ಪ್ರಚಲಿತ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ನಿಂದಿಸಿದ ಭೋಜೇಗೌಡ ಹಾಗೂ ಆನಂದ್ ಅಸ್ನೋಟಿಕರ್ ಗೆ ಬಹಿರಂಗ ಪತ್ರ..! ನಿಮ್ಮ ಜಾತಕವನ್ನು ನೆನಪಿಟ್ಟುಕೊಂಡು ಮಾತನಾಡಿ…

3K Shares

ಕಾಂಗ್ರೆಸ್ ಹಾಗೂ ಜನತಾ ದಳದ ನಾಯಕರು ಅದೆಷ್ಟೇ ಬೊಬ್ಬಿರಿದರೂ ಅನಂತ್ ಕುಮಾರ್ ಹೆಗಡೆ ಎನ್ನುವ ಹಿಂದೂ ಹೃದಯ ಸಾಮ್ರಾಟನ ಗತ್ತನ್ನು ಮುಟ್ಟುಗೋಲು ಹಾಕಲು ಸಾಧ್ಯವಿಲ್ಲ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಯಾವುದೇ ರಾಜಕೀಯ ಭಯಕ್ಕೆ ಅಂಜದೆ, ಇದ್ದ ವಿಷಯವನ್ನು ಇದ್ದಂತೆಯೇ ನೇರವಾಗಿ ಹೇಳಿಬಿಡುವ ಇವರನ್ನು ಕಂಡರೆ ವಿರೋಧಿಗಳಿಗೆ ಸಂಕಟವೂ ಹಾಗೂ ಅಸ್ತ್ರವೂ ಆಗಿರುತ್ತದೆ. ಸ್ವಪಕ್ಷೀಯರೇ ವಿರೋಧಿಸಿದರೂ ತಾವು ಇಟ್ಟ ಹೆಜ್ಜೆಯಿಂದ ಒಂದಿಂಚೂ ಹಿಂದಿಡುವವರಲ್ಲ ಅನಂತ್ ಕುಮಾರ್ ಹೆಗಡೆ.

ಇಂತಹಾ ನಾಯಕನಿಗೆ ವಿರೋಧಿಗಳು ಬಹಳಷ್ಟು ಮಂದಿ ಇದ್ದಾರೆ. ಅದೆಷ್ಟೋ ಬಾರಿ ಹತ್ಯೆಯ ಸಂಚನ್ನೂ ಎದುರಿಸಿದ್ದಾರೆ. ಬಹಳಷ್ಟು ವಿಚಾರಗಳಲ್ಲಿ ಇವರನ್ನು ವಿರೋಧಿಸುವ ಕೆಲವರಿಗೆ ಮತ್ತೆ ತನ್ನ ಮಾತಿನ ಪ್ರಹಾರವನ್ನೂ ನಡೆಸಿದ್ದಾರೆ. ಇದೀಗ ಮತ್ತೆ ಕೆಲವರು ತಮ್ಮ ನಾಲಿಗೆಯನ್ನು ಶಾರ್ಪ್ ಮಾಡಿದ್ದಾರೆ. ಈ ಬಾರಿ ಇಬ್ಬರು ನಾಯಕರು ರಾಜಕೀಯ ಸ್ಥಿಮಿತವನ್ನು ಕಳೆದುಕೊಂಡು ಮಾತನಾಡಿದ್ದಾರೆ. ಅವರು ಜೆಡಿಎಸ್ ನಾಯಕರಾದ ಆನಂದ್ ಅಸ್ನೋಟಿಕರ್ ಹಾಗೂ ಭೋಜೇಗೌಡ. ಈ ಇಬ್ಬರು ನಾಯಕರಿಗೆ ನನ್ನದೊಂದು ಬಹಿರಂಗ ಪತ್ರ…

* ಭಾರತೀಯ ಜನತಾ ಪಕ್ಷದಲ್ಲಿ ತನ್ನ ವಿಕೃತ ರಾಜಕೀಯ ಬೇಳೆ ಬೇಯುವುದಿಲ್ಲ ಎಂಬ ವಿಷಯವನ್ನು ಸ್ಪಷ್ಟವಾಗಿ ಮನಗಂಡ ನೀವು (ಆನಂದ್ ಅಸ್ನೋಟಿಕರ್) ಅಧಿಕಾರದ ಆಸೆಗಾಗಿ ಜನತಾ ದಳವನ್ನು ಸೇರಿಕೊಂಡು ಇದೀಗ ಜನತಾ ದಳದ ನಾಯಕರನ್ನು ಓಲೈಸಲೋಸ್ಕರ ಭಾರತೀಯ ಜನತಾ ಪಕ್ಷದ ನಾಯಕರನ್ನು ತೆಗಳಲು ಆರಂಭಿಸಿದ್ದೀರಿ ಎಂಬುವುದು ವಿಶೇಷವಾಗಿ ಹೇಳಬೇಕೆಂದೇನಿಲ್ಲ. ಆದರೆ ನಿಮ್ಮ ನಾಲಿಗೆಯನ್ನು ಬಿಗಿದಿಟ್ಟುಕೊಂಡು ಮಾತನಾಡಿ ಎಂದು ಹೇಳಬಹುದಷ್ಟೆ…

* ರಾಜಕೀಯ ಶಿಷ್ಟಾಚಾರವನ್ನೂ ತಿಳಿಯದೆ, ಕೇಂದ್ರ ಸಚಿವರೆಂದೂ ಎಣಿಸದೆ ಅನಂತ್ ಕುಮಾರ್ ಹೆಗ್ಡೆಯವರನ್ನು ಮನಬಂದಂತೆ ಏಕವಚನದಲ್ಲಿ ನಿಂದಿಸಿದಿರಿ. ನಿಮ್ಮನ್ನೂ ಏಕವಚನದಲ್ಲಿ ನಿಂದಿಸಬಹುದು. ಆದರೆ ನೀವು ಬಿಜೆಪಿಯೊಂದಿಗೆ ಸಂಸ್ಕೃತಿಯನ್ನೂ ಬಿಟ್ಟು ಬಂದಿದ್ದೀರಿ ಎಂದು ನಾವು ಹಾಗೆನ್ನಲು ಸಾಧ್ಯವಿಲ್ಲ.

* ಅನಂತ್ ಕುಮಾರ್ ಹೆಗಡೆ ಹುಬ್ಬಳ್ಳಿಯಲ್ಲಿ ಯಾವ ಸಾಹಸ ಮಾಡಿ ಬಾವುಟವನ್ನು ಹಾರಿಸಿದ್ದಾನೆ ಎಂದು ವ್ಯಂಗ್ಯವಾಗಿ ಹೇಳಿದ್ದೀರಿ. ದೇಶಪ್ರೇಮವುಳ್ಳ ಪ್ರತಿಯೋರ್ವ ಕಾರ್ಯಕರ್ತನಿಗೂ ಗೊತ್ತು ಅನಂತ್ ಕುಮಾರ್ ಹೆಗಡೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಯಾವ ಸಾಧನೆಯನ್ನು ಮಾಡಿದ್ದಾರೆಂದು. ಸ್ವತಂತ್ರ ಭಾರತದಲ್ಲಿಯೂ ಕರ್ನಾಟಕದ ಹುಬ್ಬಳ್ಳಿಯ ಮೈದಾನವೊಂದರಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಲು ಇಸ್ಲಾಂ ಉಗ್ರರ ಅಡಚಣೆ ಇತ್ತು. ಆದರೆ ರಕ್ತದ ನಡುವಿನಲ್ಲಿ, ಪೊಲೀಸರ ಬೂಟಿನ ಏಟಿನ ನಡುವೆಯೂ ಅಂದು ಆ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಆ ಪ್ರದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಅನಂತ್ ಕುಮಾರ್ ಹೆಗಡೆ ಹಾಗೂ ಸಂಘಟನೆಯ ಕಾರ್ಯಕರ್ತರು. ಮೊದಲು ತಾನ್ಯಾವ ಸಾಧನೆಯನ್ನು ಮಾಡಿದ್ದೇನೆ ಎಂಬುವುದನ್ನು ತಿಳಿದು ಮಾತನಾಡಿ. ಪಕ್ಷ ಬಿಟ್ಟಿರೆಂಬ ಮಾತ್ರಕ್ಕೆ ದೇಶಪ್ರೇಮ ಹಾಗೂ ಸತ್ಯವನ್ನು ಬಿಟ್ಟು ಬಕೆಟ್ ಹಿಡಿಯಲು ಹೋಗಬೇಡಿ.

* ಮಿಸ್ಟರ್ ಭೋಜೇಗೌಡ… ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಅನಂತ್ ಕುಮಾರ್ ಹೆಗಡೆಯವರ ಬಗ್ಗೆ ತುಟಿ ಬಿಚ್ಚಲೂ ನೀವು ಅರ್ಹರಲ್ಲ.

* ಚುನಾವಣೆಯಲ್ಲಿ ಗೆಲ್ಲಲು ದೇಶದ ಭವಿಷ್ಯದ ನಾಯಕರನ್ನು ಹುಟ್ಟು ಹಾಕುವ ಶಿಕ್ಷಕ ವರ್ಗಕ್ಕೇ ಭ್ರಷ್ಟಾಚಾರದ ಮಸಿಯನ್ನು ಬಳಿದವರು ನೀವು. ನಿಮ್ಮಿಂದ ಅನಂತ್ ಕುಮಾರ್ ಹೆಗಡೆ ಕಲಿಯಬೇಕಾದ ಅಂಶಗಳು ಏನೂ ಇಲ್ಲ.

* ವೇದ, ಶಾಸ್ತ್ರ, ಮಂತ್ರ, ಉಪನಿಷತ್ತುಗಳನ್ನು ಎಲ್ಲಾ ತಿಳಿದುಕೊಂಡ ನಾಯಕ ಅನಂತ್ ಕುಮಾರ್ ಹೆಗಡೆ. ಭವ್ಯ ಭಾರತದ ಭವಿಷ್ಯಕ್ಕೆ ಏನು ಬೇಕು ಎಂಬುವುದನ್ನು ಯೋಚಿಸಿ ಮಾತನಾಡುವವರು ಅನಂತ್ ಕುಮಾರ್ ಹೆಗಡೆಯವರು. ವಿವಾವ ವಿವಾದ ಎಂದು ಎದೆಯೊಡೆದುಕೊಳ್ಳುತ್ತಿರುವ ನಿಮಗೆ ಅವರ ಮಾತಿನಲ್ಲಿ ದೇಶದ್ರೋಹದ ಒಂದೇ ಒಂದೇ ಅಂಶಗಳನ್ನು ಹುಡುಕಲು ಸಾಧ್ಯವಿಲ್ಲ. ಆದರೆ ನಿಮ್ಮ ನಾಲಾಯಕ್ ಪಕ್ಷದ ನಾಯಕರಿಂದ ಬೇಕಾದಷ್ಟು ದೇಶದ್ರೋಹದ ಪ್ರಕರಣಗಳನ್ನು ಬಹಿರಂಗಪಡಿಸಲು ಕಷ್ಟವಲ್ಲ.

* ಭೋಜೇಗೌಡರೇ… ನೀವು ಓಟಿಗಾಗಿ ಯಾವ ವಾಮಾಮಾರ್ಗ ಹಿಡಿದಿದ್ದೀರಿ ಎಂಬುವುದು ರಾಜ್ಯಕ್ಕೆ ಗೊತ್ತು. ಅನಂತ್ ಕುಮಾರ್ ಹೆಗಡೆ ನಿಮ್ಮ ಹಾಗೆ ಓಟಿಗಾಗಿ ೨೦೦೦ ರೂಪಾಯಿ ನೀಡಿಲ್ಲ, ಅನಂತ್ ಕುಮಾರ್ ಹೆಗಡೆ ಓಟಿಗಾಗಿ ನಿಮ್ಮ ಹಾಗೆ ಮತದಾರರಿಗೆ ಬ್ಯಾಗ್ ನೀಡಿ ಆಮಿಷವೊಡ್ಡಿಲ್ಲ..! ಅನಂತ್ ಕುಮಾರ್ ಹೆಗಡೆಯವರು ನಿಮ್ಮ ಹಾಗೆ ಸಿಕ್ಕ ಸಿಕ್ಕಲ್ಲಿ ಮತದಾರರಿಗೆ ಭರ್ಜರಿ ಬಾಡೂಟ ಹಾಗೂ ಮದ್ಯವನ್ನು ಕೊಟ್ಟಿಲ್ಲ. ಅನಂತ್ ಕುಮಾರ್ ಹೆಗಡೆಯವರು ನಿಮ್ಮ ಹಾಗೆ ಶಿಕ್ಷಕರನ್ನು ಅಧಿಕಾರದ ಚಪಲಕ್ಕಾಗಿ ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿಲ್ಲ. ಇಷ್ಟಾಗಿಯೂ ಅವರ ಮೇಲೆ ಪ್ರಹಾರ ಮಾಡುವ ನಿಮಗೆ ಅದ್ಯಾವ ನೈತಿಕತೆ ಇದೆ ಎಂದು ಭಾವಿಸುತ್ತೀರಿ?

* ಅನಂತ್ ಕುಮಾರ್ ಹೆಗಡೆಯವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಪ್ರಕರಣಗಳನ್ನು ತೆಗೆದು ಕೊಡಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ನಿಮ್ಮ ರಾಜಕೀಯ ಜೀವನದಲ್ಲಿ ಮಾಡಿರುವ ಅದೆಷ್ಟೋ ಭ್ರಷ್ಟಾಚಾರ ಪ್ರಕರಣಗಳನ್ನು ನಾವು ಸಾಕ್ಷಿ ಸಮೇತ ಹೇಳಬಲ್ಲೆವು.

* ಅನಂತ್ ಕುಮಾರ್ ಹೆಗಡೆಯವರ ಜೀವನದಲ್ಲಿ ಒಂದೇ ಒಂದು ಬಾರಿಯೂ ದೇಶದ್ರೋಹದ ಸಣ್ಣ ಇಂಚಿನಷ್ಟೂ ಪ್ರಕರಣ ತೋರಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ನಿಮ್ಮ ಹಾಗೂ ನಿಮ್ಮ ಪಕ್ಷದ ನಾಯಕರ ಅದೆಷ್ಟೋ ದೇಶದ್ರೋಹದ ಪ್ರಕರಣಗಳನ್ನು ನಾವು ಬಿತ್ತರಿಸಲು ಸಧೃಢರಾಗಿದ್ದೇವೆ.

* ಅನಂತ್ ಕುಮಾರ್ ಹೆಗಡೆಯವರ ರಾಜಕೀಯ ಜೀವನದಲ್ಲಿ ಅಧಿಕಾರವನ್ನು ಪಕ್ಷದವರಿಂದ ಕಾಡಿ ಬೇಡಿ ಪಡೆದ ಉದಾಹರಣೆಗಳು ಇಲ್ಲ. ಆದರೆ ರಾಜಕೀಯ ಹಾಗೂ ಅಧಿಕಾರಕ್ಕಾಗಿ ದೊಡ್ಡವರಿಗೆ ಬಕೆಟದ ಹಿಡಿದ ಪ್ರಕರಣಗಳು ಅದೆಷ್ಟೋ ನಮ್ಮ ಕಣ್ಣ ಮುಂದಿದೆ.

ಇದೀಗ ಸರ್ಕಾರ ತಮ್ಮದಿದೆಯೆಂದು ಹಾರಾಡುವ ನಿಮ್ಮಂತಹ ಕಪ್ಪು ಕುಳಗಳಿಗೆ ಉತ್ತರವನ್ನು ಅನಂತ್ ಕುಮಾರ್ ಹೆಗಡೆಯವರು ನೀಡಬೇಕೆಂದೇನಿಲ್ಲ. ಕರ್ನಾಟಕದ ಪ್ರತಿಯೋರ್ವ ಪ್ರಜೆಯೂ ನಿಮ್ಮ ಬೆದರಿಕೆಗೆ ತಕ್ಕ ಉತ್ತರವನ್ನು ನೀಡಲು ಸಮರ್ಥನಾಗಿದ್ದಾನೆ. ನೀವು ನಡೆಸುತ್ತಿರುವುದು ೬ ತಿಂಗಳ ಮೈತ್ರಿ ಸರ್ಕಾರ. ಅಹಂಕಾರ ಬಿಟ್ಟು ಕೆಲಸ ಮಾಡಿ. ಎಲ್ಲಿ ಹೇಗೆ ಏನು ಮಾತನಾಡಬೇಕೆಂಬುವುದು ಅನಂತ್ ಕುಮಾರ್ ಹೆಗಡೆಯವರಿಗೆ ಚೆನ್ನಾಗಿ ಗೊತ್ತು. ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದು ನಿಮ್ಮ ನಾಯಕರು ಕಿರುಚಾಡಿದರೆ ಸರಿ, ಅದನ್ನು ಅನಂತ್ ಕುಮಾರ್ ಹೆಗಡೆ ಹೇಳಿದರೆ ಅದು ವಿವಾದ ಎಂಬಂತೆ ಬೊಬ್ಬಿರಿಯುವ ನಿಮಗೆ (ಆನಂದ್ ಅಸ್ನೋಟಿಕರ್ ಹಾಗೂ ಭೋಜೇಗೌಡ) ನಿಮ್ಮ ಸರ್ಕಾರವನ್ನು ನೆಟ್ಟಗೆ ೫ ವರ್ಷ ಮುಂದುವರೆಸುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳಿ.
ನಮಗೆ ದೇಶವೇ ಮೊದಲು, ರಾಜಕೀಯ ಅಧಿಕಾರಕ್ಕಾಗಿ ಒಂದು ಕುಟುಂಬದ ಬೂಟು ನೆಕ್ಕುವ ಜಾಯಮಾನ ನಮ್ಮದಲ್ಲ.

ದೇಶಪ್ರೇಮಿ,

-ಸುನಿಲ್ ಪಣಪಿಲ

3K Shares
Tags

Related Articles

Close