! ‘ಬೇಡ ಬಿಡಿ! ಸರಿಯಾಗಲ್ಲ’ ಎಂದ ಚಂಪಾಗೆ ಬಹುಷಃ ಸಮ್ಮೇಳನದ ಅಧ್ಯಕ್ಷ ಸ್ಥಾನ ಸ್ವೀಕರಿಸುವಾಗ ಎಲ್ಲಾ ಸರಿಯಾಗಿಯೇ ಇತ್ತೇ?! ತೂಕ ಹಾಕಿದರೂ ಮೂರು ಕಾಸಿಗೆ ಹೋಗದನಾಸ್ತಿಕ ಸಾಹಿತಿಯನ್ನು ಅಧ್ಯಕ್ಷ ಸ್ಥಾನಕ್ಕೇರಿಸುವುದರ ಮೂಲಕ, ಕನ್ನಡ ತಾಯಿಗೂ ಅವಮಾನ ಬಗೆಯುತ್ತಿರುವ ಇಂತಹ ಸರಕಾರದಿಂದ ಬರೀ ಹಿಂದುತ್ವವೊಂದಲ್ಲ, ಕನ್ನಡ ಭಾಷೆಯೂ ಉಳಿಯುವುದು ಅನುಮಾನವೇ ! ಕನ್ನಡದ ಬದಲು ಉರ್ದು ಬಳಸಿ ಎಂದು ಅಧಿಕಾರದ ಮದದಲ್ಲಿ ಕನ್ನಡಿಗರಿಗೆ ಆಜ್ಞೆ ಕೊಡುವುದೊಂದು ಬಾಕಿ ಇದೆ ಬಿಡಿ!

ಪ್ರತೀ ವರ್ಷವೂ ಕೂಡ, ಕರ್ನಾಟಕಕ್ಕೆ ಒಂದಿಲ್ಲೊಂದರ ತರಹ ದ್ರೋಹ ಬಗೆಯುತ್ತಲೇ ಇರುವ ಸಿದ್ಧರಾಮಯ್ಯನವರ ಸರಕಾರದಲ್ಲಿ, ಜ್ವಲಂತ ಉದಾಹರಣೆಗಳನ್ನು ಕೊಡಬಲ್ಲೆವು! ಕಾವೇರಿ ವಿವಾದದಲ್ಲಿ, ಮಹದಾಯಿ ವಿಚಾರದಲ್ಲಿ, ದಸರಾ ವಿಚಾರದಲ್ಲಿ, ಶಾಲಾ ಮಕ್ಕಳ ಪಠ್ಯದ ವಿಚಾರದಲ್ಲಿ, ಸಾಹಿತ್ಯ ಸಮ್ಮೇಳನದಲ್ಲಿ,. ಅಬ್ಬಾ! ಕರ್ನಾಟಕದ ಮಣ್ಣು ಮಾರಿ ಕುರ್ಚಿ ಬಿಸಿ ಮಾಡಿಕೊಂಡ ರಾಜ್ಯ ಸರಕಾರದ ಆಡಳಿತಾವಧಿಯಲ್ಲಿ ಕನ್ನಡ ಭಾಷೆಯೆಂದರೆ, ಕನ್ನಡ ನಾಡೆಂದರೆ, ಕನ್ನಡ ತಾಯಿಯೆಂದರೆ ಇಷ್ಟು ತಿರಸ್ಕಾರವೇ?!

ಹಿಂದುತ್ವ ವಿರೋಧಿಯೆಂಬುದು ಬಿಡಿ! ಕನ್ನಡ ವಿರೋಧಿಯಾಯಿತೇ ಸಿದ್ದು ಸರಕಾರ?!

ಪ್ರತೀ ಸಲವೂ ಸಿದ್ದು ಸರಕಾರದ ನಡೆ ಹಿಂದುತ್ವ ವಿರೋಧಿಯಾಗಿದ್ದಂತೆನಿಸಿದರೂ ಸಹ, ಪ್ರಮುಖವಾಗಿದ್ದದ್ದೇ ಕನ್ನಡ ವಿರೋಧಿ ಮನಃಸ್ಥಿತಿ! ಇತ್ತೀಚೆಗಂತೂ ಹರ್ಯಾಣದ ಮುಖ್ಯಮಂತ್ರಿಗಳಿಗೆ ದೀಪಿಕಾ ಪಡುಕೋಣೆಯನ್ನು ರಕ್ಷಿಸಲು ಪತ್ರ ಬರೆದಿದ್ದ ಸಿದ್ಧರಾಮಯ್ಯರವರಿಗೆ ಇದ್ದಕ್ಕಿದ್ದಂತೆ ಹೆಣ್ಣುಮಕ್ಕಳ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ! ಇದೇ ದೀಪಿಕಾ, ‘ಕನ್ನಡ ಚಿತ್ರದಲ್ಲಿ ನಾ ನಟಿಸೇ ಇಲ್ಲ!’ ಎಂಬ ಅಹಂಕಾರದ ಹೇಳಿಕೆ ಕೊಟ್ಟಿದ್ದೇ ಸಿದ್ದು ಸರಕಾರಕ್ಕೆ ಪ್ಲಸ್ ಪಾಯಿಂಟ್ ಆಯಿತೋ ಹೇಗೆ?!

ಮೆಟ್ರೋ ಪ್ರಾಜೆಕ್ಟಿನಲ್ಲಿಯೂ ಸಹ ಕನ್ನಡವನ್ನು ಬದಿಗಿಟ್ಟಿತು ಇದೇ ರಾಜ್ಯ ಕಾಂಗ್ರೆಸ್ ಸರಕಾರ! ಅದೂ ಬಿಡಿ, ಕರ್ನಾಟಕದ ಅದೆಷ್ಟು ಜನ ಹುತಾತ್ಮ ಸೈನಿಕರಿಗೆ ಗೌರವಗಳನ್ನರ್ಪಿಸಿದೆ ಹೇಳಿ?! ಸೊನ್ನೆ! ಕರ್ನಾಟಕದ ಪ್ರಜೆಗಳೆಂದರೆ ಅಷ್ಟು ತಾತ್ಸಾರವಾಗಿಬಿಟ್ಟಿತಾ?!

ನವೆಂಬರ್ ಒಂದರಂದು ಇದೇ ಕಾಂಗ್ರೆಸ್ ನಾಯಕನೊಬ್ಬ ಕಸ ತುಂಬುವ ತೊಟ್ಟಿಯಲ್ಲಿ ಭುವನೇಶ್ವರಿಯನ್ನು ಮೆರವಣಿಗೆ ಮಾಡಿಸಿದ್ದನ್ನೂ ಪ್ರಶ್ನಿಸದ ರಾಜ್ಯ ಸರಕಾರ ಕನ್ನಡ ವಿರೋಧಿ ಎಂಬುದಕ್ಕೆ ಬೇರಿನ್ನಾವ ಪುರಾವೆ ಬೇಕು ಸ್ವಾಮಿ?!

ಬಹುಷಃ ಅಧಿಕಾರದಲ್ಲಿರುವುದೇ ಕೊನೇ ಬಾರಿ ಎಂಬುದು ಖಾತ್ರಿಯಾಗುತ್ತಿದ್ದ ಹಾಗೆ ಕರ್ನಾಟಕಕ್ಕೆ ಸಾಧ್ಯವಾದಷ್ಟು ಅವಮಾನಿಸಬೇಕೆಂದು ತೀರ್ಮಾನಿಸಿದೆಯೋ ಅಥವಾ ಹಣತೆಯಂತೆ ಅಹಂಕಾರದ ಆಟಕ್ಕಿಳಿದಿದೆಯೇ ?!

ತಾಯಿ ಭುವನೇಶ್ವರಿಯೇ ನ್ಯಾಯವೊದಗಿಸಬೇಕು!

– ತಪಸ್ವಿ

Tags

Related Articles

Close