ದೇಶ

ಟಿಪ್ಪು ಪ್ಯಾಲೆಸ್‌ನಲ್ಲಿ ದೇವರ ವಿಗ್ರಹ ಪತ್ತೆ! ಮತ್ತೊಮ್ಮೆ ಬಯಲಾಯ್ತು ಟಿಪ್ಪು ಸುಲ್ತಾನನ ಕ್ರೌರ್ಯ!

ಬೆಂಗಳೂರಿನ ಟಿಪ್ಪು ಸಮ್ಮರ್ ಪ್ಯಾಲೇಸ್‌ನ ಕೋಣೆಯೊಂದರಲ್ಲಿ ಹಿಂದೂ ಧರ್ಮ‌ಕ್ಕೆ ಸಂಬಂಧಿಸಿದಂತಹ ದೇವರ ವಿಗ್ರಹ ಒಂದು ಪತ್ತೆಯಾಗಿದ್ದು, ಇದೀಗ ಕುತೂಹಲಕ್ಕೆ ಎಡೆ ಮಾಡಿದೆ.

ಟಿಪ್ಪು ಸಮ್ಮರ್ ಪ್ಯಾಲೇಸ್‌ನಲ್ಲಿ ಪತ್ತೆಯಾದ ಈ ದೇವರ ಬಗ್ಗೆ ಪುರಾತತ್ವ ಇಲಾಖೆಯಾಗಲಿ, ಅಲ್ಲಿನ ಸಿಬ್ಬಂದಿ‌ಗಳಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಬೆಂಗಳೂರಿನ ಸಿಟಿ ಪ್ಯಾಲೆಸ್ ಸಮೀಪದಲ್ಲಿ ಇರುವ ಟಿಪ್ಪು ಪ್ಯಾಲೇಸ್‌ನಲ್ಲಿ ಈ ದೇವರ ಮೂರ್ತಿ ಪತ್ತೆಯಾಗಿದೆ. ಪುರಾತತ್ವ ಇಲಾಖೆ ಸಹ ಈ ದೇವರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಈ ಜಾಗ ಈ ಹಿಂದೆ ದೇವಾಲಯ ಇತ್ತೋ?, ಆ ಬಳಿಕ ಅಲ್ಲಿ ಅನಧಿಕೃತವಾಗಿ ಟಿಪ್ಪು ಅರಮನೆಯನ್ನು ಕಟ್ಟಿಸಿದ್ದನಾ ಎಂಬ ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ. ಕೋಟೆ ಆವರಣದೊಳಗೆ ದೇವಾಲಯವೇ ಇದ್ದಿರಬಹುದು ಎಂಬ ಸಂಶಯ ಈ ಮೂರ್ತಿ‌ ದೊರೆತ ಬಳಿಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಇನ್ನು ಈ ದೇವರ ವಿಗ್ರಹ ಇರುವ ಕೋಣೆಗೆ ಬೀಗ ಜಡಿದು, ಸೀಲ್ ಮಾಡಲಾಗಿದ್ದು, ಈ ಬಗ್ಗೆ ಅಲ್ಲಿನ ಸಿಬ್ಬಂದಿ ಸಹ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಈ ಟಿಪ್ಪು ಅರಮನೆಯಲ್ಲಿಯೂ ಮತಾಂಧ ಕೆಲಸಗಳು ನಡೆದಿವೆಯೇ ಎಂಬ ಅನುಮಾನ ಎಲ್ಲರದು. ಈ ಮೂರ್ತಿ ಅಲ್ಲಿಯೇ ಇದ್ದಿದ್ದಾಗಿರದಿದ್ದಲ್ಲಿ, ಈ ಮೂರ್ತಿ ಅಲ್ಲಿಗೆ ಹೇಗೆ ಬಂತು?, ಅದನ್ನಲ್ಲಿಗೆ ತಂದವರ್ಯಾರು? ಎಂಬಿತ್ಯಾದಿ ಪ್ರಶ್ನೆ‌ಗಳಿಗೆ ಪುರಾತತ್ವ ಇಲಾಖೆಯೇ ಉತ್ತರ ನೀಡಬೇಕಿದೆ.

Tags

Related Articles

Close