ಅಂಕಣ

ದಲಿತರ ಹೆಸರಿನಲ್ಲಿ ಧರ್ಮ ಒಡೆಯುವ ಕುತಂತ್ರಿ ನರಿಗಳಿಗೆ ತಕ್ಕ ಉತ್ತರ ನೀಡಿದ ಜುನಾ ಅಖಾಡ ಮುಂದಿನ ಕುಂಭ ಮೇಳಕ್ಕೆ ಮಹಾಮಂಡಲೇಶ್ವರನನ್ನಾಗಿ ದಲಿತ ವ್ಯಕ್ತಿಯನ್ನೇ ನೇಮಿಸಿದೆ

ನನ್ನ ದೇಶ ಬದಲಾಗುತ್ತಿದೆ… ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಆಳುವ ರಾಜನೀತಿಗೆ ತಿಲಾಂಜಲಿ ಇಡುತ್ತಿದೆ. ಎಡಚ-ಕೈ-ನರಿ-ಜಿಹಾದಿಗಳ ಕುತಂತ್ರಕ್ಕೆ ಸರಿಯಾದ ಉತ್ತರವನ್ನೇ ಸನಾತನ ಧರ್ಮ ನೀಡುತ್ತಿದೆ. ಎಪ್ಪತ್ತು ವರ್ಷಗಳಿಂದ ಜನರಿಗೆ ಮಂಕು ಬೂದಿ ಎರಚಿದ ಕಪಟಿಗಳೆಲ್ಲ ಎದೆ ಒಡೆದು ಕೊಂಡು ಅಳುವ ಕಾಲ ಸನ್ನಿಹಿತವಾಗುತ್ತಿದೆ. ಸಮಾನತೆಯನ್ನು ಸಾರುವ ಸನಾತನ ಧರ್ಮ ತನ್ನ ಮೌಲ್ಯಗಳನ್ನು ಪುನಃ ಪ್ರತಿಷ್ಠಾಪಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ದೇಶವೇ ಕಂಡು ಕೇಳರಿಯದ ಘಟನೆಗಳು ನಡೆಯುತ್ತಿವೆ.

ದೇಶದ ಅತಿ ದೊಡ್ಡ, ಅತ್ಯಂತ ಪ್ರಾಚೀನ ಮತ್ತು ವಿಶ್ವ ವಿಖ್ಯಾತ ಸಾಧು-ಸನ್ಯಾಸಿ ಪರಂಪರೆಯ ಜುನಾ ಅಖಾಡಾ 2019 ರ ಇಲಹಾಬಾದ್ ಕುಂಭ ಮೇಳಕ್ಕೆ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಒಬ್ಬ ದಲಿತ ವ್ಯಕ್ತಿಯನ್ನು ಮಹಾಮಂಡಲೇಶ್ವರನನ್ನಾಗಿ ನೇಮಿಸಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ವಿಶ್ವ ವಿಖ್ಯಾತ ಕುಂಭ ಮೇಳಕ್ಕೆ ಮಹಾಮಂಡಲೇಶ್ವರನಾಗುವುದೇ ಒಂದು ಸೌಭಾಗ್ಯ. ಅಂತಹದರಲ್ಲಿ ಒಬ್ಬ ದಲಿತ ವ್ಯಕ್ತಿಯನ್ನು ಮಹಾಮಂಡಲೇಶ್ವರನನ್ನಾಗಿ ನೇಮಿಸುವುದು ಅಭೂತ ಪೂರ್ವ ವಿಚಾರ. “ಎಡಚ-ಕೈ” ಯ ಬುದ್ದಿಜೀವಿಗಳು ಸನಾತನ ಧರ್ಮವನ್ನು ದಲಿತ ವಿರೋಧಿ ಎಂದು ಬಿಂಬಿಸುತ್ತಿರುವ ಈ ಹೊತ್ತಿನಲ್ಲಿ ಜುನಾ ಅಖಾಡಾ ದ ಈ ನಿರ್ಣಯ ಅಭಿನಂದನಾರ್ಹ.

ಕನೈಯ್ಯಾ ಕಶ್ಯಪ್ ಎನ್ನುವ ದಲಿತ ವ್ಯಕ್ತಿಗೆ ಶಾಸ್ತ್ರೋಕ್ತವಾಗಿ ದೀಕ್ಷೆ ನೀಡಿ ಸ್ವಾಮಿ ಶಿವಾನಂದ ಗಿರಿಯನ್ನಾಗಿಸಿ ಅವರನ್ನೇ ಮುಂದಿನ ಕುಂಭ ಮೇಳಕ್ಕೆ ಮಹಾಮಂಡಲೇಶ್ವರನನ್ನಾಗಿ ನೇಮಿಸಲಾಗಿದೆ. ಅಖಾಡಾದ ಈ ನಿರ್ಣಯದಿಂದ ಸ್ವಾಮಿ ಶಿವಾನಂದ ಗಿರಿ ಅವರಿಗೆ ಅತ್ಯಂತ ಸಂತೋಷವಾಗಿದೆ. ತನ್ನ ನೇಮಕ ತನ್ನ ಸಮುದಾಯದ ಇತರರಿಗೆ ಸನ್ಯಾಸ ಸ್ವೀಕರಿಸಲು ಮತ್ತು ಮುಖ್ಯ ಧಾರೆಗೆ ಬರಲು ಸಹಾಯಕವಾಗಲಿದೆ ಎಂದು ಅವರು ಆಶಾವಾದ ವ್ಯಕ್ತ ಪಡಿಸುತ್ತಿದ್ದಾರೆ. ದಲಿತ ಸಮುದಾಯದಲ್ಲಿ ಮಾರ್ಗದರ್ಶನ ಮತ್ತು ಗುರುವಿನ ಕೊರತೆಯಿಂದಾಗಿಯೇ ಅವರು ಮತಾಂತರಿಗಳ ಕಪಟ ನಾಟಕಕ್ಕೆ ಬಲಿಯಾಗಿ ಮತಾಂತರಗೊಳ್ಳುತ್ತಾರೆ ಎಂಬುದು ಅವರ ಅಂಬೋಣ.

ತನ್ನ ಜೀವನದ ಮೊದಲ ಕೆಲವು ವರ್ಷಗಳಲ್ಲಿ ಜಾತಿ ಬೇಧದ ಕಹಿಯನ್ನು ಅನುಭವಿಸಿದ್ದರೂ ಅವರು ಸನಾತನ ಧರ್ಮದ ಬಗ್ಗೆ ಅತೀವ ಪ್ರೀತಿ ವ್ಯಕ್ತಿ ಪಡಿಸುತ್ತಾರೆ ಮತ್ತು ಅಶಾವಾದಿಯಾಗಿ “ಸರ್ವರನ್ನೂ ಸಮಾನತೆಯ ದೃಷ್ಟಿಯಿಂದ ನೋಡುವ ಸನಾತನ ಧರ್ಮದಲ್ಲಿ ಒಂದು ದಿನ ಜಾತಿ ಬೇಧ ತೊಡೆದು ಹೋಗುತ್ತದೆ” ಎನ್ನುತ್ತಾರೆ. ಮಾತ್ರವಲ್ಲ “ಒಂದು ಕಾಲದಲ್ಲಿ ಜಾತಿ ಬೇಧಕ್ಕೊಳಗಾದ ನನಗೆ ಇಂತಹ ಅತಿ ದೊಡ್ದ ಜವಾಬ್ದಾರಿ ವಹಿಸಿರುವುದರಿಂದ ನನ್ನ ಸಮುದಾಯದ ಇತರರಿಗೆ ಮುಖ್ಯಧಾರೆಯಲ್ಲಿ ಒಂದಾಗಲು ಈ ತೆರನಾದ ನಿರ್ಧಾರಗಳು ಸಹಾಯವಾಗುತ್ತವೆ” ಎಂದೂ ಹೇಳುತ್ತಾರೆ. ಶಿವಾನಂದ ಗಿರಿಯವರ ಜೊತೆ ಇನ್ನಿಬ್ಬರಾದ ರೇಣು ಶರ್ಮ ಮತ್ತು ಅಮಿತ್ ಜೋಶಿ ಎಂಬವರಿಗೂ ದೀಕ್ಷೆ ನೀಡಲಾಗಿದೆ. ಸನಾತನ ಧರ್ಮ ಯಾವತ್ತೂ ಯಾರಲ್ಲೂ ಬೇಧ ಮಾಡುವುದಿಲ್ಲ. ಇಲ್ಲಿ ಕೃಷ್ಣ -ಕುಚೇಲ ಇಬ್ಬರೂ ಸಮಾನರು. ಶಬರಿಯ ಕೈಯಿಂದ ಬೋರೆ ಹಣ್ಣನ್ನು ಗ್ರಹಿಸಿ ಆಕೆಯನ್ನು ಪುನೀತನನ್ನಗಿಸಿದವ ಶ್ರೀರಾಮ. ರಾಮಾಯಣ-ಮಹಾಭಾರತ ರಚಿಸಿದ ನಿಮ್ನ ವರ್ಣದ ವಾಲ್ಮೀಕಿ-ವೇದವ್ಯಾಸರು ಇಲ್ಲಿ ಪ್ರಾಥಃಸ್ಮರಣೀಯರು.

ಸನಾತನ ತನ್ನ ಹಳೆ ಮೌಲ್ಯಗಳಿಗೆ ಹಿಂದಿರುಗುತ್ತಿರುವ ಘಟನೆ ಇತ್ತೀಚೆಗಷ್ಟೇ ತೆಲಂಗಾಣದ ರಂಗನಾಥ ಸ್ವಾಮಿ ಮಂದಿರದಲ್ಲಿಯೂ ನಡೆಯಿತು. ತನ್ನ 2700 ವರ್ಷಗಳ ಹಿಂದಿನ ಪರಂಪರೆಯನ್ನು ಅನುಷ್ಠಾನಗೊಳಿಸುತ್ತಾ ಮಂದಿರದ ರಂಗರಾಜನ್ ಎಂಬ ಬ್ರಾಹ್ಮಣ ಅರ್ಚಕ ಅದಿತ್ಯ ಎನ್ನುವ ದಲಿತನನ್ನು ತನ್ನ ಹೆಗಲ ಮೇಲೆ ಕೂರಿಸಿ ಮಂದಿರದೊಳಗೆ ಎತ್ತಿ ಕೊಂಡು ಹೋಗಿ ಸನಾತನದ ಸಮಾನತೆಯ ಮರ್ಮವನ್ನು ದೇಶಕ್ಕೇ ಸಾರಿದರು. ಇಡಿಯ ದೇಶವೇ ಈ ಬದಲಾವಣೆಯನ್ನು ತೆರೆದ ಮನಸ್ಸಿನಿಂದ ಸ್ವಾಗತಿಸಿತು. ಈಗ ಜುನಾ ಅಖಾಡಾದ ಸರದಿ. ಇಂತಹ ಘಟನೆಗಳು ದೇಶದಲ್ಲಿ ಇನ್ನಷ್ಟು ಮತ್ತಷ್ಟು ನಡೆಯಬೇಕು ದೇಶದ ಪ್ರತಿ ಮಂದಿರವೂ ಇದೇ ತೆರನಾಗಿ ಸಮಾನತೆಯನ್ನು ಸಾರುವ ಕೈಂಕರ್ಯಗಳನ್ನು ಕೈ ಗೊಂಡರೆ ಜಾತಿ ಆಧಾರದ ಮೇಲೆ ದೇಶ ಒಡೆಯುವ ನರಿಗಳಿಗೆ ಬುದ್ದಿ ಕಲಿಸಿದಂತಾಗುವುದು.

ಸನಾತನದ ಅಖಂಡತೆಯನ್ನು ಸಾರಲು ಇದೇ ಸರಿಯಾದ ಸಮಯ. ಮಂತಾಂತರಿಗಳ ಕುಲವನ್ನೆ ನಾಶಮಾಡಿ, ಜಿಹಾದಿಗಳಿಗೆ ತಕ್ಕ ಪಾಠ ಕಲಿಸುವ ಘಳಿಗೆ ಬಂದೇ ಬಿಟ್ಟಿದೆ. ಅಖಂಡ ಭಾರತದ ಕನಸು ನನಸಾಗಬೇಕಾದರೆ ಮೊದಲು ಸನಾತನದ ಅಖಂಡತೆಯಿಂದ ವಿವಿಧ ಜಾತಿ-ಮತಗಳಲ್ಲಿ ಹರಿದು ಹಂಚಿ ಹೋದ ಸನಾತನಿಗಳೆಲ್ಲ ಒಗ್ಗಟ್ಟಾಗಬೇಕು. ನಮ್ಮ ಒಗ್ಗಟ್ಟೇ ವಿಛಿದ್ರಕಾರಿಗಳ ಸರ್ವನಾಶಕ್ಕೆ ನಾಂದಿ ಹಾಡಬೇಕು. ಮತಗಳೆಲ್ಲವೂ ನಶ್ವರ…ಸನಾತನವೇ ಶಾಶ್ವತ …ಒಗ್ಗಟ್ಟಿನಲ್ಲಿದೆ ಬಲ…

-ಶಾರ್ವರಿ

Source
TOI
Tags

Related Articles

Close