ಇತಿಹಾಸ

ನೆಹರೂ ಹಾಗೂ ಗಾಂಧಿ ಮನಸ್ಸು ಮಾಡಿದ್ದರೆ ಭಗತ್, ರಾಜಗುರು, ಸುಖದೇವರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಬಹುದಿತ್ತು! ಆದರೆ, ಅವರೇ ಒಪ್ಪಿಗೆ ಸೂಚಿಸಿದ್ದು ಯಾಕೆ ಗೊತ್ತೇ?!

ಸುಮಾರು 6 ಲಕ್ಷ ವೀರ ದೇಶಪ್ರೇಮಿಗಳ ಬಲಿದಾನದ ಮೇಲೆ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.1857ರ ಪ್ರಥಮ ಸ್ವಾತಂತ್ರ್ಯ ಮಹಾಸಂಗ್ರಾಮ,ಕೂಕಾ ಆಂದೋಲನ,ಖುದಿರಾಮನ ಸಾಹಸ,ಭಗತ್ ಸಿಂಗರ ಬಲಿದಾನ,ಸುಭಾಷರ ಸೇನೆ ಹೀಗೆ ಅನೇಕರ ಪ್ರಯತ್ನ ಬಲಿದಾನಗಳಿಂದ ನಮ್ಮ ಸ್ವಾತಂತ್ರ್ಯ ಅಲಂಕೃತಗೊಂಡಿದೆ.

ಭಾರತಕ್ಕೆ ಸ್ವಾತಂತ್ರ್ಯವನ್ನು ಯಾರು ತಂದುಕೊಟ್ಟಿದ್ದಾರೆ ಅಂತ ಕೇಳಿದ ಕೂಡಲೇ ಮಹಾತ್ಮ ಗಾಂಧಿ, ನೆಹರೂ ಅಂತ ಉತ್ತರಿಸೋದನ್ನ ಕೇಳಿ ಕೇಳಿ ರೋಶಿ ಹೋಗಿದ್ದೇನೆ. ಮೊದಲು ಸ್ವಾತಂತ್ರ್ಯ ಹೋರಾಟವೇ ಇರಲಿಲ್ಲವಾ? 1914ರಲ್ಲಿ ಗಾಂಧಿ ಭಾರತಕ್ಕೆ ಬಂದ ನಂತರವೇ ಇಲ್ಲಿ ಚಳುವಳಿ ಆರಂಭಗೊಂಡಿತು,ಅವರ ನೇತೃತ್ವದಿಂದಾಗಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂಬುದು ಅನೇಕ ಭಾರತೀಯರಿಗೆ ಇರುವ ಮೂಢನಂಬಿಕೆ. ನಿಜ ಹೇಳಬೇಕೆಂದರೆ ಭಾರತದ ಸ್ವಾತಂತ್ರ್ಯ ಚಳುವಳಿಗೆ ಮಂಕು ಹಿಡಿದದ್ದೇ ನೆಹರೂ ಗಾಂಧೀಜಿಯ ಆಗಮನದ ನಂತರ! ಅವರ 30 ವರ್ಷಗಳ ನಾಯಕತ್ವವೇ ನಮ್ಮ ನಾಡಿಗೆ ಮಾಡಬಾರದ ಅಪಚಾರವನ್ನು ಮಾಡಿತು. ನೆಹರೂ ಹಾಗೂ ಗಾಂಧೀಜಿಯವರು ಅನೇಕ ಕ್ರಾಂತಿಕಾರಿಗಳ ಬಲಿದಾನದ ಮೇಲೆ ಸಿಂಹಾಸನ ಹಾಕಿ ಕೂತುಬಿಟ್ಟಿದ್ದಾರೆ.

ಭಾರತದ ಇತಿಹಾಸದಲ್ಲಿ ದೊಡ್ಡ ಕುತಂತ್ರ ನಡೆದು, ನಿಜವಾದ ಕ್ರಾಂತಿಕಾರಿಗಳಿಗೆ ಮತ್ತು ಇಂದಿನ ಪೀಳಿಗೆಗೆ ಮೋಸವಾಗಿದೆ. ಇಷ್ಟೊಂದು ದೊಡ್ಡ
ವಂಚನೆ ಇತಿಹಾಸದಲ್ಲಿ ಯಾವ ಕಾಲದಲ್ಲೂ,ಯಾವ ದೇಶದಲ್ಲೂ ಆಗಿರಲಿಕ್ಕಿಲ್ಲ. ಒಂದಿಡೀ ದೇಶವನ್ನು ತಪ್ಪು ಕಲ್ಪನೆಗೆ,ತಪ್ಪು ಗ್ರಹಿಕೆಗೆ,ತಪ್ಪು ನಂಬಿಕೆಗೆ ತಳ್ಳಿದ ಮಹಾನ್ ಕುತಂತ್ರವಿದು. ಗಾಂಧೀಜಿಯ ಮತ್ತು ನೆಹರು ನಾಯಕತ್ವದಿಂದಲೇ ನಮಗೆ ಸ್ವಾತಂತ್ರ್ಯ ಲಭಿಸಿತು ಎಂಬುದಕ್ಕಿಂತ ದೊಡ್ಡ ಅಪದ್ಧ ಮತ್ತೊಂದೇನಿದೆ. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆಗೆ ನಿಜವಾದ ಇತಿಹಾಸವನ್ನು ತಿಳಿಸುವ ಪ್ರಯತ್ನವನ್ನು ಮಾಡೋಣ.

ಈ ಕೆಳಗಿನ ಕೆಲವು ಕಾರಾಣಗಳಿಂದಲೇ ನೆಹರೂ ಹಾಗೂ ಗಾಂಧೀಜಿ ಅಂದ್ರೆ ದೇಶಪ್ರೇಮಿಗಳಿಗೆ ಅಲರ್ಜಿ,

1)ಖಿಲಾಪತ್ ಚಳುವಳಿಯ ಬಗ್ಗೆ:

ಯಾವುದೋ ದೇಶದಲ್ಲಿ ಯಾವನೋ ತುರ್ಕನ ಅಧಿಕಾರ ಹೋದರೆ ಭಾರತದ ಮುಸಲ್ಮಾನ ಪ್ರತಿಭಟನೆಗೆ ಮುಂದಾಗ್ತಾನೆ! ಅದನ್ನು ಖಿಲಾಪತ್ ಚಳುವಳಿ ಅಂತ ಕರಿತಾನೆ. ಟರ್ಕಿಯ ಖಿಲಿಫ್ ನ ಅಧಿಕಾರ ಹೋದರೆ ಭಾರತದಲ್ಲಿ ಪ್ರತಿಭಟನೆ ಮಾಡೋದಂತೆ.ಹಾಸ್ಯಾಸ್ಪದ ಅಲ್ವಾ? ಹೌದು ನಿಜಕ್ಕೂ ಹಾಸ್ಯಾಸ್ಪದವೇ. ಆದರೆ ಆ ಖಿಲಾಪತ್ ಚಳುವಳಿಗೆ ಸ್ವತಃ ಗಾಂಧೀಜಿಯವರೇ ಬೆಂಬಲ ನೀಡಿದ್ದರು ಅಷ್ಟೇ ಅಲ್ಲ ಕೆಲವು ಕಡೆ ಅವರೇ ಮುಂದಾಳತ್ವ ವಹಿಸಿದ್ದರು. ಆ ಖಿಲಾಪತ್ ಚಳುವಳಿ ಅತಿರೇಕಕ್ಕೆ ಏರಿ ಮಾಪಿಳ್ಳೆ ಮುಸಲ್ಮಾನರು ಹಿಂದುಗಳ ಕಾರಣ ಹೋಮ ಮಾಡಿದರು,ಹಿಂದು ಮಹಿಳೆಯರ ಅತ್ಯಾಚಾರ ಮಾಡಿದರು. ಇದೆಲ್ಲಾ ಗಾಂಧೀಜಿಗೆ ಗೊತ್ತಾದ ಮೇಲೂ ಗಾಂಧಿ ತುಟಿ ಬಿಚ್ಚಲೇ ಇಲ್ಲ. ಕಾರವಿಷ್ಟೇ ಮುಸ್ಲಿಂ ಪ್ರೇಮದ,ಮುಸ್ಲಿಂ ತುಷ್ಟೀಕರಣ. ಮುಸ್ಲೀಮರ ಅಟ್ಟಹಾಸ ಹೆಚ್ಚಾಗಿ ಮತಾಂತರಗಳು ನಡೆದಾಗ ಸ್ವಾಮಿ ಶ್ರದ್ಧಾನಂದರು ಗರ್ಜಿಸಿ ಮರು ಮತಾಂತರ ಮಾಡುವ ಪ್ರಯತ್ನ ಮಾಡಿದರು. ಅದನ್ನು ಸಹಿಸದ ಮತಾಂಧ ಅಬ್ದುಲ್ ರಶೀದ್ ಸ್ವಾಮಿ ಶ್ರದ್ಧಾನಂದರನ್ನು ಗುಂಡಿಟ್ಟು ಕೊಂದು ಬಿಟ್ಟ.ಗಾಂಧೀಜಿ ಆ ಕೊಲೆಯ ಬಗ್ಗೆ ತುಟಿ ಬಿಚ್ಚಲೇ ಇಲ್ಲ. ಬದಲಿಗೆ ಆ ಅಬ್ದುಲ್ ರಶೀದನನ್ನು ತನ್ನ ಸಹೋದರನೆಂದು ಹೇಳಿಕೊಂಡ. ವಾವ್ ಗಾಂಧೀಜಿ!! ಇಷ್ಟಾದರೂ ಕೂಡಾ ಇವರು ಮಹಾತ್ಮರು.

2) ಭಾರತ ಮೂರನೇ ಒಂದು ಭಾಗವಾದದ್ದು:

ಭಾರತಕ್ಕೆ ವಿಭಜನೆ ಅನಿವಾರ್ಯವಿತ್ತೆ? ಆ ಷಂಡ ನೆಹರೂವಿನ ಕೈಲಿ ಈ ದೇಶವನ್ನು ಕೊಡುವುದರ ಬದಲು ಸರ್ದಾರ್ ವಲ್ಲಾಭಾಯಿ ಪಟೇಲರ ಕೈಲಿ ಈ ದೇಶದ ಚುಕ್ಕಾಣಿ ಕೊಟ್ಟಿದ್ದರೆ ಈ ದೇಶ ಭಗ್ನಗೊಳ್ಳುತ್ತಿರಲಿಲ್ಲ. ಭಾರತ ಇಬ್ಭಾಗವಾಗುವುದಾದರೇ ನನ್ನ ಹೆಣದ ಮೇಲೆ ಆಗಲಿ ಅಂತ ಮೊದಲು ಗಾಂಧೀಜಿ ಗರ್ಜಿಸಿ ಕೊನೆ ಕೊನೆಗೆ ಇಬ್ಭಾಗ ಮಾಡಿಯೇ ಬಿಟ್ಟರು. ಕಾರಣವಿಷ್ಟೆ ಮುಸ್ಲಿಂ ಮತಾಂಧ ಮಹಮದ್ ಅಲಿ ಜಿನ್ನಾ ಮೇಲಿನ ಪ್ರೀತಿಗೆ. ಗಾಂಧೀಜಿ ಯಾವಾಗಲೂ ಅಷ್ಟೇ ಮುಸಲ್ಮಾನರೆಂದರೆ ತುಂಬಾ ಪ್ರೀತಿ ಅದ್ಯಾಕೋ ಗೊತ್ತಿಲ್ಲ.

ಇರ್ವಿನ್ ಒಪ್ಪಂದದಲ್ಲಿ ಗಾಂಧೀಜಿ ಭಗತ್ ಸಿಂಗರನ್ನು ಬಿಡಿಸುವ ಬೇಡಿಕೆ ಇಟ್ಟಿದ್ದರೆ ಭಗತ್ ಸಿಂಗ್ ಬದುಕುಳಿಯುತ್ತಿದ್ದ. ಪ್ರಪಂಚದ ಯಾವುದೇ
ರಾಷ್ಟ್ರದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೂ ಸಹ ಭಗತ್ ಸಿಂಗ್ ರಷ್ಟು ಚಿಕ್ಕ ವಯಸ್ಸಿನಲ್ಲೇ ಮಾನವ ಇತಿಹಾಸದಲ್ಲಿ ಅಚ್ಚಳಿಯದ ಛಾಪೊತ್ತಿರುವ ಅಪ್ರತಿಮ ಸಾಹಸಿಗರು ಕಾಣಸಿಗುವುದಿಲ್ಲ.

ಶಿವಾಜಿ,ರಾಣಾ ಪ್ರತಾಪ್,ಪೃಥ್ವಿರಾಜ್ ಚೌಹಾಣ್ ಇವರೆಲ್ಲಾ ದಾರಿ ತಪ್ಪಿದವರು ಅಂತ ಗಾಂಧೀಜಿಯವರು ಯಾವಾಗಲೂ ಹೇಳುತ್ತಿದ್ದವರು. ಆ ಪುಣ್ಯ ಪುರುಷರಿಂದಲೇ ಭಾರತ ಭಾರತವಾಗಿ ಉಳಿದಿರೋದು ಅಂತ ಗಾಂಧೀಜಿಗೆ ಗೊತ್ತಿತ್ತು ಆದರೂ ಹಾದಿ/ದಾರಿ ತಪ್ಪಿದವರು ಅಂತ ಯಾಕೆ ಹೇಳ್ತಿದ್ರು ಗೊತ್ತಾ? ಗಾಂಧೀಜಿಗೆ ಅಹಿಂಸೆ ಬಿಟ್ಟು ಬೇರೇನೂ ಗೊತ್ತಿರಲಿಲ್ಲ ಆ ಅಹಿಂಸೆಯೂ ಪ್ರಖರ ಅಹಿಂಸೆಯಾಗಿರಲಿಲ್ಲ. ಮುಸಲ್ಮಾನರು ನಮ್ಮ ಮೇಲೆ ದಾಳಿ ಮಾಡಿದರೆ ಅದು ಹಿಂಸೆಯೇ ಅಲ್ಲ ಅನ್ನುವ ಧಾಟಿಯಲ್ಲಿ ಗಾಂಧೀಜಿ ಮಾತನಾಡುತ್ತಿದ್ದರು. ಇಂತಹ ಇಬ್ಬಗೆ ನೀತಿಯ ಗಾಂಧೀಜಿಯವರಿಗೆ ಅಹಿಂಸೆಯ ನಿಜವಾದ ಅರ್ಥ ಗೊತ್ತಿತ್ತಾ ಅಥವಾ ಇಲ್ವಾ ಅದು ಗೊಂದಲದಂತಿದೆ. ಚರಕಾಚಾರ್ಯರು ಹಿಡಿದುಕೊಂಡು ಸ್ವಾತಂತ್ರ್ಯ ಕೊಡು ಅಂದ್ರೆ ಕ್ರೂರಿ ಬ್ರಿಟಿಷರು ಕೊಟ್ಟುಬಿಡ್ತಾರಾ? ಚರಖಾದಿಂದ
ನೂಲಷ್ಟೆ ಬಂದೀತು ಆದರೆ ಚರಖಾದಿಂದ ಸ್ವಾತಂತ್ರ್ಯವಂತೂ ಖಂಡಿತ ಬೆಲ್ಲ ಆದರೆ ಇಂದಿಗೂ ಕೆಲ ಎಡಬಿಡಂಗಿಗಳು ಚರಾಖಾದಿಂದಲೇ ಸ್ವಾತಂತ್ರ್ಯ ಬಂದಿದೆ ಅಂತ ಬೊಂಬ್ಡಾ ಹಿಡೀತಾನೇ ಇದ್ದಾವೆ.

ಇಂತಹ ಇಬ್ಬಗೆ ನೀತಿಯ ಗಾಂಧೀಜಿ ಶಿವಾಜಿ ಮಹಾರಾಜ್,ರಾಣಾ ಪ್ರತಾಪ್,ಪೃಥ್ವಿರಾಜ್ ಚೌಹಾಣರನ್ನು ಖಂಡಿತ ದಾರಿ ತಪ್ಪಿದವರು ಅಂದೇ ಅಂತಾರೆ ಇದರಲ್ಲಿ ಅಚ್ಚರಿಯೇ ಇಲ್ಲ ಅದರಂತೆಯೇ ಭಗತ್ ಸಿಂಗನನ್ನು ಹಾಗೆಯೇ ಕರೆಯುತ್ತಿದ್ದರು.

ಯುವ ಜನರ ಸ್ಪೂರ್ತಿಯಾಗಿರುವ ಭಗತ್ ಕಿವುಡರಿಗೆ ಕೇಳಿಸುವ ಹಾಗೇ ಸದ್ದು ಮಾಡಬೇಕು ಆದರೆ ಯಾವುದೇ ಹಾನಿಯಾಗಬಾರದೆಂಬ ಉದ್ದೇಶವನ್ನಿಟ್ಟುಕೊಂಡು ಕೋರ್ಟಿನಲ್ಲಿ ಬಾಂಬು ಸ್ಪೋಟಿಸಿದ್ದ. ಅಂದುಕೊಂಡಂತೆ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಬಾಂಬ್ ಸ್ಫೋಟಿಸಿ ಶರಣಾಗಬೇಕು,ಶರಣಾದ ಮೇಲೆ ಕೋರ್ಟಿನ ಕಟಕಟೆಯಲ್ಲಿ ನಿಂತು ಭಾರತೀಯರನ್ನು ಬಡಿದೆಚ್ಚರಿಸಬೇಕು ಎನ್ನುವ ಉದ್ದೇಶ ಭಗತ್ ಸಿಂಗನದಾಗಿತ್ತು. ಅದರಂತೆಯೇ ಭಗತ್ ಶರಣಾಗಿದ್ದ ಸ್ವಲ್ಪ ದಿನಗಲ್ಲೇ ಅವನ ಜೊತೆಗೆ ರಾಜಗುರು,ಸುಖದೇವರು ಬಂಧಿಸಲ್ಪಟ್ಟಿದ್ದರು.

ಆ ಮೂವರಿಗೆ ಬ್ರಿಟಿಷ್ ಸರ್ಕಾರ ಮಾರ್ಚ್ 23ರಂದು ಗಲ್ಲಿಗೆ ಏರಿಸಲು ತೀರ್ಮಾನಿಸಲಾಯಿತು. ಈ ತೀರ್ಮಾನಕ್ಕೆ ದೇಶಭಕ್ತರೆಲ್ಲಾ ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ಮಾಡಿದರು,ಮನವಿ ಪತ್ರಗಳನ್ನು ಕೊಟ್ಟರು. ಅದೇ ಸಮಯದಲ್ಲಿ ಬ್ರಿಟಿಷರಿಗೆ ಒಂದು ಒಪ್ಪಂದದ ಅವಶ್ಯಕತೆ ಇತ್ತು ಅದರ ಹೆಸರೇ “ಇರ್ವಿನ್ ಒಪ್ಪಂದ”. ಆ ಒಪ್ಪಂದಕ್ಕೆ ಗಾಂಧೀಜಿ ಸಹಿ ಮಾಡಿದರೆ ಮಾತ್ರ ಆ ಒಪ್ಪಂದ ಜಾರಿಗೆಯಾಗುತ್ತಿತ್ತು. ಆದಕಾರಣ ಆ ಒಪ್ಪಂದವನ್ನು ಮುಂದಿಟ್ಟುಕೊಂಡು ದೇಶಭಕ್ತರೆಲ್ಲಾ ಸೇರಿ ಗಾಂಧೀಜಿಗೆ ಮನವಿ ಮಾಡಿದರು. ಗಾಂಧೀಜಿಯವರೇ ಬ್ರಿಟಿಷರ ಒಪ್ಪಂದಕ್ಕೆ ಸಹಿ ಮಾಡಿ ಆದರೆ ಭಗತ್ ಸಿಂಗ್,ರಾಜಗುರು ಮತ್ತು ಸುಖದೇವರನ್ನು ಬಿಟ್ಟರೆ ಮಾತ್ರ ಮಾಡುತ್ತೇನೆಂದು ಹೇಳಿ ಅಂತ ದೇಶಭಕ್ತರು ಗಾಂಧೀಜಿಗೆ ಮನವಿ ಮಾಡಿದರು. ಆದರೆ ಗಾಂಧೀಜಿ ಹಾಗೆ ಮಾಡಲೇ ಇಲ್ಲ,ಬ್ರಿಟಿಷರಿಗೆ ಹೇಗೆ ಬೇಕೋ ಹಾಗೆ ಅವರ ಒಪ್ಪಂದಕ್ಕೆ ಸಹಿ ಮಾಡಿಬಿಟ್ಟರು. ದೇಶಭಕ್ತರ ಆಶಾಕಿರಣಕ್ಕೆ ಮಣ್ಣೆರಚಿದರು. ಕಾರಣಗಳು ಅನೇಕ ಯಾಕೆ ಗಾಂಧೀಜಿ ಅವರನ್ನು ಬದುಕಿಸಲು ಮನಸ್ಸು ಮಾಡಲಿಲ್ಲವೆಂಬುದಕ್ಕೆ.ಗಾಂಧೀಜಿಗೆ ಕ್ರಾಂತಿಕಾರಿಗಳೆಂದರೆ ಅಲರ್ಜಿ ಹಾಗೆ ಕ್ರಾಂತಿಕಾರಿಗಳನ್ನ ತಾನು ಬಚಾವ್ ಮಾಡಿದರೆ ಅವರ ಹೆಸರೇ ದೇಶದ ತುಂಬಾ ಹಬ್ಬುತ್ತದೆ. ಆಗ ತನ್ನ ಹೆಸರು ಕಡಿಮೆಯಾಗುತ್ತದೆ ಎಂಬ ಸ್ವಾರ್ಥ ಅದಕ್ಕಾಗಿಯೇ ಸಾವಿರಾರು ಕ್ರಾಂತಿಕಾರಿಗಳ ನೆತ್ತರಿನ ಮೇಲೆ ಗಾಂಧೀಜಿಯ ಹೆಸರನ್ನು ಕೆತ್ತಿ ಕ್ರಾಂತಿಕಾರಿಗಳಿಗೆ ಮೋಸ ಮಾಡಲಾಗಿದೆ.

ಗಾಂಧೀಜಿ ಕೊನೆಗೂ ಮನಸ್ಸು ಮಾಡಲೇ ಇಲ್ಲ. ಗಾಂಧೀಜಿ ಮನಸ್ಸು ಮಾಡಲೇ ಇಲ್ಲ ಯಾಕಂದ್ರೆ ಭಗತ್ ಗಲ್ಲು ಶಿಕ್ಷೆಯಿಂದ ಹೊರ ಬಂದಿದ್ದರೆ ಮಹಾನ್ ನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದ. ಭಗತ್ ಮಹಾ ನಾಯಕನಾಗಿ ಬೆಳೆದರೆ ಗಾಂಧೀಜಿಯ ನಾಯಕತ್ವ ಕಡಿಮೆಯಾಗುತ್ತದೆ ಎಂಬ
ಸ್ವಾರ್ಥ. ಮಾರ್ಚ್ 23ರಂದು ಆ ಮೂರು ಮಹಾನ್ ಕ್ರಾಂತಿಕಾರಿಗಳನ್ನು ನೇಣಿಗೆರಿಸಿಬಿಟ್ಟರು. ಇಂಕ್ವಿಲಾಬ್ ಜಿಂದಾಬಾದ್ ಎನ್ನುತ್ತಾ ಆ ಮೂವರು ಕ್ರಾಂತಿಕಾರಿಗಳು ಸಾವನ್ನು ಚುಂಬಿಸಿ ಹುತಾತ್ಮರಾದರು.

ಈ ಕಾರಣಗಳಿಂದಾಗಿಯೇ ನನ್ನಂತಹ ಯುವಕ,ಇತಿಹಾಸವನ್ನರಿತ ದೇಶಪ್ರೇಮಿಗಳಿಗೆ ನೆಹರೂ ಹಾಗೂ ಗಾಂಧೀಜಿ ಅಂದ್ರೆ ಇಷ್ಟವಾಗುವುದಿಲ್ಲ. ಇಲ್ಲಿ ತಿಳಿದಿರುವುದು ನೆಹರೂ ಹಾಗೂ ಗಾಂಧೀಜಿಯ ಕೆಲವೇ ಕೆಲವು ಇಬ್ಭಗೆ ನಿಲುವುಗಳು. ಮುಂದಿನ ಅಂಕಣದಲ್ಲಿ ನೆಹರೂ ಹಾಗೂ ಗಾಂಧೀಜಿಯ ಹಲವಾರು ಇಬ್ಭಗೆ ನಿಲುವುಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇನೆ.

-ಮಹೇಶ್

Tags

Related Articles

Close