ಅಂಕಣ

ಅಂಬೇಡ್ಕರ್ ರವರನ್ನು ಕಾನೂನು ಮಂತ್ರಿಗಿರಿಯಿಂದ ನೆಹರೂ ಉಚ್ಛಾಟಿಸಿದ್ದು ಯಾಕೆ ಗೊತ್ತೇ?!

ಮತ ಬ್ಯಾಂಕ್ ರಾಜಕಾರಣವೆನ್ನುವುದು ಅವರ ವೈಶಿಷ್ಟ್ಯ! ಕ್ರೂರ ಸಿದ್ಧಾಂತಗಳನ್ನೊಳಗೊಂಡ ರಾಜಕರಾಣವೇ ಅವರ ಸಾಮರ್ಥ್ಯ! ಅಲ್ಪಸಂಖ್ಯಾತರನ್ನು ಓಲೈದುವುದೇ ಅವರ ಮೊದಲ ಪ್ರಾಶಸ್ತ್ಯ! ದಲಿತರ ಮತಗಳೇ ಅವರ ಜನ್ಮಸಿದ್ಧ ಹಕ್ಕು! ಆದರೆ, ಹಿಂದೂ ಎಂಬ ಶಬ್ದವೇ ಅಲರ್ಜಿ! ಹಿಂದುತ್ವವೆಂಬುದೇ ಅವರ ಶತ್ರು ಸಾಧನೆಗೆ ಮೊದಲ ಮೆಟ್ಟಿಲು! ಇಂತಹ ಹೇಸಿಗೆಯೆಂಬಂತಹ ರಾಜಕಾರಣವನ್ನು ಕಾಂಗ್ರೆಸ್ ಪರಿಚಯಿಸಿತು ನೋಡಿ, ಅಲ್ಲಿಂದಲೇ ವಿಕೃತವಾದ ಮುನ್ನುಡಿಯೊಂದು ಪ್ರಾರಂಭವಾಗಿಬಿಟ್ಟಿತ್ತು!

ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಪ್ರತಿಶತ 20% ಗಿಂತಲೂ ಹೆಚ್ಚಿರುವ ದಲಿತರು ಮತ ಬ್ಯಾಂಕಿನ ಪರಿಧಿಯೊಳಗೆ ಗಣನೀಯವಾದ ಸ್ಥಾನವನ್ನೇ ಪಡೆದುಕೊಳ್ಳುತ್ತಾರೆ! ಈ ಕಾರಣದಿಂದಲೇ, ಕಾಂಗ್ರೆಸ್ ಪಕ್ಷದ ಉಪಾಧ್ಯಕಷನಾದ ರಾಹುಲ್ ಗಾಂಧಿ ದಲಿತರ ಮನೆಯ ಅಂತ್ಯ ಸಂಸ್ಕಾರಕ್ಕೂ ಹೋಗುವಂತೆ ಮಾಡಲಾಯಿತು! ದಲಿತರಿಗೇನೇ ಆದರೂ ಸಹ, ಕೇವಲ ಮತಗಳು ಬೇಕೆನ್ನುವ ದುರುದ್ದೇಶದಿಂದಾಗಿ ಕಾಳಜಿಯ ನಾಟಕವಾಡುತ್ತಿದ್ದ ಕಾಂಗ್ರೆಸ್ ಒಂದು
ಬಿಜೆಪಿಯನ್ನು ದಲಿತ ವಿರೋಧಿ ಪಕ್ಷವೆಂದೇ ಬಿಂಬಿಸತೊಡಗಿತ್ತು! ಒಂದಷ್ಟು ಕಾಲ ನಡೆದ ಕಾಂಗ್ರೆಸ್ ನವರ ಗಿಮಿಕ್ ಬಯಲಾದಾಗ ಮುಸಲ್ಮಾನರಾಗಲೀ,
ದಲಿತರಾಗಲಿ ಮತ್ತೆ ಮತ್ತೆ ಕಾಂಗ್ರೆಸ್ ನ ಬಲೆಗೆ ಬೀಳಲಿಲ್ಲ ಎಂಬುದು ಇವತ್ತಿನ ಕಾಂಗ್ರೆಸ್ ಪಕ್ಷದ ಹೀನಾಯ ಸೋಲೊಂದು ಸಾಬೀತು ಪಡಿಸುತ್ತಿದೆ!

ಪ್ರಧಾನ ಮಂತ್ರಿ ಮೋದಿ ಸಂವಿಧಾನ ರಚನೆಕಾರರಾದ ಬಿ.ಆರ್.ಅಂಬೇಡ್ಕರ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರಲ್ಲಿ ಯಾವುದೇ ಸಂಶಯವಿಲ್ಲ! ತೀರಾ ಇತ್ತೀಚೆಗೆ ಅಂಬೇಡ್ಕರ್ ರವರ ಜನ್ಮಸ್ಥಳವಾದ ಮ್ವಾಹ್ ನಲ್ಲಿ ಹೊಸದಾಗಿ ಗ್ರಾಮೀಣ ವಿಭಾಗದ ಸೆಲ್ಫ್ ಗವರ್ನ್ಯಾನ್ಸ್ ಅಭಿಯಾನವೊಂದನ್ನು ಜಾರಿಗೊಳಿಸಿದರು! ದೆಹಲಿಯ ಅಲಿಪುರದ ಅಂಬೇಡ್ಕರ್ ರಾಷ್ಟ್ರೀಯ ಸ್ಮರಣಾರ್ಥಕ್ಕೂ ಸಹ ಅಡಿಪಾಯವನ್ನು ಹಾಕಿದರು!

ದಲಿತರ ಉದ್ಧಾರಕನೆಂದು ತನಗೆ ತಾನೇ ಘೋಷಿಸಿಕೊಂಡ ಕಾಂಗ್ರೆಸ್ ನ ಹಿಪೋಕ್ರಸಿಯೊಂದು ಮೋದಿಯ ಸತ್ಯ ವ್ಯಕ್ತಿತ್ವದ ಮುಂದೆ ನಡೆಯಲೇ ಇಲ್ಲ!! ಆ 60 ವರ್ಷಗಳ ತನಕವೂ ಕೂಡ ಅಂಬೇಡ್ಕರ್ ರವರಿಗೆ ಸಲ್ಲಬೇಕಾದ ಯಾವುದೇ ಸ್ಥಾನವೂ ಸಹ ಸಿಗದಂತೆಯೇ ನೋಡಿಕೊಂಡಿತಷ್ಟೇ! ಅಂಬೇಡ್ಕರ್ ರವರ ಅತ್ಯಂತ ಅಮೂಲ್ಯವಾದ ಭಾರತದ ಬಗೆಗಿನ ಪ್ರತಿ ದಾಖಲೆಗಳನ್ನೂ, ಯೋಚನಾ ಲಹರಿಗಳನ್ನೂ ಸಾರ್ವಜನಿಕರಿಂದ ಬಚ್ಚಿಟ್ಟಿತು ಇದೇ ಕಾಂಗ್ರೆಸ್! ಸ್ವತಃ ಅಂಬೇಡ್ಕರರೂ ಹೇಳದ ಸೆಕ್ಯುಲಾರಿಸಂ ನ ವಿಷಕಾರಕ ವ್ಯವಸ್ಥೆಯೊಂದು ಕಾಂಗ್ರೆಸ್ ನಿಂದ ಅಧಿಕೃತವಾಗಿ ಭಾರತದಲ್ಲಿ ಪ್ರಕಟಗೊಂಡಿತು! ಇದನ್ನ ಸ್ವತಃ ಅಂಬೇಡ್ಕರ್ ರವರ ಮೊಮ್ಮಗ, ಪ್ರಕಾಶ್ ಅಂಬೇಡ್ಕರ್ ರವೇ ಹೇಳಿಕೆ ಕೊಟ್ಟಿಬಿಟ್ಟರು! ಕಾಂಗ್ರೆಸ್ ಅಂಬೇಡ್ಕರರಿಗೆ ಅನ್ಯಾಯ ಮಾಡಿದೆಯೆಂದು! ಆ ಅರವತ್ತು ವರುಷಗಳಲಿ, ಅಂಬೇಡ್ಕರ್ ರವರು ಬರೆದಿದ್ದ ಯಾವ ಪುಸ್ತಕವನ್ನೂ ಸಹ ಬಿಡುಗಡೆಗೊಳಿಸಲು ಅನುಮತಿಸಲೇ ಇಲ್ಲ ಕಾಂಗ್ರೆಸ್!

ಆದರೆ, ಇವತ್ತು ಅಂಬೇಡ್ಕರ್ ರವರ ಪ್ರಸಿದ್ಧತೆಯನ್ನು ಬಳಸಿಕೊಳ್ಳುತ್ತಿರುವ ಇದೇ ಕಾಂಗ್ರೆಸ್ ಅಂಬೇಡ್ಕರ್ ರವರ ರಾಜಕೀಯದ ಹಾದಿಯಲ್ಲಿ ತೀರಾ ಕೆಳಮಟ್ಟದಲ್ಲಿ ನಡೆಸಿಕೊಂಡಿತು! 1949, ನವೆಂಬರ್ ನಲ್ಲಿ ನಡೆದ constituent assembly ಯ ಸಭೆಯಲ್ಲಿ ಅಂಬೇಡ್ಕರರೇ ಹೇಳಿದರು… “ನೆಹರೂವಿಗೆ ವಿಧಾನಸಭೆಯ ಘಟಕದಲ್ಲಿ ತಾನಿರುವುದು ಇಷ್ಟವಿರಲಿಲ್ಲ! ಅವರು ಯಾವಾಗಲೂ ನನ್ನನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವ ಹಾಗೆ ವರ್ತಿಸಿದರು.” ಎಂದು ಹೇಳಿದರು! ಕೇವಲ ಮಹಾತ್ಮಾ ಗಾಂಧಿಯ ಒತ‌್ತಾಯಕ್ಕೆ ಮಣಿದು ವಿಧಾನ ಸಭೆಯಲ್ಲಿರಲು ಅವಕಾಶ ಮಾಡಿಕೊಟ್ಟಿದ್ದರಷ್ಟೇ ನೆಹರೂ!!

ಕೆಲವು ತಿಂಗಳುಗಳ ಹಿಂದೆಯಷ್ಟೇ, ಬಿಹಾರ್ ನ ಗವರ್ನರ್ ಆಗಿದ್ದ ಸಂದರ್ಭದಲ್ಲಿ ರಾಮನಾಥ್ ಕೋವಿಂದ್ ಅಂಬೇಡ್ಕರ್ ರವರ ರಾಜಕೀಯ ರಾಜೀನಾಮೆಗೆ ಕಾರಣ ಬೇರೇನೂ ಅಲ್ಲ, ಬದಲಿಗೆ ನೆಹರೂ ಎಂದು ಬಯಲುಗೊಳಿಸಿದರು! ಗುಜರಾತ್ ನ National Law University ಯ ವಿದ್ಯಾರ್ಥಿಗಳನ್ನುದ್ದೇಶಿಸಿ
ಮಾತನಾಡುವಾಗ ಇಂತಹದ್ದೊಂದು ಆಘಾತಕರವಾದ ಸತ್ಯವೊಂದನ್ನು ಬಯಲುಗೊಳಿಸಿದರು ಕೋವಿಂದ್! ಅಂದು ಕಾಂಗ್ರೆಸ್ ನ ಬಹುತೇಕ ರಾಜಕೀಯ
ಕುತಂತ್ರಗಳೆಲ್ಲ ಹೊರ ಬಿದ್ದಿದ್ದವು!

ಅಂಬೇಡ್ಕರ್ ರವರ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದ ದಿನಾಂಕ ಸೆಪ್ಟೆಂಬರ್ 27, 1951! ರಾಜೀನಾಮೆ ಕೊಡುತ್ತಿರುವ ಕಾರಣದ ಬಗ್ಗೆ ಅಂಬೇಡ್ಕರ್ ಸವಿಸ್ತಾರವಾಗಿ ಹೇಗೆ ನೆಹರೂ ಹಾಗೂ ಕಾಂಗ್ರೆಸ್ ಸಂವಿಧಾನಕ್ಕೆ ಹಾಗೂ ದೇಶಕ್ಕೆ ಹೇಗೆ ಅನ್ಯಾಯವೆಸಗುತ್ತಿದೆ ಎಂದು ತಿಳಿಸಿದ್ದರು! ಅಂಬೇಡ್ಕರ್ ರವರಿಗೆ ನೆಹರೂ ‘ಹಿಂದೂ ಕೋಡ್‘ ಎಂಬ ಮಸೂದೆಯನ್ನು ಜಾರಿಗೊಳಿಸಬೇಕಿತ್ತಷ್ಟೇ! ಆದರೆ, ನೆಹರೂ ಒಪ್ಪಲೇ ಇಲ್ಲ! ಹಿಂದೂ ಕೋಡ್ ಮಸೂದೆಯನ್ನೇನಾದರೂ ಜಾರಿಗೊಳಿಸಿಬಿಟ್ಟಿದ್ದರೆ ಬಹುಷಃ ಹಿಂದುತ್ವವೆನ್ನುವುದು ಈಗಾಗಲೇ ವಿಜೃಂಭಿಸತೊಡಗುತ್ತಿತ್ತೇನೋ! ಅದರ ಪ್ರತಿ ಅಂಶಗಳೂ ಸಹ ಹಿಂದುತ್ವಕ್ಕೆ ಭದ್ರ ಬುನಾದಿಯನ್ನೊದಗಿಸುತ್ತಿದ್ದವು!

ಅಂಬೇಡ್ಕರ ರವರಿಗಿದ್ದದ್ದು ಅದೇ! ಅವರ ನಂಬಿಕೆಯೇ ಹಾಗಿತ್ತು! ಚುನಾಯಿತನಾದ ಪ್ರತಿಯೊಬ್ಬನೂ ಸಹ ದೇಶದ ಬಗ್ಗೆ ರಾಜಕಾರಣದ ಮೂಲಕ ಜಾಗೃತಿಯನ್ನು ಮೂಡಿಸುವ ಕರ್ತವ್ಯದ ಬಗೆಗೆ ಅವರ ಅಚಲ ನಂಬಿಕೆಯಿತ್ತು! ಪ್ರತಿಯೊಬ್ಬ ರಾಜಕಾರಣಿಯೂ ದೇಶದ ಪ್ರಜೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲೇಬೇಕು ಎನ್ನುವ ಆಜ್ಞೆಯೊಂದಡಗಿತ್ತು! ಆದರೆ, ನೆಹರೂ ಆ ಮಸೂದೆಯನ್ನು ಕೈ ಬಿಟ್ಟರು! “ಇನ್ನೂ ಭಾರತ ನಿಮ್ಮ ಆಧುನಿಕ ಹಿಂದುತ್ವವನ್ನು ಒಪ್ಪುವಷ್ಟಾಗಲೀ ಅಥವಾ ಹೆಣ್ಣಿಗೆ ಸ್ವಾತಂತ್ರ್ಯ ಕೊಡುವಷ್ಟಾಗಲೀ ಮುಂದುವರೆದಿಲ್ಲ ಬಾಬಾ ಸಾಹೇಬರೇ” ಎಂದು ಅಣಕವಾಡಿದರು!

ಅಂಬೇಡ್ಕರ್ ತಮ್ಮ ರಾಜೀನಾಮೆಯ ಪತ್ರದಲ್ಲಿ ನೆಹರೂವಿನ ಜೊತೆಗಿದ್ದ ಮನಸ್ತಾಪಗಳನ್ನಲ್ಲದೇ ಹಳಸಿದ ಕಪಟ ಸ್ನೇಹ ನೆಹರೂವಿನದು ಎಂದಿದ್ದರು! ಪ್ರತಿ ರಾಷ್ಟ್ರವನ್ನೂ ಭಾರತದ ವಿರುದ್ಧ ನಿಲ್ಲಿಸಿದ್ದು ಇದೇ ನೆಹರೂವಿನ ವಿದೇಶಾಂಗ ನೀತಿ! ಪಾಕಿಸ್ಥಾನದ ಮೇಲಿನ ಮೃದು ಧೋರಣೆಗೆ, ಕಾಶ್ಮೀರದ ಬಗೆಗಿನ ಹುಚ್ಚು ನಿರ್ಧಾರಕ್ಕೆ,. ಹೀಗದೆಷ್ಟೋ ವಿಷಯಗಳಿಗೆ ಅಂಬೇಡ್ಕರ್ ಬಲವಾಗಿ ವಿರೋಧಿಸಿದ್ದರು! ಪೂರ್ವ ಬಂಗಾಳದಲ್ಲಾದ ಗಲಭೆಯ ಬಗ್ಗೆ ನೆಹರೂವಿನ ವಿರುದ್ಧ ಹರಿಹಾಯ್ದಿದ್ದರು ಅಂಬೇಡ್ಕರ್!

ನೆಹರೂವಿನ ಹುಚ್ಚು ನಿರ್ಧಾರಗಳಿಗೆ ನೊಂದು ಅಂಬೇಡ್ಕರ್ ದೇಶದ ಹಣಕಾಸಿನ ವಿಚಾರದಲ್ಲಿಯೂ ದೂರ ಉಳಿದರು! ಪ್ರತಿ ತಪ್ಪುಗಳನ್ನೂ ಎತ್ತಿ ತೋರಿಸುವ ಅಂಬೇಡ್ಕರ್ ಎಂದು ನೆಹರೂ ಹಾಗೂ ಕಾಂಗ್ರೆಸ್ ಪಕ್ಷ ಅಣಕವಾಡಿ ತೀರಾ ಕೆಳಮಟ್ಟದಲ್ಲಿ ನಡೆಸಿಕೊಂಡ ಬಗೆ ಸಹಿಸಲಾಗದ ಮಟ್ಟಕ್ಕೆ ಕರೆದೊಯ್ದು ಬಿಟ್ಟಿತು! ವಿಷಾದದಲ್ಲಿಯೇ ರಾಜೀನಾಮೆ ನೀಡಿ ರಾಜಕೀಯದಿಂದ ಹೊರಗಿದ್ದು ಬಿಟ್ಟರು ಅಂಬೇಡ್ಕರ್!!

ಹೀಗೆ, ಸಂವಿಧಾನವನ್ನು ರಚನೆ ಮಾಡಿದ ಒಬ್ಬ ಬಾಬಾ ಸಾಹೇಬರೆಂಬರನ್ನು ಕಾಂಗ್ರೆಸ್ ನಡೆಸಿಕೊಂಡ ಬಗೆ ಇದೆಯಲ್ಲ, ಸ್ವತಃ ಅಂಬೇಡ್ಕರ್ ರವೇ ಕಾಂಗ್ರೆಸ್ ನನ್ನು ತೊರೆದಿದ್ದರು! ಆದರೆ, ಇಷ್ಟೂ ವರ್ಷಗಳ ಕಾಲ ಕಾಂಗ್ರೆಸ್ ಅಂಬೇಡ್ಕರ್ ರವರ ಹೆಸರನ್ನೇ ಹಿಡಿದು ಭಾರತಕ್ಕೆ ಸುಳ್ಳು ಹೇಳುತ್ತಾ ಬಂದಿತು! ಇವತ್ತು, ಮೋದಿ ಸರಕಾರ ಅಂಬೇಡ್ಕರ್ ರವರ ಪ್ರತಿ ಆಶಯವನ್ನೂ ಈಡೇರಿಸಲು ಶ್ರಮಿಸುತ್ತಿದೆ! ಕಾಂಗ್ರೆಸ್ ನ ನಾಟಕವೊಂದು ಬಯಲಾಗುತ್ತಿದೆ! ಭಾರತೀಯರು ಮತ್ತೆ ಕಾಂಗ್ರೆಸ್ ನನ್ನು ಗದ್ದುಗೆಗೇರಿಸಲು ಮೂರ್ಖರಲ್ಲ!

– ತಪಸ್ವಿ

Tags

Related Articles

Close