ಅಂಕಣ

ಗೌರಿ ಲಂಕೇಶ್ ರವರ ಹತ್ಯೆಯಲ್ಲಿ ರಾಘವೇಶ್ವರ ಶ್ರೀ ಗಳನ್ನು ಸಿಲುಕಿಸುವ ಅತಿದೊಡ್ಡ ಕುತಂತ್ರ ನಡೆಯುತ್ತಿದೆಯೇ???

ಕರ್ನಾಟಕ ಸರಕಾರಕ್ಕೆ ನಿಜವಾಗಲೂ ಗೌರಿ ಲಂಕೇಶ್ ಹತ್ಯಾ ಪ್ರಕರಣವನ್ನು ಭೇದಿಸಲು ಆಸಕ್ತಿ ಇಲ್ಲವೆಂದು ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ
ಅನಿಸುತ್ತದೆ. ತನಿಖೆಯ ಹೆಸರಲ್ಲಿ ಬಿಜೆಪಿ-ಆರೆಸ್ಸೆಸ್ ಸೇರಿ ಹಲವು ಹಿಂದೂಸಂಘಟನೆಗಳನ್ನು ಎಳೆದು ತಂದು ಅವುಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ರಾಜಕೀಯ ಮಾಡಿ ಚುನಾವಣೆಯಲ್ಲಿ ಅಸ್ತ್ರವನ್ನಾಗಿಸಲು ಕಾಂಗ್ರೆಸ್ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ಸರಕಾರ ಇದೀಗ ಅಂಥದ್ದೇ ಎಡಬಿಡಂಗಿ ಕೃತ್ಯಕ್ಕೆ ಕೈ ಹಾಕಿದೆ. ಒಟ್ಟಾರೆ ಗೌರಿ ಸತ್ತ ಮೇಲೂ ದೆವ್ವವಾಗಿ ಕಾಡುವಂತಾಗಿದೆ.

ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಸಾಗುವ ಗೌರಿ ಹತ್ಯೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗೌರಿ ಪ್ರಕರಣವನ್ನು ನಕ್ಸಲ್
ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಇದೀಗ ದೂರೊಂದು ಬಂದಿದೆ. ಈ ದೂರು ನೀಡಿವರು ಬೇರ್ಯಾರೂ ಅಲ್ಲ. ಅವರೇ ಪ್ರೇಮಲತಾ ದಿವಾಕರ್ ಶಾಸ್ತ್ರಿ.

ಈಕೆ ಆರೋಪ ಮಾಡಿದ್ದು ಯಾರಿಗೆ ಗೊತ್ತಾ? ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಗೆ!!

ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಗೌರಿ ಲಂಕೇಶ್ ಪಾತ್ರವಿರಬಹುದೆಂದು ಶಂಕಿಸಿ ಪ್ರೇಮಲತಾ ಎಸ್‍ಐಟಿಗೆ ದೂರು ನೀಡಿದ್ದಾರೆ. ರಾಘವೇಶ್ವರ ಭಾರತಿ
ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪ ಮಾಡುವ ಆಕೆ, ಗೌರಿಯನ್ನು ಕೊಲ್ಲಲು ರಾಘವೇಶ್ವರ ಭಾರತಿ ಸ್ವಾಮೀಜಿ ಸುಪಾರಿ ಕೊಟ್ಟಿರಬಹುದೆಂದು ಶಂಕಿಸಿ ಎಸ್‍ಐಟಿಗೆ ದೂರು ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆಗೊಂಡ ಮೂರನೇ ದಿನವೇ ಪ್ರೇಮಲತಾ, ರಾಘವೇಶ್ವರ ವಿರುದ್ಧ 500 ಪುಟಗಳಿಗೂ ಹೆಚ್ಚು ದಾಖಲೆಗಳನ್ನು ನೀಡಿ ದೂರು ನೀಡಿದ್ದಾರೆ. ಈಕೆ ನೀಡಿದ ದೂರನ್ನು ಎಸ್‍ಐಟಿ ಪರಿಶೀಲಿಸುತ್ತಿದೆ.

ರಾಘವೇಶ್ವರ ಶ್ರೀ ವಿರುದ್ಧ ಗೌರಿ ಅನೇಕ ಲೇಖನಗಳನ್ನು ಬರೆದಿದ್ದು, ಇದರಿಂದ ಶ್ರೀಗಳೇ ಸುಪಾರಿ ಕೊಟ್ಟಿರುವ ಶಂಕೆ ವ್ಯಕ್ತಪಡಿಸಿ ಪ್ರೇಮಲತಾ ದೂರು ನೀಡಿದ್ದಾರೆ. ಅಲ್ಲದೆ 10 ದಿನಗಳಲ್ಲಿ ಎಸ್‍ಐಟಿ ಅಧಿಕಾರಿಗಳ ನಂಬರ್‍ಗೆ ನೂರಾರು ಕರೆಗಳು ಬಂದಿದ್ದು ಅದರಲ್ಲಿ ರಾಘವೇಶ್ವರ ಶ್ರೀ ಬಗ್ಗೆ ಶಂಕಿಸಲಾಗಿದೆಯಂತೆ. ಆದರೆ ಪರಿಶೀಲನೆ ವೇಳೆ ಪೂರಕ ಮಾಹಿತಿ ಸಿಕ್ಕಿಲ್ಲ ಎಂದು ಎಸ್‍ಐಟಿ ಅಭಿಪ್ರಾಯಿಸಿದೆ.

ನಕ್ಸಲ್ ಬಗ್ಗೆ ಶಂಕೆಗಳು ಪ್ರಬಲವಾಗಿರುವ ಸಂದರ್ಭ ಈ ರೀತಿ ಅಧಿಕಾರಿಗಳ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆಯುತ್ತಲೇ ಇದೆ. ರಾಘವೇಶ್ವರ ಮೇಲೆ ಶಂಕೆ ವ್ಯಕ್ತಪಡಿಸಿ ಶ್ರೀಯವರನ್ನು ಬಂಧಿಸುವಂತೆ ಎಸ್‍ಐಟಿಗೆ ಬಂದಿರುವ ಕರೆಗಳು ಯಾರದ್ದೆಂದು ಇದೀಗ ದೃಢೀಕರಿಸಬೇಕಿಲ್ಲ. ಆದರೆ ಎಸ್‍ಐಟಿ ತನಿಖೆ ನಡೆಸಿದಾಗ ಯಾವುದೇ ಪೂರಕ ದಾಖಲೆ ಸಿಗದಿರುವುದರಿಂದ ಇದು ಉದ್ದೇಶಪೂರ್ವಕ ಕೃತ್ಯವಾಗಿರುವ ಬಗ್ಗೆ ಅಲ್ಲಗಳೆಯುವಂತಿಲ್ಲ.

ಮೂಲಗಳ ಪ್ರಕಾರ ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಲು ಕೆಲವರಿಂದ ಪೊಲೀಸರಿಗೆ ಒತ್ತಡ ಬರುತ್ತಿದೆ. ಈ ಮೂಲಕ ಬಜೆಪಿ ಮತ್ತು ಆರೆಸ್ಸೆಸ್ ಅನ್ನು ಈ
ಪ್ರಕರಣದಲ್ಲಿ ಸಿಲುಕಿಸಲು ಇನ್ನಿಲ್ಲದಂತೆ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಅದು ಎಲ್ಲಿಯವರೆಗೆ ತಲುಪಿದೆ ಎಂದರೆ ರಾಘವೇಶ್ವರ ಶ್ರೀಗಳನ್ನು ಬಂಧಿಸುವಂತೆ
ಹಲವಾರು ಪ್ರಗತಿಪರರು ಒತ್ತಡ ಹೇರುತ್ತಿದ್ದಾರೆ. ನಕ್ಸಲ್ ಪರ ಆರೋಪ ಬಂದಾಗ ಇತ್ತೀಚೆಗೆ ಮುಖ್ಯವಾಹಿನಿಗೆ ಬಂದವರನ್ನು ಬಂಧಿಸಬೇಕು ಎಂದು ಪ್ರಗತಿಪರರು ಕಿರುಚಾಡಿದ್ದು ಕಂಡುಬಂದಿಲ್ಲ. ಒಟ್ಟಾರೆ ಈ ಪ್ರಕರಣದಲ್ಲಿ ಶ್ರೀಗಳನ್ನು ಸಿಲುಕಿಸಲು ಇನ್ನಿಲ್ಲದ ಷಡ್ಯಂತ್ರ ನಡೆಯುತ್ತಿದೆ.

ಪ್ರೇಮಲತಾ ದಿವಾಕರ್ ಯಾರು ಗೊತ್ತಾ? ಈಕೆ ರಾಘವೇಶ್ವರ ಶ್ರೀಗಳ ವಿರುದ್ಧ ದೂರು ನೀಡಲು ಕಾರಣವೇನು?

ಪ್ರೇಮಲತಾ ಒಬ್ಬರು ದೂರದರ್ಶನ ಕಲಾವಿದೆ ಹಾಗೂ ಗಾಯಕಿ. ಈಕೆ ಕಥೆ ಸೃಷ್ಟಿಸುವುದರಲ್ಲಿ ನಿಸ್ಸೀಮಳೆಂದು ಈ ಹಿಂದೆಯೇ ಹಲವು ಬಾರಿ ಸಾಬೀತಾಗಿದೆ. ಈಕೆ ಮತ್ತು ಈಕೆಯ ಗಂಡ ಕೆಲವು ಕಲಾವಿದರನ್ನು ಬ್ಲ್ಯಾಕ್‍ಮೇಲ್ ಮಾಡಿ ಹೆದರಿಸಿದ್ದರ ಕುರಿತಾಗಿ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಈಕೆ 2014ರಲ್ಲಿ ಸ್ವಾಮೀಜಿ ತನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರು ನೀಡಿದ್ದರು. ಇದಾದ ಮೇಲೆ ಸ್ವಾಮೀಜಿ ಕೂಡಾ ಈಕೆಯ ವಿರುದ್ಧ ಬ್ಲ್ಯಾಕ್‍ಮೇಲ್ ಆರೋಪಿಸಿ ದೂರು ನೀಡಿದ್ದರು.

ಪ್ರೇಮಲತಾ ದೂರು ನೀಡಿದ ಬಳಿಕ ಸ್ವಾಮೀಜಿಗಳ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿದ್ದಳು. ಆದರೆ ಯಾವುದೇ ಸ್ಪಷ್ಟ ಸಾಕ್ಷ್ಯವನ್ನಾಗಲೀ ನೀಡಲು
ವಿಫಲಳಾಗಿದ್ದರು. ಜೊತೆಗೆ ಪೊಲೀಸರಿಗೂ ನಿಖರ ಸಾಕ್ಷ್ಯ ಸಿಕ್ಕಿರಲಿಲ್ಲ. ಕೊನೆಗೆ ಈಕೆಯ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಅವರನ್ನು ಬಂಧಿಸದಂತೆ ತಡೆಯಿತು. ಒಬ್ಬರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಕೋರ್ಟ್ ಅಲೆದಾಡಿಸಿ ಮಾನಸಿಕ ಹಿಂಸೆ ನೀಡುವ ಕೃತ್ಯ ಎನ್ನುವುದರಲ್ಲಿ ಸಂಶಯವಿಲ್ಲ.

ಇದೀಗ ಮತ್ತೆ ಸ್ವಾಮೀಜಿಗಳ ವಿರುದ್ಧ ಬೇತಾಳನಂತೆ ಬೆನ್ನು ಬಿದ್ದಿರುವ ಆ ಹೆಂಗಸು, ಸ್ವಾಮೀಜಿಗಳ ವಿರುದ್ಧ ಗೌರಿ ಕೊಲೆಯ ಆರೋಪ ಮಾಡಿದ್ದಾಳೆ. ಆದರೆ
ಪೊಲೀಸರಿಗೆ ಗೌರಿಯನ್ನು ಕೊಂದ ಹಂತಕರ ಬಗ್ಗೆ ಸ್ಪಷ್ಟ ಸುಳಿವು ಇನ್ನೂ ಸಿಕ್ಕಿಲ್ಲ. ತನಿಖೆಯ ದಿಕ್ಕನ್ನು ನೋಡಿದಾಗ ಯಾವುದಾದರೂ ಬಲಪಂಥೀಯ ಸಂಘಟನೆಯ ವ್ಯಕ್ತಿಯನ್ನು ಪ್ರಕರಣದಲ್ಲಿ ಸಿಲುಕಿಸಿ ಆತನನ್ನು ಆರೋಪಿ ಸ್ಥಾನದಲ್ಲಿ ಕುಳ್ಳಿರಿಸುವಂತೆ ಮಾಡುವ ಪ್ರಯತ್ನ ಗೋಚರಿಸುತ್ತಿದೆ.

ನೋಡೋಣ….ಕೆಲವು ದಿನಗಳ ಹಿಂದೆ ಸಂಗೀತ ನಿರ್ದೇಶಕ, ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಯುವ ಸಾಹಿತ್ಯ ಪುರಸ್ಕಾರ ಪಡೆದುಕೊಂಡ ವಿಕ್ರಮ್ ಸಂಪತ್ ಅವರು ಟ್ವಿಟರ್‍ನಲ್ಲಿ ಏನು ಬರೆದಿದ್ದಾರೆ ಗೊತ್ತಾ?

ಗೌರಿ ಲಂಕೇಶ್ ಅವರು ಎರಡು ವರ್ಷಗಳ ಹಿಂದೆ ವಿಕ್ರಮ್ ಸಂಪತ್ ವಿರುದ್ಧ ಲೇಖನಗಳನ್ನು ಬರೆದಿದ್ದರು. ಅದಕ್ಕಾಗಿ ಎಸ್‍ಐಟಿ ನನ್ನನ್ನು ಹೇಳಿಕೆಗಳನ್ನೂ ದಾಖಲಿಸಲಿ ಎಂದು ಟಾಂಗ್ ನೀಡಿದ್ದಾರೆ.

ವಾಸ್ತವವಾಗಿ ಗೌರಿ ಲಂಕೇಶ್ ಸೋದರನೇ ನಕ್ಸಲ್ ಆರೋಪಿಸಿ ಹೇಳಿಕೆ ನೀಡಿದ್ದರು. ಎಸ್‍ಐಟಿಗೂ ಮಾಹಿತಿ ನೀಡಿದ್ದರು. ಆದರೆ ಪೊಲೀಸರಿಗೆ ಒಂದು ಸುಳಿವನ್ನು ಪತ್ತೆಹಚ್ಚಲೂ ಸಾಧ್ಯವಾಗಿಲ್ಲ. ನಕ್ಸಲ್ ಕುರಿತಾಗಿ ಸರಿಯಾದ ತನಿಖೆಯನ್ನೂ ನಡೆಸುತ್ತಿಲ್ಲ ಎಂಬ ಅನುಮಾನ ಮೂಡುತ್ತದೆ. ಅಲ್ಲದೆ ಸ್ಕಾಟ್‍ಲ್ಯಾಂಡ್ ಪೊಲೀಸರ ನೆರವನ್ನೂ ಪಡೆಯಲಾಯಿತು. ಇಷ್ಟಾದರೂ ಒಂದೇ ಒಂದು ಸುಳಿವನ್ನು ಪತ್ತೆಹಚ್ಚಲಾಗಿಲ್ಲ ಎಂದರೆ ಏನರ್ಥ.

ಸೂಕ್ತ ಸುಳಿವು ಸಿಗದಿದ್ದಾಗ ಒಂದು ಸಂಘಟನೆ, ವ್ಯಕ್ತಿಯನ್ನು ಪ್ರಕರಣದಲ್ಲಿ ಸಿಲುಕಿಸಿ ಅವರ ನಿರಂತರ ತೇಜೋವಧೆ ಮಾಡಲಾಗುತ್ತದೆ. ಸರಕಾರಕ್ಕೆ ಯಾರ ಮೇಲೆ ವೈಯಕ್ತಿಕ ಹಗೆ ಇರುತ್ತದೋ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಇನ್ನಿಲ್ಲದ ಷಡ್ಯಂತ್ರ ನಡೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅದೇ ರೀತಿ ಇದೀಗ ರಾಘವೇಶ್ವರ ಸ್ವಾಮೀಜಿಗಳನ್ನೂ ಬಲಿಪಶು ಮಾಡಲು ಇನ್ನಿಲ್ಲದ ಪ್ರಯತ್ನವನ್ನು ಸಿದ್ದರಾಮಯ್ಯ ಸರಕಾರ ನೋಡುತ್ತಿದೆ. ಯಾಕೆಂದರೆ
ಸಿದ್ದರಾಮಯ್ಯ ಸರಕಾರವನ್ನು ಸ್ವಾಮೀಜಿಗಳು ವಿರೋಧಿಸಿವುದರಿಂದ ಇಂಥಾ ಎಡಬಿಡಂಗಿ ಕೃತ್ಯಕ್ಕೆ ಕೈ ಹಾಕುತ್ತಿದೆ.

ಇನ್ನೊಮ್ಮೆ ಸ್ಪಷ್ಟವಾಗಿ ಹೇಳುವುದಾದರೆ ಸರಕಾರಕ್ಕೆ ಗೌರಿ ಲಂಕೇಶ್ ಪ್ರಕರಣವನ್ನು ಭೇದಿಸುವ ಯಾವ ಆಸಕ್ತಿಯೂ ಇಲ್ಲ. ತನಗಾದವರನ್ನು ಪ್ರಕರಣದಲ್ಲಿ
ಬಲಿಪಶುಗಳನ್ನಾಗಿ ಮಾಡಲು ಸರಕಾರ ಎಲ್ಲಿಲ್ಲದ ಪ್ರಯತ್ನ ಮಾಡುತ್ತಲೇ ಇದೆ..

ರಾಜಕೀಯ ಸ್ಥಿತಿ ಎಲ್ಲಿಗೆ ತಲುಪಿದೆ ಅಲ್ವಾ?

-ಚೇಕಿತಾನ

Tags

Related Articles

Close