ಪ್ರಚಲಿತ

ಕಳ್ಳತನ ಮಾಡಿ ಜೈಲಿಗೆ ಬಂದ ರಾಜಾ: ಯೋಗಿ ನಾಡಲ್ಲಿ ಅಪರಾಧಕ್ಕಿಲ್ಲ ಜಾಗ!

ಸಿ ಎಂ ಯೋಗಿ ಆದಿತ್ಯನಾಥ್ ಅವರ ಆಡಳಿತದ ಉತ್ತರ ಪ್ರದೇಶದಲ್ಲಿ ತಪ್ಪು ಮಾಡಿದವರಿಗೆ ನೀಡುವ ಶಿಕ್ಷೆ ಇಡೀ ದೇಶಕ್ಕೆಯೇ ಮಾದರಿ. ಅವರ ಸರ್ಕಾರ ನೀಡುವ ಶಿಕ್ಷೆ ತಪ್ಪು ಮಾಡಲು ಹೊರಡುವವರನ್ನು ೧೦೦ ಬಾರಿ ಆಲೋಚಿಸುವಂತೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಉತ್ತರ ಪ್ರದೇಶದ ವೃತ್ತಿಪರ ಕಳ್ಳನೊಬ್ಬ ಎನ್‌ಕೌಂಟರ್ ಭಯದಿಂದ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ನಡೆದಿದೆ. ಅಂಕುರ್ ಅಲಿಯಾಸ್ ರಾಜಾ ಎನ್ನುವ ವೃತ್ತಿಪರ ಕಳ್ಳನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಆತ ಮಾತ್ರ ಈ ವರೆಗೆ ಯಾವುದೇ ಭಯವಿಲ್ಲದೆ ಸಲೀಸಾಗಿ ಓಡಾಡಿಕೊಂಡಿದ್ದ. ಆದರೆ ಯೋಗೀಜಿ ಸರ್ಕಾರ ಅಪರಾಧಿಗಳ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಲಾರಂಭಿಸಿದ ಬಳಿಕ ಈತನಿಗೂ ಜೀವ ಭಯ ಉಂಟಾಗಿ, ತನ್ನನ್ನು ಎಲ್ಲಿ ಎನ್‌ ಕೌಂಟರ್ ಮಾಡುತ್ತಾರೆಯೋ ಎಂಬ ಭಯದಿಂದ ಸದ್ಯ ಪೊಲೀಸರಿಗೆ ಶರಣಾಗಿದ್ದಾನೆ.

ಈತ ಕೈಯಲ್ಲಿ “ನನ್ನನ್ನು ಕ್ಷಮಿಸಿ ಯೋಗೀಜಿ, ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ನಾನು ಎಂದೂ ಅಪರಾಧ ಎಸಗುವುದಿಲ್ಲ” ಎಂಬುದಾಗಿಯೂ ಪೋಸ್ಟರ್ ಒಂದನ್ನು ಹಿಡಿದುಕೊಂಡೇ ‌ಪೊಲೀಸರ ಮುಂದೆ ಹಾಜರಾಗಿದ್ದಾನೆ.

ಉತ್ತರ ಪ್ರದೇಶದಲ್ಲಿ ಯೋಗೀಜಿ ಅವರು ಮುಖ್ಯಮಂತ್ರಿ ಆದ ಬಳಿಕ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದಿರುವುದರ ಪರಿಣಾಮ, ಜನರು ತಪ್ಪು ಮಾಡಲು ಭಯ ಪಡುವಂತಾಗಿದ್ದು, ಈ ವಿಷಯದಲ್ಲಿ ಯುಪಿ ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿದೆ.

Tags

Related Articles

Close