ಅಂಕಣ

ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ ಹಾಗೂ ಫೇಸ್‍ಬುಕ್ ಸಿಇಓ ಜುಕರ್ ಬರ್ಗ್ ಸಾಧನೆಯ ಹಿಂದಿರುವ ಆ ನಿಗೂಢ ವ್ಯಕ್ತಿ ಒಬ್ಬ ಭಾರತೀಯ!!!

ಮನುಷ್ಯನಿಗೆ ಛಲ, ಆತ್ಮವಿಶ್ವಾಸ ಒಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಲ್ಲ ಎನ್ನುವುದಕ್ಕೆ ಅದೆಷ್ಟೋ ವ್ಯಕ್ತಿಗಳು ನಿದರ್ಶನರಾಗಿದ್ದಾರೆ!! ಅಷ್ಟೆ ಅಲ್ಲದೇ, ಒಬ್ಬ ವ್ಯಕ್ತಿ ಏನಾದರೂ ಸಾಧಿಸಲೇಬೇಕು ಎಂದು ಹಠ ತೊಟ್ಟರೇ ಆತ ಯಶಸ್ಸಿನ ಹಾದಿಯನ್ನು ತಲುಪುತ್ತಾನೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಇವೆ. ಹಾಗಾಗಿ ಅದೆಷ್ಟೋ ಮಂದಿ ವ್ಯಕ್ತಿಗಳು ಯಾರ ಸಹಾಯವಿಲ್ಲದೇ ಶ್ರಮಿಸಿ, ನಿತ್ಯ ಕಷ್ಟಪಡುತ್ತಾ, ಗುರಿ ಸಾಧನೆಯ ಮಾರ್ಗದಲ್ಲಿ ಮುನ್ನುಗ್ಗುತ್ತಾ ಕೊನೆಗೆ ಗೆಲುವನ್ನು
ಸಾಧಿಸಿದವರು ಈ ಸಮಾಜದಲ್ಲಿ ಇದ್ದಾರೆ. ಇವರ ಪೈಕಿ ಫೇಸ್‍ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್, ಆಪಲ್ ಕಂಪೆನಿ ವ್ಯವಸ್ಥಾಪಕ ಸ್ಟೀವ್ ಜಾಬ್ಸ್ ತಮ್ಮ ಸ್ವ
ಪ್ರಯತ್ನದಿಂದಲೇ ಹಂತ ಹಂತವಾಗಿ ಮೇಲೇರಿದ ವ್ಯಕ್ತಿಗಳು!!

ಪ್ರತಿ ಪುರುಷನ ಗೆಲುವಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುತ್ತಾರೆ. ಆದರೆ ಫೇಸ್‍ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್, ಆಪಲ್ ಕಂಪೆನಿ ವ್ಯವಸ್ಥಾಪಕ ಸ್ಟೀವ್ ಜಾಬ್ಸ್ ಅವರ ಸಾಧನೆಯ ಹಿಂದೆ ಒಬ್ಬ ಅಜ್ಞಾತ ವ್ಯಕ್ತಿ ಇದ್ದಾರೆ ಎಂದರೆ ನಂಬ್ತೀರಾ?? ಆದರೆ ನಂಬಲೇಬೇಕು!! ಹಾಗಾದರೆ ಆ ವ್ಯಕ್ತಿಯಾದರು ಯಾರು ಎಂದು ಗೊತ್ತೆ?? ಅವರು ಬೇರಾರು ಅಲ್ಲ,  ಉತ್ತರಾಖಂಡ ರಾಜ್ಯದ ನೈನಿತಾಲ್‍ನಲ್ಲಿನ ಕರೋಲಿ ಮಾತಾ ಆಲಯದ ಕರೋಲಿ ಬಾಬಾ.

karoli-baba

ಹೌದು..! ಜುಕರ್ ಬರ್ಗ್, ಸ್ಟೀವ್ ಜಾಬ್ಸ್ ಗೆಲುವಿನ ಹಿಂದೆ ಇರುವ ವ್ಯಕ್ತಿಯೇ ಕರೋಲಿ ಬಾಬಾ !! ಆದರೆ ಈ ಕರೋಲಿ ಬಾಬಾ 1973ರಲ್ಲಿ ಇಹಲೋಕ
ತ್ಯಜಿಸಿದ್ದಾರೆ. ಇಷ್ಟಕ್ಕೂ ಕರೋಲಿ ಬಾಬಾಗೂ, ಜುಕಲ್ ಬರ್ಗ್ ಹಾಗೂ ಸ್ಟೀವ್ ಜಾಬ್ಸ್‍ಗೂ ಸಂಬಂಧ ಏನು ಅನ್ನೋದು ಈಗಿರುವ ಪ್ರಶ್ನೆ?? ಯಾಕೆಂದರೆ, ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍ಬರ್ಗ್ ಇಂದು ಒಂದು ಫೇಸ್‍ಬುಕ್ ಎಂಬ ಪ್ರಪಂಚದ ಒಡೆಯ!!. 100 ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ. ಆದರೆ, ತನ್ನ 97% ಆಸ್ತಿಯನ್ನು ಸಮಾಜದ ಉದ್ದಾರಕ್ಕಾಗಿ ಮೀಸಲಿಟ್ಟಿರುವ ಜುಕರ್‍ಬರ್ಗ್ ಪ್ರತಿವರ್ಷವೂ ಒಂದೊಂದು ಗುರಿಯನ್ನು ಇಟ್ಟುಕೊಳ್ಳುತ್ತಾರೆ. ಹಾಗಿರಬೇಕಾದರೆ ಕರೋಲಿ ಬಾಬಾನ ಪರಿಚಯವಾದರೂ ಹೇಗೆ??

ಇನ್ನು ತಲೆತುಂಬಾ ಹೊಸ ಆಲೋಚನೆಗಳನ್ನು ತುಂಬಿಕೊಂಡಿದ್ದ ಸ್ಟೀವ್ ಜಾಬ್ಸ್ ಕಾಲೇಜು ಓದಿಗೆ ತಿಲಾಂಜಲಿ ಬಿಟ್ಟು, ವೊಜ್ನಿಯಾಕ್ ಜೊತೆ ಸೇರಿ ಆಪಲ್
ಕಂಪ್ಯೂಟರ್ ಕಂಪೆನಿ ಹುಟ್ಟುಹಾಕಿದರು. ಆಗ 1976ರ ಸಂದರ್ಭ, ಕೈಲಿದ್ದದ್ದು ಕೇವಲ 1,300 ಡಾಲರ್ ಬಂಡವಾಳವಷ್ಟೆ!! ಹೀಗಿರಬೇಕಾದರೆ, ಸ್ಟೀವ್ ಜಾಬ್ಸ್
ಮನೆಯ ಗ್ಯಾರೇಜ್‍ನಲ್ಲೇ ಕೂತು ಇಬ್ಬರೂ ಕಂಪ್ಯೂಟರ್ ರೂಪಿಸಿದರು. ಮೊದಲ ಉತ್ಪನ್ನದ ಹೆಸರೇ `ಆಪಲ್ 1~’ ಈ ಉತ್ಪನ್ನವನ್ನು ಎಂಜಿನಿಯರ್‍ಗಳು ಹಾಗೂ ಹವ್ಯಾಸಿ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅದನ್ನು ರೂಪಿಸಲಾಗಿತ್ತು!! ಆದರೆ ಇಂದು ಬಹು ಪ್ರಸಿದ್ಧಿಯನ್ನು ಹೊಂದಿರುವ ಸಂಸ್ಥೆಯಾಗಿದೆ!!

ಈ ಇಬ್ಬರೂ ವ್ಯಕ್ತಿಗಳು ತಮ್ಮ ಪರಿಶ್ರಮದಿಂದ ಉನ್ನತವಾದ ಸಾಧನೆಯನ್ನು ಮಾಡಿ ಈಡೀ ವಿಶ್ವದಲ್ಲೇ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಆದರೆ ಇವರ ಸಾಧನೆಯ ಹಿಂದೆ ಭಾರತೀಯ ಕರೋಲಿ ಬಾಬಾ ಇದ್ದರೇ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತೆ!! ಈ ವಿದೇಶಿಯರಿಗೆ ನಮ್ಮ ಉತ್ತರಾಖಂಡ ರಾಜ್ಯದ ನೈನಿತಾಲ್‍ನಲ್ಲಿನ ಕರೋಲಿ ಮಾತಾ ಆಲಯದಲ್ಲಿರುವ ಕರೋಲಿ ಬಾಬಾನ ಪರಿಚಯವಾದುದ್ದರಿಂದ ಇಷ್ಟು ದೊಡ್ಡಮಟ್ಟದ ಯಶಸ್ಸನ್ನು ಕಂಡಿದ್ದಾರೆ ಎಂದರೆ ನಂಬಲಸಾಧ್ಯ!!

ಸ್ಟೀವ್ ಜಾಬ್ಸ್ ಆಪೆಲ್ ಕಂಪೆನಿ ಆರಂಭಿಸುವುದಕ್ಕೂ ಮುನ್ನ ಡಾನ್ ಕೊಟ್ಕೆ ಎಂಬ ತನ್ನ ಆಪ್ತ ಸ್ನೇಹಿತನಿಂದ ನಮ್ಮ ದೇಶದಲ್ಲಿನ ಕರೋಲಿ ಬಾಬಾ ಬಗ್ಗೆ ಸ್ಟೀವ್ ಜಾಬ್ಸ್ ತಿಳಿದುಕೊಂಡನಂತೆ. ಈ ಹಿನ್ನೆಲೆಯಲ್ಲಿ ಕರೋಲಿ ಬಾಬಾರನ್ನು ಭೇಟಿಯಾಗಲು ಸ್ಟೀವ್ ಜಾಬ್ಸ್ ಭಾರತಕ್ಕೆ ಬಂದಿದ್ದು, ಆ ವೇಳೆಗೆ ಬಾಬಾ ಇಹಲೋಕ
ತ್ಯಜಿಸಿದ್ದರಂತೆ!!ಆದರೂ ಕೂಡ ಸ್ಟೀವ್ ಕರೋಲಿ ಬಾಬಾರ ಆಶ್ರಮದಲ್ಲಿ ಸ್ವಲ್ಪ ಸಮಯ ಇದ್ದು, ತದ ನಂತರ ತನ್ನ ದೇಶಕ್ಕೆ ಹಿಂತಿರುಗಿದರು. ಆ ಬಳಿಕ ಒಂದು
ತಿಂಗಳಲ್ಲೇ ಆಪಲ್ ಕಂಪೆನಿ ಪ್ರಾರಂಭಿಸಿ ಯಶಸ್ಸನ್ನು ಗಳಿಸಿದರು!!! ಇದೀಗ ಸ್ಟೀವ್ ಜಾಬ್ ಕಂಡುಹಿಡಿದ ಐಫೆÇೀನ್, ಐಪ್ಯಾಡ್, ಐಪಾಡ್‍ಗಳು ಜಗತ್ತಿನಾದ್ಯಂತ ಎಷ್ಟೆಲ್ಲಾ ಆಕರ್ಷಿಸುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ!! ಆದರೆ ಸ್ಟೀವ್ ಜಾಬ್ ಅವರ ಯಶಸ್ಸಿನ ಹಿಂದೆ ಇರುವ ವ್ಯಕ್ತಿ ಕರೋಲಿ ಬಾಬಾ ಎಂದು ಸ್ಟೀವ್ ಜಾಬ್ಸ್ ಸತ್ತ ಬಳಿಕ ಗೊತ್ತಾಯಿತು. ಹೌದು!! ಸ್ಟೀವ್ ಜಾಬ್ ಮೃತದೇಹವಿದ್ದ ಮಂಚದ ಮೇಲಿನ ದಿಂಬಿನ ಕೆಳಗೆ ಕರೋಲಿ ಬಾಬಾರ ಫೆÇೀಟೋ ಒಂದು ಸಿಕ್ಕಿತು. ಹಾಗಾಗಿ ಆ ಬಾಬಾನೇ ಸ್ಟೀವ್ ಜಾಬ್ಸ್‍ಗೆ ಗುರು ಎಂದು ಎಲ್ಲರೂ ಭಾವಿಸುತ್ತಿದ್ದಾರೆ!!

karoli-baba-ashram

ಇನ್ನು, ಜುಕರ್ ಬರ್ಗ್ ವಿಷಯಕ್ಕೆ ಬಂದರೆ, ಫೇಸ್‍ಬುಕ್ ಪ್ರಾರಂಭಿಸುವ ಹೊಸದರಲ್ಲಿ ತೀವ್ರವಾಗಿ ನಷ್ಟ ಅನುಭವಿಸಿದ ಜುಕರ್ ಬರ್ಗ್, ಈ ಹಿನ್ನೆಲೆಯಲ್ಲಿ ಸ್ಟೀವ್
ಜಾಬ್ಸ್ ಬಳಿ ಹೋಗಿ ಸಲಹೆ ಕೇಳಿದರಂತೆ. ಆಗ ಕರೋಲಿ ಬಾಬಾ ಬಗ್ಗೆ ಸ್ಟೀವ್ ಜಾಬ್ಸ್ ಹೇಳಿದ್ದು, ತದನಂತರದಲ್ಲಿ ಜುಕರ್ ಬರ್ಗ್ ಸಹ ಆ ಆಶ್ರಮದಲ್ಲಿ ಸ್ವಲ್ಪ ಸಮಯ ಕಳೆದು ಹೋದ ಬಳಿಕ ಸ್ವಲ್ಪ ತಿಂಗಳಲ್ಲೇ ಫೇಸ್‍ಬುಕ್ ಯಶಸ್ವಿಯಾಗಿ ಮುನ್ನಡೆಯಿತಂತೆ!! ಈಗ ಆ ಕಂಪೆನಿಗಿರುವ ಹೆಸರು ನಮಗೆಲ್ಲಾ ಗೊತ್ತೇ ಇದೆ. ಇತ್ತೀಚೆಗೆ ಜುಕರ್ ಬರ್ಗ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆ ಬಾಬಾನ ಬಗ್ಗೆ ತಿಳಿಸಿ, ಅಂದಿನ ನೆನಪುಗಳನ್ನು ಅವರೊಂದಿಗೆ ಹಂಚಿಕೊಂಡರಂತೆ!! ಹಾಗಾಗಿ ಸ್ಟೀವ್ ಜಾಬ್ಸ್, ಜುಕರ್ ಬರ್ಗ್ ಯಶಸ್ಸಿನ ಹಿಂದೆ ಇರುವ ವ್ಯಕ್ತಿ ಕರೋಲಿ ಬಾಬಾ ಎಂದು ಎಲ್ಲರೂ ಹೇಳುತ್ತಾರೆ.

ಕರೋಲಿಬಾಬಾ ಇಷ್ಟೊಂದು ಶಕ್ತಿಶಾಲಿ ವ್ಯಕ್ತಿಯೇ ಎಂದು ನೀವು ಕೇಳಬಹುದು!! ಖಂಡಿತಾವಾಗಿಯೂ, ಬಾಬಾ ಅನೇಕ ದಿವ್ಯ ಶಕ್ತಿಗಳನ್ನು ಹೊಂದಿರುವಂತಹ ವ್ಯಕ್ತಿ. ಹಾಗಾಗಿ ಕರೋಲಿ ಬಾಬಾ ಆಶ್ರಮದಿಂದ ಸ್ವಲ್ಪ ದೂರದಲ್ಲಿದೆ ಐತಿಹಾಸಿಕವಾದ ಹನುಮಾನ್ ದೇವಾಲಯ !! ಹೌದು.. ಸ್ವತಃ ಹನುಮಾನ್ ಭಕ್ತರಾದ ಬಾಬಾ ದೇವರಿಂದ ಕೆಲವು ದಿವ್ಯ ಶಕ್ತಿಗಳನ್ನು ಪಡೆದರಂತೆ. ಹಾಗಾಗಿ ಅವರಿಗೆ ಅನೇಕ ಮಹಿಮೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ!! ಭೂತ, ಭವಿಷ್ಯತ್, ವರ್ತಮಾನ ಕಾಲಗಳ ಬಗ್ಗೆ ಅನೇಕ ತಿಳುವಳಿಕೆಯನ್ನು ಹೊಂದಿರುವ ಇವರಿಗೆ, ಅದೃಶ್ಯ ಶಕ್ತಿಗಳು ಸಹ ಇವೆ ಎನ್ನುತ್ತಾರೆ!! ಅದೇನೇ ಇರಲಿ, ಕರೋಲಿ ಬಾಬಾ ಎಂದರೆ ಅಲ್ಲಿನ ಸ್ಥಳೀಯರಿಗೆ ಮಾತ್ರ ಅಚಲ ನಂಬಿಕೆ. ಈ ಹಿನ್ನೆಲೆಯಲ್ಲಿ ಅನೇಕ ಮಂದಿ ಭಕ್ತರು ಉತ್ತರಾಖಂಡ ರಾಜ್ಯದ ನೈನಿತಾಲ್‍ನಲ್ಲಿನ ಕರೋಲಿ ಮಾತಾ ಆಲಯಕ್ಕೆ ಬೇಟಿ ನೀಡುತ್ತಾರೆ!!

ಹೌದು.. ಇಂತಹ ಅಭೂತಪೂರ್ವವಾದ ಶಕ್ತಿಯನ್ನು ಹೊಂದಿರುವ ಕರೋಲಿಬಾಬಾನ ಬಗ್ಗೆ ಭಾರತೀಯರಿಗಿಂತ ವಿದೇಶಿಯರಿಗೆ ಹೆಚ್ಚಾಗಿ ತಿಳಿದಿದ್ದಾರೆ ಎಂದರೆ
ಕರೋಲಿಬಾಬಾನಂತಹ ಅದೆಷ್ಟೋ ವ್ಯಕ್ತಿಗಳು ಭಾರತದಲ್ಲಿ ಇದ್ದಾರೋ ಗೊತ್ತಿಲ್ಲ. ಅಂತೂ..!! ಸ್ಟೀವ್ ಜಾಬ್ ಹಾಗೂ ಜುಕರ್ ಬರ್ಗ್‍ರಂತಹ ವ್ಯಕ್ತಿಗಳಿಗೆ ಭಾರತದ ಕರೋಲಿ ಬಾಬಾನೇ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರೆ ಸದಾ ಹೆಮ್ಮೆಯ ವಿಚಾರ!!

ಮೂಲ:https://kannada.ap2tg.com/karoli-baba-is-key-behind-steve-jobs-and-zuckerbergs-success/

-ಅಲೋಖಾ

Tags

Related Articles

Close