ಪ್ರಚಲಿತ

ಡಿಕೆಶಿಗೆ ಮೈತ್ರಿ ಪಕ್ಷದಿಂದಲೇ ಅವಮಾನ! ಜೆಡಿಎಸ್ ಸಚಿವರಿಗೆ ಜೈ ಎಂದ ಪೊಲೀಸರು! ಸೂಪರ್ ಸಿಎಂ ಆದ ರೇವಣ್ಣ!

ಕಾಂಗ್ರೆಸ್ ಹಾಗೂ ಜನತಾ ದಳ ಪಕ್ಷಗಳ ಮೈತ್ರಿ ಸರ್ಕಾರಕ್ಕೆ ಪ್ರಮುಖ ಕಾರಣವಾಗಿದ್ದ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಂದು ಭಾರೀ ಅವಮಾನವೇ ನಡೆದಿದೆ. ಸಚಿವ ಡಿಕೆ ಶಿವಕುಮಾರ್ ಹಾಗೂ ದೇಶಪಾಂಡೆಯವರು ಇಂದು ಶಕ್ತಿಭವನದಲ್ಲೇ ಅವಮಾನ ಎದುರಿಸುವಂತಾಯಿತು

ಇಂದು ಮೊದಲು ಸಚಿವ ಡಿಕಡ ಶಿವಕುಮಾರ್ ಅವರು ತನ್ನ ಕಾರಿನಲ್ಲಿ ಶಕ್ತಿ ಭವನಕ್ಕೆ ಆಗಮಿಸಿದ್ದರು. ಆದರೆ ಡಿಕೆಶಿ ಬರುತ್ತಲೇ ಶಕ್ತಿ ಭವನದ ಬಳಿ ಅವರನ್ನು ತಡೆದ ಪೊಲೀಸರು “ಸಿಎಂ ಬರ್ತಿದ್ದಾರೆ ಒಳ ಹೋಗುವ ಹಾಗಿಲ್ಲ. ನಡೆದುಕೊಂಡು ಹೋಗಿ” ಎಂದಿದ್ದರು. ಅಂತೆಯೇ ಸಚಿವ ಡಿಕೆ ಶಿವಕುಮಾರ್ ಅವರು ನಡೆದುಕೊಂಡೇ ಹೋಗಿದ್ದರು. 

ಅದರ ಕೆಲ ಸಮಯದಲ್ಲೇ ಜನತಾ ದಳದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣನವರು ತನ್ನ ಕಾರಿನಲ್ಲಿ ಆಗಮಿಸಿದ್ದರು. ಇವರನ್ನು ಕಂಡ ತಕ್ಷಣವೇ ಗೇಟ್ ಬೀಗ ತೆಗೆದು ಅವರ ಕಾರನ್ನು ಪೊಲೀಸರು ಒಳಪ್ರವೇಶಿಸಲು ಅನುಮತಿ ನೀಡಿದ್ದಾರೆ. ಇದು ಡಿಕೆಶಿಯ ಕಣ್ಣು ಕೆಂಪಗಾಗುವಂತೆ ಮಾಡಿದೆ. ಆರಂಭದಿಂದಲೂ ವೈರತ್ವವನ್ನೇ ಸಾಧಿಸುತ್ತಾ ಬರುತ್ತಿದ್ದ ಸಚಿವ ರೇವಣ್ಣರಿಂದ ಮತ್ತೆ ಡಿಕೆ ಶಿವಕುಮಾರ್ ಅವರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.

Related image

ಅದರ ಕೆಲ ಹೊತ್ತಲ್ಲೇ ಬಂದ ಕಾಂಗ್ರೆಸ್ ಸಚಿಗ ಆರ್.ವಿ.ದೇಶಪಾಂಡೆಗೂ ಪೊಲೀಸರು ಅವಮಾನ ಮಾಡಿದ್ದಾರೆ. ಶಕ್ತಿ ಭವನಕ್ಕೆ ಆಗಮಿಸಿದ್ದ ಕಾಂಗ್ರೆಸ್ ಸಚಿವ ದೇಶಪಾಂಡೆಯವರ ಕಾರನ್ನು ಪೊಲೀಸರು ತಡೆದು ನಡೆದುಕೊಂಡು ಹೋಗುವಂತೆ ಮಾಡಿದ್ದರು. ದೇಶಪಾಂಡೆ ಬರುತ್ತಲೇ ಗೇಟ್‍ಗೆ ಬೀಗ ಹಾಕಿ ಭದ್ರತೆಯ ನೆಪವೊಡ್ಡಿದ್ದಾರೆ. ಇದು ಜನತಾ ದಳದ ಪವರ್ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ ಸ್ವತಃ ತನ್ನ ದೋಸ್ತಿಗೇ ಈ ಸರ್ಕಾರದಲ್ಲಿ ಬೆಲೆ ಇಲ್ವಾ? ಜನತಾ ದಳದ ಸಚಿವರಿಗೆ ದೊರಕುತ್ತಿರುವ ಸೌಲಭ್ಯ ಹಾಗೂ ಗೌರವ ಕಾಂಗ್ರೆಸ್ ಸಚಿವರಿಗೆ ಯಾಕಿಲ್ಲ ಎಂಬ ಪ್ರಶ್ನೆಗಳೂ ಮೂಡುತ್ತಿವೆ.

ಶಕ್ತಿಭವನದಲ್ಲಿ ರೇವಣ್ಣನಿಗೇನು ಕೆಲಸ..?

ಜನತಾ ದಳದ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾದ ನಂತರ ಅವರ ಸಹೋದರ ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದೇನೋ ನಿಜ. ಆದರೆ ಇದೀಗ ಅವರು ಕೇವಲ ಸಚಿವರಾಗದೆ ಸೂಪರ್ ಸಿಎಂ ಆಗಿಬಿಟ್ಟಿದ್ದಾರೆ! ಪದೇ ಪದೇ ಮುಖ್ಯಮಂತ್ರಿಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ರೇವಣ್ಣ ಇದೀಗ ಮತ್ತೆ ಅದನ್ನು ಸಾಭೀತುಪಡಿಸಿದ್ದಾರೆ. ಶಕ್ತಿ ಭವನದಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ಇರಲಿಲ್ಲ. ಆದರೂ ರೇವಣ್ಣ ಮಾತ್ರ ಪ್ರತ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ನಡೆಸುತ್ತಿರುವ ಪ್ರತಿಯೊಂದು ಹೆಜ್ಜೆಯಲ್ಲೂ ರೇವಣ್ಣ ಕಾಣಿಸಿಕೊಳ್ಳುತ್ತಿದ್ದರೆ. ಈ ಮೂಲಕ ಅವರು ಸೂಪರ್ ಸಿಎಂ ಆಗಿದ್ದಾರೆ. ಇಲ್ಲಿ ಅವರ ಮಾತು ಕೇಳದೆ ಏನೂ ನಡೆಯೋದಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ.

Related image

ಒಟ್ಟಾರೆ ಇದೀಗ ದೋಸ್ತಿ ಸರ್ಕಾರದಲ್ಲಿ ಸ್ವತಃ ದೋಸ್ತಿಗಳಿಗೇ ಬೆಲೆ ಇಲ್ಲದಂತಾಗಿದ್ದು ಅದೂ ಕೂಡಾ ಡಿಕೆ ಶಿವಕುಮಾರ್ ಹಾಗೂ ದೇಶಪಾಂಡೆಯವರಂತಹ ಕಾಂಗ್ರೆಸ್‍ನ ಹಿರಿಯ ಸಚಿವರಿಗೇ ತೀವ್ರ ಅವಮಾನ ಉಂಟಾಗಿದೆ. 

  • ಏಕಲವ್ಯ
Tags

Related Articles

Close