ಅಂಕಣ

ಮನೆ ಸಿಲಿಂಡರಿಗೂ ಸಿಕ್ಕಿತು ಕೇಂದ್ರದಿಂದ ಉತ್ತಮ ಸ್ಪಂದನೆ! ಟ್ವೀಟ್ ಮೂಲಕ ಉತ್ತರಿಸಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್!

ಪ್ರಧಾನಿ ಮೋದಿಯವರಿಗೆ ಅದೆಷ್ಟೋ ಮಕ್ಕಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಪತ್ರ ಬರೆದಿದ್ದು, ಅದಕ್ಕೆ ಪ್ರಧಾನಿ ಮೋದಿಯವರೇ ಉತ್ತಮ ಸ್ಪಂದನೆ
ನೀಡಿರುವುದು ಈಗಾಗಲೇ ನಮೆಗೆಲ್ಲಾ ಗೊತ್ತಿರುವ ವಿಷಯ. ಅಷ್ಟೇ ಅಲ್ಲದೇ ಅದೆಷ್ಟೋ ಮಂದಿ ರಾಜ್ಯ ಸರಕಾರದ ನಂಬಿಕೆಯನ್ನು ಬಿಟ್ಟು, ತನ್ನ ಜಿಲ್ಲೆಯ, ತಾಲೂಕಿನ ಅಧಿಕಾರಿಗಳ ಮೊರೆ ಹೋಗದೇ ನೇರವಾಗಿ ಕೇಂದ್ರದ ಮೊರೆ ಹೋಗುತ್ತಿದ್ದಾರೆ ಅಂದರೆ ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ನಾವು ಮೆಚ್ಚಲೇ ಬೇಕು!!

ಆದರೆ ನಾನಿಲ್ಲಿ ಹೇಳಲು ಬಯಸುವ ವಿಚಾರ ಕೇಳಿ ಒಂದು ಕ್ಷಣ ಆಶ್ಚರ್ಯ ಆಗಬಹುದು!! ಯಾಕೆಂದರೆ ಇಷ್ಟು ಸಣ್ಣ ಸಮಸ್ಯೆಗೆ ಕೇಂದ್ರ ಸರಕಾರ ಸ್ಪಂದನೆ ನೀಡಿದೆಯಾ ಎಂದು. ಆದರೆ ಇದು ನಿಜವಾಗಿಯೂ ನಡೆದ ಸಂಗತಿ!! ಆದರೆ ಆ ವಿಚಾರವಾದರೂ ಯಾವುದು ಅನ್ನೋ ಕುತೂಹಲ ನಿಮಗಿರಬಹುದು. ಇದು ಒಂದು ರೋಡಿನ ಸಮಸ್ಯೆ ಅಲ್ಲ, ಶಾಲಾ ಕೊಠಡಿಯ ಸಮಸ್ಯೆ ಅಲ್ವೇ ಅಲ್ಲ, ವಿದ್ಯುತ್‍ನ ಸಮಸ್ಯೆನೋ ಅಲ್ಲ, ನೀರಿನ ಸಮಸ್ಯೆನೋ ಅಲ್ಲ. ಸಮಸ್ಯೆ ಆಗಿರೋದು ಒಂದು ಮನೆಯ ಸಿಲಿಂಡರ್‍ನ ವಿಚಾರ!!!

ಹೌದು…. ಕೇಂದ್ರ ಸರಕಾರ ಕೇವಲ ಒಂದು ಮನೆಯ ಅಡುಗೆ ಸಿಲಿಂಡರ್‍ನ ವಿಚಾರಕ್ಕೆ ಸ್ಪಂದಿಸಿದೆ ಎಂದರೆ ನಂಬಲಸಾಧ್ಯ!! ಆದರೂ ನಂಬಲೇಬೇಕು. ಯಾಕೆಂದರೆ ಅದು ಅಡುಗೆಯ ಅನಿಲ ಆದರೂ ಕೂಡ ಅದು ಜನಸಾಮಾನ್ಯರ ಸಮಸ್ಯೆ. ಹಾಗಾಗಿ ಇದಕ್ಕೆಲ್ಲ ಕೇಂದ್ರ ಸರಕಾರ ಸ್ಪಂದಿಸಿದೆಯಾ ಅನ್ನುವ ಕುತೂಹಲ ನಿಮಗೆ ಇರಬಹುದು! ಆದರೆ ಈ ಘಟನೆ ನಡೆದಿದ್ದು ಮಾತ್ರ ನಿಜ!! ಇದು ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ!!!

ಈಗಾಗಲೇ ಕೇಂದ್ರ ಸರಕಾರದ ಸಚಿವರುಗಳು ಜನರ ಸಮಸ್ಯೆಯನ್ನು ಟ್ವೀಟ್ವರ್ ಮೂಲಕ, ಪತ್ರಗಳ ಮೂಲಕ, ಇ-ಮೇಲ್ ಮೂಲಕ ಆಲಿಸಿ ಉತ್ತಮ ಸ್ಪಂದನೆ
ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ನಮ್ಮ ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್ ಹೀಗೆ ಕೇಂದ್ರ ಸರಕಾರವು ಜನಸಾಮಾನ್ಯ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡಿರುವ ವಿಚಾರ ಕೇಳಿದ್ದೇವೆ. ಆದರೆ ಇದೀಗ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರ ಸರದಿ!! ಹೌದು…. ಜನ ಸಾಮಾನ್ಯರ ಕಷ್ಟವನ್ನು ಟ್ವೀಟರ್ ಮೂಲಕ ಆಲಿಸಿ ನ್ಯಾಯ ಒದಗಿಸಿಕೊಟ್ಟ ಸಚಿವ ಎನ್ನುವ ಖ್ಯಾತಿಗೆ ಇದೀಗ ಪಾತ್ರರಾಗಿದ್ದಾರೆ!!

ಅಡುಗೆ ಸಿಲಿಂಡರಿನ ಕುರಿತ ಘಟನೆಯಾದರೂ ಏನು??

ಮಂಗಳೂರಿನ ಪದ್ಮನಾಭ ಕಾಮತ್ ಅವರ ಮನೆಗೆ ಬಂದಿದ್ದ ಸಿಲಿಂಡರ್‍ನ ನೈಜ್ಯ ಕಥೆ ಇದು! ಆದರೆ ಅಡುಗೆ ಅನಿಲದ ಲೀಕೆಜ್ ಸಮಸ್ಯೆಯಾಗಿರಲಿಲ್ಲ, ಬದಲಾಗಿ ಅಡುಗೆ ಅನಿಲದ ಸಿಲಿಂಡರ್‍ನ ತೂಕದಲ್ಲಾದ ವ್ಯತ್ಯಾಸದ ಕುರಿತ ಘಟನೆ ಇದಾಗಿತ್ತು. ಪದ್ಮನಾಭ ಕಾಮತ್ ಅವರು, ತನ್ನ ಮನೆಗೆ ಸಿಲಿಂಡರ್ ಬುಕ್ ಮಾಡಿದ್ದರು. ಹೊಸ ಸಿಲಿಂಡರ್ ಬಂದ ನಂತರವೂ ಹಳೆಯದರಲ್ಲಿ ಇನ್ನೂ ಬಳಸಬಹುದಾದಷ್ಟು ಅನಿಲ ಇದ್ದುದರಿಂದ ಅದನ್ನು ಪೂರ್ತಿಯಾಗಿ ಬಳಸಿ, ಆ ನಂತರ ಮನೆಯಲ್ಲಿ ತರಿಸಲಾದ ಹೊಸ ಸಿಲಿಂಡರ್‍ನ್ನು ಬಳಸುವ ಯೋಜನೆಯಲ್ಲಿದ್ದರು! ಅದರಂತೆ ಪದ್ಮನಾಭ ಕಾಮತ್ ಅವರ ಸೊಸೆ ಸಿಲಿಂಡರ್‍ನ ಗ್ಯಾಸ್ ಸ್ಟೌಗೆ ಜೋಡಿಸುವ ಸಂದರ್ಭದಲ್ಲಿ ಅದು ತೂಕವಿಲ್ಲ ಎನ್ನುವುದು ಇವರ ಗಮನಕ್ಕೆ ಬಂದಿದೆ. ಆ ಕೂಡಲೇ ಸಂಬಂಧಪಟ್ಟ ಏಜೆನ್ಸಿ ಅವರನ್ನು ಸಂಪರ್ಕಿಸಿ ದೂರನ್ನು ನೀಡಿದ್ದಾರೆ. ಆ ದೂರಿನಂತೆ, ಮಾರನೇ ದಿನ ಪರಿಶೀಲನೆಗಾಗಿ ವಿತರಕರ ಕಡೆಯಿಂದ ವ್ಯಕ್ತಿಯೊಬ್ಬರು ಬಂದಿದ್ದರು!!!

ಆದರೆ ಆ ವಿತರಕ ಕಡೆಯಿಂದ ಬಂದ ವ್ಯಕ್ತಿ, ಈ ಸಿಲಿಂಡರ್ ಬಳಸಿರುವುದರಿಂದ ಖಾಲಿಯಾಗಿದೆ ಎಂದು ಆತ ಹೇಳಿದ್ದಾನೆ. ಹಾಗಾದರೆ ಮೊಹರು ಆಗಿರುವ ಸಿಲಿಂಡರ್ ಹೇಗೆ ಬಳಸಲು ಸಾಧ್ಯ ಎಂಬ ಕಾಮತ್‍ರ ಪ್ರಶ್ನೆಗೆ ಆತನ ಬಳಿ ಉತ್ತರವಿರಲಿಲ್ಲ!!! ಅಷ್ಟೇ ಅಲ್ಲದೇ, ಈ ಸಮಸ್ಯೆಗೆ ಏಜೆನ್ಸಿಯವರು ಪರಿಹಾರ ನೀಡೋದಿಲ್ಲ ಎಂದೆನಿಸಿದಾಗ ಪದ್ಮನಾಭ ಕಾಮತ್ ಅವರ ಮಗ ಮೋಹನ್ ಕಾಮತ್ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಪದ್ಮನಾಭ ಕಾಮತ್‍ರ ಮಗ ಮೋಹನ್ ಕಾಮತ್ ಟ್ವೀಟ್ ಮಾಡಿದ ಐದು ನಿಮಿಷದೊಳಗೆ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರಿಂದ ಪ್ರತಿಕ್ರಿಯೆ ಬಂದಿದೆ. ಅಷ್ಟೇ ಅಲ್ಲದೇ, ವಿತರಕರ ಹೆಸರು, ಸಂಪರ್ಕ ಸಂಖ್ಯೆ ಮತ್ತಿತರ ವಿವರಗಳನ್ನು ಪಡೆದು, ಆಗಿದ್ದ ಸಮಸ್ಯೆ ಬಗೆಹರಿಸಲಾಗಿದೆ. ಅಷ್ಟೇ ಅಲ್ಲದೇ, ವಿತರಕರು ಖಾಲಿ ಸಿಲಿಂಡರ್‍ಗೆ ಬದಲಿ ನೀಡಿದ್ದಾರೆ. ಇದು ಪದ್ಮನಾಭ ಕಾಮತ್ ಅವರ ಮನೆಯಲ್ಲಿ ನಡೆದ ಸಿಲಿಂಡರ್‍ನ ಸಮಸ್ಯೆ.

ಸಮಸ್ಯೆ ಚಿಕ್ಕದಾಗಿರಬಹುದು, ಆದರೆ ಕೇಂದ್ರ ಈ ಬಗ್ಗೆ ಮುತುವರ್ಜಿ ವಹಿಸಿ ಆ ಕುಟುಂಬಕ್ಕೆ ಪರಿಹಾರ ನೀಡಿದೆ ಎಂದರೆ ನಾವದನ್ನು ಶ್ಲಾಘಿಸಲೇಬೇಕಾದ ವಿಚಾರ!! ಕೇವಲ ಮನೆ ಅಡುಗೆ ಅನಿಲದ, ಸಿಲಿಂಡರ್ ತೂಕದಲ್ಲಿ ಆದ ವ್ಯತ್ಯಾಸದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಟ್ವೀಟ್ ಮಾಡಿ, ಕೊನೆಗೂ ತಮ್ಮ ಪಾಲಿನ ನ್ಯಾಯ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ. ಈ ಒಂದು ಸಮಸ್ಯೆಗೆ ಕೇಂದ್ರದಿಂದ ಉತ್ತಮ ಸ್ಪಂದನೆ ದೊರೆತಿದೆ ಅಂದರೆ ಕೇಂದ್ರ ಸರಕಾರ ಎಷ್ಟೊಂದು ಜವಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದೆ ಎನ್ನುವುದು ಗೊತ್ತಾಗುತ್ತೆ!!

ಮೂಲ:Small Issue – But answered from Pradhan!

-ಅಲೋಖಾ

Tags

Related Articles

Close