ಅಂಕಣ

ನಮ್ಮ ರಾಷ್ಟ್ರದಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗಲು ಬಿಡುವುದಿಲ್ಲ; ಭಯೋತ್ಪಾದನೆ ಮಟ್ಟ ಹಾಕಲು ಝೆಕ್ ಪ್ರಧಾನಿ ಹೊಸ ಉಪಾಯ!!

ಎಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ ಇರುತ್ತದೋ ಅಲ್ಲಿ ಶಾಂತಿ ಎಂಬುವುದು ಮರೀಚಿಕೆಯಾಗಿ ಬಿಡುತ್ತದೆ ಎಂಬ ಮಾತೇ ಜನಜನಿತದಲ್ಲಿದೆ. ಮುಸ್ಲಿಮರು ಜಾಸ್ತಿ ಇರುವ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕೆಲವರು ತಮಾಷೆ ಮಾಡಿರುವುದನ್ನು ನಾವು ಕಾಣುತ್ತೇವೆ. ಯಾಕೆಂದರೆ ಪಾಕಿಸ್ತಾನದಲ್ಲಿ ಯಾವ ರೀತಿಯ ಕೆಟ್ಟ ಸ್ಥಿತಿ ಇದೆಯೋ ಅಲ್ಲೂ ಕೂಡಾ ಅದೇ ರೀತಿ ಎಂದು ತೋರಿಸಿಕೊಡಲು ಆ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಲೇವಡಿ ಮಾಡುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ.

ಯಾವ ರಾಷ್ಟ್ರದಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ ಆಗಿದೆಯೋ ಅಲ್ಲಿ ಸಮಸ್ಯೆ ಸೃಷ್ಟಿಯಾಗುತ್ತದೆ. ಅಲ್ಲಿನ ಶಾಂತಿ ಮರೆಯಾಗುತ್ತದೆ. ಭಯೋತ್ಪಾದನೆ ಆರಂಭಗೊಂಡು ಅಲ್ಲಿ ಬಾಂಬ್ ಸಿಡಿಯಲು ಕಾರಣವಾಗುತ್ತದೆ. ಮುಸ್ಲಿಂ ಭಯೋತ್ಪಾದಕರನ್ನು ನಾಶ ಮಾಡಲು ಸರಕಾರ ಕಾರ್ಯಾಚರಣೆಗಿಳಿಯಬೇಕಾಗುತ್ತದೆ. ಈ ವೇಳೆ ಕೋಟ್ಯಂತರ ಹಣ ವೆಚ್ಚ ಮಾಡಬೇಕಾಗುತ್ತದಲ್ಲದೆ ದೇಶದ ಅಭಿವೃದ್ಧಿಗೆ ಉಪಯೋಗವಾಗಬೇಕಿದ್ದ ಹಣವೆಲ್ಲಾ ಇದಕ್ಕೇ ಖರ್ಚಾಗುತ್ತದೆ. ಜಗತ್ತಲ್ಲಿ ಇಸ್ಲಾಂ ಭಯೋತ್ಪಾದನೆ ಇಲ್ಲದೇ ಇರುತ್ತಿದ್ದರೆ ಈ ಜಗತ್ತು ಎಷ್ಟೊಂದು ಶಾಂತಸ್ಥಿತಿಯಲ್ಲಿರುತ್ತಿತ್ತು? ಎಷ್ಟು ಮುಗ್ಧ ಜನರ ಪ್ರಾಣ ಉಳಿಯುತ್ತಿತ್ತು?

ಇಷ್ಟೆಲ್ಲಾ ಕಷ್ಟನಷ್ಟವನ್ನು ಮನಗಂಡ ಕೆಲವೊಂದು ರಾಷ್ಟ್ರಗಳು ಮುಸ್ಲಿಮರನ್ನು ನಿಯಂತ್ರಿಸಲು ಶುರು ಮಾಡಿವೆ. ಇಂಥದ್ದೇ ಸಾಲಿಗೆ ಝೆಕ್ ಗಣರಾಜ್ಯವೂ ಸೇರಿದೆ.
ಇಸ್ಲಾಂನಿಂದ ಸಮಸ್ಯೆ ಇರುವುದನ್ನು ಮನಗಂಡ ಝೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಬೊಹಸ್ಲಾವ್ ಸೊಬೋಟ್ಕಾ ಅವರು ತಮ್ಮ ರಾಷ್ಟ್ರದಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗುವುದನ್ನು ನಾನು ಬಯಸುವುದಿಲ್ಲ. ಯಾಕೆಂದರೆ ಮುಸ್ಲಿಮರು ಜಾಸ್ತಿ ಇರುವ ದೇಶಗಳಲ್ಲಿ ಸಮಸ್ಯೆಗಳೂ ಕೂಡಾ ಜಾಸ್ತಿ ಆಗುತ್ತಿದೆ. ಯುರೋಪಿನ ಹಲವು ರಾಷ್ಟ್ರಗಳು ಮುಸ್ಲಿಮರಿಂದ ಸಮಸ್ಯೆಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.

ಯುರೋಪಿನ ಮಧ್ಯ ರಾಷ್ಟ್ರಗಳಲ್ಲಿ ಮುಸ್ಲಿಮರ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ಇದುವರೆಗೆ ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಅವರ ಸಂಖ್ಯೆ ಕಡಿಮೆ ಇದ್ದರೆ ಅವರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು ಅಲ್ಲಿನ ಪ್ರಧಾನಿ ಬೊಹಸ್ಲಾವ್ ಸೊಬೋಟ್ಕಾ ಅವರ ಅಭಿಮತ. ಅವರು ಆಸ್ಟ್ರಿಯನ್ ಪತ್ರಿಕೆ `ಡೈ ಪ್ರಸ್’ಗೆ ನೀಡಿದ ಹೇಳಿಕೆಯಲ್ಲಿ, `ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಯುರೋಪಿಯನ ಇತರ ರಾಷ್ಟ್ರಗಳಲ್ಲಿ ಎಷ್ಟೊಂದು ಸಮಸ್ಯೆಗಳಿವೆ? ಆದ್ದರಿಂದ ಝೆಕ್ ಗಣರಾಜ್ಯದಲ್ಲಿ ಮುಸ್ಲಿಮರು ನಮಗೆ ಬೇಕಾಗಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಮುಂದೆ ಮಾತಾಡಿದ ಸೋಬೋಟ್ಕಾ ಅವರು, ಯುರೋಪ್ ತನ್ನ ಗಡಿಯನ್ನು ಹೆಚ್ಚು ಸುರಕ್ಷಿತವಾಗಿರಿಸಿಕೊಂಡಿರುವುದರಿಂದ ನನಗೆ ಹೆಮ್ಮೆ ಎನಿಸುತ್ತದೆ. ನಿರಾಶ್ರಿತರನ್ನು ಸ್ವೀಕರಿಸುವುದು ಒಂದೊಂದು ರಾಷ್ಟ್ರದ ಜವಾಬ್ದಾರಿಯಾಗಿರುತ್ತದೆ ಎಂದು ನುಡಿದಿದ್ದಾರೆ.

ಕಳೆದ 2015ರಿಂದ ಯುರೋಪ್‍ನ ಹಲವು ರಾಷ್ಟ್ರಗಳು ಭಯೋತ್ಪಾದನೆಗೆ ತುತ್ತಾಗಿದೆ. ಮಧ್ಯಪೂರ್ವ, ಪ. ಯುರೋಪ್, ಆಫ್ರಿಕಾ ವಲಸಿಗರಿಂದ ಸಮಸ್ಯೆ
ಉಂಟಾಗಿದೆ. ಇವರಿಂದ ಭಯೋತ್ಪಾದನೆ, ಹಿಂಸೆ, ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಯುರೋಪ್ ಕಳೆದ ಹಲವಾರು ವರ್ಷಗಳಿಂದ ಇತರರ ರಾಷ್ಟ್ರಗಳ ಜನರಿಂದ
ಸಾಂಸ್ಕøತಿಕ ಮತ್ತು ಧಾರ್ಮಿಕತೆಯ ಪ್ರಭಾವದಿಂದ ರಾಷ್ಟ್ರದ ಏಕೀಕರಣಕ್ಕೆ ಸವಾಲು ಉಂಟಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಝೆಕ್ ಗಣರಾಜ್ಯದಲ್ಲಿ ಸುಮಾರು 22,000 ಮುಸ್ಲಿಮರು ವಾಸಿಸುತ್ತಿದ್ದಾರೆ. ಇಂದು ಆ ಮುಸ್ಲಿಮರು ಧರ್ಮದ ಹೆಸರಲ್ಲಿ ಸಂಘಟಿತರಾಗುತ್ತಿದ್ದು, ದೇಶದ ಮೇಲೆ ಪರಿಣಾಮ ಉಂಟಾಗಬಹುದು. ನಾವು ಅವರ ಅಭಿವ್ಯಕ್ತಿಗೆ ಬದ್ಧರಾಗಿದ್ದು, ಆದರೆ ಅವರು ಮೂಲಭೂತ ಚಿಂತನೆಗಳನ್ನು ಬೆಳೆಸಬಾರದು ಎಂದು ನುಡಿದಿದ್ದಾರೆ.

ಒಂದು ವಾರಗಳ ಮುಂಚೆ ಝೆಕ್ ಅಧ್ಯಕ್ಷ ಮಿಲೋಸ್ ಝೆಮಾನ್ ಅವರುÁದ್ಯಂತ ದೇಶದಾದ್ಯಂತ ಇರುವ ಈಜುಕೊಳಗಳಲ್ಲಿ ಬರ್ಕಿನಿಗಳನ್ನು ನಿಷೇಧಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. (ಬರ್ಕಿನಿ ಎಂದರೆ ಈಜುಕೊಳಲ್ಲಿ ಸ್ತ್ರೀಯರು ಬಳಸುವ ಬುರ್ಖಾದಂಥಾ ವಸ್ತ್ರ, ಇದರಲ್ಲಿ ಮುಖ ಬಿಟ್ಟು ಉಳಿದ ಎಲ್ಲಾ ಭಾಗಗಳು ಮುಚ್ಚಿರುತ್ತದೆ) ಅರಬ್ ರಾಷ್ಟ್ರಗಳ ವಸ್ತ್ರಗಳಿಂದ ಸ್ನಾನ ಮಾಡಲು ಝೆಕ್‍ನಲ್ಲಿ ಯಾವುದೇ ಅವಕಾಶವಿಲ್ಲ ಎಂದು ನುಡಿದಿದ್ದಾರೆ.

ಝೆಕ್ ರಿಪಬ್ಲಿಕ್ ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ವಿಚಾರದಲ್ಲಿ ಸಾಕಷ್ಟು ಬದ್ಧತೆಯನ್ನು ತೋರಿಸಿದೆ. ಆಸ್ಟ್ರಿಯನ್ ಪತ್ರಿಕೆಗೆ ಹೇಳಿಕೆ ನೀಡಿದ ಅವರು, ಅಕ್ರಮವಾಗಿ ಬರುವ ವಲಸಿಗರನ್ನು ಮಟ್ಟ ಹಾಕಲು ಸೀಮಾ ರೇಖೆಯ ಗಸ್ತು ಪಡೆಗೆ ಆರ್ಥಿಕವಾಗಿ ಸಾಕಷ್ಟು ನೆರವಾಗುತ್ತಿದ್ದೇವೆ. ಲಿಬಿಯಾ ಗೃಹರಕ್ಷಕ ದಳದವರಿಗೂ ಸಾಕಷ್ಟು ನೆರವಾಗುತ್ತಿದ್ದೇವೆ. ವಲಸಿಗರ ಕ್ಯಾಂಪ್‍ಗಳಿಗೂ ನೆರವಾಗುತ್ತಿದ್ದೇವೆ. ಬಾಲ್ಕನ್ಸ್ ಎಂಬ ಪ್ರದೇಶಕ್ಕೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಅವರು ಗಡಿರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ವೈಸ್‍ಗ್ರಾಡ್ ಗ್ರೂಪ್ ರಾಷ್ಟ್ರಗಳಾದ ಸ್ಲೋವಕಿಯಾ, ಪೋಲಂಡ್ ಮತ್ತು ಹಂಗೇರಿ ಈ ಮೂರು ರಾಷ್ಟ್ರಗಳಂತೆ ಝೆಕ್ ಗಣರಾಜ್ಯವೂ ಕೂಡಾ ಯುರೋಪಿಯನ್ ಒಕ್ಕೂಟದ ವಲಸಿಗರ ಬಲವಂತದ ಸ್ಥಳಾಂತರ ಕಾರ್ಯಕ್ರಮವನ್ನು ತಿರಸ್ಕರಿಸುತ್ತದೆ. ಮಧ್ಯ ಯುರೋಪ್‍ನಿಂದ ಬರುವ ಜನರಿಗೆ ನಾವು ಸಹಾಯ ಮಾಡುತ್ತೇವೆ ಎಂದಿದ್ದಾರೆ.

ಝೆಕ್ ಅಧ್ಯಕ್ಷ ಝೆಮನ್ ಅವರ ಪ್ರಕಾರ, ಯುರೋಮೈಡೆನ್ ಪ್ರತಿಭಟನೆಯ ನಂತರ ಅನೇಕ ಮಂದಿ ಉಕ್ರೈನ್‍ನಿಂದ ಪಲಾಯನ ಮಾಡುತ್ತಿದ್ದಾರೆ. ಇಂಥಾ ಜನರ
ಹೊಣೆಯನ್ನು ವೈಸ್‍ಗ್ರಾಡ್ ಗ್ರೂಪ್ ವಹಿಸಿಕೊಳ್ಳಬೇಕು. ಪೋಲಾಂಡ್ 1.3 ಮಿಲಿಯನ್ ವೀಸಾಗಳನ್ನು ಉಕ್ರೈನಿಯರಿಗೆ ಕೊಟ್ಟಿದೆ. ಅವರೀಗ ಪೋಲಂಡ್‍ನಲ್ಲಿ ಆಶ್ರಯ ಪಡೆದಿದ್ದಾರೆ ಎಂದರು.

ಉಕ್ರೈನಿನಲ್ಲೂ ಅನೇಕ ಮಂದಿ ನಿರಾಶ್ರಿತರಿದ್ದಾರೆ. ಅವರು ತನ್ನ ಮೂಲತ್ವ ಹಾಗೂ ಶ್ರದ್ಧೆಯಿಂದ ನಮ್ಮ ಹತ್ತಿರದಲ್ಲಿದ್ದಾರೆ ಎಂದು ಝೆಮನ್ 2015ರ ಸೆಪ್ಟೆಂಬರ್‍ನಲ್ಲಿ ತಿಳಿಸಿದ್ದರು. ಆದರೆ ಅವರ ಇತ್ತೀಚಿನ ಹೇಳಿಕೆಯ ಪ್ರಕಾರ ಮುಸ್ಲಿಮರು ತಮ್ಮ ಜೊತೆ ಒಗ್ಗೂಡಿ ಕೆಲಸ ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ನಿರಾಶ್ರಿತರಾಗಿ ಝೆಕ್ ರಿಪಬ್ಲಿಕ್‍ಗೆ ಬರುವ ಮುಸ್ಲಿಮರು ತಮ್ಮ ಧಾರ್ಮಿಕತೆಯನ್ನು ಪಾಲಿಸುವುದರಿಂದ ಝೆಕ್‍ಗೆ ಅದರಿಂದ ಸಮಸ್ಯೆ ಉಂಟಾಗಿರುವುದನ್ನು ಇಲ್ಲಿ ಕಂಡುಕೊಳ್ಳಬಹುದು. ಇದಕ್ಕಾಗಿಯೇ ಅಲ್ಲಿನ ಪ್ರಧಾನ ಮಂತ್ರಿಯವರು ಮುಸ್ಲಿಮರ ಸಂಖ್ಯೆ ಜಾಸ್ತಿಯಾಗುವುದು ಬೇಡ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಮುಸ್ಲಿಮರಿಂದ ಯುರೋಪಿನ ಉಳಿದ ರಾಷ್ಟ್ರಗಳು ಸಮಸ್ಯೆಗೆ ಸಿಲುಕಿರುವುದರಿಂದ ಝೆಕ್ ರಾಷ್ಟ್ರ ಮೊದಲೇ ಎಚ್ಚರಿಕೆ ವಹಿಸುತ್ತಿದೆ.

-ಚೇಕಿತಾನ

Source: http://www.breitbart.com/london/2017/08/30/not-want-muslims-czech-republic-
prime-minister/

Tags

Related Articles

Close