ಅಂಕಣ

ಚೀನಾ-ಪಾಕಿಸ್ತಾನದ ಮುಸುಡಿಗೆ ಬಿದ್ದಿದೆ ಪೆಟ್ಟು! ಮೋದಿ ಮಾಡಿದ ಗಿಮಿಕ್ ಏನು ಗೊತ್ತೇ? ಹಿಂದೆ ಸರಿಯಿತೇ ಡ್ರ್ಯಾಗನ್!! ಬೀ ಅಲರ್ಟ್!!

ಬ್ರಿಟನ್ನಿನ ಸಂಸತ್ತು ತೆಗೆದುಕೊಂಡ ಐತಿಹಾಸಿಕ ನಿರ್ಣಯ, ನಮ್ಮಲಿರುವ ಅನೇಕರ ಕಿವಿಗಳಿಗೆ ರಾಚದೇ ಮಾಯಾವಾಯಿತು. ಉತ್ತರಪ್ರದೇಶದ ರಾಜಕೀಯ ಸಂವಾದದಲ್ಲಿ ಮೈಮರೆತಿದ್ದ ನಾವು ಜಾಗತೀಕ ಮಟ್ಟದಲ್ಲಿ ಭಾರತದ ಪರವಾಗಿ ಮಂಡಿಸಲ್ಪಟ್ಟ ಮಹತ್ವದ ನಿರ್ಣಯದ ಚರ್ಚೆಮಾಡುವುದನ್ನು ಮರೆತೇ ಬಿಟ್ಟಿದ್ದೆವು!! ಅಸಲಿಗೆ ಪಾಕಿಸ್ತಾನ ಗಿಲ್‍ಗಿಟ್ ಬಾಲ್ಟಿಸ್ತಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಘೋಷಣೆಯನ್ನು ಮಾಡಲು ಸಿದ್ದತೆ ನಡೆಸಿತ್ತು. ಈ ಹೊತ್ತಿನಲ್ಲಿಯೇ ಸರಿಯಾಗಿ ಬ್ರಿಟನ್ನಿನ ಸಂಸತ್ತಿನಲ್ಲಿ ಕಂಸರ್‍ವೇಟಿವ್ ಪಕ್ಷದ ಸಂಸದರಾದ ಬಾಬ್ ಬ್ಲಾಕ್‍ಮನ್ ಪಾಕಿಸ್ತಾನ ಮತ್ತು ಗಿಲ್‍ಗಿಟ್ ಬಾಲ್ಟಿಸ್ತಾನಗಳನ್ನು ನುಂಗಲು ಹವಣಿಸುತ್ತಿರುವುದನ್ನು ವಿರೋಧಿಸಿ ಗೊತ್ತುಳಿ ಮಂಡಿಸಿದ್ದಾರೆ!! ಈ ಪ್ರದೇಶ ಜಮ್ಮು ಕಾಶ್ಮೀರಕ್ಕೆ ಸೇರಿದ್ದು ಪಾಕಿಸ್ತಾನ ಅದನ್ನು ವಶದಲ್ಲಿಟ್ಟಿರೋದೇ ಕಾನೂನು ಬಾಹಿರ ಅಂತಹದರಲ್ಲಿಅಲ್ಲಿ ಚೀನಾದ ಜೊತೆ ಸೇರಿ ಎಕಾನಾಮಿಕ್ ಕಾರಿಡಾರ್ ನಿರ್ಮಿಸಲು ಹೊರಟಿರುವುದು ಮತ್ತೂ ,ಈ ನಿಟ್ಟಿನಲ್ಲಿ ಜನರೊಂದಿಗೆ ಕ್ರೂರವಾಗಿ ನಡೆದುಕೊಳ್ಳುತ್ತಿರುವುದು ಅಕ್ಷರಶಃ ಮಾನವಹಕ್ಕುಗಳ ಉಲ್ಲಂಘನೆಯೇ ಎಂದಿದ್ದಾರೆ!!

ಮುಂದುವರೆಸಿ, ಈ ಪ್ರದೇಶಗಳು ಭಾರತಕ್ಕೆ ಸೇರಿದವು ಅಂತ ಬ್ಲಾಕ್‍ಮನ್ ಹೇಳಿದ ಮಾತಿಗೆ ಎಲ್ಲರೂ ತಲೆದೂಗಿ ನಿಳುವಳಿಯನ್ನು ಒಪ್ಪಿಕೊಂಡಿದ್ದಾರೆ!! ಇಷ್ಟು ದಿನ ಯಾವುದನ್ನು ,ಬೊಬ್ಬಿಡುತ್ತಾ ನಾವೇ ಅಂಡಳಿಯುತ್ತಿದ್ದೇವೋ ಅದಕ್ಕೊಂದು ಜಾಗತೀಕ ಮೌಲ್ಯ ಈಗ ಬಂದಿದೆ. ನೆನಪಿಡಿ… ಪಾಕ್ ಆಕ್ರಮಿತ ಕಾಶ್ಮೀರದ ಬಹುದೊಡ್ಡ ಭೂಭಾಗವೇ ಗಿಲ್‍ಗಿಟ್ ಮತ್ತು ಬಾಲ್ಟಿಸ್ತಾನ!! ಬ್ರಿಟಿಷರು ಮಹಾರಾಜ ಹರಿಸಿಂಗರ ಸಹಾಯದಿಂದ ಇದನ್ನು ಆಳುತ್ತಿದ್ದರು. ರಷ್ಯಾದೊಂದಿಗೆ ಸಂಬಂಧ ಸೂಕ್ತವಾಗಿ ನಿಭಾಯಿಸುವ ದೃಷ್ಟಿಯಿಂದ ಇದು ಅವರಿಗೆ ಮಹತ್ವದ ಪ್ರದೇಶವಾಗಿತ್ತು. ಬ್ರಿಟಿಷರು ಗಿಲ್‍ಗಿಟ್ ಸ್ಕೌಟ್ ಎಂಬ ಸೇನಾ ತುಕುಡಿಯನ್ನು ಅಲ್ಲಿ ನೆಲೆಗೊಳಿಸಿದರು ಎರಡನೇ ಮಹಾಯುದ್ದದ ನಂತರ ಭಾರತದ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡಾಗ ತಾವು ಗೌರವಯುತವಾಗಿ ಹೊರಡುವ ನೆಪದಲ್ಲಿ ಬ್ರಿಟಿಷರು ಈ ದೇಶವನ್ನು ತುಂಡರಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಅಂತೆಯೇ ಗಿಲ್‍ಗಿಟ್ ಸ್ಕೌಟ್ಸ್‍ನ್ನು ಗಿಲ್‍ಗಿಟ್‍ನಿಂದ ಹಿಂಪಡೆದು ಮಹಾರಾಜರಿಗೆ ಮೇಜರ್ ಬ್ರೌನ್ ಮತ್ತು ಕ್ಯಾಪ್ಟನ್ ಮತೀಸ್‍ನನ್ನು ಬಳಸಿಕೊಳ್ಳುವಂತೆ ಉಳಿಸಿ ಹೋದರು.

ಸ್ವಾತಂತ್ರ್ಯದ ಹೊಸ್ತಿಲಿನಲ್ಲಿ ಭಾರತದದೊಂದಿಗೆ ಸೇರುವ ವಿಚಾರದಲ್ಲಿ ಗೊಂದಲದಲ್ಲಿದ್ದ ರಾಜನಿಗೆ, ಪಾಕಿಸ್ತಾನ ಅಪ್ರಚೋದಿತ ದಾಳಿಯಿಂದ ತೆಗೆಯಲಾಯಿತು. ತಕ್ಷಣಕ್ಕೆ ಭಾರತದದೊಂದಿಗೆ ವಿಲೀನವಾಗುವ ಪತ್ರಕ್ಕೆ ಸಹಿ ಹಾಕಿಬಿಟ್ಟರು!! ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂಬ ಇರಾದೇ ಹೊಂದಿದ್ದ ಮೇಜರ್ ಬ್ರೌನ್ ಗೆ ಇದು ನುಂಗಲಾರದ ತುತ್ತಾಗಿತ್ತು. ಆತ ತಡ ಮಾಡಲಿಲ್ಲ. ಗಿಲ್‍ಗಿಟ್ ಭಾಗದಲ್ಲಿ ಮಹಾರಾಜರಿಂದ ನೇಮಕವಾಗಿದ್ದ ರಾಜಪಾಲರನ್ನು ಕಿತ್ತೆಸೆದು ಪಾಕಿಸ್ತಾನದ ಮುಖ್ಯಸ್ಥರ ಕೈಗೆ ಈ ಪ್ರದೇಶ ಒಪ್ಪಿಸಿ ಬಿಟ್ಟ!!

ಗಿಲ್‍ಗಿಟ್ ಸ್ಕೌಟ್ಸ್‍ನ ತುಕಡಿ ಬಾಲ್ಟಿಸ್ತಾನವನ್ನು ವಶಪಡಿಸಿಕೊಂಡು ಲಡಾಕ್ ನ ಕಡೆಗೆ ಮುನ್ನುಗ್ಗಿತು. ಭಾರತೀಯ ಸೇನೆ ತೀವ್ರ ಪ್ರತಿರೋಧ ಒಡ್ಡಿ ಕಾರ್ಗಿಲ್ ವರೆಗಿನ ಪ್ರದೇಶವನ್ನೆಲ್ಲ ಮತ್ತೆ ವಶಪಡಿಸಿಕೊಂಡು ಪಾಕಿಸ್ತಾನದ ಬಯಕೆಗೆ ತಣ್ಣೀರೆರೆಚಿ ಬಿಟ್ಟಿತ್ತು!! ಆದರೆ, ಅಷ್ಟರವರೆಗೆ ಗಿಲ್‍ಗಿಟ್ ಬಾಲ್ಟಿಸ್ತಾನ ಪ್ರದೇಶಗಳು ಲಡಖ್ ಸ್ಕೌಟ್ ವಶದಲ್ಲಿತ್ತು. ಈ ವೇಳೆಗೆ ಜಮ್ಮು-ಕಾಶ್ಮೀರ ಗೊಂದಲವನ್ನು ನೆಹರೂ ಅಂತರಾಷ್ಟ್ರೀಯ ಮಟ್ಟಕ್ಕೆ ಒಯ್ದರು. ಅಲ್ಲಿ ಗಡಿಯಲ್ಲಿ, ತನ್ನ ಪಡೆಯನ್ನು ಕಡಿತಗೊಳಿಸಬೇಕೆಂದು ಭಾರತಕ್ಕೆ ವಿಶ್ವಸಂಸ್ಥೆ ತಾಕಿತ್ತು ಮಾಡಿದರೆ ಜಮ್ಮು ಕಾಶ್ಮೀರದ ಒಟ್ಟು ಆಕ್ರಮಿತ ಭಾಗದಿಂದ ಪಾಕ್ ಸೇನೆ ಮರಳಬೇಕೆಂದು ಪಾಕಿಸ್ತಾನಕ್ಕೆ ಮಾರ್ಗದರ್ಶನ ಮಾಡಿತು. ಆ ನಂತರ ಜನಮತಗಣ ನಡೆಸಿ ಯಾರು ಎಲ್ಲಿಗೆ ಸೇರಬೇಕೆಂದು ನಿರ್ಧರ ಮಾಡಿದರಾಯಿತು ಎಂಬುವುದು ಅದರ ಮನೋಗತವಾಗಿತ್ತು!! ಭಾರತ ಸೇನಾಜಮಾವಣೆ ಖಡಿತಗೊಳಿಸಿತು. ಆದರೆ ಪಾಕಿಸ್ತಾನ ವಶಪಡಿಸಿಕೊಂಡ ಭೂಭಾಗದಿಂದ ಹಿಂದೆ ಸರಿಯಲೇ ಇಲ್ಲ. ಈ ನಿಯಾಮವನ್ನು ಧಿಕ್ಕರಿಸಿ ಜನಮತಗಣನೇ ಆಗಲೇಬೇಕೆಂದು ಹಠ ಹಿಡಿಯಿತು. ಅನಧಿಕೃತವಾಗಿ ವಶಪಡಿಸಿಕೊಂಡ ಭೂಭಾಗದಿಂದ ಹಿಂದೆ ಸರಿಯುವವರೆಗೂ ಜನಮತಗಣನೇಯ ಪ್ರಶ್ನೆಯೇ ಇಲ್ಲ ಎನ್ನುವ ವಾದಕ್ಕೆ ಭಾರತ ಬದ್ದವಾಯಿತು.

ಅತ್ತ ಪಾಕ್ ಆಕ್ರಮಿತ ಕಾಶ್ಮೀರ ಆರಂಭದಲ್ಲಿದ್ದ ಉತ್ಸಾಹವನ್ನು ಕಳೆದುಕೊಂಡು ಅಸಮರ್ಥವಾಯಿತು. ಪಾಕಿಸ್ತಾನವು ಗಿಲ್‍ಗಿಟ್ ಬಾಲ್ಟಿಸ್ತಾನಗಳನ್ನು ಕಡೆಗಣಿಸಿ ಯಾವುದೇ ಅಭಿವೃದ್ಧಿ ಇಲ್ಲದಂತೆ ಮಾಡಿತು. ಇದಕ್ಕೊಂದು ಸಾಂಸ್ಕøತಿಕ ಕಾರಣವೂ ಇದೆ. ಗಿಲ್‍ಗಿಟ್ ಪ್ರದೇಶದ ಬಹುಸಂಖ್ಯಾತರು ಶಿಯಾಗಳು ಆದರೆ ಈಡೀಯ ಪಾಲು ಪಾಕಿಸ್ತಾನದ ಬಹುಪಾಲು ಜನ ಸುನ್ನಿಗಳು. ಸದಾ ಶಿಯಾಗಳನ್ನು ದ್ವೇಷಿಸುವ ಈ ಸುನ್ನಿಗಳು ಭಾರತದ ವಿರುದ್ದ ಎತ್ತಿಕಟ್ಟಲು ಮಾತ್ರ ಗಿಲ್‍ಗಿಟ್ ಬಾಲ್ಟಿಸ್ತಾನಗಳನ್ನು ಬಳಸಿಕೊಂಡರು!! ಧರ್ಮದ ಅಫೀಮಿನ ನಶೆಯಿಂದ ಹೊರಬಂದ ಗಿಲ್‍ಗಿಟ್ ಭಾಗದಲ್ಲಿ ನಿಧಾನವಾಗಿ ಪ್ರತ್ಯೇಕತೆಯ ಕೂಗು ಮೊಳಗಲಾರಂಭಿಸಿತು!! ಜನ ಪಾಕಿಸ್ತಾನದ ಕಪಿಮುಷ್ಠಿಯಿಂದ ಹೊರಬರಬೇಕೆಂದು ಆಂದೋಲನ ಆರಂಭಿಸಿದರು!!

ಆದರೆ ಪಾಕಿಸ್ತಾನ ಯಾವುದಕ್ಕೂ ಜಗ್ಗಲಿಲ್ಲ!! ಆಗಲೇ ಚೀನಾ ಪಾಕಿಸ್ತಾನಕ್ಕೆ ತನ್ನ ಕಾರಿಡಾರ್ ಯೋಜನೆಯ ಕನಸು ಕಾಣಿಸಲು ಶುರುಮಾಡಿದ್ದು!! ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯ ಮೂಲಕ ಚೀನಾ ಮತ್ತು ಪಾಕ್‍ಗಳನ್ನು ಆತ್ಯಧುನಿಕ ರಸ್ತೆಗಳ ಮೂಲಕ ಬೆಸೆಯುವ ಚೀನಿ ಯೋಜನೆ, ಪಾಕ್‍ನ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಪುಕಾರು ಹಬ್ಬಿಸಲಾಯಿತು!! ಚೀನಾದ ಖಾಶ್‍ಘರ್‍ನಿಂದ ಪಾಕ್‍ನ ಗ್ವದಾರ್ ಬಂದರಿನವರೆಗೆ ನಿರ್ಮಾಣಗೊಳ್ಳುವ ಈ ರಸ್ತೆ ದಾರಿಯುದ್ದಕ್ಕೂ ಪಾಕಿಸ್ತಾನದ ಹಲವೆಡೆ ಜಲವಿದ್ಯುತ್ ಶಾಕೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ತೆರೆಯಲಿದೆ, ರಾಜಮಾರ್ಗಗಳನ್ನು ನಿರ್ಮಿಸಲಿದೆ, ನೂರಾರು ಕೈಗಾರಿಕಾ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಿದೆ, ಪ್ರಮುಖ ನಗರಗಳನ್ನು ಬೆಸೆಯಲಿದೆ, ಲಕ್ಷಾಂತರ ಉದ್ಯೋಗ ಸೃಷ್ಟಿಸಲಿದೆ ಎಂದೆಲ್ಲಾ ಚೀನಾ ಹೇಳುತ್ತೆ!!

ಇಷ್ಟೇ ಓದಿಕೊಂಡರೆ, ಪಾಕಿಸ್ತಾನದ ಅಭಿವೃದ್ಧಿಗೆ ಚೀನಾ ಬಲವಾಗಿ ನಿಂತಿದೆ ಎಂದರೂ ಅಚ್ಚರಿ ಇಲ್ಲ. ವಾಸ್ತವವಾಗಿ ದೊಡ್ಡಮಟ್ಟದ ಲಾಭವಾಗೋದು ಚೀನಾಕ್ಕೆ ತನ್ನ ವಸ್ತುಗಳನ್ನು ಜಗತ್ತಿಗೆ ತಲುಪಿಸಲು ಸಾವಿರಾರು ಮೈಲು ಸಮುದ್ರಮಾರ್ಗಗಳನ್ನು ಕ್ರಮಿಸಬೇಕಿದ್ದ ಚೀನಾ ಈ ಹೊಸ ರಸ್ತೆಯಿಂದ ಅಷ್ಟೂ ಪ್ರಯಾಣ ಉಳಿಸುವುದಲ್ಲದೇ ಜಗತ್ತಿನ ಪ್ರಮುಖ ಭೂಭಾಗಗಳನ್ನು ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ತಲುಪಬಲ್ಲದು. ಹೀಗಾಗಿ ಸುಮಾರು 50 ಶತಕೋಟಿ ಡಾಲರ್ ಗಳ ವೆಚ್ಚಕ್ಕೆ ಅದು ಸಿದ್ದವಾಗಿರೋದು!! ಅದಕ್ಕಿರುವ ಏಕೈಕ ಸಮಸ್ಯೆ ಎಂದರೆ ಹೀಗೆ ಹಾದುಹೋಗಬೇಕಿರುವ ರಸ್ತೆ ವಿವಾದದ ಕೇಂದ್ರವಾಗಿರುವ ಗಿಲ್‍ಗಿಟ್ ಬಾಲ್ಟಿಸ್ತಾನ ಮತ್ತು ಸಿಂದ್ ಬಲೂಚಿಸ್ತಾನದ ಮೂಲಕ ಹಾದುಹೋಗುತ್ತಿರುವುದು. ಭಾರತಕ್ಕೆ ಈ ಯೋಜನೆ ನಿಜಕ್ಕೂ ಆತಂಕಕಾರಿಯೇ… ಗ್ವದಾರರ್  ಬಂದರಿನ ನಿರ್ಮಾಣ ಮಾಡಿರುವ ಚೀನಾ ಅಲ್ಲಿಂದ ಭಾರತೀಯ ಸಮುದ್ರಿಯಾ ಚಟುವಟಿಕೆಗಳ ಮೆಲೆ ನಿಗಾ ಇಡುವ ಸಾಧ್ಯವಾಗುತ್ತೆ. ಅಲ್ಲದೇ, ಪಾಕಿಸ್ತಾನಕ್ಕೆ ಯಾವಾಗ ಬೇಕಿದ್ದರೂ ಸೈನ್ಯದ ಸಹಕಾರವನ್ನು ಅತ್ಯಂತ ವೇಗವಾಗಿ ತಲುಪಿಸುವಲ್ಲಿ ಯಶಸ್ವಿಯಾಗುತ್ತೆ.

ಈ ಹಿನ್ನಲೆಯಲ್ಲಿ ಮೋದಿ ಸರಕಾರ ಬಂದೊಡನೆ ಇರಾನಿನ ಚಾಹಬರ್ ಬಂದರನ್ನು ಅಭಿವೃದ್ಧಿಪಡಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಅಷ್ಟಕ್ಕೆ ಸುಮ್ಮನಾಗದೇ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಪರ ಒಲವು ಮೂಡುವಂತೆ ಮಾಡುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡರು ಮೋದಿ!! ಪ್ರವಾಹದಲ್ಲಿ ಕಾಶ್ಮೀರ ಕೊಚ್ಚಿ ಹೋಗಿದ್ದಾಗ ಸ್ವತಃ ಪ್ರಧಾನಿಗಳೇ ಕಾಳಜಿ ವಹಿಸಿ ಕಾಶ್ಮೀರದ ಪುನಶ್ಚೇತನಕ್ಕೆ ಕೈಗೊಂಡ ಕಾರ್ಯಚರಣೆ ಪಾಕ್ ವಶದಲ್ಲಿರುವ ಕಾಶ್ಮೀರಿಗರಿಗೆ ಹೊಟ್ಟೆಹುರಿಸಲು ಸಾಕಿತ್ತು. ಅಲ್ಲಿಂದಾಚೆಗೆ ತಮ್ಮನ್ನು ಕ್ಯಾರೆ ಎಂದು ಕೇಳದ ಪಾಕ್ ವಿರುದ್ದ, ತೀವ್ರ ತಿರುಗಿಬಿತ್ತು ಗಿಲ್‍ಗಿಟ್ ಬಾಲ್ಟಿಸ್ತಾನ!! ಅದರೊಟ್ಟಿಗೆ ಬಲೂಚಿಸ್ತಾನ ಸಿಂದುಗಳು ಮುಗಿಬಿದ್ದವು. ಚೀನಾದ ಈ ಯೋಜನೆಯಿಂದ ನವಾಜ್ ಶರೀಫರ ಪಂಜಾಬ್ ಗೆ ಲಾಭ ಹೊರತು ಇತರರಿಗಲ್ಲ ಎನ್ನುವ ಸಂದೇಶ ತೀವ್ರವಾಗಿ ಹಬ್ಬಿ ಪ್ರತಿಯೊಬ್ಬರೂ ತಿರುಗಿ ಬಿದ್ದರು. ಬಲೂಚಿಸ್ತಾನ ಸಿಂಧುಗಳಲ್ಲಿ ಸ್ವಾತಂತ್ರ್ಯದ ಕೂಗು ಮೊಳಗಲಾರಂಭಿಸಿತು. ಸ್ವತಃ ಭಾರತ ತನ್ನೆಲ್ಲಾ ಲಾಬಿ ಬಳಸಿ ಈ ಹೋರಾಟಗಳು ತೀವ್ರವಾಗುವಂತೆ ನೋಡಿಕೊಂಡಿತು.

ಹೌದು.. ಇದೆಲ್ಲಾ ರಾಜತಾಂತ್ರಿಕತೆಯ ಮಹತ್ವದ ಭಾಗ. ಯಾವುದಾದರೂ ಆಮಿಷದ ಮೂಲಕ ಶತ್ರು ರಾಷ್ಟ್ರದಲ್ಲಿ ಅವರದ್ದೇ ವಿರುದ್ದ ಕೆಲಸ ಮಾಡುವವರನ್ನು ಹಿಡಿದು ವ್ಯೂಹ ರಚಿಸುವುದು. ಚೀನಾ, ಜೆಎನ್‍ಯು ಪ್ರೊಫೆಸರ್ ಗಳ ಮೂಲಕ, ಅವಾರ್ಡ್‍ವಾಪ್ಸಿ ಗ್ಯಾಂಗ್‍ಗಳ ಮೂಲಕ ಭಾರತದಲ್ಲಿ ಮಾಡುತ್ತಲ್ಲ ಹಾಗೇನೆ ಇದು!! ಭಾರತ ಪಾಕಿಸ್ತಾನದಲ್ಲಿ ಎಂತಹ ದೊಡ್ಡ ಜಾಲ ಹಬ್ಬಿಸಿ ಬಿಟ್ಟಿದೆ ಎಂದರೆ ಚೀನಾದ ಕೆಲಸಕ್ಕೆ ಗಲ್ಲಿ ಗಲ್ಲಿಯಲ್ಲಿಯೂ ತಡೆ ಒಡ್ಡುವಂತೆ ಸ್ಥಳಿಯರನ್ನು ಎತ್ತಿಕಟ್ಟಿದೆ. ಈ ಕಾರಣದಿಂದಾಗಿಯೇ ಗಿಲ್‍ಗಿಟ್ ಬಾಲ್ಟಿಸ್ತಾನಗಳನ್ನು ತನ್ನದೇ ಅಂಗವೆಂದು ಘೋಷಿಸಿ, ಅದನ್ನು ತನ್ನ ಇಚ್ಛೆಗೆ ತಕ್ಕಂತೆ ನಿಯಂತ್ರಿಸುವ, ಚೀನಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಿತ್ತು ಪಾಕಿಸ್ತಾನ!! ಅದಕ್ಕೆ ಪೂರಕವಾಗಿ ಆ ಪ್ರದೇಶದಲ್ಲಿ ಭಾರತ ವಿರೋಧಿ ಚಿಂತನೆಗಳನ್ನು ವ್ಯಾಪಕವಾಗಿ ಹಬ್ಬಿಸುವ ಅದರ ಕೆಲಸವೂ ತೀವ್ರಗೊಂಡಿತು.

ಅಕ್ಷರಶಃ.. ಇದೇ ಹೊತ್ತಿನಲ್ಲಿ ಮೋದಿಯವರ ರಾಜತಾಂತ್ರಿಕ ನಡೆಯ ಪ್ರಭಾವ ಹೇಗಾಗಿದೆ ಎಂದರೆ, ಗಿಲ್‍ಗಿಟ್ ಬಾಲ್ಟಿಸ್ತಾನ ಪಾಕಿಸ್ತಾನಕ್ಕೇ ಸೇರಿದ್ದೇ ಅಲ್ಲ, ಅದು ನ್ಯಾಯಯುತವಾಗಿ ಭಾರತದ್ದೇ ಅಂಗವೆಂದು ಇಂಗ್ಲೆಂಡ್ ಘೋಷಿಸಿ ಬಿಟ್ಟಿದೆ. ಡೋನಾಲ್ಡ್ ಟ್ರಂಪ್ ಮೋದಿಯವರಿಗೆ ಕರೆ ಮಾಡಿ ಅಮೇರಿಕಾಕ್ಕೆ ಬರುವಂತೆ ಆಹ್ವಾನ ನೀಡಿದ್ದಂತೂ ಇನ್ನೊಂದು ಮಹತ್ವದ ಹೆಜ್ಜೆ!! ಪಾಕಿಸ್ತಾನವಂತೂ ಬಾಯಿಬಡಿದು ಕೊಳ್ಳುವುದು ಖಚಿತಾ. ಚೀನಾ ಕೂಡ ಹೂಡಿದ ಶತಕೋಟಿಯಾಂತ್ಯರ ಡಾಲರ್ ಬಂಡವಾಳ ನೀರುಪಾಲಾಯಿತೆಂದು ಕಣ್ಣೀರಿಡಲೇ ಬೇಕು!! ನಾವು ಮುಸುಡಿಗೆ ಕೊಟ್ಟಪೆಟ್ಟನ್ನು ಜೀರ್ಣಿಸಿಕೊಳ್ಳಲು ಅದಕ್ಕೆ ಸಮಯ ಬೇಕೇ ಬೇಕು!! ಹಾಗಂತ ಅದು ಸುಮ್ಮನೆ ಇರೋದಿಲ್ಲ, ಡ್ರ್ಯಾಗನ್ ಮುಂದಿನ ಹೆಜ್ಜೆಗೆ ಸಿದ್ಧತೆ ಮಾಡಿಕೊಳ್ತಾನೇ ಇರುತ್ತೆ!! ಸಿಂಹವಾಗಿ ಎದುರಿಸುವುದಕ್ಕೆ ನಾವು ಸಿದ್ದವಿದ್ದರೆ ಆಯಿತು ಅಷ್ಟೇ!!

(ಚಕ್ರವರ್ತಿ ಸೂಲಿಬೆಲೆಯವರ ಭಾಷಣದಿಂದ ಆಯ್ದ ಲೇಖನ)

– ಅಲೋಖಾ

Tags

Related Articles

Close