ಪ್ರಚಲಿತ

ಬ್ರೇಕಿಂಗ್: ಬಾದಾಮಿಯಲ್ಲಿ ಸಿಎಂ ಗೆ ಸೋಲು ಖಚಿತ.! ಬಿಜೆಪಿಯಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರು ಗೊತ್ತಾ.?!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಹೇಗಾದರೂ ಮಾಡಿ ಮಣಿಸಲು ತಯಾರಿ ನಡೆಸಿರುವ ಬಿಜೆಪಿ , ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ನೆಲಕಚ್ಚುವಂತೆ ಮಾಡಲು ತಂತ್ರ ರೂಪಿಸಿದೆ. ಯಾಕೆಂದರೆ ಸಿದ್ದರಾಮಯ್ಯನವರು ತಾನು ರಾಜ್ಯದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯನವರ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡಾ ತಲೆ ಅಲ್ಲಾಡಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತ ಬಿಜೆಪಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರು ಅವರನ್ನು ಸೋಲಿಸದೇ ಬಿಡುವುದಿಲ್ಲ ಎಂದು ಹಠಕ್ಕೆ ಬಿದ್ದಿದೆ.

ಇತ್ತೀಚೆಗೆ ಸಿದ್ದರಾಮಯ್ಯನವರು ಸ್ಪರ್ಧಿಸುವ ಬಾದಾಮಿಯಿಂದ ಬಿಜೆಪಿ ಶ್ರೀ ರಾಮುಲು ಅವರನ್ನು ಕಣಕ್ಕಿಳಿಸುವ ತಯಾರಿ ನಡೆಸಿತ್ತು. ಇದಕ್ಕೆ ಶ್ರೀ ರಾಮುಲು ಕೂಡಾ ಸಮ್ಮತಿ ಸೂಚಿಸಿದ್ದರು. ಆದರೆ ಏನೋ ಕಾರಣದಿಂದ ಈ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ. ಆದರೆ ಸಿದ್ದರಾಮಯ್ಯನವರನ್ನು ಸೋಲಿಸುವುದು ಮಾತ್ರ ಖಚಿತ ಎಂದಿರುವ ಬಿಜೆಪಿ , ಸಿದ್ದರಾಮಯ್ಯನವರ ವಿರುದ್ಧ ಬಾದಾಮಿಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ.!

Image result for siddaramaiah

ಬಾದಾಮಿಯಿಂದ ಕಣಕ್ಕೆ ಲಿಂಗಾಯತ ಮುಖಂಡ..!

ಸಿದ್ದರಾಮಯ್ಯನವರು ತಮ್ಮ ರಾಜಕೀಯ ಆಟಕ್ಕಾಗಿ ಲಿಂಗಾಯತ ಮತ್ತು ವೀರಶೈವ ಧರ್ಮವನ್ನು ವಿಭಜಿಸಿ ಲಾಭ ಗಳಿಸಲು ಪ್ರಯತ್ನಿಸಿತ್ತು. ಆದರೆ ಇದಕ್ಕೆ ರಾಜ್ಯಾದ್ಯಂತ ವಿರೋಧವೂ ವ್ಯಕ್ತವಾಯಿತು. ಲಿಂಗಾಯತರನ್ನು ಕಾಂಗ್ರೆಸ್ ಕೇವಲ ರಾಜಕೀಯ ದಾಳಕ್ಕೆ ಬಳಸಿಕೊಂಡಿದೆ ಎಂಬುದು ಸ್ಪಷ್ಟ. ಯಾಕೆಂದರೆ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಎಲ್ಲೂ ಲಿಂಗಾಯತರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಿಲ್ಲ. ಆದರೆ ಇದೀಗ ಬಿಜೆಪಿ ಸ್ವತಃ ಸಿದ್ದರಾಮಯ್ಯನವರ ವಿರುದ್ಧವೇ ಬಾದಾಮಿಯಲ್ಲಿ ಲಿಂಗಾಯತ ಸಮುದಾಯದ ಮುಖಂಡ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಯಾಕೆಂದರೆ ಬಾದಾಮಿಯಲ್ಲಿ ಅತೀ ಹೆಚ್ಚು ಇರುವ ಸಮುದಾಯ ಲಿಂಗಾಯತ. ಆದರೂ ಕಾಂಗ್ರೆಸ್ ಈ ಕ್ಷೇತ್ರದಿಂದ ಲಿಂಗಾಯತರಿಗೆ ಟಿಕೆಟ್ ನೀಡಿರಲಿಲ್ಲ. ಆದರೆ ಸಿದ್ದರಾಮಯ್ಯನವರನ್ನು ಮಣಿಸುವ ಸಲುವಾಗಿ ಬಿಜೆಪಿ ಈ ಕ್ಷೇತ್ರದಿಂದ ಲಿಂಗಾಯತ ಮುಖಂಡನನ್ನೇ ಆಯ್ಕೆ ಮಾಡಿರುವುದರಿಂದ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲ್ಲಲಿದೆ.

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ದರ್ಬಾರ್..!

ಬಾದಾಮಿಯಲ್ಲಿ ಕಳೆದ ಬಾರಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಒಟ್ಟು ೬ ರಲ್ಲಿ ೫ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಇದರಿಂದಾಗಿ ಬಿಜೆಪಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯೂ ಗೆಲುವಿಗೆ ಹತ್ತಿರವಾಗಿದೆ. ಒಂದೆಡೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯದ ಜನತೆ ತಿರುಗಿ ಬಿದ್ದಿದ್ದು, ಲಿಂಗಾಯತರೂ ಕೂಡಾ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ದರಿಂದ ಇವೆಲ್ಲವೂ ಬಿಜೆಪಿಗೆ ವರದಾನವಾಗಲಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಒಟ್ಟಾರೆಯಾಗಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಅವರನ್ನು ಸೋಲಿಸಿಯೇ ಸಿದ್ಧ ಎಂದು ಪಣತೊಟ್ಟಿರುವ ಬಿಜೆಪಿ , ಕಾಂಗ್ರೆಸ್ ನ ಬುಡಕ್ಕೆ ಬೆಂಕಿ ಇಡಲು ಸಜ್ಜಾಗಿದೆ. ಯಾಕೆಂದರೆ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿಯಲ್ಲಿ ಗೆಲುವು ಸುಲಭವಲ್ಲ ಎಂಬುದು ಸ್ವತಃ ಪಕ್ಷದ ಸರ್ವೇಯಿಂದಲೇ ಗೊತ್ತಾಗಿದೆ. ಅದೇ ಕಾರಣಕ್ಕಾಗಿ ಬಾದಾಮಿಯನ್ನೂ ಆಯ್ಕೆ ಮಾಡಿಕೊಂಡಿದ್ದು, ಬಾದಾಮಿಯಲ್ಲೂ ಬಿಜೆಪಿ ಸಿದ್ದರಾಮಯ್ಯನವರ ವಿರುದ್ಧ ತೊಡೆತಟ್ಟಲಿದೆ.!

–ಅರ್ಜುನ್

 

Tags

Related Articles

Close