ಪ್ರಚಲಿತ

ಭ್ರಷ್ಟ ಡಿಕೆಶಿಗೆ ಬೆಂಬಲ ಘೋಷಿಸಿದ ಒಕ್ಕಲಿಗರ ಸಂಘಕ್ಕೆ ಬಹಿರಂಗ ಪತ್ರ..! ಧರ್ಮ ಯಾವುದಯ್ಯಾ..?

ಮೊದಲೇ ಹೇಳುತ್ತೇನೆ. ನನ್ನನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಬೇಡಿ. ರಾಜಕೀಯದಿಂದ ಮಾರುದ್ದ ದೂರ ನಿಲ್ಲುವ ವ್ಯಕ್ತಿ ನಾನು. ಆದರೆ ಈ ಬಾರಿ ನನ್ನ ಜಾತಿಯ ವಿಚಾರದಲ್ಲಿ ಬಂದಂತಹ ಕೆಲವೊಂದು ತೊಡಕುಗಳನ್ನು ನಾನು ಹೇಳಲೇಬೇಕೆಂದೆನಿಸಿತು. ಮತ್ತೆ ರಾಜಕೀಯಕ್ಕೇ ನನ್ನ ಪೆನ್ನು ವಾಲಿದರೂ ಅದರಲ್ಲಿ ನನ್ನ ರಾಷ್ಟ್ರೀಯವಾದಿ ಆಕ್ರೋಶವಿರಬಹುದೇ ಹೊರತು ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಅನ್ನೋದನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ.

ಬೇಡಪ್ಪಾ ಈ ರಾಜಕೀಯ ಉಸಾಬರಿ ಎಂದು ತೆಪ್ಪಗೆ ನನ್ನ ಪಾಡಿಗೆ ಕುಂತಿದ್ದೆ. ದೂರದರ್ಶನದ ಮೂಲಕ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದೆ ಅಷ್ಟೆ. ಆದರೆ ನನ್ನ ಜಾತಿಯ (ಒಕ್ಕಲಿಗ) ಸಂಘಟನೆಯೊಂದು ನಡೆಸಿದ್ದ ಸುದ್ಧಿಗೋಷ್ಟಿ ಮತ್ತೆ ನನಗೆ ಪೆನ್ನು ಹಿಡಿಯುವಂತೆ ಮಾಡಿದೆ ನೋಡಿ.

ಭಾರತ ಈ ಹಿಂದೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕ್ರತಿಕವಾಗಿ ಸಹಿತ ಎಲ್ಲಾ ರಂಗದಲ್ಲೂ ಹಿನ್ನೆಡೆಯನ್ನು ಗಳಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ನಂತರ ಬಂದ ಸರಕಾರ ಅಂದರೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದು ಹೋಗಿದ್ದ ಅಷ್ಟೂ ಗೌರವವನ್ನೂ ಮರಳಿ ತರುವಲ್ಲಿ ಪ್ರಯತ್ನ ಪಟ್ಟು ಅದರಲ್ಲಿ ಯಶಸ್ವಿಯಾಗಿದ್ದೂ ಕಾಣುತ್ತಿದ್ದೇವೆ. ಏನೋ ಆ ಪುಣ್ಯಾತ್ಮ ಕೆಲಸ ಮಾಡುತ್ತಿದ್ದಾನೆ, ಸುಮ್ನೆ ನೋಡೋದ್ ಬಿಟ್ಟು ಕೆಲಸವಿಲ್ಲದವರೆಲ್ಲಾ ಅಡ್ಡಗಾಲು ಹಾಕುವುದನ್ನು ನೋಡಿ ನಗಬೇಕೋ ಅಳಬೇಕೋ ಎಂದು ಗೊತ್ತಾಗಲ್ಲ. 

ಮೋದಿಯವರು ದೇಶದ ಉದ್ಧಾರಕ್ಕಾಗಿ ದೇಶದಲ್ಲಿದ್ದ ಕಳ್ಳರನ್ನೆಲ್ಲಾ ಹಿಡಿದು ವಂಚನೆಯನ್ನು ಬಯಲುಗೊಳಿಸಿದ್ದರ  ಪರಿಣಾಮವಾಗಿ ಇಂದು ಭಾರತ ಚೀನಾವನ್ನು ಹಿಂದಿಕ್ಕಿದೆ. ಇದರಲ್ಲಿ ಮೋದಿ ಮೈಂಡ್ ಕೆಲಸ ಮಾಡಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ. ಅಂತೆಯೇ ನಮ್ಮ ಕರ್ನಾಟಕದ ಅನೇಕ ತೆರಿಗೆ ಕಳ್ಳರ ಮೇಲೆ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ಧೇಶನಾಲಯ, ಸಿಬಿಐ ಸಹಿತ ಕೇಂದ್ರದ ಇಲಾಖೆಗಳು ಕಣ್ಣಿಟ್ಟಿದ್ದು ಗೊತ್ತೇಇದೆ. ಅಂತೆಯೇ ಕರ್ನಾಟಕದ ಕೋಟ್ಯಾಧಿಪತಿ, ದಿನಕ್ಕೆ 25 ಲಕ್ಷ ದುಡಿಯುವ ಕಾಂಗ್ರೆಸ್‍ನ ಪ್ರಭಾವಿ ಸಚಿವ ಡಿಕೆ ಶಿವಕುಮಾರ್ ಅವರ ಮೇಲೂ ಐಟಿ, ಇಡಿ, ಸಿಬಿಐ ದಾಳಿ ನಡೆದಿದ್ದು ಇದೀಗ ಇತಿಹಾಸ. ಆದರೆ ಈ ದಾಳಿಯನ್ನು ಕಾಂಗ್ರೆಸ್ ಪಕ್ಷದವರು ಖಂಡಿಸಲಿ. ಯಾಕೆಂದರೆ ಅದು ವಿರೋಧ ಪಕ್ಷ ಹಾಗೂ ಮೋದಿಯವರನ್ನು ಕಾಲೆಳೆಯುವುದೇ ಅದರ ಕೆಲಸ. ಆದರೆ ಜವಬ್ಧಾರಿಯುತ ಸ್ಥಾನದಲ್ಲಿರುವ ಒಂದು ಜಾತಿ ಸಂಘಟನೆ ಡಿಕೆ ಶಿವಕುಮಾರ್ ಅವರ ಮೇಲಿನ ದಾಳಿಯನ್ನು ಖಂಡಿಸುತ್ತೆ ಅಂದ್ರೆ ಏನರ್ಥ..?

ಭ್ರಷ್ಟ ಡಿಕೆ ಶಿವಕುಮಾರ್ ಅವರ ಮೇಲಿನ ಸಿಬಿಐ ದಾಳಿಯನ್ನು ಖಂಡಿಸಿದ ಒಕ್ಕಲಿಗ ಸಂಘಟಕ್ಕೆ ನನ್ನ ಕೆಲ ಪ್ರಶ್ನೆಗಳು.

* ಅಣ್ಣಾ ಮಹಾಶಯರೇ… ಯಾವ ಪುರಾವೆಗಳನ್ನು ಹಿಡಿದುಕೊಂಡು ನೀವು ಡಿಕೆ ಶಿವಕುಮಾರ್ ಅವರಿಗೆ ಬೆಂಬಲವನ್ನು ನೀಡುತ್ತಿದ್ದೀರಾ? ಡಿಕೆ ಶಿವಕುಮಾರ್ ಅವರ ಮೇಲೆ ಒಂದು ಇಲಾಖೆ ದಾಳಿ ನಡೆಸಿದರೆ ಅದನ್ನು ಖಂಡಿಸುವ ಹಿಂದಿರುವ ನಿಮ್ಮ ಮರ್ಮವೇನು..? ಅವರಿಂದ ನಿಮಗೆ ಎಷ್ಟು ಕಂತೆಗಳು ಬಂದಿವೆ..?

* ಸ್ವತಃ ಡಿಕೆ ಶಿವಕುಮಾರ್ ಅವರೇ ಚುನಾವಣಾ ಆಯೋಗಕ್ಕೆ ನೀಡಿರುವ ದಾಖಲೆಗಳ ಪ್ರಕಾರ ಅವರು ದಿನಕ್ಕೆ 25 ಲಕ್ಷದಷ್ಟು ಸಂಪಾದನೆ ಮಾಡುತ್ತಾರಂತೆ. ಅಣ್ಣಾ ಒಕ್ಕಲಿಗ ಸಂಘದ ಅಧ್ಯಕ್ಷರೇ… ಆ 25 ಲಕ್ಷ ಡಿಕೆ ಶಿವಕುಮಾರ್ ಅವರು ಹೇಗೆ ದುಡಿಯುತ್ತಾರೆಂದು ಹೇಳಬಹುದಾ..? ಅಷ್ಟು ಕೂಲಿ ಕೊಡುವ ಆ ಉಧ್ಯಮವಾದರೂ ಏನು ಎಂದು ಹೇಳಬಹುದೇ..?

* ಡಿಕೆ ಶಿವಕುಮಾರ್ ಅವರ ಮಗಳು ಇದೀಗ ವಿಧ್ಯಾಭ್ಯಾಸ ಕಲಿಯುತ್ತಿರುವ ವಿದ್ಯಾರ್ಥಿನಿ. ಆದರೆ ಅವಳ ಹೆಸರಿನಲ್ಲಿ 25 ಕೋಟಿಯ ಆಸ್ತಿ ಇದೆ. ಆಕೆ 25 ಕೋಟಿಯಷ್ಟು ಆಸ್ತಿಯನ್ನು ಸಂಪಾದಿಸಿದ್ದಾಳಂತೆ. ವಿದ್ಯಾರ್ಥಿನಿಯಾಗಿರುವ ಆಕೆ ಅಷ್ಟೊಂದು ಹಣವನ್ನು ಹೇಗೆ ಸಂಪಾದಿಸಿದ್ದಾಳೆ ಎನ್ನುವ ಲೆಕ್ಕವನ್ನು ನೀವು ಕೊಡುವಿರಾ..?

* ಡಿಕೆ ಶಿವಕುಮಾರ್ ಮನೆಗೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ಅವರ ಜೇಬಿನಲ್ಲಿದ್ದ ಚೀಟಿಯೊಂದನ್ನು ಹರಿದು ಹಾಕಿದ್ದರು. ಆ ಚೀಟಿಯಲ್ಲಿದ್ದ ಅಂತಹಾ ಮಹಾ ಸಾಧನೆಯ ಅಕ್ಷರಗಳು ಏನಿದ್ದಿರಬಹುದು? ಅದನ್ನು ತರಾತುರಿಯಲ್ಲಿ ಹರಿಯುವ ಅಗತ್ಯವಾದರೂ ಏನಿತ್ತು ಎಂದು ಹೇಳಬಹುದೇ..?

* ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಹಾಗೂ ಅದೆಷ್ಟೋ ಚಿನ್ನಾಭರಣಗಳು, ಹಾಗೂ ಕಾರುಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಹಾಗಾದರೆ ಆತ ಭ್ರಷ್ಟನಲ್ಲ ಎಂದು ತಾವು ಅದು ಹೇಗೆ ಸರ್ಟಿಫಿಕೇಟ್ ನೀಡಿದ್ದೀರಿ..?

* ಅಯ್ಯಾ ಒಕ್ಕಲಿಗರ ಸಂಘದ ಪುಣ್ಯಾತ್ಮರೇ, ಕೇವಲ ಬಕೆಟ್ ಹಿಡಿದುಕೊಂಡು ಆತನ ಹಿಂದೆ ಓಡಬೇಡಿ. ಅದರ ಮುಂಚೆ ಕೆಲವು ಸಂಗತಿಗಳನ್ನು ಹೇಳುತ್ತೇನೆ ಕೇಳಿ. ಡಿಕೆ ಶಿವಕುಮಾರ್ ಈ ಹಿಂದೆ ತನಗೆ ಮತ ನೀಡಿದ್ದ ಒಕ್ಕಲಿಗರನ್ನೇ ಅವಮಾನ ಮಾಡಿದ್ದರು. ನನಗೆ ಒಕ್ಕಲಿಗರು ಮತವನ್ನೇ ಹಾಕಲಿಲ್ಲ. ನಾನು ಒಕ್ಕಲಿಗರ ಮತಗಳಿಂದ ಗೆದ್ದಿದ್ದಲ್ಲ. ನನ್ನನ್ನು ಗೆಲ್ಲಿಸಿದ್ದು ದಲಿತರು ಎಂದೆಲ್ಲಾ ಹೇಳಿಕೆ ನೀಡಿದ್ದರು. ಇದು ಹೌದೇ..? ಮತದಾರ ಒಕ್ಕಲಿಗರನ್ನು ಈ ಪರಿ ಅವಮಾನಿಸಿದ ಆ ಭ್ರಷ್ಟನ ಮೇಲೆ ತಮಗೆ ಯಾಕೆ ಅಷ್ಟೊಂದು ಮಮಕಾರ..?

* ಬಿಡಿ… ಈ ಹಿಂದೆ ಕರ್ನಾಟಕದ ನಿಷ್ಟಾವಂತ ಜಿಲ್ಲಾಧಿಕಾರಿಯಗಿರುವ ಡಿಕೆ ರವಿ ಅವರ ಅಸಹಜ ಸಾವಿನ ವಿಚಾರವಾಗಿ ಡಿಕೆ ಶಿವಕುಮಾರ್ ತುಟಿ ಬಿಚ್ಚಿಲ್ಲ. ಒಕ್ಕಲಿಗ ಸಂಘದ ಪುಣ್ಯಾತ್ಮರೇ ಡಿಕೆ ರವಿ ಓರ್ವ ಒಕ್ಕಲಿಗ ಎಂಬುವುದು ನೆನಪಿದೆಯೇ..? ಆ ಒಕ್ಕಲಿಗ ನಿಷ್ಟಾವಂತ ಅಧಿಕಾರಿ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಸಾವನ್ನಪ್ಪಿದಾಗ ಎಲ್ಲಿ ಹೋಗಿದ್ರಿ ಎಂದು ಹೇಳಬಹುದೇ..? ಆ ಸಮಯದಲ್ಲಿ ಆತನ ಕುಟುಂಬಕ್ಕೆ ಸಾಂತ್ವನ ನೀಡಿ ನ್ಯಾಯಕ್ಕಾಗಿ ಹೋರಾಡಬೇಕಾಗಿದ್ದ ತಾವುಗಳು ಎಲ್ಲಿ ಹೋಗಿದ್ರಿ..?

* ಒಕ್ಕಲಿಗ ಸಂಘಕ್ಕೆ ಕಾಂಗ್ರೆಸ್ ಪಕ್ಷದಿಂದ ಅವಮಾನವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಒಕ್ಕಲಿಗರನ್ನು ಕಂಡರೆ ಪಿತ್ತ ನೆತ್ತಿಗೇರುತ್ತದೆ. ಸ್ವತಃ ಡಿಕೆ ಶಿವಕುಮಾರ್ ಅವರಿಗೇ ಕಾಂಗ್ರೆಸ್ಸಿಗರು ಅವಮಾನ ಮಾಡುತ್ತಿದ್ದಾರೆ. ತಾಕತ್ತಿದ್ದರೆ ಮೊದಲು ಅದನ್ನು ಖಂಡಿಸಿ. ಅದು ಬಿಟ್ಟು ಕೇವಲ ಬಕೆಟ್ ರಾಜಕಾರಣಕ್ಕಾಗಿ ಕೇಂದ್ರ ಸರ್ಕಾರ ಮಾಡಿದ ತೆರಿಗೆ ಕಳ್ಳರ ಮೇಲಿನ ದಾಳಿಯನ್ನು ಯಾಕೆ ಖಂಡಿಸುತ್ತೀರಾ..?

ಕೊನೆಯದಾಗಿ ಹೇಳುತ್ತೇನೆ. ದೇಶ ಬದಲಾಗುತ್ತಿದೆ. ಭ್ರಷ್ಟರು ಜೈಲುಪಾಲಾಗುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಮೇಲೂ ಐಟಿ ದಾಳಿ ಮಾಡಿದೆ. ಡಿಕೆ ಶಿವಕುಮಾರ್ ನಿಯತ್ತಿನ ಮನುಷ್ಯನಾದರೆ ದೋಷಮುಕ್ತರಾಗುತ್ತಾರೆ. ಆದರೆ ಅವರ ಮೇಲೆ ದಾಳಿ ನಡೆದಾಗ ನೀವು ಬೀದಿಗೆ ಬಂದು ಬೊಬ್ಬೆ ಬಿಡೋದು ನೋಡಿದ್ರೆ ನಂಗೆ ಏನೋ ಡೌಟ್ ಬರತ್ತೆ ನೋಡಿ. ನಾನು ಪ್ರಧಾನಿ ಮೋದಿಯನ್ನಂತೂ ಖಂಡಿತಾ ಹೊಗಳಿದ್ದಲ್ಲ. ಆದರೆ ಏನೋ ದೇಶ ಒಂದು ಸರಿಯಾದ ದಾರಿಯಲ್ಲಿ ಹೋಗುತ್ತಿದೆ ಅನ್ನೋದು ನನ್ನ ಅನಿಸಿಕೆ. ಭ್ರಷ್ಟರಿಗೆ ಬೆಂಬಲ ಕೊಟ್ಟು ನನ್ನ ಜಾತಿಯ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಬೇಡಿ ಎಂಬುವುದೇ ನನ್ನ ಮನವಿ. ನಮ್ಮ ಜಾತಿಯಲ್ಲಿ ತುಂಬಾನೇ ಸಮಸ್ಯೆಗಳಿವೆ. ಮೊದಲು ಅದನ್ನು ಸರಿಪಡಿಸಲು ಮುಂದಾಗೋಣ. ಅದು ಬಿಟ್ಟು ಇಂತಹಾ ಹೇಯ ಕೃತ್ಯಗಳನ್ನು ನಡೆಸಿದರೆ ಮುಂದೊಂದು ದಿನ ನಮ್ಮ ಮರ್ಯಾದೆಯನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ. ಎಚ್ಚರಿಕೆ…

 

-ಸುರೇಶ್ ಗೌಡ

Tags

Related Articles

Close