ಅಂಕಣ

“ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ” ಮೂವರೂ ಕೂಡ ಉಗ್ರಗಾಮಿಗಳು! ಆರ್ ಟಿ ಐ ಮಾಹಿತಿ!!!

ಭಾರತ ಸರಕಾರದ ದಾಖಲೆಗಳಲ್ಲಿ ಇರುವ ಮಾಹಿತಿ ಇದು!!

ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಅದೆಷ್ಟು ರಕ್ತದ ಕುರುಹುಗಳಿದೆಯೋ! ಬದುಕು ನೋಡಬೇಕಿದ್ದ ಅದೆಷ್ಟು ಜನ ತರುಣರು ಸ್ವಾತಂತ್ರ್ಯಾಗ್ನಿಗೆ ಸಮಿಧೆಯಾಗಿ ಹೋಗಿದ್ದಾರೋ! ಬಿಡಿ!ಇವತ್ತಿನ ಯುವ ಜನಾಂಗಕ್ಕೆ ಅದರ ಪರಿವೆಯಿಲ್ಲ ಎಂದೆನಿಸುತ್ತದೆ! “ಸತ್ತವರ ನೆಪದಲ್ಲಿ ನಾವ್ಯಾಕೆ ಕೊರಗಬೇಕೋ?!” ಎನ್ನುವ ಇವತ್ತಿನ ಇಂಡಿಯನ್ ಸಿದ್ದಾಂತಗಳು ಕೊನೆಗೂ ಸ್ವಾತಂತ್ರ್ಯಾನಂತರದ ಪೀಳಿಗೆಯನ್ನು ಕೃತಘ್ನರಾಗಿಯೇ ಉಳಿಸಿ ಬಿಡುವುದೇನೋ!

ಪೀಠಿಕೆ ಯಾಕೆ ಗೊತ್ತಾ?!

ಭಾರತೀಯರಿಗೆ ಬಹುಷಃ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ! ಇನ್ನೂ ಬದುಕು ತಾರುಣ್ಯ ಎಂಬಲ್ಲಿರುವಾಗಲೇ, ಇನ್ನೂ ಬದುಕು ನೋಡಬೇಕಾಗಿದ್ದ ಆ ಮೂವರು ಹರೆಯದ ಅದ್ಭುತ ಭಾರತೀಯರು ಸ್ವಾತಂತ್ರ್ಯದ ಹೋರಾಟಕ್ಕಿಳಿದು ಬಿಟ್ಟರು!! “ನಿನ್ನ ಬದುಕಿನ ಗುರಿ ಏನೋ?!” ಎಂದವರಿಗೆ “ಸ್ವಾತಂತ್ರ್ಯ” ಎಂದು ಅಷ್ಟೇ ಗರ್ವದಿಂದ ಉತ್ತರಿಸಿದ ಅ ಮೂವರೂ ಕ್ರಾಂತಿಕಾರಿಗಳು, “ಭಿಕ್ಷಾಟನೆಯ ಅಹಿಂಸಾ ಮಾರ್ಗದಿಂದ ಕ್ರಾಂತಿಯ ಪಥ” ಹಿಡಿದಿದ್ದೇ ನೋಡಿ, ಬ್ರಿಟಿಷರ ಅಸ್ತಿತ್ವ ಸಣ್ಣಗೆ ನಡುಗಿತ್ತು!

ಲಾಲಾ ಲಜಪತ್ ರಾಯ್ ರವರಿಗೆ ಸ್ಕಾಟ್ ಎಂಬ ಬ್ರಿಟಿಷ್ ಅಧಿಕಾರಿ ಹೊಡೆದ ಪರಿಣಾಮಕ್ಕೆ ರಾಯ್ ರವರು ಕೊನೆಯುಸಿರೆಳೆದಿದ್ದರು! ಅಹಿಂಸಾ ಮಾರ್ಗ ಹಿಡಿದವರು “ಛೇ! ಹೀಗಾಗಬಾರದಿತ್ತು” ಎಂದಷ್ಟೇ ಕುಳಿತರು! ಈ ಮೂವರು ಕ್ರಾಂತಿ ಕಾರಿಗಳು ರಾಯ್ ರವರ ಸಾವಿಗೆ ಮತ್ತೊಬ್ಬ ಬ್ರಿಟಿಷ್ ಅಧಿಕಾರಿಯನ್ನು ಕೊಂದು ಪ್ರತೀಕಾರಗೈದರು! ಪರಿಣಾಮವಾಗಿ, ಮಾರ್ಚ್ 23, 1931 ರಂದು ಈ ಮೂವರನ್ನೂ ಗಲ್ಲಿಗೇರಿಸಲಾಯ್ತು! “ಇನ್ಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಯೊಂದು ಭಾರತದಲ್ಲಿ ಮೊಳಗಲು ಪ್ರಾರಂಭಿಸಿತು! ನಗುನಗುತಲೇ ಉರುಳಿಗೆ ಚುಂಬಿಸಿ ಕೊರಳೊಡ್ಡಿದಾಗ ಈ ಮೂವರಿಗೆ 22, 23 ವರ್ಷಗಳಷ್ಟೇ!

Image result for bhagat singh rajguru and sukhdev

ಆದರೆ. . . .

ನಮ್ಮ ಭಾರತ ಸರಕಾರದ ದಾಖಲೆಗಳಲ್ಲಿ ಈ ಮೂವರೂ ಕೂಡ ಹುತಾತ್ಮರಲ್ಲ!!!

ದುರಂತವೆನ್ನುವುದು ಇದಕ್ಕೇ ಹೇಳುವುದು ನಾನು! ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದವರಿಗೆ Indian Council of Historical Research ಮಾಹಿತಿ ಪ್ರಕಾರ, ಭಾರತ ಸರಕಾರದ ಇತಿಹಾಸದ ಕರಡು ಪ್ರತಿಗಳಲ್ಲಿರುವುದು ಈ ಮೂವರೂ “ದಂಗೆಕೋರರು” ಎಂದೇ ಹೊರತು “ಹುತಾತ್ಮರೆಂದಲ್ಲ!”

ಜಮ್ಮುವಿನ ರೋಹಿತ್ ಚೌಧರಿ ಎಂಬುವವರು ಈ ಮೂವರು ಕ್ರಾಂತಿಕಾರಿಗಳ ಕುರಿತ ಮಾಹಿತಿಗಾಗಿ ಆರ್ ಟಿ ಐ ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು! ಇನ್ನೂ ಕೂಡ, ಭಾರತದ ಸರಕಾರದಲ್ಲಿ ಈ ಮೂವರಿಗೂ ಕೂಡ ಹುತಾತ್ಮರೆಂಬ ಗೌರವಕ್ಕೆ ಪಾತ್ರವಾಗಿಲ್ಲ! ಆಘಾತವೇನೆಂದರೆ, “ಆರ್ ಟಿ ಐ ನೀಡಿದ ಪ್ರತ್ಯುತ್ತರದಲ್ಲಿ ರಾಜಗುರು, ಸುಖದೇವ್ ಮತ್ತು ಭಗತ್ ಸಿಂಗ್ ಎಂಬ ಮೂವರು ದಂಗೆ ಎದ್ದ ಉಗ್ರಗಾಮಿಗಳು” ಎಂದು ಉಲ್ಲೇಖಿಸಿರುವುದು!!!

ಆರ್ ಟಿ ಐ ಗೆ ರೋಹಿತ್ ಚೌಧರಿ, ‘ಭಾರತ ಸರಕಾರ ಈ ಮೂವರಿಗೆ ಹುತಾತ್ಮರೆಂಬ ಸ್ಥಾನವನ್ನು ನೀಡಿದೆಯೇ?!” ಎಂಬುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು! ಕೇಂದ್ರ ಗೃಹ ಸಚಿವಾಲಯದಿಂದ ಬಂದ ಉತ್ತರದಲ್ಲಿ ಈ ಆಘಾತಕಾರಿ ಮಾಹಿತಿ ಬಯಲಾಗಿದ್ದು ಈ ಮೂವರೂ ಕ್ರಾಂತಿಕಾರಿಗಳಿಗೆ “ಉಗ್ರಗಾಮಿಗಳೆಂದು” ಉಲ್ಲೇಖಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು!

ಸಂಬಂಧಿಸಿದಂತೆ, ಬಿಜೆಪಿಯ ಹಿರಿಯ ನಾಯಕ ರಾದ ವಿಕ್ರಮ್ ಸಿಂ‌ಗ್ ರಾಂಧ್ವಾ, “ಪಕ್ಷ ಇದರ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ!

ಆರ್ ಟಿ ಐ ನ ಉತ್ತರ ಹೇಗೆ ಭಾರತ ಸರಕಾರ ದೇಶಕ್ಕೋಸ್ಕರ ಪ್ರಾಣ ಕೊಟ್ಟ ಹೋರಾಟಗಾರರನ್ನು ಹೇಗೆ ನೋಡಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close