ಅಂಕಣ

ಮೀನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವವರು ಹಿಮಾಲಯದಲ್ಲಿದ್ದ ಯೋಗಿ ಮೋದಿಗೆ ಸಂಪ್ರದಾಯವನ್ನು ಹೇಳಿಕೊಡಬೇಕೆ?

ಸಂಪ್ರದಾಯಿಕವಾಗಿ ಜೀವನ ಸಾಗಿಸುವವರಿಗೆ ಸಂಪ್ರದಾಯವನ್ನು ಹೇಳಿಕೊಡಬೇಕೇ?? ಸುಗಂಧವಾದ ಪುಷ್ಪ ಯಾವತ್ತಿದ್ದರೂ ಸುಗಂಧವಾಗಿಯೇ ಇರುತ್ತೆ, ಆದರೆ ಅದರ ಬಗ್ಗೆ ಟೀಕೆಗಳನ್ನು ಮಾತಾನಾಡಲು ನಮಗೆ ಎಳ್ಳಷ್ಟು ಅಧಿಕಾರವಿಲ್ಲ!! ಯಾಕೆಂದರೆ ಅದರ ಗುಣವೇ ಪರಿಮಳವನ್ನು ಬೀರುವಂತಹದ್ದು!! ಹಾಗಿರಬೇಕಾದರೆ ಜೀವನ ಪರ್ಯಂತ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಮಿಂದೆದ್ದ ಮಹಾನ್ ಯೋಗಿಗಳು ತಮ್ಮ ಸಂಸ್ಕಾರವನ್ನು ಧಿಕ್ಕರಿಸಿ ನಡೆಯಲೂ ಯಾವತ್ತಾದರೂ ಸಾಧ್ಯವಿದೆಯೇ??

ಹೌದು.. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಧರ್ಮಕ್ಷೇತ್ರ, ನ್ಯಾಯಕ್ಷೇತ್ರ ಎಂದು ಕರೆಸಿಕೊಂಡ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥನ ಕ್ಷೇತ್ರಕ್ಕೆ ಭೇಟಿ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರ!! ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ಧರ್ಮಸ್ಥಳ ಕ್ಷೇತ್ರವೂ ಮೋದಿ ಅಭಿಮಾನಿಗಳಿಂದ ಭವ್ಯವಾದ ಸ್ವಾಗತವೂ ನಡೆದಿತ್ತು!! ಇನ್ನೂ ಯೋಗಿಯಾಗಿರುವ ನರೇಂದ್ರ ಮೋದಿಯವರ ಬಗ್ಗೆ ಅಪಪ್ರಚಾರಗಳು ಸದ್ದು ಮಾಡುತ್ತಿದ್ದು, ಕಿಡಿಗೇಡಿಗಳು ಸಂಸ್ಕಾರವನ್ನೇ ಧಿಕ್ಕರಿಸಿ ನಡೆದಿದ್ದಾರೆ ಮೋದಿ ಎನ್ನುವಷ್ಟರ ಮಟ್ಟಿಗೆ ಸುದ್ದಿ ಬಿತ್ತರಿಸಿದ್ದಾರೆ!!

ಹಿಂದುಧರ್ಮದ ಬಗ್ಗೆ, ಅದರಲ್ಲಿರುವ ಆಚಾರ ವಿಚಾರಗಳ ಬಗ್ಗೆ ಆಳವಾಗಿ ತಿಳಿದಿರುವ ಪ್ರಧಾನಿ ನರೇಂದ್ರ ಮೋದಿಯವರು ಸಂಸ್ಕಾರವನ್ನು ಧಿಕ್ಕರಿಸಿ ನಡೆಯಲೂ
ಎಂದೂ ಸಾಧ್ಯವಿಲ್ಲ!! ಆದರೆ ಸಂಸ್ಕಾರವನ್ನು ಧಿಕ್ಕರಿಸಿದ್ದಾರೆ ಎನ್ನುವಷ್ಟು ಮಟ್ಟಿಗೆ ಕೆಲ ಬುದ್ದಿಜೀವಿಗಳು ಚಿತ್ರಿಸುತ್ತಿದ್ದಾರೆ!! ಹೌದು.. ಮೊನ್ನೆ ಮೊನ್ನೆಯಷ್ಟೇ ಸಿಎಂ
ಸಿದ್ದರಾಮಯ್ಯ ಅವರು ಮೀನೂಟ ತಿಂದಿದ್ದ ಸುದ್ದಿಗೆ ಟಾಂಗ್ ನೀಡೋದಿಕ್ಕೆಂದೇ ಮೋದಿ ಶೂ ಟ್ರಾಲ್ ವಿಚಾರ ಫೇಸ್ ಬುಕ್ ನಲ್ಲಿ ಪ್ರಚಾರವಾಯಿತಾ ಎನ್ನುವ ಸುದ್ದಿಯೂ ಈಗ ಎಲ್ಲರಲ್ಲೂ ಕಾಡಲಾರಂಭಿಸಿದೆ.

ಇನ್ನು ಮಹಾನ್ ಯೋಗಿಯಾದ ನರೇಂದ್ರ ಮೋದಿಯವರು ಹಿಂದು ಸಂಪ್ರದಾಯವನ್ನು ಧಿಕ್ಕರಿಸಿ ದೇವಸ್ಥಾನದೊಳಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗಲು
ಸಾಧ್ಯವೇ ನೀವೇ ಹೇಳಿ!! ಮೊನ್ನೆ ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಮೀನೂಟ ತಿಂದಿದ್ದ ಸುದ್ದಿಗೆ ಕೆಲ ಬುದ್ದಿಜೀವಿಗಳು ಮೋದಿಯ ಬಗ್ಗೆ ಅಪಪ್ರಚಾರ
ಮಾಡಲಾರಂಭಿಸಿದ್ದಾರೆಯೇ ಎನ್ನುವ ವಿಚಾರವು ಎಲ್ಲರಲ್ಲೂ ಕಾಡಲಾರಂಭಿಸಿದೆ!! ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ
ಸಂದರ್ಭದಲ್ಲಿ ಮೀನು ಊಟ ಸೇವಿಸಿದ ಬಳಿಕ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ಕುರಿತು ಸಿಎಂ ಪ್ರತಿಕ್ರಿಯಿಸಿ,
ದೇವರು ಮಾಂಸಾಹಾರ ತಿಂದು ಬರಬೇಡ ಅಂತ ಎಲ್ಲೂ ಹೇಳಿಲ್ಲ ಎಂದು ಬೇಡರ ಕಣ್ಣಪ್ಪನ ಉದಾಹರಣೆ ಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು!!

ಆದರೆ ಪ್ರಧಾನಿ ನರೇಂದ್ರ ಮೋದಿಯವರು ಬಾಲ್ಯದಿಂದಲೇ ಸಾಧುಸಂತರಿಂದ ಪ್ರಭಾವಿತರಾಗಿ, ತನ್ನ ಶಿಕ್ಷಣವನ್ನು ಮುಗಿಸಿದ ಬಳಿಕ ಸನ್ಯಾಸಿಯಾಗುವುದಕ್ಕಾಗಿ ಮನೆ ಬಿಟ್ಟು, ತಮ್ಮ ಉದ್ದೇಶ ಸಾಧನೆಗಾಗಿ ಪಶ್ಚಿಮ ಬಂಗಾಳದ ರಾಮಕೃಷ್ಣ ಆಶ್ರಮ ಸೇರಿದಂತೆ ಅನೇಕ ಪುಣ್ಯಸ್ಥಳಗಳಲ್ಲಿ ಇದ್ದು ಹಿಂದೂ ಧರ್ಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಹಿಮಾಲಯದಲ್ಲಿ ಅನೇಕ ತಿಂಗಳುಗಳವರೆಗೆ ಸಾಧು ಸಂತರ ಜತೆಗಿದ್ದು, ಎರಡು ವರ್ಷಗಳ ನಂತರ ಹಿಮಾಲಯದಿಂದ ಮರಳಿದ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ವ್ಯಕ್ತಿ!! ಹೀಗಿರಬೇಕಾದರೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಶೂ ಹಾಕಿಕೊಂಡು ಹೋಗಿದ್ದಾರೆ ಎನ್ನುವ ಅಪಪ್ರಚಾರ ಕೇಳಿಬರುತ್ತಿದ್ದು, ಹಿಂದೂ ಧರ್ಮವನ್ನು ಪಾಲಿಸುವ ಯೋಗಿ ನರೇಂದ್ರ ಮೋದಿ, ದೇವಸ್ಥಾನದೊಳಗಡೆ ಚಪ್ಪಲಿಯನ್ನು ಹಾಕಿಕೊಂಡು ಹೋಗಲು ಸಾಧ್ಯವೇ??

ಜೀವಮಾನವಿಡಿ ದೇವಸ್ಥಾನದ ಮುಖ ನೋಡದವರೂ ಮೀನುಮಾಂಸ ತಿಂದು ದೇವಸ್ಥಾನಕ್ಕೆ ಬರುವುದು ಸಹಜ!! ಆದರೆ ಆಧ್ಯಾತ್ಮಿಕದ ವಿಚಾರವಾಗಿ ಸಾಕಷ್ಟು ತಿಳಿದ ಮೋದಿ ಎಂಬ ಯೋಗಿಗೆ ಸಂಪ್ರದಾಯವನ್ನು ಹೇಳಿಕೊಡಬೇಕಾ?? ಧರ್ಮಸ್ಥಳದಲ್ಲಿ ಕಾರು ಇಳಿದ ಪ್ರಧಾನಿ ಮೋದಿ ನೇರವಾಗಿ ತಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮುಂದೆ ಆಗಮಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ಮೋದಿಗೆ ಶೂ ಬಿಚ್ಚಲು ವ್ಯವಸ್ಥೆ ಮಾಡಲಾಗಿತ್ತು. ನಡೆಯುತ್ತಾ ಎಡಗಡೆಗೆ ಬಂದ ಮೋದಿ ಅಲ್ಲೇ ಶೂ ಬಿಚ್ಚಿ ವೀರೇಂದ್ರ ಹೆಗ್ಗಡೆಯವರ ಜೊತೆ ದೇವಸ್ಥಾನದೊಳಗಡೆ ಹೋಗುತ್ತಾರೆ. ಆದರೆ ಕಾರಿಳಿಯುತ್ತಾ ಹೋಗುವಾಗ ಹಾಕಿದ್ದ ಶೂ ಫೆÇೀಟೋವನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆರಂಭವಾಗಿದ್ದು ಮಾತ್ರ ನಾಚಿಕೆಗೇಡಿನ ವಿಚಾರ!!

ಮೋದಿ ಭಾರತದ ಯಾವ ಪ್ರದೇಶಕ್ಕಾದರೂ ಭೇಟಿ ನೀಡಿದಾಗ ಅಲ್ಲಿರುವ ಅನೇಕ ದೇವಾಲಯಗಳನ್ನು ಭೇಟಿ ನೀಡುತ್ತಾರಲ್ಲದೇ, ವಿದೇಶದಲ್ಲಿರುವ ಸಾಕಷ್ಟು ಹಿಂದೂ ದೇವಾಲಯಗಳಿಗೂ ಕೂಡ ಭೇಟಿ ನೀಡುತ್ತಾರೆ!! ಹೀಗಿರಬೇಕಾದರೆ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಭೇಟಿ ಮಾಡಿದ್ದ ಇವರು ನಿರಾಹಾರಿಗಳಾಗಿ ಭೇಟಿ ನೀಡಿದ್ದು, ಇದರ ಜೊತೆಗೆ ದೇವಸ್ಥಾನದ ಆಚಾರ ವಿಚಾರಗಳ ಬಗ್ಗೆ ದೂರವಾಣಿ ಮೂಲಕ ತಿಳಿದುಕೊಂಡಿದ್ದರು. ಹಾಗಾಗಿ ದೆಹಲಿಯಿಂದ ಬರಬೇಕಾದರೆಯೇ ಪಂಚೆ ಮತ್ತು ಶಲ್ಯ ತೆಗೆದುಗೊಂಡು ಬಂದಿದ್ದರು ಪ್ರಧಾನಿ ಮೋದಿ!! ಇನ್ನೂ ದೇವಸ್ಥಾನದೊಳಗಡೆ ಮೋದಿ ಶೂ ಹಾಕಿಕೊಂಡು ಬಂದಿರಲು ಹೇಗೆ ಸಾಧ್ಯ!!?

“ಎಲ್ಲಾ ದಿನಗಳಲ್ಲಿ ದೇವಸ್ಥಾನದ ಸಿಬ್ಬಂದಿ, ಅರ್ಚಕರು ಮೋದಿ ಇಂದು ಶೂ ಬಿಚ್ಚಿದ್ದ ಜಾಗದಲ್ಲೇ ಚಪ್ಪಲಿ ಬಿಟ್ಟು ಹೋಗುತ್ತಾರೆ. ದೇವಸ್ಥಾನಕ್ಕೆ ಬರುವ ಸಾವಿರಾರು
ಪ್ರವಾಸಿಗರಿಗೆ ಚಪ್ಪಲಿ ಇಡಲೆಂದೇ ಪ್ರತ್ಯೇಕ ಸ್ಟ್ಯಾಂಡ್ ವ್ಯವಸ್ಥೆ ಮಾಡಿದ್ದೇವೆ. ಯಾರೋ ತಲೆ ಕೆಟ್ಟವರು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾರಿಗಾದರೂ ಈ ವಿಚಾರದಲ್ಲಿ ಸಂದೇಹಗಳಿದ್ದರೆ ಅವರು ಆ ಸ್ಥಳಕ್ಕೆ ಬಂದು ಪ್ರಶ್ನಿಸಲಿ” ಎಂದು ಧರ್ಮಸ್ಥಳ ದೇವಸ್ಥಾನದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್ ಹೇಳಿದ್ದಾರೆ. ಅಷ್ಟೇ ಅಲ್ಲದೇ, “ದೇವರ ಬಗ್ಗೆ ಇಷ್ಟು ನಂಬಿಕೆ ಇದ್ದವರು ಚಪ್ಪಲಿ ವಿಚಾರದಲ್ಲಿ ಚಿಂತಿಸುವುದಿಲ್ಲವೇ..? ಮೋದಿ ಶೂ ತೆಗೆದ ಜಾಗದಲ್ಲೇ ಶೂ ಬಿಚ್ಚಲು ಸ್ಥಳ ನಿಗದಿ ಮಾಡಲಾಗಿತ್ತು. ಪಕ್ಕದಲ್ಲೇ ಅವರಿಗೆ ಪೂರ್ಣಕುಂಭದ ಸ್ವಾಗತವನ್ನೂ ಮಾಡಲಾಗಿತ್ತು” ಎಂದು ಹೇಳಲಾಗಿದೆ!!

“ಕತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳ” ಎನ್ನುವ ಮಾತಿನಂತೆ ಹಿಂದೂ ಧರ್ಮದ ಬಗ್ಗೆ ಆಚಾರ ವಿಚಾರ ತಿಳಿಯದ ಅನಾಗರಿಕರು ದೇವಸ್ಥಾನದ ಪಾವಿತ್ರ್ಯವನ್ನು ಹಾಳು ಮಾಡುವಲ್ಲಿ ಮುಂದಾಗುವುದು ಸಹಜ. ಅಲ್ಲದೇ, ಹಿಂದೂಗಳ ಬಗ್ಗೆ ಹಿಂದೂ ಧರ್ಮದ ಬಗ್ಗೆ ಅರಿಯದ ಮೂರ್ಖಶಿಖಾಮಣಿಗಳು ಅಪಪ್ರಚಾರ ಮಾಡುವುದು ಕೂಡ ಅಷ್ಟೇ ಸಹಜ!! ಇನ್ನೂ ಆಧ್ಯಾತ್ಮಿಕ ಜೀವನದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಮೋದಿ ದೇವಾಸ್ಥಾನದೊಳಗಡೆ ಚಪ್ಪಲಿಯನ್ನು ಹಾಕಿ ಪ್ರವೇಶಿಸಲು ಸಾಧ್ಯವೇ??

ನೀವೇ ಹೇಳಿ!!

– ಅಲೋಖಾ

 

Tags

Related Articles

Close