ಅಂಕಣ

ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಷ್ಟೇ ಅಲ್ಲ!! ಜೈಲಿನಲ್ಲಿ ಸಿಕ್ಕಿದ ಆತನ ಡೈರಿಯೊಂದು ಬಹಿರಂಗಪಡಿಸಿದ್ದಾದರೂ ಏನು ಗೊತ್ತೇ?!

ಭಗತ್ ಸಿಂಗ್ ಎಂದಾಕ್ಷಣ ಇವತ್ತು ನಮಗೆ ನೆನಪಿಗೆ ಬರುವುದು ಆತನ ಶೌರ್ಯ! ಸಾಹಸ! ಇನ್ಕಿಲಾಬ್ ಜಿಂದಾಬಾದ್ ಎಂಬ ರಣಕಹಳೆ! ಕಟ್ಟ ಕಡೆಗೆ ಆತನ ಬಲಿದಾನ! ಆತನನ್ನು ನೆನಪಿಸಿಕೊಳ್ಳುವುದೂ ಸಹ ಒಬ್ಬ ಕ್ರಾಂತಿಕಾರಿಯಾಗಿ! ಬ್ರಿಟಿಷ್ ಟೋಪಿ ಇಟ್ಟೇ ಬ್ರಿಟಿಷರೊಇಗೆ ಚಳ್ಳೆ ಹಣ್ಣು ತಿನ್ನಿಸಿದ ಒಬ್ಬ ಸಿಖ್!! ಭಾರತವನ್ನು ಬಡಿದೆಬ್ಬಿಸಲು ತನ್ನ ಪ್ರಾಣವನ್ನೇ ಅರ್ಪಿಸಿಕೊಂಡ ಭಗತ್ ಅದೆಂತಹ ಕವಿಯಾಗಿದ್ದ ಗೊತ್ತೇ?! ಆತನ ಡೈರಿ ಅತ್ಯಂತ ಶ್ರೇಷ್ಟವೆನ್ನುವ ಕ್ರಾಂತಿ ಯಜ್ಞದ ಮಂತ್ರಗಳನ್ನೊಳಗೊಂಡಿತ್ತೆಂದರೆ ನಿಮಗೆ ಅಚ್ಚರಿಯಾಗಲೇ ಬೇಕು!!

“ನನ್ನ ಬದುಕು ಸಮರ್ಪಿತವಾಗಿರುವುದು ದೇಶದ ಸ್ವಾತಂತ್ರ್ಯವೆನ್ನುವ ಉದಾತ್ತ ಗುರಿಗಾಗಿ!! ಆದ್ದರಿಂದ, ನನ್ನ ಬದುಕಿಗೆ ಯಾವ ವಿಶ್ರಾಂತಿಯೂ ಇಲ್ಲ ಮತ್ತು ಲೌಕಿಕ ಆಮಿಷಗಳೂ ಇಲ್ಲ!”

ಇದು ೧೯ ರ ಹರೆಯದ ಭಗತ್ ಸಿಂಗ್ ನ ಪತ್ರದ ಕೆಲ ಸಾಲುಗಳು!! ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಕೊಡಿಸಲೇ ಬೇಕು ಎನ್ನುವ ಬಯಕೆಯೊಂದನ್ನು ಹೊತ್ತು, ಇವತ್ತಿನ ಪಾಕಿಸ್ತಾನದ ಭಾಗವಾಗಿರುವ ಲೈಲಾಪುರದಿಂದ ಮನೆ ಬಿಟ್ಟು ಹೊರಡುವಾಗ, ಭಗತ್ ತನ್ನ ಕುಟುಂಬಕ್ಕೆ ಹೇಳಿದ್ದ ಮಾತುಗಳಿವು! ಯೋಚಿಸಿ! ಭಗತ್ ನ ರಕ್ತ ಅದೆಷ್ಟು ಕುದ್ದು ಹೋಗಿತ್ತೆಂದು! ಬೇಕಿದ್ದರೆ ಮದುವೆಯಾಗಿ ಸುಖವಾಗಿರಬಹುದಿತ್ತು ಬಿಡಿ! ಆದರೆ, ಆತ ಮಾತ್ರ ರಾಷ್ಟ್ರವೆಂದು ಬಿಟ್ಟ!

ನಮಗೆ ಗೊತ್ತೇ ಇದೆ! ಭಗತ್ ಸಿಂಗ್ ತನ್ನಿಬ್ಬರು ಸ್ನೇಹಿತರಾದ ರಾಜಗುರು ಮತ್ತು ಸುಖದೇವರೊಟ್ಟಿಗೆ ವಂದೇ ಮಾತರಮ್ ಎನ್ನುತ್ತಲೇ ಉರುಳಿಗೆ ಚುಂಬನವಿಕ್ಕಿ ನಗುತ್ತ ಹುತಾತ್ಮರಾದರಲ್ಲ!!? ಅವತ್ತು, ಇಡೀ ಬ್ರಿಟಿಷ್ ಬುಡ ಅಲ್ಲಾಡು ಹೋಗಿತ್ತು! ಅವರೆಂದಿಗೂ ಸಹ ಊಹಿಸಿರಲೇ ಇಲ್ಲ! ಸಾವನ್ನೂ ನಗು ನಗುತ್ತಾ ಬರ ಮಾಡಿಕೊಳ್ಳುವ ಆ ಧೀರತ್ವ ವನ್ನು ಅವರು ಕಂಡಿದ್ದು ಕೇವಲ ಭಾರತದಲ್ಲಿ ಮಾತ್ರ!!

ಬಹುಷಃ ಭಗತ್ ಗೆ ಆಗ ೨೩ ಅಥವಾ ೩೪ ವರ್ಷವಿರಬಹುದಷ್ಟೇ! ಆತ ನೆಮ್ಮದಿಯಾಗಿ ರಾಷ್ಡ್ರಕ್ಕೆ ತನ್ನ ಪ್ರಾಣವನ್ನರ್ಪಿಸಿ ಬಿಟ್ಟಿದ್ದ!!

ಇದಷ್ಟೂ ನಮಗೆ ಗೊತ್ತಿದೆ!! ಆದರೆ, ಭಗತ್ ನ ಪುಸ್ತಕಗಳ ಬಗ್ಗೆ ಗೊತ್ತಿಲ್ಲ!! ಭಗತ್ ತನ್ನ ಜೈಲಿನ ನಾಲ್ಕು ಗೋಡೆಗಳ ಮಧ್ಯ ಹೊಸದಾದ ಬದುಕನ್ನು ತೆರೆದಿಟ್ಟಿದ್ದ!! ಭಗತ್ ನ ಪುಟಗಳನ್ನು ಕೊನೆ ಕೊನೆಗೆ ಹುಡುಕಿ ತೆಗೆದು ನಾಶ ಮಾಡಲಾಯಿತಾದರೂ ಕೊನೆಗೆ ಉಳಿದದ್ದು ಆ ಯುವ ತರುಣ ಬರೆದಿಟ್ಟಿದ್ದ ಸಣ್ಣ ಸಣ್ಣ ಟಿಪ್ಪಣಿಗಳು! ಬದುಕಿನ ಧ್ಯೇಯಗಳು! ಭಗತ ನೇ ರಚಿಸಿದ್ದ ಪದ್ಯಗಳು! ಬಹುಷಃ ಭಗತ್ ಬರೆದಿದ್ದು ಸೆಪ್ಟೆಂಬರ್ 1929 ಮತ್ತು ಮಾರ್ಚ್ 1931 ರ ಮಧ್ಯದಲ್ಲಿ!! ಭಗತ್ ಹುತಾತ್ಮನಾದ ನಂತರ ಆತನ ಈ ಡೈರಿಯನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು!

ಇತ್ತೀಚೆಗೆ ಬಿಡುಗಡೆಯಾದ, ‘THE JAIL NOTEBOOK AND OTHER WRITINGS‘ ಎನ್ನುವ ಪುಸ್ತಕದಲ್ಲಿ ಭಗತ್ ನ ವ್ಯಕ್ತಿತ್ವವೊಂದು ದಾಖಲಾಗಿದೆ! ಜೈಲಿನಲ್ಲಿದ್ದ ಅಷ್ಟೂ ದಿನಗಳ ಕಾಲ ಆತನ ಮನದಲ್ಲಿ ನೇದಿದ್ದ ಹೋರಾಟದ ಬಗ್ಗೆ ಸವಿಸ್ತಾರವಾಗಿ ಬರೆದಿದ್ದ ಭಗತ್!!

ತಾನು ಓದುತ್ತಿದ್ದ ಪುಸ್ತಕಗಳ ಬಗ್ಗೆ ತನ್ನ ಅಭಿಪ್ರಾಯವನ್ನು, ರಾಜಕೀಯ ಮತ್ತು ರಾಜಕೀಯವಲ್ಲದ ವಿಚಾರಗಳ ಬಗ್ಗೆ ಆಳವಾಗಿ ಬರೆದಿದ್ದ ಭಗತ್ ಇಷ್ಟ ಪಡುತ್ತಿದ್ದ ಬರಹಗಾರರೆಂದರೆ, ಬರ್ನಾರ್ಡ್ ಶಾ, ಬರ್ಟ್ರಾಂಡ್ ರಸೆಲ್, ಚಾರ್ಲ್ ಡಿಕನ್ಸ್, ರೌಸಿಯಾ, ರಬೀಂದ್ರ ನಾಥ ಟಾಗೋರ್, ಲಾಲಾ ಲಜಪತ್ ರಾಯ್, ವಿಲಿಯಮ್ ವರ್ಡ್ ವರ್ತ್, ಮಿರ್ಝಾ ಗಾಲಿಬ್ ಮತ್ತು ರಮಾನಂದ ಚಟರ್ಜೀ!

ಭಗತ್ ನ 404 ಪುಟಗಳನ್ನೊಳಗೊಂಡಂತಹ ಈ ಡೈರಿ ಯೊಂದು ಎಡಪಂಥೀಯರ ವಿಚಾರವಾದ ದಿಂದ, ಕ್ರಾಂತಿಕಾರಿ ವಿಚಾರಗಳ ವರೆಗೆ ವಿಮರ್ಶನಾತ್ಮಕವಾಗಿದ್ದಂತಹ ಬರಹಗಳಿಂದ ತು!ಂಬಿತ್ತು! ಕೊನೆಗೂ, ಭಗತ್ ಕ್ರಾಂತಿಕಾರಿಗಳ ಧ್ಯೇಯವನ್ನೇ ಸರಿ ಎಂದು ಒಪ್ಪಿದ್ದನಷ್ಟೇ ಎನ್ನುವುದೂ ಈ ಡೈರಿಯೊಂದು ಹೇಳುತ್ತದೆ‌!!

ಆತನ ಈ ಪದ್ಯವೊಂದನ್ನು ನೋಡಿ!

“I am a man and all that affects mankind concerns me”

“Every tiny molecule of ash is in motion with my heat. I am such a lunatic that I am free even in jail.”

“Lovers, lunatics and poets are made of same stuff.”

“…by crushing individuals, they cannot kill ideas.”

“The sanctity of law can be maintained only so long as it is the expression of the will of the people.”

“If the deaf are to hear, the sound has to be very loud. When we dropped the bomb, it was not our intention to kill anybody. We have bombed the British Government. The British must quit India and make her free.”

“Social progress depends not upon the ennoblement of the few but on the enrichment of democracy. Universal brotherhood can be achieved only when there is an equality of opportunity – of opportunity in social, political and individual life.”

“Give me liberty or death – is life so dear or peace so sweet as to be purchased at the price of chains and slavery?”

“Life is lived on its own…other’s shoulders are used only at the time of funeral.”

bhagat_singh__s_jail_diary_by_arunoday

“ನಾನು ಮನುಷ್ಯನಾಗಿದ್ದೇನೆ ಮತ್ತು ಮನುಕುಲದ ಕಾಳಜಿಯನ್ನು ನನಗೆ ಪರಿಣಾಮ ಬೀರುತ್ತದೆ”

“ಬೂದಿಯ ಪ್ರತಿಯೊಂದು ಪುಟ್ಟ ಅಣುವೂ ಸಹ ನನ್ನ ಶಾಖದಿಂದ ಚಲನೆಯಲ್ಲಿದೆ. ನಾನು ಜೈಲಿನಲ್ಲಿಯೂ ಸಹ ಸ್ವತಂತ್ರ್ಯನಾಗಿರುತ್ತೇನೆ ಎಂದು ನಾನು
ಭಾವಿಸುತ್ತೇನೆ. ”

“ಪ್ರೇಮಿಗಳು, ಲೂನಟಿಕ್ಸ್ ಮತ್ತು ಕವಿಗಳನ್ನು ಒಂದೇ ರೀತಿಯಾದ ಅಣುಗಳಿಂದ ಸೃಷ್ಟಿಸಲಾಗಿರುತ್ತದೆ”

“… ವ್ಯಕ್ತಿಗಳನ್ನು ಪುಡಿಮಾಡುವ ಮೂಲಕ, ಅವರ ಕಲ್ಪನೆಗಳನ್ನು ಕೊಲ್ಲಲು ಸಾಧ್ಯವಿಲ್ಲ.”

“ಕಿವುಡನಿಗೆ ಕೇಳಲು, ಧ್ವನಿ ತುಂಬಾ ಜೋರಾಗಿ ಇರಬೇಕು. ನಾವು ಬಾಂಬ್ ಅನ್ನು ಸ್ಫೋಟಿಸಿದಾಗ ಯಾರನ್ನೂ ಕೊಲ್ಲುವ ಉದ್ದೇಶ ನಮ್ಮದಾಗಿರಲಿಲ್ಲ. ನಾವು ಬ್ರಿಟಿಷ್ ಸರ್ಕಾರವನ್ನು ಸ್ಫೋಟ ಮಾಡಿದ್ದೇವೆ. ಅವಳನ್ನು (ಭಾರತವನ್ನು) ಮುಕ್ತಗೊಳಿಸಲು ಬ್ರಿಟಿಷ್ ಭಾರತವನ್ನು ಅವಶ್ಯವಾಗಿ ತೊರೆಯಬೇಕು!”

“ಸಾಮಾಜಿಕ ಪ್ರಗತಿಯು ಕೆಲವು ಜನರ ಎನ್ನೋಬ್ಲೆಮೆಂಟ್ ಮೇಲೆ ಅವಲಂಬಿಸಿಲ್ಲ ಆದರೆ ಪ್ರಜಾಪ್ರಭುತ್ವದ ಪುಷ್ಟೀಕರಣದ ಮೇಲೆ ಅವಲಂಬಿತವಾಗಿದೆ. ಸಾಮಾಜಿಕ, ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಅವಕಾಶದ ಸಮಾನತೆಯಿದ್ದಲ್ಲಿ ಮಾತ್ರ ಸಾರ್ವತ್ರಿಕ ಸಹೋದರತ್ವವನ್ನು ಸಾಧಿಸಬಹುದು. ”

“ನನಗೆ ಸ್ವಾತಂತ್ರ್ಯ ಅಥವಾ ಮರಣವನ್ನು ಕೊಡಿ – ಸರಪಳಿಗಳು ಮತ್ತು ಗುಲಾಮಗಿರಿಯ ಬೆಲೆಗೆ ಕೊಂಡುಕೊಳ್ಳಲು ಆತ್ಮವು ಅಷ್ಟು ತುಂಬಾ ಸಿಹಿ
ಅಥವಾ ಶಾಂತಿಯನ್ನು ಹೊಂದಿದೆಯೇ?”

“ಬದುಕು ತನ್ನ ಸ್ವಂತವಾಗಿ ವಾಸಿಸುತ್ತದೆ … ಇತರ ಭುಜಗಳನ್ನು ಅಂತ್ಯಕ್ರಿಯೆಯ ಸಮಯದಲ್ಲಿ ಮಾತ್ರ ಬಳಸಲಾಗುತ್ತದೆ!”

ತನ್ನ ಡೈರಿಯ ೨೪ ನೇ ಪುಟದಲ್ಲಿ ೧೯೦೯ ರಲ್ಲಿ ಬಾರ್ಸಿಲೋನಾದ ದಂಗೆಯ ನಂತರ ಮರಣ ದಂಡನೆಗೆ ಒಳಗಾದ ಸ್ಪ್ಯಾನಿಷ್ ಶಿಕ್ಷಕ ಪ್ರಾನ್ಸಿಸ್ಕೋ ಫೆರರ್ ಅವರ ಬಗ್ಗೆ ಬರೆದಿದ್ದಾನೆ! ಸ್ವ ಸೇವೆ ಸಲ್ಲಿಸುವ ರಾಜಕೀಯ ಮತ್ತು ವೈಯುಕ್ತಿಕವಾದ ಭಕ್ತಿಯನ್ನು ಪ್ರತಿಬಿಂಬಿಸುವ ಭಗತ್ ನ ಯೋಚನಾ ಲಹರಿಗಳು ನಿಗೂಢವಾಗಿದ್ದವಷ್ಟೇ ಎಂದು ಹೇಳಲಾಗುತ್ತದೆ!!

“I also wish my friends to speak little or not at all, because idols are created when men are praised and it’s not good for the human race. Acts alone, no matter by whom committed, ought to be studied, praised or blamed.

“I desire that on no occasion, whether near or remote, nor for any reason whatsoever so, shall demonstration of a political or religious character be made before my remains, as I consider the time devoted to the dead would be better employed in improving the condition of the living..”

“ನಾನು ನನ್ನ ಸ್ನೇಹಿತರು ಸ್ವಲ್ಪ ಮಟ್ಟಿಗೆ ಮಾತನಾಡಲಿ ಅಥವಾ ಮಾತೇ ಆಡದಿರಲಿ ಎಂದು ಬಯಸುತ್ತೇನೆ, ಯಾಕೆಂದರೆ ಪುರುಷರು ಹೊಗಳಿದಾಗ ವಿಗ್ರಹಗಳು ಸೃಷ್ಟಿಯಾಗುತ್ತವೆ ಮತ್ತು ಮಾನವ ಜನಾಂಗದವರಿಗೆ ಉತ್ತಮವಲ್ಲ! ಕಾಯಿದೆಗಳಿಗೆ ಬದ್ಧರಾಗಿರಬೇಕಾದರೆ, ಅಧ್ಯಯನ ಮಾಡಬೇಕು, ಕೇವಲ ಹೊಗಳುವುದಲ್ಲ ಅಥವಾ ದೂಷಿಸುವುದಲ್ಲ!

“ಯಾವುದೇ ಸಂದರ್ಭದಲ್ಲಿ, ಹತ್ತಿರದ ಅಥವಾ ದೂರದ, ಅಥವಾ ಯಾವುದೇ ಕಾರಣಕ್ಕಾಗಿ, ರಾಜಕೀಯ ಅಥವಾ ಧಾರ್ಮಿಕ ಪಾತ್ರದ ಪ್ರದರ್ಶನ ಅವಶೇಷಗಳನ್ನು ಮೊದಲು ನಿರೂಪಿಸಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ನಾನು ಸತ್ತವರಿಗೆ ಮೀಸಲಾಗಿರುವ ಸಮಯವನ್ನು ಉತ್ತಮಗೊಳಿಸುವುದಕ್ಕಿಂತ ಜೀವಿತ ಸ್ಥಿತಿಯವರಿಗೆ ಸಮಯವನ್ನು ಮೀಸಲಿಟ್ಟರೆ ನಾನೊಬ್ಬ ಉತ್ತಮ ಉದ್ಯೋಗಿಯಾಗಬಹುದು…!”

ಪುಟ ೩೩ ರಿನಲ್ಲಿ ಭಗತ್ ಬಾಲಕಾರ್ಮಿಕ ಪದ್ಧತಿಯ ಗಂಡಾಂತರಗಳನ್ನು ಷಾರ್ಲೆಟ್ ಪರ್ಕಿನ್ಸ್ ಗಿಲ್ಮಾನ್ರ ಕವನವನ್ನು ಉಲ್ಲೇಖಿಸುತ್ತ ವಿಷಾದಿಸುತ್ತಾನೆ!

“No fledgling feeds the father-bird,
No chicken feeds the hen,
No kitten mouses for the cat,
This glory is for men

We are the wisest strongest race,
Long may our praise be sung,
The only animal alive
That feeds upon its young”

“ಯಾವ ಮರಿಗಳೂ ಪಕ್ಷಿಗಳಿಗೆ ಆಹಾರವನ್ನು ತಂದುಕೊಡುವುದಿಲ್ಲ!
ಯಾವ ಕೋಳಿ ಮರಿಯೂ ತಾಯಿ ಕೋಳಿಗೆ ಆಹಾರ ಹುಡುಕಿ ಕೊಡುವುದಿಲ್ಲ!
ಯಾವ ಬೆಕ್ಕಿನ ಮರಿಯೂ ತಾಯಿ ಬೆಕ್ಕಿಗೆ ಇಲಿಗಳನ್ನು ಬೇಟೆಯಾಡಿ ತಂದು ಕೊಡುವುದಿಲ್ಲ!
ಈ ವೈಭವ ಇರುವುದು ಕೇವಲ ಪುರುಷರಿಗೆ ಮಾತ್ರ!

ಯಾವ ಮರಿಗಳೂ ಪಕ್ಷಿಗಳಿಗೆ ಆಹಾರವನ್ನು ತಂದುಕೊಡುವುದಿಲ್ಲ!
ಯಾವ ಕೋಳಿ ಮರಿಯೂ ತಾಯಿ ಕೋಳಿಗೆ ಆಹಾರ ಹುಡುಕಿ ಕೊಡುವುದಿಲ್ಲ!
ಯಾವ ಬೆಕ್ಕಿನ ಮರಿಯೂ ತಾಯಿ ಬೆಕ್ಕಿಗೆ ಇಲಿಗಳನ್ನು ಬೇಟೆಯಾಡಿ ತಂದು ಕೊಡುವುದಿಲ್ಲ!
ಈ ವೈಭವ ಇರುವುದು ಕೇವಲ ಪುರುಷರಿಗೆ ಮಾತ್ರ!

ವಾಸ್ತವವಾಗಿ, ಭಗತ್ ನ ಬಗ್ಗೆ ಅಚ್ಚರಿ ಹುಟ್ಟುವುದು ಅದೇ! ಆತ ಪುಸ್ತಕ ಪ್ರೇಮಿ! ಒಬ್ಬ ಜಿಜ್ಞಾಸು! ಅದರಲ್ಲೂ, ದೇಶಭಕ್ತಿಯ ಹುಚ್ಚು ಹಿಡಿಸಿಕೊಂಡ ಭಾರತದ ಸುಪುತ್ರ! ಆತನ ಯೋಚನಾ ಲಹರಿಗೆ ಮಿತಿಯಿರಲಿಲ್ಲ! ಆತ ಅಧ್ಯಯನ ಮಾಡುತ್ತಿದ್ದ! ಚರ್ಚೆಗಳನ್ನು ನಡೆಸುತ್ತಿದ್ದ! ತನ್ಮೂಲಕವೇ ಆತನಿಗೊಂದು ಸತ್ಯ ಅರ್ಥವಾಗಿ ಹೋಗಿತ್ತು! ಭಾರತಕ್ಕೆ ಕ್ರಾಂತಿಯ ಅಗತ್ಯವಿದೆ ಎಂದು! ಅದಕ್ಕೇ, ಚಂದ್ರ ಶೇಖರ್ ಆಜಾದ್ ನ ಗುಂಪು ಸೇರಿದ! ಅಲ್ಲಿಂದ, ಸಾವರ್ಕರ್ ರವರ ಸಂಪರ್ಕವಾಯಿತು! ಭಗತ್ ಸಂಪೂರ್ಣವಾಗಿ ಬದಲಾಗಿದ್ದ!

ಆದರೆ, ಆತನ ಡೈರಿಯ ಪುಟಗಳಿವೆಯಲ್ಲ?! ನನಗೆ ಆ ಪುಸ್ತಕ ಅಚಾನಕ್ಕಾಗಿ ಸಿಕ್ಕು ಓದಬೇಕಾದರೆ ಅನ್ನಿಸಿದ್ದು ಇಷ್ಟೇ! ನಾವಂದುಕೊಂಡಂತೆ ಕೇವಲ ಸ್ವಾತಂತ್ರ್ತ ಹೋರಾಟಗಾರನಲ್ಲ ಈ ಭಗತ್! ಅಥವಾ ಮಹಾತ್ಮ ಎನ್ನಿಸಿಕೊಂಡ ಗಾಂಧಿ ಹೇಳಿದಂತೆ ‘ದಾರಿ ತಪ್ಪಿದ ಹುಡುಗರ’ ಸಾಲಿಗೆ ಸೇರಿದವನೆಂತೂ ಅಲ್ಲವೇ ಅಲ್ಲ! ಬದಲಾಗಿ ,‌. ಭಗತ್ ಒಬ್ಬ ನಿಗೂಢನಾಗಿದ್ದ! ಕೇವಲ, ತನ್ನ ಹರೆಯದಲ್ಲಿಯೇ ಭಾರತ, ಸ್ವಾತಂತ್ರ್ಯ, ಹುತಾತ್ಮತೆ ಎನ್ನುವಷ್ಟಕ್ಕೆ ತನ್ನಾ ತಾ ಅರ್ಪಿಸಿಕೊಂಡಿದ್ದ ಅಪ್ಪಟ ಭಾರತೀಯವಾದಿ ಆತ! ಅಷ್ಟೇ!

Get the Book HERE


ತಪಸ್ವಿ

Tags

Related Articles

Close