ಪ್ರಚಲಿತ

ಶಾಕಿಂಗ್! ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡನ ಬರ್ಬರ ಹತ್ಯೆ .! ಮೈತ್ರಿ ಸರಕಾರದಲ್ಲೂ ಮುಂದುವರಿದ ಕೊಲೆ ಭಾಗ್ಯ.!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸಿಕೊಂಡೇ ಬಂದಿದ್ದರು.‌ ಬಹಿರಂಗವಾಗಿಯೇ ಹಿಂದೂಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಹೇಳಿಕೊಂಡ ನಂತರ ರಾಜ್ಯದಲ್ಲಿ ಹಿಂದೂಗಳ ರಕ್ತಪಾತ ಆರಂಭವಾಗಿತ್ತು. ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಅಂತವರನ್ನು ಟಾರ್ಗೆಟ್ ಮಾಡಿ ಹಲ್ಲೆ ಅಥವಾ ಕೊಲೆ ಮಾಡಲಾಗುತ್ತಿತ್ತು. ಇದೀಗ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಸೋತು ಮೂಲೆಗುಂಪಾಗಿದ್ದಾರೆ. ಆದರೆ ಅವರ ಆಡಳಿತ ಶೈಲಿ ಇನ್ನೂ ನಿಲ್ಲಲಿಲ್ಲ, ಯಾಕೆಂದರೆ ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೈತ್ರಿ ಸರಕಾರವಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಇನ್ನಾದರೂ ಹಿಂದೂಗಳು ನಿಟ್ಟುಸಿರು ಬಿಡಬಹುದು ಎಂದು ಅಂದುಕೊಂಡಿದ್ದರೆ ಅದು ನಮ್ಮ ತಪ್ಪು ಕಲ್ಪನೆ. ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಆಡಳಿತದಲ್ಲೂ ಹಿಂದೂ ವಿರೋಧಿ ನೀತಿ ಮುಂದುವರಿದಿದೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲಿನ ಅಟ್ಟಹಾಸ ಮತ್ತೆ ಶುರುವಾಗಿದೆ, ಮತ್ತೊಬ್ಬ ಕಾರ್ಯಕರ್ತನನ್ನು ದುಶ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ.!

ಬಿಜೆಪಿಯ ಮುಸ್ಲೀಂ ಮುಖಂಡನ ಕೊಲೆ..!

ಈವರೆಗೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿದ್ದ ದುಶ್ಕರ್ಮಿಗಳು ಇದೀಗ ಕೇವಲ ಬಿಜೆಪಿ ಮುಖಂಡ ಎಂಬ ಕಾರಣಕ್ಕಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಪ್ಪಳ್ಳಿ ಅನ್ವರ್ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.‌ ಕಾಂಗ್ರೆಸ್ ಆಡಳಿತದಲ್ಲಿ ಸಾಲು ಸಾಲು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿತ್ತು ,ಇದೀಗ ಮೈತ್ರಿ ಸರಕಾರದಲ್ಲೂ ಸಿದ್ದರಾಮಯ್ಯನವರ ಕೊಲೆ ಭಾಗ್ಯ ಮುಂದುವರಿದಿದ್ದು ಮತ್ತೊಮ್ಮೆ ರಕ್ತಪಾತ ಪ್ರಾರಂಭವಾಗಿದೆ. ಸಿಎಂ ಕುಮಾರಸ್ವಾಮಿ ಅವರು ನನ್ನ ಆಡಳಿತದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಕಾಪಾಡುತ್ತೇನೆ ಎಂದು ಹೇಳಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಿಂಗಳಾಗುವುದರೊಳಗೆ ಬಿಜೆಪಿಯ ಮುಖಂಡನ ಕೊಲೆಯಾಗಿದೆ. ಹಾಗಾದರೆ ರಾಜ್ಯದ ಆಡಳಿತ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.!

ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಉಪ್ಪಳ್ಳಿ ಅನ್ವರ್ ಅವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಹಂತಕರ ಗ್ಯಾಂಗ್ , ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ವರು ಯುವಕರು ಏಕಾಏಕಿ ಮಾರಕಾಸ್ತ್ರಗಳಿಂದ ಅನ್ವರ್ ಮೇಲೆ ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ ಬಹುಮತ ಸಾಬೀತುಪಡಿಸಲಾಗದೆ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದ ಆಸೆಗೆ ಬಿದ್ದು ಮೈತ್ರಿ ಮಾಡಿಕೊಂಡರು. ‌ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿದ್ದರಾಮಯ್ಯನವರ ಕೊಲೆ ಭಾಗ್ಯ ಕಡಿಮೆಯಾಗಬಹುದು ಎಂಬ ಒಂದು ಆಲೋಚನೆ ರಾಜ್ಯದ ಜನರಲ್ಲಿತ್ತು.

ಆದರೆ ಅದು ಅಕ್ಷರಶಃ ಸುಳ್ಳಾಗಿದೆ. ಯಾಕೆಂದರೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ರಾಜ್ಯವನ್ನು ಮತ್ತೆ ನರಕದ ಕೂಪವನ್ನಾಗಿ ಸೃಷ್ಟಿಸುತ್ತಿದ್ದಾರೆ.‌ ಆದ್ದರಿಂದಲೇ ಬಿಜೆಪಿ ಕಾರ್ಯಕರ್ತರ ಮತ್ತು ಮುಖಂಡರ ಮೇಲೆ ದಾಳಿ ನಡೆಸಲಾಗುತ್ತಿದೆ.‌ ಇದೇ ರೀತಿ ಮುಂದುವರಿದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂಬುದು ಸ್ಪಷ್ಟ..!

–ಅರ್ಜುನ್

Tags

Related Articles

Close