ಅಂಕಣ

ರೈತರ ಕೈ ಹಿಡಿಯಲಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ!!

“ರೈತರೇ ದೇಶದ ಬೆನ್ನೆಲು” ಎನ್ನುವ ಮಾತು ಅಕ್ಷರಶಃ ನಿಜ!! ಹೀಗಿರಬೇಕಾದರೆ ರೈತರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಅನಿರೀಕ್ಷಿತ ಘಟನೆಗಳಿಂದ ಮತ್ತು ದುರಂತಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ಸಂಭವಿಸುವ ಸಂಕಷ್ಟದಲ್ಲಿ ರೈತರಿಗೆ ಆರ್ಥಿಕವಾಗಿ ನೆರವಾಗಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದೆ!!

ಹೌದು.. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಕಂತು ಕಟ್ಟಿದ್ದ ರೈತರಿಗೆ ಬೆಳೆನಷ್ಟ ಮತ್ತು ಪ್ರಕೃತಿ ವಿಕೋಪದಡಿ ಬೆಳೆ ನಷ್ಟ ಆದರೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಎಕರೆವಾರು ವಿಮಾ ಮೊತ್ತವನ್ನು ಪಾವತಿ ಮಾಡುವ ಯೋಜನೆ ಇದಾಗಿದೆ!! ಅಷ್ಟೇ ಅಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆಯ ವೆಚ್ಚ ಹಂಚಿಕೆಯಾಗಲಿದ್ದು, ಆಹಾರ ಧಾನ್ಯ ಮತ್ತು ತೈಲ ಬೀಜಗಳಿಗೆ ಹಿಂಗಾರು ಬೆಳೆ ವಿಮಾ ಕಂತಿನ ಮೊತ್ತ ಶೇ.1.5 ರಷ್ಟು ಇದ್ದರೆ ಮುಂಗಾರು ಬೆಳೆಗೆ ಈ ಮೊತ್ತ ಶೇ.2ರಷ್ಟಿದೆ!! ಇನ್ನು ತೋಟಗಾರಿಕೆ ಮತ್ತು ಹತ್ತಿ ಬೆಳೆಯ ಎರಡೂ ಸೀಸನ್ ಗಳಿಗೆ ಶೇ.5ರಷ್ಟು ನಿಗದಿ ಮಾಡಲಾಗಿದೆ. ಒಟ್ಟಾರೆಯಾಗಿ ಬಿತ್ತನೆ ಪ್ರದೇಶದ ಶೇ.25ರಿಂದ 27ಕ್ಕೆ ಮಾತ್ರ ವಿಮಾ ಸೌಲಭ್ಯ ಕಲ್ಪಿಸಲಾಗಿದೆ!!

ಪ್ರಧಾನಿ ಮೋದಿ ರೈತರ ಕಷ್ಟ ಸುಖಗಳನ್ನು ಅರಿತು, 2017-18ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಜಾರಿಗೆ ತಂದಿದ್ದು, ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈ ಹಿಡಿಯಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ!! ಈ ಯೋಜನೆ ಅಡಿ ಹಿಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಾದ ಆಲೀಕಲ್ಲ ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆಯಿಂದ ಉಂಟಾಗುವ ಬೆಳೆನಷ್ಟಕ್ಕೆ ಕೂಡ ಪರಿಹಾರ ಪಡೆಯಬಹುದಾಗಿದ್ದು, ಈ ಅಧಿಸೂಚಿತ ಘಟಕದಲ್ಲಿ ಶೇ.25ಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆನಷ್ಟವುಂಟಾದರೆ ಆ ಘಟಕದಲ್ಲಿ ಬೆಳೆವಿಮೆಗೆ ಒಳಪಟ್ಟ ಎಲ್ಲ ರೈತರಿಗೂ ಬೆಳೆನಷ್ಟ ಪರಿಹಾರ ನೀಡಲಾಗುತ್ತದೆ.

Related image

ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರಿಗೆ ಸಿಗುವ ಪರಿಹಾರವೇನು??

* ಪ್ರತಿಕೂಲ ಹವಾಮಾನ ಅಥವಾ ಮಳೆಕೊರತೆಯಿಂದ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲವಾದರೆ ಗರಿಷ್ಠ ಶೇ.25ರಷ್ಟು ಬೆಳೆನಷ್ಟ ಪರಿಹಾರ ಪಡೆಯಬಹುದಾಗಿದೆ.
* ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇ.50ಕ್ಕಿಂತ ಹೆಚ್ಚಿನ ಬೆಳೆನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆನಷ್ಟ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ಮುಂಚಿತವಾಗಿ ವಿಮಾಸಂಸ್ಥೆಯಿಂದ ಪಾವತಿಸಲಾಗುತ್ತದೆ!!

ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ 2016ರ ಮುಂಗಾರು ಹಂಗಾಮಿನಲ್ಲಿ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ (ಇನಂಡೇಷನ್)ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು!! ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಛೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಗಳೊಳಗಾಗಿ ತಿಳಿಸಿದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗತ್ತದೆ!!

ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ!! ಅಷ್ಟೇ ಅಲ್ಲದೆ, ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುತ್ತದೆ!!

ಈ ಯೋಜನೆಯ ಮೂಲ ಉದ್ದೇಶ:

* ನೈಸರ್ಗಿಕ ವಿಕೋಪಗಳು, ಕೀಟಗಳು ಮತ್ತು ರೋಗಗಳ ಪರಿಣಾಮವಾಗಿ ಸೂಚನೆ ಬೆಳೆ ಯಾವುದೇ ವೈಫಲ್ಯ ಸಂದರ್ಭದಲ್ಲಿ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಆರ್ಥಿಕ ಬೆಂಬಲ ಒದಗಿಸುವುದು.
* ಕೃಷಿ ತಮ್ಮ ನಿರಂತರತೆಯನ್ನು ಖಚಿತಪಡಿಸಲು ರೈತರ ಆದಾಯ ಸ್ಥಿರಗೊಳಿಸಲು
* ನವೀನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರು ಪೆÇ್ರೀತ್ಸಾಹಿಸಲು
* ಸಾಲದ ಹರಿವನ್ನು ಕೃಷಿ ವಲಯಕ್ಕೆ ಖಚಿತಪಡಿಸಿಕೊಳ್ಳಲು.

Image result for fasal bima yojana

ಎಲ್ಲಾ ರಬಿ ಬೆಳೆಗಳಿಗೆ ಕೇವಲ 2%ದಷ್ಟು ಏಕರೂಪದ ಪ್ರೀಮಿಯಂ ಇದ್ದು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಸಂದರ್ಭದಲ್ಲಿ, ರೈತರು ಪಾವತಿಸಬೇಕಾದ ಪ್ರೀಮಿಯಂ ಕೇವಲ 5% ಆಗಿರುತ್ತದೆ. ರೈತರು ಪಾವತಿಸಬೇಕಾದ ಪ್ರೀಮಿಯಂ ಪ್ರಮಾಣ ತೀರಾ ಕಡಿಮೆಯಾಗಿದ್ದು ಮತ್ತು ಸಮತೋಲನ ಪ್ರೀಮಿಯಂ ಬೆಳೆ ನಷ್ಟ ವಿರುದ್ಧ ರೈತರಿಗೆ ಪೂರ್ಣ ವಿಮೆ ಪ್ರಮಾಣವನ್ನು ಒದಗಿಸಲು ನೈಸರ್ಗಿಕ ವಿಕೋಪಗಳು ಖಾತೆಯಲ್ಲಿ ಸರ್ಕಾರವು ಪಾವತಿಸಲಾಗುವುದು. ಆದರೆ ಸರ್ಕಾರದ ಧನಸಹಾಯ ಮೇಲಿನ ಮಿತಿಯನ್ನು ಹೊಂದಿರದಿದ್ದರೂ ಸಮತೋಲನ ಪ್ರೀಮಿಯಂ ಅನ್ನು 90% ದಷ್ಟು ಸರ್ಕಾರ ಭರಿಸುತ್ತದೆ. ಅಷ್ಟೇ ಅಲ್ಲದೇ, ರೈತರು ಯಾವುದೇ ಕಡಿತ ಇಲ್ಲದೆ ವಿಮೆ ಪೂರ್ಣ ಮೊತ್ತದ ವಿರುದ್ಧ ಹಕ್ಕು ಪಡೆಯುತ್ತಾರಲ್ಲದೇ, ತಂತ್ರಜ್ಞಾನದ ಬಳಕೆ ದೊಡ್ಡ ಮಟ್ಟಿಗೆ ಪೆÇ್ರೀತ್ಸಾಹ ನೀಡಲಿದೆ.

ಅರ್ಜಿ ಸಲ್ಲಿಸುವುದಾದರೂ ಹೇಗೆ?

ಅರ್ಜಿ ಸಲ್ಲಿಸಲು ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ವಿಮೆ ಕಟ್ಟಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನಿಗದಿತ ಅರ್ಜಿಗಳೊಂದಿಗೆ ಭೂಮಿ ಹಿಂದಿರಲು ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಸಂಪರ್ಕಿಸಬೇಕು!! ಅಷ್ಟೇ ಅಲ್ಲದೇ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ಹಾಗೂ ಸಮೀಪದ ಯಾವುದೇ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳುಬೇಕಾಗುತ್ತದೆ!!

ವಿಮಾ ಹಣ ನೇರ ರೈತರ ಖಾತೆಗೆ

ಬೆಳೆ ವಿಮಾ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುವಂತೆ ಸಂರಕ್ಷಣೆ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ. ರೈತರ ಆಧಾರ್ ಸಂಖ್ಯೆ ಮೂಲಕ ಬ್ಯಾಂಕ್ ವಿವರ ಪಡೆಯಲಾಗುತ್ತದೆ. ಪ್ರತಿ ರೈತರ ಜಮೀನಿನ ಬಗ್ಗೆ ಮಾಹಿತಿ ಕಲೆ ಹಾಕುವ ಮೂಲಕ ಪ್ರತಿ ರೈತರಿಗೆ ಯೂನಿಕ್ ಐಡಿ ಸಂಖ್ಯೆ ನೀಡಲಿದ್ದು, ಇದರ ಸಹಾಯದಿಂದ ಬೆಳೆ ನಾಶದಿಂದಾಗಿರುವ ನಷ್ಟದ ಬಗ್ಗೆಯೂ ಸಾಫ್ಟ್ ವೇರ್ ಗೆ ಅಪ್.ಲೋಡ್ ಮಾಡಲಾಗುತ್ತದೆ. ರೈತರ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ವಿಮೆಯ ಬಗ್ಗೆ ಮಾಹಿತಿ ರವಾನೆಯಾಗುತ್ತದೆಯಲ್ಲದೇ ಬೆಳೆ ವಿಮೆ ಪಡೆಯಲೂ ಆನ್ ಲೈನ್.ನಲ್ಲೇ ವ್ಯವಸ್ಥೆ ಮಾಡಲಾಗಿದೆ.

ಫಸಲ್ ಬಿಮಾ ಯೋಜನೆ ಅನ್ವಯ 2016-17ನೇ ಸಾಲಿನಲ್ಲಿ 10.12 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಣಿಯಾಗಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ರೈತರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಿದ ಮೊದಲ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ 2 ಲಕ್ಷ ರೈತರು ಬೆಳೆ ವಿಮೆಗೆ ಒಳಪಟ್ಟಿದ್ದರು. ಈ ಬಾರಿ ಹಿಂಗಾರು ಹಂಗಾಮಿನಲ್ಲಿ 5 ಲಕ್ಷಕ್ಕೂ ಅಧಿಕ ರೈತರು ನೋಂದಣಿಯಾಗಿರು ವುದಾಗಿ ಕೃಷಿ ಇಲಾಖೆ ಮಾಹಿತಿ ನೀಡಿದೆ!!

-ಅಲೋಖಾ

Tags

Related Articles

Close