ಅಂಕಣರಾಜ್ಯ

ಮಡಿಕೇರಿಯಲ್ಲಿ ಕಾಳಿ ವಿಗ್ರಹಕ್ಕಾಗಿ ಮುಸ್ಲಿಂ ಮಹಿಳೆಯಿಂದ ಹೋರಾಟ!!! ತ್ರಿಶೂಲ ಹಿಡಿದ ತಾಜ್!!

ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ಅದೆಷ್ಟೋ ದೇವಾಲಯಗಳು ನೆಲಸಮವಾದವೋ ಗೊತ್ತಿಲ್ಲ. ಆದರೆ ಮಸೀದಿಗಳು ಮಾತ್ರ ಆತನ ಆಳ್ವಿಕೆಯಲ್ಲಿ ರಾರಾಜಿಸಲು ಶುರುಮಾಡಿದ್ದವು. ಟಿಪ್ಪು ಸುಲ್ತಾನ್‍ನ ಆಳ್ವಿಕೆಯಲ್ಲಿ ನೆಲಸಮವಾದ ದೇವಾಲಯವೊಂದು ಇದೀಗ ಮತ್ತೆ ಪತ್ತೆಯಾಗಲಿದೆ!! ಕಾಳಿಮಾತೆ, ಕನಸಿನಲ್ಲಿ ಬಂದು ತಾನು ಈ ಜಾಗದಲ್ಲಿ ನೆಲೆಸಿರುವ ಬಗ್ಗೆ ಮಾಹಿತಿಯನ್ನು ನೀಡಿ, ದೇವಸ್ಥಾನ ಕಟ್ಟುವಂತೆ ಆಜ್ಞಾಪಿಸಿರುವ ಕಾರಣ, ದೇವಾಲಯ ಕಟ್ಟುವಂತೆ ಮುಂದಾಗಿದ್ದಾರೆ. ಆ ದೇವಾಲಯವನ್ನು ಕಟ್ಟಲು ಮುಂದಾಗಿರುವುದಾದರೂ ಯಾರು ಗೊತ್ತೇ? ಅದು ಒಬ್ಬ ಮುಸ್ಲಿಂ ಮಹಿಳೆಗೆ!!

ಹೌದು.. ಇದು ನಂಬಲೇಬೇಕಾದಂತಹ ಸತ್ಯ ಸಂಗತಿ. ಮುಸ್ಲಿಂ ಮಹಿಳೆ ಇದೀಗ ದೇವಸ್ಥಾನ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಪ್ರತಿಭಟನೆ ನಡೆಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ!!

ಹಾಗಾದರೆ ಟಿಪ್ಪು ಸುಲ್ತಾನ ಆಳ್ವಿಕೆಯಲ್ಲಿ ಧ್ವಂಸವಾದ ದೇವಾಸ್ಥಾನವಾದರೂ ಯಾವುದು? ಎಲ್ಲಿದೇ ಆ ದೇವಾಲಯ ಅಂತೀರಾ?… ಇದು ನಡೆದಿದ್ದು ಬೇರೆಲ್ಲೂ ಅಲ್ಲ ಕೊಡಗಿನ ಕುಶಾಲನಗರದಲ್ಲಿ!!

ಇದೀಗ ದೇವಸ್ಥಾನ ಕಟ್ಟುವಂತೆ ಮುಂದಾಗಿರುವ ಮುಸಲ್ಮಾನ ಮಹಿಳೆಯೇ ಬ್ರೀಲಿಯಂಟ್ ಬ್ಲೂಮ್ ಶಾಲೆಯ ಸಂಸ್ಥಾಪಕಿ ಮುಬೀನ್ ತಾಜ್ !!! ತನ್ನ ಶಾಲಾ
ಕೊಠಡಿಯ ತಳಭಾಗದಲ್ಲಿ ಮಹಾಕಾಳಿಯ ವಿಗ್ರಹವಿದ್ದು, ಅದನ್ನು ಹೊರತೆಗೆದು ದೇವಾಲಯ ನಿರ್ಮಿಸಲು ಪಣತೊಟ್ಟಿದ್ದಾರೆ ಅಂದರೆ ಇದರ ಹಿಂದೆ ಬಲವಾದ
ಕಾರಣವಂತೂ ಇದ್ದೇ ಇದೇ.

ಹೌದು…ಮುಬೀನ್ ತಾಜ್ ಅವರ ಒತ್ತಾಯ ಏನೆಂದರೆ ಅವರ ಶಾಲೆಯ ಕೊಠಡಿಯೊಂದರ ನೆಲದೊಳಗೆ ಪುರಾತನ ಕಾಲದ ಮಹಾಕಾಳಿಯ ವಿಗ್ರಹವಿದೆ ಅದನ್ನು ಹೊರ ತೆಗೆಯಲು ಅನುಮತಿ ನೀಡಿ, ಇದನ್ನು ಕಾಳಿಯೇ ತನ್ನ ಕನಸಲ್ಲಿ ಬಂದು ತಿಳಿಸಿದ್ದಾಳಂತೆ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಶಾಲಾ ಕೊಠಡಿಯ ತಳಭಾಗದಲ್ಲಿ ಮಹಾಕಾಳಿಯ ವಿಗ್ರಹವಿದ್ದು ಅದನ್ನು ಹೊರತೆಗೆದು ದೇವಸ್ಥಾನ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸುತ್ತಿದ್ದಾರಲ್ಲದೇ, ಮಹಾಕಾಳಿಯ ದೇವಾಸ್ಥಾನವನ್ನು ಕಟ್ಟಲು ಅನುಮತಿಕೊಡಿ ಎಂದು ಜಿಲ್ಲಾಡಳಿತದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆದರೆ ಈಕೆ, ಈಗಾಗಲೇ ಹಲವು ಬಾರಿ ಈ ಕುರಿತು ಮನವಿ ಸಲ್ಲಿಸಿದ್ದರೂ ಕೂಡ, ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ತಾನೇ ತ್ರಿಶೂಲ ಹಿಡಿದು
ಕುಶಾಲನಗರದ ಪಟ್ಟಣ ಪಂಚಾಯಿತಿ ಮುಂದೆ ಏಕಾಂಗಿಯಾಗಿ ಸಾಗಿ ಪ್ರತಿಭಟನೆ ನಡೆಸಿದ್ದಾರೆ.

ಸುಮಾರು 600 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಮಹಾಕಾಳಿಯ ದೇವಾಲಯವಿದ್ದು, ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ಹಿಂದೂ ದೇವಾಲಯಗಳನ್ನು
ದ್ವಂಸಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಅಂದು ಪೂಜೆ ಸಲ್ಲಿಸುತ್ತಿದ್ದ ಪುರೋಹಿತರೊಬ್ಬರು ಮಹಾಕಾಳಿಯ ವಿಗ್ರಹವನ್ನು ಭೂಮಿಯೊಳಗೆ ಅಡಗಿಸಿಟ್ಟಿದ್ದರು. ಅದು ಭೂಮಿಯೊಳಗೆ ಇದೆಯಂತೆ. ಅದರ ಮೇಲೆ ಶಾಲಾ ಕಟ್ಟಡ ಕಟ್ಟಲಾಗಿರುವುದರಿಂದ ಈಗ ಅದನ್ನು ಹೊರ ತೆಗೆಯುವಂತೆ ದೇವಿ ಕನಸಲ್ಲಿ ಬಂದು ಹೇಳಿದ್ದಾಳಂತೆ. ಹೀಗಾಗಿ ಮುಬೀನ್ ತಾಜ್ ಅವರು ಕಾಳಿ ವಿಗ್ರಹ ತೆಗೆಯಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತನ್ನ ಕನಸಿನಲ್ಲಿ ಬಂದಿರುವ ಕಾಳಿಮಾತೆ, ದೇವಲಾಯವನ್ನು ಕಟ್ಟುವಂತೆ ಹೇಳಿದ್ದಕ್ಕಾಗಿ ಬ್ರೀಲಿಯಂಟ್ ಬ್ಲೂಮ್ ಶಾಲೆಯ ಸಂಸ್ಥಾಪಕಿ ಮುಬೀನ್ ತಾಜ್ ಪ್ರತಿಭಟನೆಗೆ ಇಳಿದಿರುವಂತಹದ್ದು ನಿಜಕ್ಕೂ ಒಂದು ಅಚ್ಚರಿಯ ಸಂಗತಿ.

ಯಾಕಂದರೆ ಇದೀಗಾಗಲೇ ಹಿಂದೂ ಧರ್ಮದಲ್ಲಿ ಹುಟ್ಟಿ ಬೆಳೆದವರೇ ದೇವರಿಲ್ಲ ಎಂದು ಹೇಳುತ್ತಾ, ದೇವರ ಬಗ್ಗೆ ಅವಮಾನಗಳನ್ನು ಮಾಡುತ್ತಾ ತಿರುಗುತ್ತಿರುವಾಗ ಮುಸಲ್ಮಾನ ಮಹಿಳೆ ದೇವರಿದ್ದಾರೆ ಎಂದು ದೇವಸ್ಥಾನ ಕಟ್ಟಲು ಮುಂದಾಗಿರುವುದಂತೂ ನಿಜಕ್ಕೂ ಹೆಮ್ಮೆ ಎಂದೆನಿಸುತ್ತೆ!!

ಆದರೆ, ತ್ರಿಶೂಲ ಹಿಡಿದು ಕುಶಾಲನಗರದ ಪಟ್ಟಣ ಪಂಚಾಯಿತಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆಕ್ಕಿಳಿದ ಮುಬೀನ್ ತಾಜ್ ಅವರ ಬಗ್ಗೆ ಪಂಚಾಯಿತಿ ಯಾವರೀತಿ ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Madikeri Muslim – original Link

– ಅಲೋಖಾ

Tags

Related Articles

Close