ಅಂಕಣ

1,400 ವರ್ಷಗಳ ಇತಿಹಾಸವಿರುವ ಸುನ್ನಿ ಮತ್ತು ಶಿಯಾ ಕದನದ ಬಗ್ಗೆ ಯಾವ ಬುದ್ದಿಜೀವಿ, ಯಾವ ಮಾಧ್ಯಮಗಳೂ ಮಾತಾಡುವುದಿಲ್ಲ ಏಕೆ?!

Disclaimer : This article is only to show how political parties are misusing the concept of religion. There is no intention to hurt or insult any one on the basis of religion.

ಸನಾತನ ಧರ್ಮದಲ್ಲಿ ಇಲ್ಲದೇ ಇರುವ ಕುಂದು ಕೊರತೆ ಕೊಂಕುಗಳನ್ನು ಉಂಟೆಂಬಂತೆ ಬಿಂಬಿಸಿ ಹಲವಾರು ವರ್ಷಗಳಿಂದ ಪುರೋಹಿತಶಾಹಿ, ಬ್ರಾಹ್ಮಣ, ದಲಿತ, ಮೇಲ್ವರ್ಗ, ಕೆಳವರ್ಗ, ಆರ್ಯರ ಆಕ್ರಮಣ, ಎಂದೆಲ್ಲಾ ಬೊಗಳೆ ಬಿಡುತ್ತಾ ಪುಟಗಟ್ಟಲೆ ಬರೆದ ಬುದ್ದಿಜೀವಿಗಳು ಕಳೆದ 1,400 ವರ್ಷಗಳಿಂದಲೂ ಶಿಯಾ ಮತ್ತು ಸುನ್ನಿಗಳ ನಡುವೆ ನಡೆದ ರಕ್ತ ರಂಜಿತ ಕದನೇತಿಹಾಸದ ಬಗ್ಗೆ ಒಂದಕ್ಷರವೂ ಬರೆಯುವುದಿಲ್ಲ!! ಹಿಂದೂ ಗಳಲ್ಲಿ ಆ ಜಾತಿ, ಈ ಜಾತಿ ಎಂದು ಕಚ್ಚಾಟ ಮಾಡುವುದನ್ನು “ಬ್ರೇಕಿಂಗ್ ನ್ಯೂಸ್” ನಲ್ಲಿ ತೋರಿಸುವ ಟಿ.ಆರ್.ಪಿ ಮಾಧ್ಯಮಗಳೂ ಕೂಡಾ ಶಿಯಾ-ಸುನ್ನಿ ಜಗಳದ ಬಗ್ಗೆ ಮೇಜು ಕುಟ್ಟುವ “ಪ್ಯಾನಲ್ ಡಿಸ್ಕಶನ್” ಮಾಡುವುದಿಲ್ಲ!!

ಇಸ್ಲಾಂ ಮಾತ್ರವಲ್ಲ ಕ್ರೈಸ್ತರಲ್ಲೂ ಕೆಥೋಲಿಕ-ಪ್ರೊಟೆಷ್ಟಂಟ್-ನ್ಯೂ ಲೈಫ್ ಎಂಬ ತರಹೇವಾರಿ ಪಂಗಡಗಳು ತಮ್ಮ ತಮ್ಮಲ್ಲೇ ಜಗಳವಾದುವುದನ್ನು ತಿಳಿಸುವುದೇ ಇಲ್ಲ ಈ ಬುರುಡೆ ಸಿದ್ದಾಂತವಾದಿಗಳು. ಕುಂದು ಕೊರತೆಗಳೆಲ್ಲ ಹಿಂದೂ ಧರ್ಮದಲ್ಲೇ ಕಾಣುವ ಕಾಮಾಲೆ ಕಣ್ಣು ಇವರಿಗೆಲ್ಲ. ಮುಸಲ್ಮಾನ ಮತ್ತು ಕ್ರೈಸ್ತರಲ್ಲೇ ಹಲವಾರು ಪಂಗಡಗಳಿದ್ದರೂ, ಅವರೆಲ್ಲಾ ತಮ್ಮ ತಮ್ಮಲ್ಲಿ ಎಷ್ಟೇ ಜಗಳವಾಡಿಕೊಂಡರೂ, ಹಿಂದೂಗಳ ವಿರುದ್ದವಾಗುವಾಗ ಅವರೆಲ್ಲ ಒಂದಾಗುತ್ತಾರೆ! ಅವರಲ್ಲಿರುವ ಮತಬೇಧಗಳೆಲ್ಲ ಮಾಯವಾಗಿ ಒಗಾಟ್ಟಾಗುತ್ತಾರೆ ಮತ್ತು ಹಿಂದೂಗಳ ವಿರುದ್ದ ಕತ್ತಿ ಮಸೆಯುತ್ತಾರೆ. ಆದರೆ ಹಿಂದೂಗಳು ತದ್ವಿರುದ್ದ. ಹಿಂದೂಗಳ ಈ ಒಗ್ಗಟ್ಟಿನ ಕೊರತೆಯಿಂದಾಗೇ ಇಂದು ಹಿಂದೂಗಳ ಮಾರಣ ಹೋಮ ಎಗ್ಗಿಲ್ಲದೆ ನಡೆಯುತ್ತಿರುವುದು.

ನಿಮಗೆ ಗೊತ್ತಿರಬಹುದು ವಿಶ್ವದ ಅತಿ ದೊಡ್ಡ ಮುಸಲ್ಮಾನ ಪಂಗಡ ಸುನ್ನಿಗಳದ್ದು. ವಿಶ್ವದಲ್ಲಿ ಶೇಕಡಾ 80% ಸುನ್ನಿ ಪಂಗಡದವರಾದರೆ, 20% ಮಾತ್ರ ಶಿಯಾಗಳು. ಶಿಯಾ ಮತ್ತು ಸುನ್ನಿಗಳಿಗೆ ಹೋಲಿಸಿದಾಗ ಸುನ್ನಿಗಳು ತುಂಬಾ ಅಪಾಯಕಾರಿ. ಇವರು ಕಟ್ಟರ್ ಇಸ್ಲಾಂನ ಪ್ರತಿಪಾದಕರು ಅದಕ್ಕೇ ಆತಂಕವಾದಿಗಳೆಲ್ಲ ಹೆಚ್ಚಾಗಿ ಸುನ್ನಿಗಳೇ ಆಗಿರುವುದು. ಇವರಿಬ್ಬರೂ ಸಾವಿರಾರು ವರ್ಷಗಳಿಂದ ಕತ್ತಿ ಹಿಡಿದು ಒಬ್ಬರ ವಿರುದ್ದ ಮತ್ತೊಬ್ಬರು ಸಮರ ಸಾರುತ್ತಿದ್ದಾರೆ.

ಸುನ್ನಿಗಳಲ್ಲಿರುವ ಪಂಗಡಗಳು:
ಹನಫಿ: ಇದರಲ್ಲಿ ಎರಡು ಉಪ ಪಂಗಡ: ದೇವಬಂಧಿ ಮತ್ತು ಬರೆಲವಿ
ಮಾಲಿಕಿ
ಶಾಫಯಿ
ಹಂಬಲಿ
ಅಹಲೇ ಹದೀಸ್/ಸಲಫಿ/ವಹಾಬಿ
ಅಹಮದೀಯ

ಶಿಯಾಗಳಲ್ಲಿರುವ ಪಂಗಡಗಳು:
ಇಸ್ನಾ ಅಶ ಅರೀ
ಇಸ್ಮಾಯಿಲಿ: ಇದರಲ್ಲಿ ನಾಲ್ಕು ಉಪಪಂಗಡ: ಫಾತಮೀ, ಬೋಹರಾ, ಖೋಜೆ ಮತ್ತು ನುಸೈರಿ
ಜೈದೀ

ಭಾರತದಲ್ಲಿ ದೇವಬಂಧಿ, ಬರೆಲವಿ ಮತ್ತು ಅಹಮದೀಯ ಸುನ್ನಿಗಳು ಹಾಗೂ ಇಸ್ನಾ ಅಶ ಅರೀ ಮತ್ತು ಇಸ್ಮಾಯಿಲಿ ಪಂಗಡಗಳು ಕಾಣ ಸಿಗುತ್ತವೆ. ಮರಳುಗಾಡಿನಲ್ಲಿ ಹರವಿಕೊಂಡಿದ್ದ ಮುಸ್ಲಿಂ ಸಮುದಾಯವನ್ನು ಮೊತ್ತ ಮೊದಲು ಒಗ್ಗೂಡಿಸಿದ ಕೀರ್ತಿ ಮೊಹಮ್ಮದ್ ಪೈಗಂಬರ್ ಗೆ ಸಲ್ಲುತ್ತದೆ. ಪೈಗಂಬರ್ 632ರಲ್ಲಿ ಮೃತ್ಯು ವಶರಾದಾಗ ಅವರ ಉತ್ತರಾಧಿಕಾರಿಗಾಗಿ ಕದನ ನಡೆಯುತ್ತದೆ. ಸಂಪದ್ಭರಿತ ಇಸ್ಲಾಂ ಸಾಮ್ರಾಜ್ಯದ ಹಕ್ಕಿಗಾಗಿ ಶಿಯಾ ಮತ್ತು ಸುನ್ನಿಗಳಲ್ಲಿ ಕಾದಾಟ ನಡೆಯುತ್ತದೆ. ಇಲ್ಲಿ ಪೈಂಗಬರ್ ನ ಅತಿ ಕಿರಿಯ ಪತ್ನಿ ಆಯೇಶಾಳ ಕುತಂತ್ರದಿಂದಾಗಿ ಆಕೆಯ ತಂದೆ ಅಬೂಬಕರ್(ಸುನ್ನಿ) ಖಲೀಫನಾಗುತ್ತಾನೆ. ಇದರಿಂದ ಶಿಯಾ ಮುಸಲ್ಮಾನರು ರೊಚ್ಚಿಗೇಳುತ್ತಾರೆ. ಅವರ ಪ್ರಕಾರ ಪೈಗಂಬರರ ಚಿಕ್ಕಪ್ಪನ ಮಗ ಮತ್ತು ಅಳಿಯನಾದಂತಹ ಅಲಿ ಯೇ ಅಸಲೀ ವಾರೀಸುದಾರನಾಗಿರುತ್ತಾನೆ. ಇಲ್ಲಿಂದ ಇವರಿಬ್ಬರ ನಡುವೆ ಘನ ಘೋರ ಕಾದಾಟ ಶುರುವಿಟ್ಟುಕೊಳ್ಳುತ್ತದೆ.

ಶಿಯಾಗಳ ಪ್ರಕಾರ ಆಯೇಶಾ ಮೋಸದಿಂದ ಪೈಗಂಬರನ್ನು ಕೊಲ್ಲಿಸಿದ್ದು ಮತ್ತು ತನ್ನ ತಂದೆಯನ್ನು ಉಪಾಯದಿಂದ ಖಲೀಫನನ್ನಾಗಿಸಿದ್ದು. ಅವರ ಪ್ರಕಾರ ಮೊದಲ ನಾಲ್ಕು ಸುನ್ನೀ ಸಮುದಾಯದ ಖಲೀಫಾಗಳು ಕೂಡಾ ಉತ್ತರಾಧಿಕಾರಿಯಾಗಲು ಯೋಗ್ಯರಾಗಿರಲಿಲ್ಲ. ಶಿಯಾಗಳು ಅಲಿಯನ್ನೇ ತಮ್ಮ ಇಮಾಮ್ ಎಂದು ಪರಿಗಣಿಸುತ್ತಾರೆ ಮಾತ್ರವಲ್ಲ, ಪೈಗಂಬರರ ಮಗಳು ಫಾತಿಮಾನನ್ನು ತಮ್ಮ ತಾಯಿಯೆಂದು ಪರಿಗಣಿಸುತ್ತಾರೆ. ಶಿಯಾಗಳು ತಮ್ಮ ಧರ್ಮಗುರುವನ್ನು ಇಮಾಮ್ ಎಂದು ಕರೆಯುತ್ತಾರೆ ಮತ್ತು ಸುನ್ನಿಗಳು ಖಲೀಫಾ ಎನ್ನುತ್ತಾರೆ. ಸುನ್ನಿಗಳಿಗೆ ಆಯೇಶಾ ತಾಯಿಯಾದರೆ ಶಿಯಾಗಳಿಗೆ ಫಾತಿಮಾ ನೆ ತಾಯಿ. ಪೈಗಂಬರರ ಮರಣಾನಂತರ ಶುರುವಾದ ಈ ಕದನ ಇವತ್ತಿಗೂ ಅನೂಚಾನಾವಾಗಿ ನಡೆದುಕೊಂಡು ಬಂದಿದೆ ಆದರೆ ಜಗತ್ತಿನ ಎಲ್ಲಾ ಮಾಧ್ಯಮಗಳು ಈ ಬಗ್ಗೆ ಗಪ್-ಚುಪ್! ಇದೇ ಕಾರಣದಿಂದಾಗಿ ಮೇಲು ನೋಟಕ್ಕೆ ಮುಸಲ್ಮಾನರೆಲ್ಲಾ ಒಂದೇ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ. ಆದರೆ ವಾಸ್ತವ ಬೇರೆ.

ವಹಾಬಿ ವಿಚಾರಧಾರೆ: ಹದಿನೇಳನೆ ಶತಮಾನದಲ್ಲಿ ಸೌದಿಯ ಇಸ್ಲಾಮಿಕ್ ವಿದ್ವಾಂಸ ಮೊಹಮ್ಮದ್ ಬಿನ್ ಅಬ್ದುಲ್ ವಹಾಬ್ ನ ವಿಚಾರಧಾರೆಗಳನ್ನು ಒಪ್ಪಿ, ಅಪ್ಪಿಕೊಂಡವರನ್ನು ವಹಾಬಿಗಳೆನ್ನುತ್ತಾರೆ. ಸೌದಿಯ ರಾಜವಂಶ ಈ ವಹಾಬೀ ವಿಚಾರಧಾರೆ ಯ ಪ್ರತಿಪಾದಕರು. ಇಸ್ಲಾಂ ನ ಇನ್ನೊಂದು ರಹಸ್ಯಮಯ ಪಂಥವಿದೆ, ಅದುವೇ ಸೂಫೀವಾದ. ಜನರಿಗೆ ಮಂಕು ಬೂದಿ ಎರಚಿ ಅನ್ಯ ಧರ್ಮೀಯರನ್ನು ಇಸ್ಲಾಂಗೆ ಮತಾಂತರಿಸುವ ರಹಸ್ಯ ಪಂಥ ಸೂಫೀವಾದ.

ಹಿಂದೂಗಳು ಒಬ್ಬರಿನ್ನೊಬ್ಬರನ್ನು ಕತ್ತಿ ಮಸೆದು ಕೊಲ್ಲುತ್ತಿದ್ದರು, ರಾಜ-ಮಹಾರಾಜರು ಜಗಳವಾಡುತ್ತಿದ್ದರೆಂದು ಕಥೆ, ಕಾದಂಬರಿ, ಧಾರಾವಾಹಿ, ಚಲನಚಿತ್ರ ತಯಾರಿಸುವ ಯಾರೊಬ್ಬರೂ ಹಿಂದೂಗಳಿಗಿಂತಲೂ ಹೆಚ್ಚು ಜಗಳವಾಡುವ ಶಿಯಾ-ಸುನ್ನಿಗಳ ಬಗ್ಗೆ ಜಗತ್ತಿಗೆ ತಿಳಿಸುವುದೇ ಇಲ್ಲ. ವಿಚಿತ್ರವೆಂದರೆ ತಮ್ಮ ತಮ್ಮಲ್ಲೇ ಜಗಳವಾಡಿಕೊಂಡಿದ್ದರೂ ಈ ಶಿಯಾ-ಸುನ್ನಿಗಳು ಇತರರ ವಿರುದ್ದ ಜಗಳಾಡುವಾಗ ತಮ್ಮ ಮತ ಬೇಧ ಮರೆತು ಒಂದಾಗುತ್ತಾರೆ. ಇದೇ ಅವರಿಗೂ ನಮಗೂ ಇರುವ ವ್ಯತ್ಯಾಸ. ಅವರಲ್ಲಿ ಎಷ್ಟೇ ಪಂಗಡಗಳಿರಲಿ ಅವರೆಲ್ಲ ಸಂಘಟಿತ ಮುಸಲ್ಮಾನರು. ಆದರೆ ನಾವು ಹಾಗಲ್ಲ, ನಾವು ಬ್ರಾಹ್ಮಣ, ದಲಿತ, ಜಾಟ, ಮರಾಠ, ಬಂಟ, ಬಿಲ್ಲವ, ಲಿಂಗಾಯತ, ವೀರಶೈವ, ಬುದ್ದ, ಸಿಖ್, ಜೈನ ಇತ್ಯಾದಿ ಇತ್ಯಾದಿ ಪಂಗಡಗಳು. ನಾವೆಂದಿಗೂ ಎದೆ ತಟ್ಟಿ ನಾವೆಲ್ಲ ಒಂದೇ ತಾಯ ಮಕ್ಕಳು , ನಾವೆಲ್ಲಾ ಸನಾತನ ಧರ್ಮದ ಕವಲುಗಳು ಎಂದು ಹೇಳುವುದೇ ಇಲ್ಲ. ಇದೇ ಕಾರಣಕ್ಕಾಗಿ ಮುಗಲರು ಆರು ನೂರು ವರ್ಷ, ಬ್ರಿಟಿಶರು ಇನ್ನೂರು ವರ್ಷ ಮತ್ತು ಕಾಂಗ್ರೆಸಿಗರು ಅರುವತ್ತು ವರ್ಷ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದು.

ಇನ್ನಾದರೂ ನಾವೆಲ್ಲಾ ಜಾತಿ ಬೇಧ ಮರೆತು ಹಿಂದೂಗಳಾಗಿ ಒಗ್ಗಟ್ಟು ಮೆರೆಯೋಣ. ದೇಶ ಮತ್ತು ಧರ್ಮ ಒಡೆಯುವವರಿಗೆ ತಕ್ಕ ಪಾಠ ಕಲಿಸೋಣ. ಸನಾತನ ಧರ್ಮವನ್ನು ರಕ್ಷಿಸೋಣ.

Disclaimer : This article is only to show how political parties are misusing the concept of religion. There is no intention to hurt or insult any one on the basis of religion.

Source :https://www.independent.co.uk/news/world/middle-east/sunni-and-shia-islams-1400-year-old-divide-explained-a6796131.html

-Sharvari

Tags

Related Articles

Close