ಅಂಕಣ

ಹಿಂದೂ ಸಿಂಹ ಛತ್ರಪತಿ ಶಿವಾಜೀ ಮಹಾರಾಜರ ಹದಿನಾಲ್ಕನೇ ಪೀಳಿಗೆಯ ವಂಶಜ ಸಂಭಾಜೀ ರಾಜೇಯವರ ಬಗ್ಗೆ ಗೊತ್ತೇ ನಿಮಗೆ?!

ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರೆಂದರೆ ಸಾಕು ಪ್ರತಿ ಹಿಂದೂವಿನ ಎದೆಯುಬ್ಬಿ ಬರುವುದು. ಅಟ್ಟಹಾಸದಿಂದ ಮೆರೆಯುತ್ತಿದ್ದ ಮುಗಲ ಮತಾಂಧರ ಹೆಡೆ ಮುರಿ ಕಟ್ಟಿ ಅವರನ್ನು ಅಟ್ಟಾಡಿಸಿ ಹೊಡೆದವರು ಛತ್ರಪತಿ ಶಿವಾಜಿ ಮಹಾರಾಜರು. ಭಾರತದಲ್ಲೆಡೆ ಭಗವಾ ಧ್ವಜ ಹಾರಿಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲಬೇಕು. ಅಂತಹ ಶಿವಾಜಿಯ ನೇರ ವಂಶಜ ನಮ್ಮ ನಡುವೆಯೇ ಇದ್ದಾರೆ ಮತ್ತು ಶಿವಾಜಿಯಂತೆಯೇ ಜನಾನುರಾಗಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆನ್ನುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ.

ಸಂಭಾಜಿ ರಾಜೆ ಶಿವಾಜೀ ವಂಶಾವಳಿಯ 14 ನೇ ಪೀಳಿಗೆ. ಇವರು ಕೋಲ್ಹಾಪುರದ ಛತ್ರಪತಿ ಶಾಹೂ ಅವರ ಮಗ ಮತ್ತು ದಿವಂಗತ ಮೇಜರ್ ಜನರಲ್ ಛತ್ರಪತಿ ಶಾಹಾಜೀ ಮಹಾರಾಜರ ಮೊಮ್ಮಗ. ಶಾಹಾಜೀ ಅವರು ಬ್ರಿಟಿಷರ ಕಾಲದಲ್ಲಿ ಲೈಟ್ ಇನ್ಫೆಂಟರಿ ರೆಜಿಮೆಂಟಿನ ನಾಯಕತ್ವವನ್ನು ವಹಿಸಿದ್ದವರು. ಆಫ್ರಿಕಾದಲ್ಲಿ ಫೀಲ್ಡ್ ಮಾರ್ಷಲ್ ರೋಮೆಲ್ ಅವರನ್ನು ಸೋಲಿಸಿದ ಕೀರ್ತಿ ಶಾಹಾಜಿ ಅವರ ಮುಡಿಗೇರಿತ್ತು. ಅಂತಹ ವೀರನ ಮೊಮ್ಮಗ ಸಂಭಾಜಿ ರಾಜೆ. ಪ್ರಸ್ತುತ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ವಾಸಿಸುತ್ತಿರುವ ಸಂಭಾಜೀ ರಾಜೆ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಸಾಮಾಜಿಕ ಹಾಗೂ ರಾಜಕೀಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ರಾಜ್ಯ ಸಭಾ ಸದಸ್ಯರಾಗಿರುವಂತಹ ಸಂಭಾಜೀಯವರನ್ನು ಕೋಲ್ಹಾಪುರದ ಜನ ಪ್ರೀತಿಯಿಂದ ‘ಮಹಾರಾಜಾ’ ಎಂದು ಕರೆಯುತ್ತಾರೆ. ಸಂಭಾಜೀ ಅವರದ್ದು ವಿನಯಶೀಲ ವ್ಯಕ್ತಿತ್ವ, ಪಾರದರ್ಶಕ ವ್ಯವಹಾರ ಮತ್ತು ಶ್ರಮ ಜೀವಿ ಜೀವನ. ಎಲ್ಲರನ್ನೂ ಪ್ರೀತಿಯಿಂದಲೇ ಕಾಣುವ ಇವರು ಶಿಕ್ಷಣ, ವ್ಯಾಪಾರ, ಉದ್ಯಮ ಮತ್ತು ಕ್ರೀಡೆ ಮುಂತಾದ ಹಲಾವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮಾತ್ರವಲ್ಲ, ಸಹಾಯ ಬೇಡಿ ಬಂದವರಿಗೆ ಸಹಾಯ ಹಸ್ತವನ್ನೂ ಚಾಚುತ್ತಾರೆ. ಅದಕ್ಕೆಂದೇ ಇವರನ್ನು ಕಂಡರೆ ಕೋಲ್ಹಾಪುರದ ಜನರಿಗೆ ಅಪಾರ ಗೌರವ.

ಶಿವಾಜೀ ಮಹಾರಾಜರ ನಿಜವಾದ ಪೀಳಿಗೆಯ ಸಂಭಾಜಿ ನಮ್ಮ ಜೊತೆಯಿರುವುದು ನಮಗೆಲ್ಲ ಗೌರವದ ವಿಚಾರ. ದೇಶ ಮತ್ತು ಧರ್ಮ ಶಿವಾಜಿಯವರ
ಬಲಿದಾನವನ್ನೆಂದೂ ಮರೆಯದು. ತನ್ನ ಪೂರ್ವಜರಂತೆಯೇ ಸಂಭಾಜೀ ಕೂಡಾ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಕುಸ್ತಿ ಮತ್ತು ಫುಟ್ಬಾಲ್ ಅಂದರೆ ಸಂಭಾಜೀಗೆ ಅತ್ಯಂತ ಪ್ರೀತಿ. ಕೊಲ್ಹಾಪುರ್ ಸ್ಪೋರ್ಟ್ಸ್ ಅಸೋಸಿಯೇಶನ್ ನ ಸಂರಕ್ಷಕರಾಗಿರುವ ಇವರು ಸುತ್ತ ಮುತ್ತಲಿನ ಬಡ ಮತ್ತು ಪ್ರತಿಭಾನ್ವಿತ ಕ್ರೀಡಾಪಟುಗಳಿಗಾಗಿ ಅಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುತ್ತಾರೆ. ಭಾಗವಹಿಸುವ ಕ್ರೀಡಾಳುಗಳಿಗೆ ತಮ್ಮ ಖರ್ಚಿನಲ್ಲೇ ಪುರಸ್ಕಾರಗಳನ್ನೂ ನೀಡುತ್ತಾರೆ.

ಕ್ರೀಡೆ ಮಾತ್ರವಲ್ಲದೆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿಯೂ ಹಲವಾರು ಕೈಂಕರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಭಾರತದೆಲ್ಲೆಡೆ ಇರುವ ಪ್ರಾಚೀನ ಕೋಟೆಕೊತ್ತಲಗಳನ್ನೆಲ್ಲ ನವೀಕರಣಗೊಳಿಸಿ ಭಾರತೀಯ ಇತಿಹಾಸವನ್ನು ವಿಶ್ವದ ಮುಂದಿಡುವ ಕೆಲಸ ಕಾರ್ಯಗಳಲ್ಲಿ ನಿರತರಾಗಿ ‘ಅತುಲ್ಯ ಭಾರತ’ ಯೋಜನೆಗೆ ತಮ್ಮ ಯೋಗದಾನವನ್ನು ನೀಡುತ್ತಿದ್ದಾರೆ. ಮಹಾರಾಷ್ಟ್ರದ ಪ್ರವಾಸೋದ್ಯಮ ನಿಗಮದ ರಾಯಭಾರಿಯಾಗಿಯೂ ಕೆಲಸ ನಿರ್ವಹಿಸಿರುವ ಇವರು ದುಬೈನ ರಾಯಲ್ ಹೆರಿಟೇಜ್ ಲಕ್ಷುರಿ ಶೋನಲ್ಲೂ ಮುಖ್ಯ ಅಥಿತಿಯಾಗಿ ಭಾಗವಹಿಸಿರುತ್ತಾರೆ. ಇದು ನಮಗೆಲ್ಲರಿಗೂ ಗೌರವದ ವಿಚಾರ.

ಇದಲ್ಲದೆ ರಾಯಗಡ ವಿಕಾಸ ಪ್ರಾಧಿಕರಣದ ಅಧ್ಯಕ್ಷ, ಅಖಿಲ ಭಾರತ ಶಿವಾಜೀ ಮೆಮೋರಿಯಲ್ ಸೊಸೈಟಿಯ ಉಪಾಧ್ಯಕ್ಷ, ವಿಷ್ವಸ್ತ ಛತ್ರಪತಿ ಶಾಹೂ ವಿದ್ಯಾಲಯದ ಸಂಸ್ಥಾಪಕ, ಸ್ವಾಮೀ ವಿವೇಕಾನಂದ ಎಜುಕೇಶನ್ ಸೊಸೈಟಿಯ ಸಂರಕ್ಷಕ, ಶಾಹಾಜೀ ಶೂಟಿಂಗ್, ಛತ್ರಪತಿ ಚ್ಯಾರಿಟೇಬಲ್ ದೇವಸ್ತಾನ ಟ್ರಸ್ಟ್, ಸಹ್ಯಾದ್ರಿ ಪ್ರತಿಷ್ಟಾನ, ಶಾಹೂ ಮಂಚ ಮತ್ತು ಸಂಭಾಜೀ ಟ್ರಸ್ಟ್ ಮುಂತಾದ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಸಂಸ್ಥೆಗಳನ್ನು ಹುಟ್ಟು ಹಾಕಿ ಜನರ ಅಭಿವೃದ್ದಿ ಮತ್ತು ವಿಕಾಸಕ್ಕಾಗಿ ಅನವರತ ದುಡಿಯುತ್ತಿದ್ದಾರೆ. ಶಿವಾಜಿ ಮಾಹಾರಾಜರ ಪ್ರಜಾಪರ ಕೆಲಸಗಳನ್ನು ತನ್ನ ಹೆಗಲ ಮೇಲೇರಿಸಿಕೊಂಡು ಮುನ್ನುಗ್ಗುತ್ತಿರುವ ಇವರಿಗೆ ಇನ್ನಷ್ಟು ಬಲ ಬರಲಿ. ಇವರಿಂದ ಇನ್ನೂ ಹತ್ತು ಹಲವು ಸಮಾಜ ಮುಖಿ ಕೆಲಸಗಳು ಕೈಗೊಳ್ಳಲಿ. ಶಿವಾಜಿ ಮಹಾರಾಜರ ಹೆಸರು ಸೂರ್ಯ-ಚಂದ್ರರಿರುವವರೆಗೂ ಅಜರಾಮರವಾಗಲಿ.

ಜೈ ಶಿವಾಜೀ…. ಜೈ ಭವಾನೀ….

-Sharwari

Tags

Related Articles

Close