ಅಂಕಣ

ಗಂಜಿ ಗಿರಾಕಿಗಳಿಂದ ದೇಶದ್ರೋಹಿ ಎಂದು ಕರೆಯಲ್ಪಡುವ ಸಂಘವೇ 1962 ಯುದ್ಧದಲ್ಲಿ ಸೇವೆ ಮಾಡಿತ್ತು.

ರಾಷ್ಟ್ರೀಯ ಸ್ವಯಂ ಸೇವಕಾ ಸಂಘ ಅಂದ್ರೆ ಏನು?? ಅದು ದೇಶದ್ರೋಹಿ ಸಂಘಟನೆ, ಅದು ಹಸಿರು ಭಯೋತ್ಪಾದನೆ, ಜಾತಿ ವ್ಯವಸ್ಥೆಯನ್ನು ಅದು ಪ್ರತಿಪಾದಿಸುತ್ತದೆ, ಭಾರತದ ಆಂತರಿಕ ರಕ್ಷಣೆಗೆ ಅದು ಮಾರಕ ಎಂಬುದಾಗಿಯೆಲ್ಲಾ ಕೆಲವು ಎಡಚರರು ಬೊಬ್ಬಿಡುತ್ತಾರೆ. ಆದರೆ ಆ ಸಂಘಟನೆ ಈ ದೇಶಕ್ಕೆ ಸಲ್ಲಿಸಿದ ಸೇವೆಯ ಕುರಿತಾಗಿ ಮಾತನಾಡುವುದೇ ಇಲ್ಲ. ಕಾಂಗ್ರೆಸ್ ಅಥವಾ  ಇನ್ನಿತರೆ ಎಡ ಪಕ್ಷಗಳು, ದೇಶದ ಹಲವಾರು ಕಡೆ ಪ್ರವಾಹದಿಂದ ಸಂಕಷ್ಟಗೊಂಡಿದ್ದಾಗ ರಾ.ಸ್ವ.ಸೇ ಸಂಘ ಮಾಡಿದ ರಕ್ಷಣಾ ಕಾರ್ಯದ ಕುರಿತಾಗಿ ಚಕಾರ ಎತ್ತುವುದಿಲ್ಲ. ಅವರು ಅದನ್ನು ಪ್ರಶಂಸಿಸುವುದು ಬಿಡಿ, ಅದರ ಕುರಿತಾಗಿ ಮೌನವೇ ಅವರ ಮಾತು. ಇವತ್ತು ರಾ.ಸ್ವ.ಸೇ ಸಂಘದ ಕುರಿತಾಗಿ ಗೊತ್ತಿಲ್ಲದ ಕೆಲವು ವಿಚಾರವನ್ನು ತಿಳಿಯೋಣ. ನೀವು ಸಂಘದ ಕಾರ್ಯಕರ್ತರಾಗಿದ್ದರೆ ಹೆಮ್ಮೆ ಪಡಿ.
 
ರಾಷ್ಟ್ರದ ಕುರಿತಾಗಿ ಹಿತವನ್ನು ಬಯಸುವ ಯಾವುದೇ ಸಂಘದ ಹಾಗೆ ಇದು ಕೂಡ ಸೇನೆಯನ್ನು ಸದಾ ಬೆಂಬಲಿಸುವ , ಅವರನ್ನು ಹುರಿದುಂಬಿಸುವ ಒಂದು ಸಂಗವೆಂದರೆ ತಪ್ಪಾಗದು. ಅವರು ಯಾವಾಗಲೂ ಒಳಿತನ್ನೇ ಬಯಸುವವರು. ಎಡಚರ ಪಕ್ಷಗಳು 1962 ರ ಯುದ್ಧ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರಿಗೆ ರಕ್ತದಾನ ಮಾಡದಿರಲು ಸೂಚಿಸಿದ್ದರು. ಆದರೆ ರಾ.ಸ್ವ.ಸೇ. ಸಮಘವು ಅಂತಹ ದಾನಗಳನ್ನು ಮಾಡಲು ಸದಾ ಮುಂಚೂಣಿಯಲ್ಲಿರುತ್ತದೆ.
 
ಸದಾ ಶಿಸ್ತನ್ನೇ ಮೈಗೂಡಿಸಿಕೊಂಡಿರುವ ಸಂಘವು ಅದರ ಧ್ಯೇಯವನ್ನು ರಾಷ್ಟ್ರಸೇವೆಗೆ ಸಮರ್ಪಕವಾಗಿ ಬಳಸುತ್ತಿದೆ. ನೆಹರು ಅವರಂತಹ ಕಠಿಣ ವಿರೋಧಿಗಳು ಕೂಡ ಅವರ ಸೇವೆ ಮೆಚ್ಚಿ 1963 ರ ಪ್ರಜಾಪ್ರಭುತ್ವದ ಪೆರೇಡ್ ಗೆ ಆಹ್ವಾನಿಸಿದ್ದರು. 1962 ರಲ್ಲಿ ಭಾರತ-ಚೀನಾ ಯುದ್ಧದಲ್ಲಿ ರಾಷ್ಟ್ರಕ್ಕೋಸ್ಕರ ಸೇವೆ , ಸಹಾಯ ಮಾಡಿದುದಕ್ಕಾಗಿ ಇಂತ ಆಹ್ವಾನವೊಂದನ್ನು ಅಂದಿನ ಪ್ರಧಾನಿ ಮಾಡಿದ್ದರು. ಇದನ್ನು ಕಾಂಗ್ರೆಸ್ ಇವತ್ತು ವಿರೋಧಿಸಬಹುದು, ಆದರೆ ಇದು ವಾಸ್ತವ ಸಂಗತಿ.
 
ನೆಹರೂ ರವರು ಪಂಚಶೀಲ ತತ್ವವನ್ನು ಪ್ರಚಾರಪಡಿಸಿದ್ದರು. ಹಾಗಾಗಿ ಯುದ್ಧ ಆದರೆ ಅವರ ಶಾಂತಿಯ ಮಂತ್ರ ಮಣ್ಣು ಪಾಲಾಗುತ್ತದೆಂದು ಸದಾ ಚಿಂತಿತರಾಗಿದ್ದರು. ಯುದ್ಧ ಪ್ರಾರಂಭ ಆದ ಮೇಲೂ ಅವರು ಚೀನೀ ಇಂಡಿಯಾ ಭಾಯಿ-ಭಾಯಿ ಎಂದು ಉದ್ಗರಿಸುತ್ತಿದ್ದರು. ಅದರ ಫಲವಾಗಿ ಭಾರತೀಯ ಯೋಧರಿಗೆ ಸರಿಯಾದ ಅಸ್ತ್ರಗಳು, ಇನ್ನಿತರ ಪರಿಕರಣೆಗಳು ಲಭಿಸದೇ ಹೋಯಿತು. ಭಾರತ ಅವರ ಮುಂದೆ ಶರಣಾಗಬೇಕಾಯಿತು. ಆದರೆ ನೆಹರೂ ಅವರ ಮನಸ್ಥಿತಿ ಹೇಗಿತ್ತೆಂದರೆ ಯುದ್ಧದಲ್ಲಿ ಹೋರಾಡಿದ ಯೋಧರ ಕುರಿತಾಗಿ ವಿಚಾರಿಸಲೂ ಶಕ್ಯರಲ್ಲದೇ ಹೋದರು.
 
ರಿಪಬ್ಲಿಕ್ ದಿನದ ಪೆರೇಡ್ ಗೆ ರಾ.ಸ್ವ.ಸೇ ಸಂಘವನ್ನು ಯಾಕೆ ಆಹ್ವಾನಿಸಲಾಗಿತ್ತು?
 
1962 ರ ಯುದ್ಧದ ಸಂದರ್ಭದಲ್ಲಿ ಸ್ವಯಂ ಆಗಿ ಸೇವೆ ಮಾಡಲು ಮುಂದಾದುದಕ್ಕಾಗಿ ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ಪ್ರಜಾಪ್ರಭುತ್ವ ದಿನದಂದು ನಡೆಸುವ ವಿಷೇಶ ಪೆರೇಡ್ ಗೆ ಆಹ್ವಾನಿಸಲಾಗಿತ್ತು. ಭಾರತದಲ್ಲಿ ಉತ್ತರ ರಾಜ್ಯಗಳು ಯುದ್ಧದಿಂದಾಗಿ ಘಾಸಿಗೊಂದಿದ್ದವು. ಅಲ್ಲಿ ಸ್ವಯಂ ಆಗಿ ಸಂಘವು ರಕ್ಷಣಾ ಕಾರ್ಯವನ್ನು ಕೈಗೊಂಡಿತ್ತು. ಟ್ರಾಫಿಕ್ ಸೂಚನೆಗಳಲ್ಲೂ ಆದಷ್ಟೂ ಕಾರ್ಯವನ್ನು ಸಂಘ ಮಾಡಿದೆ. ಸೇನೆಯು ಎಲ್ಲೆಲ್ಲಾ ರಕ್ಷಣಾ ಕಾರ್ಯವನ್ನು ಮಾಡುತ್ತಿದೆಯಾ ಅಲ್ಲೆಲ್ಲಾ ಸಂಘ ಕೂಡ ರಕ್ಷಣಾ ಕಾರ್ಯ ಮಾಡುವ ಮೂಲಕ ರಾಷ್ಟ್ರ ಸೇವೆ ಮಾಡಿದ್ದರು.
 
ಸಂಘದ ಆ ಸಂದರ್ಭದಲ್ಲಿ ಮಾಡಿದ ಸೇವೆಯ ಕುರಿತಾಗಿ ಈ ವೀಡಿಯೋದಲ್ಲಿ ವಿವರಿಸಲಾಗಿದೆ. ವೀಕ್ಷಿಸಿ.
 

Tags

Related Articles

Close