ಪ್ರಚಲಿತ

ರಂಜಾನ್ ಅಂತ ನೋಡದೇ ನಾಲ್ವರನ್ನು ನರಕಕ್ಕೆ ಕಳಿಸಿದ ಮೋದಿ ಸರ್ಕಾರ..! “4”ರ ಸಂವತ್ಸರದಂದೇ “4” ಬಲಿ..! 

ಇಂದು ಭಾರತೀಯ ಜನತಾ ಪಕ್ಷಕ್ಕೆ ಅತ್ಯಂತ ಹರುಷದ ದಿನ. ಮೊಟ್ಟ ಮೊದಲ ಬಾರಿಗೆ  ಕೇಂದ್ರದಲ್ಲಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಹಿಡಿದು ಯಾವುದೇ ಕಳಂಕವಿಲ್ಲದೆ 4 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ದಿನ ಇಂದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದು 4ನೇ ಸಂವತ್ಸರ. ಈ ಸಂತಸದಲ್ಲಿರುವಾಗಲೇ ಅತ್ತ ಭಾರತೀಯ ಸೈನ್ಯ 4 ಮಂದಿ ಉಗ್ರರನ್ನು ನರಕಕ್ಕೆ ಕಳಿಸುವ ಮೂಲಕ ಭಾರೀ ಅನಾಹುತವನ್ನೇ ತಪ್ಪಿಸಿದೆ. 

ರಂಜಾನ್ ಹಬ್ಬದ ವೇಳೆಯೇ ಈ ಕೃತ್ಯ..!

ರಂಜಾನ್ ಮುಸಲ್ಮಾನ ಭಾಂಧವರ ಪವಿತ್ರ ಹಬ್ಬವೆಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ 1 ಮಾಸ ಉಪವಾಸ ಕುಳಿತುಕೊಂಡು ದೇವರ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವ ಸಂದರ್ಭ. ಈ ಸಮಯದಲ್ಲಿ ಮುಸ್ಲಿಮರು ಯಾವುದೇ ಅಹಿಂಸಾತ್ಮ ಕೃತ್ಯಗಳಿಗೆ ಇಳಿಯಬಾರದೆಂದು ಸ್ವತಃ ಕುರಾನ್‍ನಲ್ಲೇ ಉಲ್ಲೇಖವಿದೆಯಂತೆ. ಹೀಗಾಗಿಯೇ ಹಿಂದಿನ ಕೆಲ ಸರ್ಕಾರಗಳು ರಂಜಾನ್ ವೇಳೆ ಮುಸ್ಲಿಂ ಸೈನಿಕರು ಶಸ್ತ್ರ ಹಿಡಿಯಬೇಡಿ ಎಂದು ಹೇಳಿದ್ದು ಇದೀಗ ಇತಿಹಾಸ.

Image result for modi

ರಂಜಾನ್ ಮಾಸವನ್ನು ಮುಸ್ಲಿಂ ರಾಷ್ಟ್ರ ಮಾತ್ರವಲ್ಲದೆ ಭಾರತದಲ್ಲೂ ಆಚರಿಸಲಾಗುತ್ತದೆ. ಹಿಂದೂ ಧರ್ಮದಂತೆ ಮುಸ್ಲಿಂ ಧರ್ಮಕ್ಕೂ ಸಮಾನ ಪ್ರಾತಿನಿಧ್ಯವನ್ನು ಇಲ್ಲಿ ನೀಡಲಾಗುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿ ಇಟ್ಟುಕೊಂಡಿರುವ ಪಾಕಿಸ್ಥಾನದ ಪಾಪಿ ಉಗ್ರರು ಮತ್ತೆ ಭಾರತದತ್ತ ಮುಖ ಮಾಡಲು ಹೊರಟಿದ್ದಾರೆ. 

ಪ್ರಧಾನಿ ಮೋದಿ ನೇರ್ತತ್ವದ ಕೇಂದ್ರ ಸರ್ಕಾರಕ್ಕೆ 4 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇಂದು ದೇಶದಾದ್ಯಂತ ಸಂಭ್ರಮ ಮನೆ ಮಾಡಿತ್ತು. ಹಲವಾರು ಕಡೆಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಇದನ್ನು ಭಂಗಗೊಳಿಸಿ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡಬೇಕು, ಈ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಭದ್ರತೆ ಇಲ್ಲ ಎನ್ನುವ ಸಂದೇಶವನ್ನು ಸಾರಬೇಕೆಂದು ಉಗ್ರರು ಇಂದು ಕೂಡಾ ಗಡಿ ನುಸುಳಲು ಯತ್ನಿಸಿದ್ದಾರೆ.

ಜಮ್ಮು ಕಾಶ್ಮೀರದ ತಂಗದಾರ್ ಸೆಕ್ಟರ್ ಬಳಿ ಅಕ್ರಮವಾಗಿ ಗಡಿ ನುಸುಳುತ್ತಿದ್ದ 4 ಮಂದಿ ಉಗ್ರರನ್ನು ಭಾರತೀಯ ಭದ್ರತಾ ಪಡೆ ನರಕಕ್ಕೆ ಕಳಿಸಿದ್ದಾರೆ. ಸದಾ ಕಾಲುಕೆರೆದುಕೊಂಡು ಜಗಳಕ್ಕೆ ನಿಲ್ಲುವ ಪಾಕಿಸ್ಥಾನಕ್ಕೆ ಇಂದು ಕೇಂದ್ರ ಸರ್ಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 4 ಜನ ಉಗ್ರರ ಹೆಣಗಳನ್ನು ಗಿಫ್ಟ್ ನೀಡಿದ್ದಾರೆ. ಈ ಮೂಲಕ ನಾವು ಇರೋವರೆಗೂ ಭಾರತವನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಭದ್ರತಾ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೋರ್ವ ಉಗ್ರನನ್ನೂ ಹೊಡೆದುರುಳಿಸಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಉಗ್ರರ ಬಳಿ ಇದ್ದಂತಹ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ.

ಗಡಿಯಲ್ಲಿ ಶಾಂತಿ ಕಾಪಾಡಬೇಕೆಂದರೆ ಉಗ್ರರ ಗಡಿ ನುಸುಳುವಿಕೆ ನಿಲ್ಲಿಸಿ ಎಂದು ಭಾರತೀಯ ಸೇನಾ ಮುಖ್ಯಸ್ಥ ಜೆನರಲ್ ಬಿಪಿನ್ ರಾವತ್ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಈ ಕೃತ್ಯ ನಡೆದಿದೆ. ಗಡಿಯಲ್ಲಿ ಶಾಂತಿ ನೆಲೆಸಲು ನಾವು ಇಚ್ಚಿಸುತ್ತೇವೆ. ಆದರೆ ನಿಮಗೆ ತಿಳಿದಿರುವಂತೆ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಸಿರುವುದನ್ನು ಮುಂದುವರೆಸಿದೆ. ಇದರಿಂದ ಅನೇಕರು ಜೀವ ಕಳೆದುಕೊಳ್ಳುವಂತಾಯಿತು. ಅಪಾರ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ. ದಾಳಿ ನಡೆಸಿದರೆ ನಾವು ಕೂಡಾ ಪ್ರತಿ ದಾಳಿ ನಡೆಸಬೇಕಾಗುತ್ತದೆ. ಪಾಕಿಸ್ಥಾನಕ್ಕೆ ಶಾಂತಿ ಬೇಕಾದರೆ ಮೊದಲು ತನ್ನ ಕುತಂತ್ರ ನೀತಿಗಳನ್ನು ನಿಲ್ಲಿಸಲಿ ಎಂದು ಭಾರತ ಹೇಳಿತ್ತು.

ಮಾತ್ರವಲ್ಲೆದೆ ರಂಜಾನ್ ಮಾಸದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ನಿಲ್ಲಿಸಿ ಎಂದು ಕೇಂದ್ರ ಹೇಳಿತ್ತು. ಆದರೆ ಭದ್ರತಾ ವಿಚರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಕೇಂದ್ರ ಸರ್ಕಾರ ರಂಜಾನ್ ಮಾಸದಂದೇ 4+1 ಉಗ್ರರನ್ನು ಪಾಪಿಗಳ ಲೋಕಕ್ಕೆ ಅಟ್ಟಿದೆ. ಇದು ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ನೀಡಿರುವ ಗಿಫ್ಟ್ ಆದರೆ ಶತ್ರು ರಾಷ್ಟ್ರಗಳಿಗೆ ಇದು ಎಚ್ಚರಿಕೆಯ ಘಂಟೆಯೂ ಆಗಿದೆ ಎನ್ನುವುದರಲ್ಲಿ ಯವುದೇ ಅನುಮಾನವಿಲ್ಲ.

-ಸುನಿಲ್ ಪಣಪಿಲ

Tags

Related Articles

Close