ಅಂಕಣ

ಡಿಮಾನಿಟೈಸೇಷನ್ ಗೆ ಒಂದು ವರ್ಷ!! ನೋಟು ಅಮಾನ್ಯೀಕರಣದ ವಿಫಲತೆಗೆ ಮೋದಿ ಕ್ಷಮೆ ಕೇಳಲೇಬೇಕು!

ಹೌದು, ಮೋದಿ ತಾವು ಮಾಡಿರುವ ತಪ್ಪಿಗೆ ಕ್ಷಮೆ ಕೇಳಲೇಬೇಕು.

ಎಟಿಎಂ ಎದುರು ಕ್ಯೂ ನಿಲ್ಲುವಂತೆ ಮಾಡಿ ದೇಶದ ಜನರನ್ನ ತೊಂದರೆ ಕೊಟ್ಟ ಪ್ರಧಾನಿ ಮೋದಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕ್ಷಮೆ ಕೋರಲೇಬೇಕು.

ನಾವು ನಮ್ಮ ಹಣವನ್ನು ಬದಲಾಯಿಸಿಕೊಳ್ಳೋಕೆ ಅಥವ ಬ್ಯಾಂಕಿನಿಂದ ನೋಟ್ ಎಕ್ಸಚೆಂಜ್ ಮಾಡಿಕೊಳ್ಳೋಕೆ ಕ್ಯೂನಲ್ಲಿ ನಿಲ್ಲೋಕಾಗಲ್ಲ ಆದರೆ ಸಿನೆಮಾ ಮಂದಿರದಲ್ಲಿ, ಕ್ರಕೆಟ್ ಮ್ಯಾಚ್ ಟಿಕೆಟ್ ಗಾಗಿ ಎಷ್ಟು ಹೊತ್ತು ಬೇಕಾದರೂ ಕ್ಯೂ ನಿಲ್ತೇವೆ.

ಡಿಮಾನೆಟೈಸೇಷನ್ ಯಶಸ್ವಿ ಹೇಗಾಯ್ತು ಅನ್ನೋದರ ಕುರಿತಾದ ಕೆಲ facts ಗಳನ್ನ ಹೇಳಲೇಬೇಕು

ಬ್ಯಾಂಕಿನಲ್ಲಿ ಜಮೆಯಾದ ಎರಡು ಲಕ್ಷದ ಎಂಭತ್ತೊಂಬತ್ತು ಸಾವಿರ ಕೋಟಿ (2.98 Lac Crore) ಬೇನಾಮಿ ಹಣ ತನಿಖೆಯ ಅಡಿಯಲ್ಲಿದೆ.

ಡಿಮಾನೆಟೈಸೇಷನ್ ನಂತರ ಅಡ್ವಾನ್ಸ್ ಡಾಟಾ ಅನಾಲಿಟಿಕ್ಸ್ ಉಪಕರಣದ ಮೂಲಕ ಅಕ್ರಮವೆಸಗಿದ್ದವರ ಮೇಲೆ ಐದು ಲಕ್ಷ ಐವತ್ತಾರು ಸಾವಿರ(5 Lac 56 thousand) ಕೇಸುಗಳನ್ನ ದಾಖಲು ಮಾಡಲಾಗಿದೆ.

ನಾಲ್ಕು ಲಕ್ಷದ ಎಪ್ಪತ್ಮೂರು ಸಾವಿರದ ಮೂರು(4,73,003) ಕಳ್ಳ ಬ್ಯಾಂಕ್ ಅಕೌಂಟ್ಗಳನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಇಪ್ಪತ್ತೊಂಭತ್ತು ಸಾವಿರದ ಎರಡು ನೂರ ಹದಿಮೂರು ಕೋಟಿ(29, 213 crore) ತಿಳಿಯಪಡಿಸದ Undisclosed ದುಡ್ಡನ್ನ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.

16 ಸಾವಿರ ಕೋಟಿ ಕಪ್ಪು ಹಣ ಡಿಮಾನೆಟೈಸೇಷನ್ ನಂತರದಲ್ಲಿ ವಾಪಸ್ ಬ್ಯಾಂಕಿಗೆ ಬಂದಿಲ್ಲ, ಇದರರ್ಥ ಅದನ್ನ ಕಳ್ಳವಹಿವಾಟಿಗರು ನಷ್ಟಪಡಿಸಿದ್ದಾರೆ.

ಡಿಮಾನೆಟೈಸೇಷನ್ ನಂತರ ಆನಲೈನ್ ಟ್ರಾನ್ಸ್ಯಾಕ್ಷನ್ ಗಳಿಗೆ ಪ್ರೋತ್ಸಾಹ ನೀಡಿದ ಕಾರಣ ಕರೆನ್ಸಿ ಪ್ರಸರಣ 21 ಪ್ರತಿಶತಕ್ಕಿಳಿದಿದೆ.

56 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ.

ಕಳೆದ ವರ್ಷ 9.9% ಇದ್ದ IT returns ಇದ್ದದ್ದು ಈಗ ಡಿಮಾನೆಟೈಸೇಷನ್ ನಂತರ 24.7% ಕ್ಕೆ ಏರಿಕೆಯಾಗಿದೆ.

ಆದಾಯ ತೆರಿಗೆ ಇಲಾಖೆಯ ಪರ್ಸನಲ್ ಇನಕಮ್ ಟ್ಯಾಕ್ಸ್ ಇದೇ ವರ್ಷದಲ್ಲಿ 41.79% ಗೆ ಏರಿಕೆಯಾಗಿದೆ.

ಸೆಲ್ಫ್ ಅಸೆಸಮೆಂಟ್ ಟ್ಯಾಕ್ಸ್ ಅಡಿಯಲ್ಲಿಯ ಪರ್ಸನಲ್ ಇನಕಮ್ ಟ್ಯಾಕ್ಸ್ ಡಿಮಾನೆಟೈಸೇಷನ್ ನಂತರ 34.25% ಏರಿಕೆ ಕಂಡಿದೆ.

ಸುಮಾರು ಎರಡು ಲಕ್ಷ ಅಕ್ರಮ ಶೆಲ್ ಕಂಪೆನಿಗಳ ನೊಂದಣಿ ರದ್ದು ಮಾಡಲಾಗಿದೆ.

ಸುಮಾರು 450 ಕಂಪೆನಿಗಳು ಆದಾಯ ತೆರಿಗೆ ಇಲಾಖೆಯ ರಡಾರ್ ಮೇಲಿವೆ ಹಾಗು ಇನ್ನೂ 850 ಕಂಪೆನಿಗಳೂ ಇದರ ಲಿಸ್ಟ್ ಗೆ ಸೇರ್ಪಡೆಯಾಗಲಿವೆ.

800 ಕೋಟಿಗೂ ಅಧಿಕ ಬೆಲೆಬಾಳುವ 400 ಕ್ಕೂ ಹೆಚ್ಚು ಅಕ್ರಮ ಅಕೌಂಟ್ ಗಳನ್ನ ಪತ್ತೆ ಹಚ್ಚಲಾಗಿದೆ.

ಡಿಮಾನೆಟೈಸೇಷನ್ ಆದನಂತರ ಬ್ಯಾಂಕುಗಳಲ್ಲಿ ಮೂರು ಲಕ್ಷ ಕೋಟಿ ಹಣ ಜಮಾವಣೆಗೊಂಡಿದೆ.

ಆ್ಯಡಿಷನಲ್ ಲಿಕ್ವಿಡಿಟಿಯ ಮೂಲಕ ಬಡ್ಡಿ ದರವನ್ನು 100 basis points ಗೆ ಇಳಿಸಲಾಗಿದೆ.

ಡಿಜಿಟಲ್ ಪೇಮೆಂಟ್ ಗಣನೀಯವಾಗಿ 56% ಕ್ಕೆ ಏರಿಕೆ ಕಂಡಿದ್ದು ಅಕ್ಟೋಬರ್ 26 ಕ್ಕೆ 71 ಲಕ್ಷದ 27 ಸಾವಿರ ಕೋಟಿಯಷ್ಟಿದ್ದ ಡಿಜಿಟಲ್ ಟ್ರಾನ್ಸ್ಯಾಕ್ಷನ್ 111.45 ಕೋಟಿಯಷ್ಟು ಏರಿಕೆ ಕಂಡಿದೆ.

ಡಿಮಾನೆಟೈಸೇಷನ್ ನ ಬಳಿಕ ಒಂದು ಕೋಟಿಗು ಮಿಕ್ಕಿ ಕಾರ್ಮಿಕರಿಗೆ EPF ಹಾಗು ESIC ಸೌಲಭ್ಯ ಒದಗಿಸಲಾಗಿದೆ.

50 ಲಕ್ಷ ಕಾರ್ಮಿಕರಿಗೆ ದಿನಗೂಲಿಯನ್ನ ಅವರ ಅಕೌಂಟಿಗೇ ನೇರ ವರ್ಗಾವಣೆಯಾಗುವ ರೀತಿಯಲ್ಲಿ ಮಾಡಲಾಗಿದೆ.

ಇಷ್ಟೆಲ್ಲಾ ಕ್ರಾಂತಿಕಾರಿ ಬದಲಾವಣೆಗಳನ್ನು ದೇಶ ಕಾಣುವಂತೆ ಮಾಡಿ ಟ್ಯಾಕ್ಸ್ ಕಳ್ಳತನ ಮಾಡುತ್ತಿದ್ದವರನ್ನ ಟ್ಯಾಕ್ಸ್ ಕಟ್ಟುವಂತೆ ಮಾಡಿ ಲಕ್ಷಾಂತರ ಕೋಟಿ ಹಣವನ್ನ ಉಳಿಸಿದ್ದಕ್ಕೆ ಮೋದಿ ಭಾರತೀಯರ ಕ್ಷಮೆ ಕೋರಲೇಬೇಕು ಅಲ್ವೇ?

ಸೂಚನೆ: ನಾನು ಮೋದಿ ಭಕ್ತನಲ್ಲ, ನಾನು CA ವಿದ್ಯಾರ್ಥಿಯಾಗಿದ್ದು ಇಲ್ಲಿಯವರೆಗೆ ಯಾವ ಸರ್ಕಾರವು ಮಾಡದ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟ ಮೋದಿ ಸರ್ಕಾರದ ಡಿಮಾನೆಟೈಸೇಷನ್ ಬಗ್ಗೆ ನನಗೆ ತಿಳಿದ ಅಂಕಿ ಅಂಶಗಳನ್ನ ನಿಮ್ಮೆದುರಿಗಿಟ್ಟಿದ್ದೇನಷ್ಟೇ.

ಮೂಲ ಲೇಖನ : ಮೋಹನ್ ದಾರಕ್ (ಚಾರ್ಟೆಡ್ ಅಕೌಂಟೆಂಟ್)

ಕನ್ನಡಾನುವಾದ : Vinod Hindu Nationalist

Tags

Related Articles

Close