ಅಂಕಣ

ಭಾರತದ 6112000000000 ಕೋಟಿ ರೂಗಳನ್ನು ಹೇಗೆ ಲೂಟಿಗೈದರು ಗೊತ್ತೇ?!

ಈ ವೈಭವಯುತವಾದ ಭಾರತ ದೇಶದ ವಿವಿಧತೆಯಲ್ಲಿ ಏಕತೆ ಎಂಬುದೊಂದಿದೆಯಲ್ಲವಾ?! ಈ ಅಷ್ಟೂ ಸಿದ್ಧಾಂತಗಳನ್ನು ಕಟ್ಟಿದ್ದು ಅದೆಷ್ಟೋ.ಭಾರತೀಯರ ಬೆವರಿನ ಮೇಲೆ! ಅದೆಷ್ಟೋ ಹಿಂದೂಗಳ ರಕ್ತದ ಕಲೆಗಳ ಮೇಲೆ! ಅಷ್ಟಾದರೂ ಸಹ, ಭಾರತೀಯರೆನ್ನಿಸಿಕೊಂಡವರಲ್ಲಿ.ಕೆಲವರು ಭೂತಾಕಾರವಾಗಿ ಬೆಳೆದರು! ಪರಿಣಾಮ, ದೇಶದ ಮೇಲಾಯಿತು! ದೇಶಕ್ಕೆ ಶನಿಕಾಟ ಪ್ರಾರಂಭವಾದ ಹಾಗೆ ಮನುಷ್ಯರ ರೂಪ ತಳೆದು ಅಧಿಕಾರ ಹಿಡಿದ ಒಂದಷ್ಟು ಭೂತಗಳು ದಿನೇ ದಿನೇ ಭಾರತದ ವೈಭವವನ್ನು, ರೋಚಕ ದಂತಕಥೆಗಳನ್ನೆಲ್ಲ ಬೂದಿಯಾಗಿಸಿದರು! ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಅಭಿವೃದ್ಧಿಗೆ ಕೆಲಸ ಮಾಡಬೇಕಿದ್ದವರೆಲ್ಲ ತಮ್ಮ ತಮ್ಮ ಸ್ವಾರ್ಥಕ್ಕೆ ದೇಶವನ್ನೇ ಮಾರಿಬಿಟ್ಟರು! ಬಾಲ್ಯದಲಿ ನಾವು ಕೇಳಿದ ರಕ್ಕಸರ ಕಥೆಗಳನ್ನು ಹೋಲಿಸಿದರೆಲ್ಲ ಕಥೆಗಳಿಗೂ ಜೀವ ಬಂದಿತ್ತು!

ಕಲ್ಲಿದ್ದಲು ಉಜ್ಜಿದಾಗ ಬಂದದ್ದು ಚಿನ್ನ!!!

ಈ ಕಲ್ಲಿದ್ದಲು ಹಗರಣವೆಂಬ ಹಗರಣ ದೇಶವನ್ನು ಶತಮಾನಗಳ ಹಿಂದಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿತು! ಮನಮೋಹನ್ ಸಿಂಗ್ ಸರಕಾರದ
ಅಧಿಕಾರಾವಧಿಯಲ್ಲಿ ನಡೆದ ಈ ಹಗರಣ ಬೆಳಕಿಗೆ ಬಂದಿದ್ದು 2012 ರಲ್ಲಿ! ಯಾವುದೇ ಔಪಚಾರಿಕವಾದ ಹರಾಜು ನಡೆಸದೇ, ಬರೋಬ್ಬರಿ 1,86,000 ಕೋಟಿ
ಹಣವನ್ನು ನುಂಗಿ ನೀರು ಕುಡಿದಿತ್ತು ಕಾಂಗ್ರೆಸ್! ದೇಶದ ಖಜಾನೆಯನ್ನು ಅದ್ಭುತವಾಗಿ ಲೂಟಿ ಹೊಡೆದ ಸರಕಾರ, 2004 ರಿಂದ 2011 ರ ವರೆಗೆ ಸುಮಾರು
194 ಕಲ್ಲಿದ್ದಲ ಗಣಿಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಿಬಿಟ್ಟಿತ್ತು! ಯಾರಿಗೂ ಗೊತ್ತಾಗದಂತೆ! ದೇಶದ ಪ್ರಜೆಗಳಿಗೆ ಖಜಾನೆಯೊಳಗೆ ಹೆಗ್ಗಣವಿದೆ ಎಂದು
ಗೊತ್ತಾಗುವ ಹೊತ್ತಿಗೆ ಅದೆಷ್ಟೋ ಕೋಟಿ ರೂಗಳು ದೇಶದಿಂದ ಹೊರಗೆ ಹೋಗಿತ್ತು! ದೇಶದ ಆದಾಯ ಅರ್ಧದಷ್ಟು ಕಡಿಮೆಯಾಗಿದ್ದು ಇದೇ ಅವಧಿಯಲ್ಲಿ!

ಆಟ ಆಡುತ್ತಲೇ ಕದ್ದರು ಅಂತರಾಷ್ಟ್ರೀಯ ಮಟ್ಟದಲ್ಲಿ!

ಹಾ! ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ನಡೆದ ಹಗರಣವೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಹರಾಜುಗೊಳಿಸಿತು! 2010 ರಲ್ಲಿ ನಡೆದ ಈ ಹಗರಣವೊಂದು ಮತ್ತದೇ ಮನಮೋಹನ್ ಸಿಂಗ್ ಸರಕಾರದ ಕಾಂಗ್ರೆಸ್ ಪಕ್ಷದ ಉಡುಗೊರೆಯಷ್ಟೇ! ಅಸ್ತಿತ್ವವೇ ಇಲ್ಲದ ಪಾರ್ಟಿಗಳಿಗೆ ಪೇಮೆಂಟು, ಬಿಡ್ಟಿಂಗು, ಕಾಂಟ್ರಾಕ್ಟ್ಸು ಎಂಬೆಲ್ಲ ಸುಳ್ಳು ದಾಖಲೆ ಸೃಷ್ಟಿಸಿ ನಡೆಸಿದ ಭ್ರಷ್ಟಾಚಾರ ದೇಶಕ್ಕೆ ಬರೋಬ್ಬರಿ 70,000 ಕೋಟಿ ರೂಪಾಯಿಗಳ ನಷ್ಟವನ್ನುಂಟು ಮಾಡಿತ್ತು! ಕೊನೆಗೂ ಸಹ, ಆ ಹಣವೆಲ್ಲ ಯಾವ ಬಿಡ್ಡಿಂಗುಗಳಿಗೆ ಹೋಯಿತೆಂಬ ಲೆಕ್ಕವೂ ಸಿಗದಷ್ಟು ಚೆನ್ನಾಗಿಯೇ ಆಟವಾಡಿತ್ತು ಕಾಂಗ್ರೆಸ್ ಸರಕಾರ!

ಹಾಡಹಗಲೇ ನಡೆಯಿತೊಂದು ಭರ್ಜರಿ ಹಗರಣ!

ದೇಶದ ಎರಡನೇ ಅತಿದೊಡ್ಡ ಹಗರಣ ನಡೆದಿದ್ದು 2G – ಹಗರಣ! ಕೇವಲ ನೆಟ್ ವರ್ಕುಗಳ ಲೈನು ಹಿಡಿದು ನೀವಿದ ರೀತಿಗೆ ದೇಶಕ್ಕೆ 1,76,000 ಕೋಟಿ ರೂಗಳನ್ನು ದೇಶದ ಖಜಾನೆಯಿಂದ ಖಾಸಗಿ ಖಜಾನೆಗೆ ವರ್ಗಾವಣೆಯಾಗಿಬಿಟ್ಟಿತು! 2008 ರಲ್ಲಿ ಈ ಹಗರಣ ಬಯಲಿಗೆ ಬಂದಾಗ ಅಂದಿನ ಟೆಲಿಕಾಮ್ ಮಂತ್ರಿಯಾಗಿದ್ದವರು ಎ.ರಾಜಾ ಮತ್ತು ಎಮ್.ಕೆ.ಕನಿಮೋಝಿ! ಅದೆಷ್ಟೋ ಕಂಪೆನಿಗಳ ಜೊತೆಗೂಡಿ ಇವರಿಬ್ಬರೂ ದಾಳ ಹಾಕಿ ಆಡಿದ ಆಟವೊಂದು ಇವತ್ತು ಕೇವಲ ಕಥೆಯಾಗಿ ಉಳಿದು ಹೋಯಿತು! 2g ಲೈಸೆನ್ಸುಗಳನ್ನೆಲ್ಲ ಬೇಕಾಬಿಟ್ಟಿಯಾಗಿ ಹಂಚಿ ಕಡಿಮೆ ಬೆಲೆಗೆ ಮಾರಾಟವಾಗಿಸಿ, ಯಾವುದೇ ಕಾನೂನಾತ್ಮಕ ಶಿಷ್ಟಾಚಾರವೂ ಇಲ್ಲದೇ ನಡೆಸಿದ ಈ ಹಗರಣಕ್ಕೆ ಇಂದಿಗೂ ಪರಿಹಾರ ಸಿಕ್ಕಿಲ್ಲ!

ಬಡ ಜನರಿಗೆಂದಿದ್ದ ಜಾಗವೊಂದು ವಕ್ಫ್ ಬೋರ್ಡ್ ನ ಹಕ್ಕಾಗಿತ್ತು!!

2012 ರಲ್ಲಿ ನಡೆದ ಈ ಲ್ಯಾಂಡ್ ಹಗರಣ ಮಾತ್ರ ಕರ್ನಾಟಕದ ರಾಜಕೀಯ ಅಸ್ತಿತ್ವವನ್ನೇ ಅಲ್ಲಾಡಿಸಿತ್ತು! ಸುಮಾರು 27,000 ಎಕರೆ ಜಾಗವನ್ನು ಇದೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವೊಂದು ಸಾಮಾನ್ಯ ಹಕ್ಕುಗಳೂ ಇಲ್ಲದ ಮುಸಲ್ಮಾನರಿಗಿಟ್ಟಿದ್ದ ಜಾಗಗಳ ಹಕ್ಕನ್ನು ದಾಖಲೆಗಳನ್ನು ಸೃಷ್ಟಿಸಿ 1,50,000 ಕೋಟಿ ರೂಗಳಷ್ಟು ಬೆಲೆ ಬಾಳುವ ಜಾಗವನ್ನು ಅಧೀನಕ್ಕೆ ತೆಗೆದುಕೊಂಡಿತ್ತು! ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಅದೆಷ್ಟೋ ಪ್ರಭಾವಿ ರಾಜಕಾರಣಿಗಳು ಸೇರಿ ಮಾಡಿದ ಈ ಹಗರಣ ಕರ್ನಾಟಕದ ಅತಿ ದೊಡ್ಡ ಹಗರಣ! ಇದರ ತನಿಖೆ ಇನ್ನೂ ನಡೆಯುತ್ತಲೇ ಇದೆ!

ರಹಸ್ಯವಾದ ಫ್ಲೈಟು ಹಾರಿತ್ತು ಕೊನೆಗೂ!!

ಬೋಫೋರ್ಸ್! 1980 ರಲ್ಲಿ ಪ್ರಾರಂಭವಾದ ಹಗರಣವೊಂದು ಈ ಎಲ್ಲಾ ಹಗರಣಗಳಿಗೂ ಮುನ್ನುಡಿ ಬರೆಯಿತು! ಬೋಫೋರ್ಸ್ ಎಬಿ ಎನ್ನುವ ಯುದ್ಧವಿಮಾನಗಳನ್ನು ತಯಾರಿಸುವ ಕಂಪೆನಿಯೊಂದು ರಾಜೀವ್ ಗಾಂಧಿಗೆ ದುಡ್ಡು ನೀಡಿ ಭಾರತೀಯ ಸೇನೆಗೆ ಯುದ್ಧವಿಮಾನಗಳನ್ನು ಸರಬರಾಜು
ಮಾಡುವ ಬಿಡ್ಡಿಂಗ್ ಗಳನ್ನು ಗೆದ್ದುಬಿಟ್ಟಿತು! ತುಕ್ಕು ಹಿಡಿದ ವಿಮಾನಗಳನ್ನು ತಯಾರಿಸಿದ ಈ ಬೋಫೋರ್ಸ್ ಕಂಪೆನಿ ಇಡೀ ಭಾರತೀಯ ಸೈನಿಕರ ಪ್ರಾಣಗಳನ್ನೇ 100 – 200 ಕೋಟಿಗಳಿಗೆ ಅಡವಿಟ್ಟಿತು! ವರ್ಷಗಳ ತರುವಾಯ ಈ ಲೂಟಿ ಬೇರೆ ಬೇರೆ ಆಯಾಮ ತೆಗೆದುಕೊಂಡಿತು ಬಿಡಿ!

ಪ್ರಾಣಿಗಳಿಗಿದ್ದ ಮೇವನ್ನು ತಿಂದ ಪ್ರಭಾವಿ ರಾಜಕಾರಣಿ!

ಇದರಂತಹ ನಾಚಿಕೆಗೇಡಿನ ಹಗರಣ ಭಾರತದ ಇತಿಹಾಸದಲ್ಲೆಲ್ಲೂ ನಡೆದಿಲ್ಲ! ಇದೇ ಬಿಹಾರದಲ್ಲಿ, ಜಾನುವಾರುಗಳಿಗೆ ನಿಗದಿಪಡಿಸಿದ್ದ ಮೇವನ್ನು ಲಾಲೂ ಪ್ರಸಾದ್ ಯಾದವ್ ಸರಕಾರ ಸಾವಿರ ಕೋಟಿ ರೂಗಳ “ಇಲ್ಲದೇ ಇರುವ ಜಾನುವಾರುಗಳಿಗೆ” ಮೇವನ್ನು ನೀಡಿದ ದಾಖಲೆ ಸೃಷ್ಟಿಸಿತ್ತು! ಆದರೆ, ಮೇವನ್ನು ತಿಂದಿದ್ದು ಮಾತ್ರ ಯಾದವ್! ಸಾವಿರ ಕೋಟಿ ಆದಾಯವನ್ನು ತಿಂದ ಲಾಲೂ ಪ್ರಸಾದ್ ಯಾದವ್ ಸರಕಾರದ ಹಗರಣ ಬೆಳಕಿಗೆ ಬಂದಿದ್ದು 1996 ರಲ್ಲಿ!

ತೆಲಗಿ ಎಂಬ ತೆಳ್ಳಗಿನ ಕಾಗದದ ದೊಡ್ಡ ಹಗರಣ!

ಅಬ್ದುಲ್ ಕರೀಮ್ ತೆಲಗಿಗೆ ಬಹುಷಃ ದೇಶದ ಹಗರಣಗಳನ್ನು ಯಾವ್ಯಾವ ರೀತಿ ಮಾಡಬಹುದೆಂಬ ಅದ್ಭುತ ಉಪಾಯಗಳನ್ನು ನೀಡಿದ್ದಕ್ಕಾಗಿ ಯಾವುದಾದರೂ ಪ್ರಶಸ್ತಿ ಕೊಡಲೇಬೇಕು! ಅದೆಷ್ಟೋ ಖಾಸಗಿ ಕಂಪೆನಿಗಳಿಗೆ ಸ್ಟಾಂಪ್ ಪೇಪರ್ರುಗಳನ್ನು ತಯಾರಿಸಿ ಸರಕಾರದ ಖಜಾನೆಯಿಂದ ಬರೋಬ್ಬರಿ 20,000 ಕೋಟಿಗಳನ್ನು ಹೊರಗೆಳೆದಿದ್ದ! 2002 ರ ಒಂದೇ ವರ್ಷದಲ್ಲಿ ಈತ ಸಾವಿರಾರು ಕೋಟಿಗಳ ಆದಾಯ ಗಳಿಸಿದ್ದ! ಇವತ್ತೂ ಸಹ, ಆತ ಯಾವ್ಯಾವ ಕಂಪೆನಿಗಳ ನಕಲಿ ದಾಖಲೆ ತಯಾರಿಸಿ ಸರಕಾರೀ ಕಡತಗಳಲ್ಲಿ ಸೇರಿಸಿದ್ದಾನೆಂದು ಗೊತ್ತಾಗದಷ್ಟು ಚಾಲಾಕಿಯಾಗಿ ಕರ್ತವ್ಯ ನಿರ್ವಹಿಸಿದ್ದ!

ಸತ್ಯದ ತಲೆ ಮೇಲೆ ಹೊಡೆದಿತ್ತು ಸತ್ಯಂ ಎಂಬ ಸುಳ್ಳು!

ಎಲ್ಲರೂ ಕೂಡ ಸತ್ಯದ ಆಧಾರದ ಮೇಲೇ ಬದುಕುವುದಿಲ್ಲ! ರಾಮಲಿಂಗಾ ರಾಜು ಎಂಬ ಸತ್ಯಂ ಕಂಪ್ಯೂಟರ್ಸ್ ಕಂಪೆನಿಯ ಮಾಲೀಕ ಅದೆಷ್ಟೋ ವರ್ಷಗಳ ಕಾಲ ತನ್ನ ಕಂಪೆನಿಯ ಆದಾಯವನ್ನು ಹಾಗೂ ಲಾಭವನ್ನು ಮುಚ್ಚಿಟ್ಟಿದ್ದನಷ್ಟೇ! ಆದರೆ, ಬರೋಬ್ಬರಿ 14,000 ಕೋಟಿ ರೂಗಳನ್ನು ಒಳಗೊಂಡ ದೇಶದ ಅತಿದೊಡ್ಡ ಕಾರ್ಪೋರೇಟ್ ವಲಯದ ಹಗರಣ! ಸತ್ಯಂ ಕಂಪ್ಯೂಟರ್ಸ್ ನನ್ನು ಕೊನೆಗೆ ಟೆಕ್ ಮಹೀಂದ್ರ ಆಕ್ರಮಿಸಿತಷ್ಟೇ!

ಇನ್ನೆಷ್ಟೋ ಹಗರಣಗಳಿಗೆ ಆಯಾ ರಾಜ್ಯದ ಸರಕಾರ ಮತದಾರರಿಗೆ ಉತ್ತರ ಕೊಡಬೇಕಿರುವುದು ಸತ್ಯ! ಆದರೆ, ಯಾವ ರೀತಿ ಕಾಂಗ್ರೆಸ್ ಎನ್ನುವುದೊಂದು ದೇಶದ ಖಜಾನೆಯನ್ನು ಲೂಟಿ ಹೊಡೆಯಿತಲ್ಲವಾ?! ಬಿಡಿ! ದೇಶ ಇವತ್ತಿಗೂ ಚೇತರಿಸಿಕೊಳ್ಳಲಾಗದೇ ಒದ್ದಾಡುವಂತೆ ಮಾಡಿತು!

– ತಪಸ್ವಿ

Tags

Related Articles

Close