ಅಂಕಣ

ಭಾರತ ಇಲ್ಲಿಯವರೆಗೂ ಮಾಡಿದ ಯುದ್ಧಗಳೆಷ್ಟು? ಹುತಾತ್ಮರಾದ ಯೋಧರೆಷ್ಟು? ಮತ್ತು ರಾಜಕೀಯ?!

ಈ ಲೇಖನ ಓದಿ ನಿಮಗೆ ಕಣ್ಣೀರಿಡಬೇಕೆನಿಸಿದರೆ ಅತ್ತುಬಿಡಿ!

ಸ್ವಾತಂತ್ರ್ಯಾ ನಂತರ ಗಾಂಧೀಜಿಯ ಹಟದಿಂದ ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಟ್ಟು ನಮ್ಮ ಮೇಲೆ ನಾವೇ ಯುದ್ಧ ಮಾಡಿಸಿಕೊಂಡೆವು. 1949ರಲ್ಲಿ ನಡೆದ ಆ ಯುದ್ಧದಲ್ಲಿ 1104 ಯೋಧರು ಹುತಾತ್ಮರಾದರು. 1949ರಲ್ಲಿ ಪಾಕಿಸ್ತಾನವು ಕಾಶ್ಮೀರದ ಒಂದು ಭಾಗದಲ್ಲಿ ಬುಡಕಟ್ಟು ಜನರನ್ನು ಭಾರತದ ವಿರುದ್ಧ ಎತ್ತಿಕಟ್ಟಿ ತಂಟೆ ಮಾಡಿತು. ಆಗ ಎರಡೂ ದೇಶಗಳ ಸೈನ್ಯಗಳು ಮುಖಾಮುಖಿಯಾದವು.ಬಿರುಸಾದ ಯುದ್ಧವೇ ಶುರುವಾಗಿ ಹೋಗಿತ್ತು.ಭಾರತದ ಸೇನೆ ಎಂತಹ ಬಿರುಸಿನಿಂದ ಕಾರ್ಯಾಚರಣೆ ಮಾಡಿತೆಂದರೆ, ಇನ್ನು ಕೆಲವೇ ದಿನಗಳಲ್ಲಿ ಗೆಲುವು ನಮ್ಮದಾಗುತ್ತಿತ್ತು.ಯುದ್ಧ ನಿಲ್ಲಿಸಿ ! ಈ ವಿಷಯವನ್ನು ಸಂಯುಕ್ತ ರಾಷ್ಟ್ರ ಸಂಸ್ಥೆಯ ಮುಂದಿಟ್ಟು ಬಗೆಹರಿಸಿಕೊಳ್ಳುತ್ತೇನೆ ಎಂದು ಸೈನ್ಯದ ಕೈ ತಡೆದು ಬಿಟ್ಟರು ನೆಹರೂ.ಕಾಶ್ಮೀರದ ಮೂರನೇ ಒಂದು ಭಾಗವನ್ನು ಕಾಶ್ಮೀರದ ಸುಪರ್ದಿಗೆ ಬಿಟ್ಟುಬಿಟ್ಟರು.ಹೀಗಾಗಿ ಇವತ್ತಿಗೂ ಪಾಕ್ ಆಕ್ರಮಿತ ಕಾಶ್ಮೀರ (POK) ಅಸ್ತಿತ್ವದಲ್ಲಿದೆ.ಅವತ್ತು ನೆಹರೂ ಭಾರತೀಯ ಸೈನ್ಯದ ಕೈ ತಡೆಯದೆ ಹೋಗಿದ್ದರೆ, ಕಾಶ್ಮೀರದ ಸಮಸ್ಯೆ ಇಷ್ಟು ಉಲ್ಬಣಗೊಳ್ಳುತ್ತಿರಲಿಲ್ಲ. ನೆಹರೂಗೆ ಧಿಕ್ಕಾರವಿರಲಿ!!

2)1962ರಲ್ಲಿ ಮೊದಲ ಪ್ರಧಾನಿ ನೆಹರೂನ ಅವಿವೇಕತನಕ್ಕೆ ಚೀನಾ ಕಾಲು ಕೆದರಿ ಜಗಳಕ್ಕೆ ಬಂದು ಯುದ್ಧ ಮಾಡಿದಾಗ ಆ ಯುದ್ಧದಲ್ಲಿ 3250 ಯೋಧರು
ಹುತಾತ್ಮರಾದರು. ಇಲ್ಲಿ ಒಂದು ವಿಷಯ ತಿಳಿಸಲೇಬೇಕು. ಈ ಯುದ್ಧದಲ್ಲಿ ನಾವು ಸೋತಿದ್ದಕ್ಕೆ ನೇರ ಕಾರಣ ನೆಹರು. ನಮ್ಮ ಸೈನಿಕರ ಕೈಯ್ಯಲ್ಲಿ ಸರಿಯಾದ ಬಂದೂಕು ಕೊಟ್ಟಿರಲಿಲ್ಲ,ಹಾಕಿಕೊಳ್ಳಲು ಬೂಟು ಇರಲಿಲ್ಲ. ಹಿಂದೂ-ಚೀನಿ ಭಾಯಿ ಭಾಯಿ ಎಂದು ನೆಹರೂ ಬೀಗುತ್ತಿದ್ದಾಗಲೇ ಚೀನಿಯರು ನಮ್ಮ ಮೇಲೆ ಮುಗಿಬಿದ್ದು ನಮ್ಮ ಸೈನಿಕರನ್ನು ಕೊಂದು ಹಾಕಿದ್ದರು. ಯಾವುದೇ ಸಿದ್ಧತೆ ಇರಲಿಲ್ಲ,ಅಸಲಿಗೆ ಸೈನಿಕರಿಗೆ ಹಾಕಿಕೊಳ್ಳಲು ಬೂಟೇ ಇರಲಿಲ್ಲ ಆದರೂ ಯುದ್ಧಕ್ಕೆ ಸಿದ್ಧ ಎಂದು ಅಡುಗೆಮನೆಯಲ್ಲಿ ನೆಹರು ಗರ್ಜಿಸಿ,ಸೈನಿಕರನ್ನು ಗಡಿಗೆ ಕಳಿಸಿಬಿಟ್ಟಿದ್ದ.ಅಂಥ ನೆಹರುವನ್ನು ನಮಗೆ ‘ಚಾಚಾ ನೆಹರೂ ‘ ಎಂದೇ ಪರಿಚಯಿಸಲಾಯಿತು. ನಮ್ಮ ಮಕ್ಕಳಿಗೂ ನಾವು ಹಾಗಂತಲೇ ಪರಿಚಯಿಸಿ ಕೊಟ್ಟಿದ್ದೇವೆ.ಆದರೆ ಬ್ರಿಗೇಡಿಯರ್ ದಳವಿ ಎಂಬ ಮಹಾಯೋಧನನ್ನು ಕೇಳಿ ನೋಡಿ? ಆ ಯುದ್ಧದಲ್ಲಿ ಸೋತಿದ್ದರ ಪರಿಣಾಮ ಆ ಮಹಾಯೋಧನನ್ನು ಚೀನಿಯರು ಬಂಧಿಸಿದ್ದರು. ಆ ಮಹಾಯೋಧನ ತನ್ನ ಕಣ್ಣೆದುರಿಗೆ ಒಂದು ಇಡೀ ತುಕಡಿಯ ಮೇಲೆ ಮಂಗೋಲಿಯನ್ ಮುಖದ ಸೈನಿಕರು ತೋಳಗಳಂತೆ ಮುಗಿಬಿದ್ದು ನರಮೇಧ ಮಾಡಿ ಮುಗಿಸುತ್ತಿದ್ದಾಗ, ಕೈಲಿದ್ದ ಬಂದೂಕನ್ನು ಎತ್ತಿ ಗುಂಡು ಹಾರಿಸಲಾಗದಂತಹ ನಿಸ್ಸಹಾಯಕ ಸ್ಥಿತಿಗೆ ನೆಹರು ತಂದಿಟ್ಟಿದ್ದ.

ಅಲ್ಲಿ ಭಾರತದ ಗಡಿಯಲ್ಲಿ ನಮ್ಮ ನಿಸ್ಸಹಾಯಕ ಯೋಧನೊಬ್ಬ ಜೇಬಿನಲ್ಲಿದ್ದ ಕಟ್ಟಕಡೆಯ ಕಾಡತೂಸನ್ನು ಶತ್ರುವೆನೆಡೆಗೆ ಫೈರ್ ಮಾಡಿ, ಆಟ ನಂತರ
ಏನೇನೂ ಮಾಡಲಾಗದೆ ಹಿಮಕಾಡಿನ ಬಟಾಬಯಲಿನಲ್ಲಿ ಬೆಚ್ಚನೆಯದೊಂದು ಅಂಗಿಯೂ ಇಲ್ಲದಂತೆ ನಿಂತಿದ್ದ.ಅವನನ್ನು ಚೀನಿ ಸೈನಿಕರು ನಾಲ್ಕೂ ಕಡೆಯಿಂದ ಸುತ್ತುವರೆದು ಪ್ರಾಣಿಯನ್ನು ಬೇಟೆಯಾಡಿದಂತೆ ಬೇಟೆಯಾಡಿ ಕೊಂದುಬಿಟ್ಟರು.ಆ ಸೈನಿಕ “ಜೈಹಿಂದ್” ಎಂಬ ಕೊನೆಯ ಚೀತ್ಕಾರದೊಂದಿಗೆ ನೆಲಕ್ಕೆ ಬಿದ್ದಿದ್ದ.ಹಿಮದ ಕಾಡು ಆ ಆರ್ತನಾದಕ್ಕೆ ಪ್ರತಿಧ್ವನಿಸಿ ಸುಮ್ಮನಾಯಿತು. ಮಂಜಿನ ನೆಲ ಕೆಂಪಾಗಾಯಿತು.(ಹಿಮಾಲಯನ್ ಬ್ಲಂಡರ್-ರವಿ ಬೆಳಗೆರೆ)
ಇದಕ್ಕೆಲ್ಲಾ ಕಾರಣವಾದ ನೆಹರುವನ್ನು ಭಾರತೀಯರಾರೂ ಯಾವತ್ತೂ ಕ್ಷಮಿಸಲ್ಲ. ನೆಹರೂನ ಅವಿವೇಕತನಕ್ಕೆ ಅವನ ಅಡುಗೆಮನೆಯ ಪೌರುಷಕ್ಕೆ 3250 ಯೋಧರನ್ನು ಭಾರತ ಕಳೆದುಕೊಂಡಿತು. ಛೇ!

3)ಚೀನಾದ ಜೊತೆ ರಾಜಕೀಯ ಪಡಸಾಲೆಯಿಂದ ಭಾರತ 1962 ರಲ್ಲಿ ಸೋತಿದ್ದರ ಪರಿಣಾಮ,1965ರಲ್ಲಿ ಪಾಕಿಸ್ತಾನ ಅದೇ ಸಮಯವನ್ನು ಬಳಸಿಕೊಂಡು ಭಾರತದೊಂದಿಗೆ ಯುದ್ಧ ಮಾಡಿದಾಗ 3264 ಯೋಧರು ಹುತಾತ್ಮರಾದರು. 1965ರ ಯುದ್ಧದಲ್ಲಿ ನಮ್ಮ ಭಾರತದ ನಾಯಕವನ್ನು ವಹಿಸಿದ್ದವರು ಲಾಲ ಬಹದ್ದೂರ್ ಶಾಸ್ತ್ರಿ. ಅವರ ನಿರ್ಧಾರಕ್ಕೆ,ಅವರ ಧೈರ್ಯಕ್ಕೆ ಆ ಯುದ್ಧವನ್ನು ನಾವು ಗೆದ್ದಿದ್ದಲ್ಲದೆ ಪಾಕಿಸ್ತಾನದ ಲಾಹೋರಿನವರೆಗೂ ನಾವು ವಶಪಡಿಸಿಕೊಂಡಿದ್ದೆವು. 1965ರ ಯುದ್ಧ ನೆನಪದಾದರೆ ಖಂಡಿತವಾಗಿಯೂ ಯೋಧ ಹವಾಲ್ದಾರ್ ಅಬ್ದುಲ್ ಹಮೀದ್ ನೆನಪಾಗುತ್ತಾರೆ. ಆ ಸಮಯದಲ್ಲಿ ನಮ್ಮ ಸೈನ್ಯದಲ್ಲಿ 1947ರ ಹಳೆಯ ಟ್ಯಾಂಕರ್ ಗಳಿದ್ದವು. ಪಾಕಿಗಳ ಹತ್ತಿರ ಹೊಸ Imported ಅಮೆರಿಕನ್ ಪೆಟನ್ ಟ್ಯಾಂಕ್ ಗಳಿದ್ದವು. ಅವರ ಟ್ಯಾಂಕರ್ ಗಳಿಗೆ 1800 ಮೀಟರ್ ದೂರದ ಪ್ರದೇಶದವರೆಗೂ ದಾಳಿ ಮಾಡುವ capacity ಇತ್ತು. ಆದರೆ ನಮ್ಮ ಟ್ಯಾಂಕರ್ ಗಳಿಗೆ ಬರೀ 800 ಮೀಟರ್ ನಷ್ಟೇ ದಾಳಿ ಮಾಡುವ capacity ಇತ್ತು. ಇಂತಹ ಸಂದರ್ಭದಲ್ಲಿ ಯೋಧ ಅಬ್ದುಲ್ ಹಮೀದ್ 6 ಪಾಕಿ ಟ್ಯಾಂಕರ್ ಗಳನ್ನು ಧ್ವಂಸ ಮಾಡಿ ಹುತಾತ್ಮನಾಗಿದ್ದ. ಆ 6 ಟ್ಯಾಂಕರ್ ಗಳ ದ್ವಂಸದಿಂದ ಯುದ್ಧದ ವಿಜಯಕ್ಕೆ ಮುನ್ನುಡಿ ಬರೆದಿದ್ದ.

4)1971ರ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ 3843 ಯೋಧರು ಹುತಾತ್ಮರಾದರು. 1947ರಲ್ಲಿ ಭಾರತ ಇಬ್ಭಾಗವಾದಾಗ ಪೂರ್ವ ಪಾಕಿಸ್ತಾನ,ಪಶ್ಚಿಮ ಪಾಕಿಸ್ತಾನಗಳಾಗಿ ಭಾಗವಾಗಿದ್ದವು. ವಿಶಾಲವಾದ ಬಂಗಾಳವನ್ನು ಕತ್ತರಿಸಿ ಪೂರ್ವ ಪಾಕಿಸ್ತಾನ್ , ವಿಶಾಲವಾದ ಪಂಜಾಬನ್ನು ಕತ್ತರಿಸಿ ಪಶ್ಚಿಮ ಪಾಕಿಸ್ತಾನವನ್ನಾಗಿ ಮಾಡಿದ. ಇವೆರಡರ ನಡುವೆ ಸುಮಾರು ಸಾವಿರ ಕಿಲೋಮೀಟರ್ ಅಂತರವಿತ್ತು. ಈ ಎರಡೂ ಭಾಗಗಳಿಗೆ ಒಬ್ಬನೇ
ಪ್ರಧಾನಿಯಾಗಿದ್ದ. ಹೀಗಾಗಿ ಅವ್ಯವಸ್ಥೆ ಕಾಡುತ್ತಿತ್ತು. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಬೇಕಾದರೆ ಸಾವಿರಾರು ಕಿಲೋಮೀಟರ್ ಭಾರತದೊಳಕ್ಕೆ ಕ್ರಮಿಸಿ ಹೋಗಬೇಕಿತ್ತು. ಇದರಿಂದ ಭಾರತಕ್ಕೂ ತೊಂದರೆ ಆಗುತ್ತಿತ್ತು ಹಾಗೂ ಪೂರ್ವ ಪಾಕಿಸ್ತಾನ(ಪ್ರಸ್ತುತ ಬಾಂಗ್ಲಾದೇಶ) ಕ್ಕೂ ತೊಂದರೆ ಆಗುತ್ತಿತ್ತು. ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ನೇತ್ರತ್ವದಲ್ಲಿ ಪೂರ್ವಪಾಕಿಸ್ತಾನ ವಿಮೋಚನೆಯಾಗಿ ಬಾಂಗ್ಲಾ ದೇಶವಾಯಿತು. ಆ ವಿಮೋಚನೆಯ ಕಾರ್ಯಾಚರಣೆಯಲ್ಲಿ ಸುಮಾರು 3843 ಭಾರತೀಯ ಯೋಧರು ಹುತಾತ್ಮರಾಧರು.

5) 1984ರಲ್ಲಿ ನಡೆದ ಆಪರೇಷನ್ ಬ್ಲ್ಯೂಸ್ಟಾರ್ ಹೆಸರಲ್ಲಿ ಸುಮಾರು700ರಿಂದ 900 ಯೋಧರು ಹುತಾತ್ಮರಾಧರು. ಇಂದಿರಾಗಾಂಧಿಯವರೇ ಬೆಳೆಸಿದ ಭಿಂದ್ರನ್ ವಾಲೆ ಕೊಬ್ಬಿ ನಿಂತು ಪ್ರತ್ಯೇಕ ಸಿಖ್ಖ್ ರಾಷ್ಟ್ರದ ಬೇಡಿಕೆ ಇಟ್ಟು ಅಮೃತಸರದ ಸ್ವರ್ಣ ಮಂದಿರವನ್ನು ತನ್ನ ಅಡಗುತಾಣ ಮಾಡಿಕೊಂಡು,ತನ್ನದೇ ಬಂಡುಕೋರರ ಸೇನೆ ಮಾಡಿಕೊಂಡು ಹಿಂಸಾಚಾರ ಗಲಭೆ ಮಾಡಿದ್ದ. ಅವನು ಬೆಳೆಯುವುದರಲ್ಲೇ ಇಂದಿರಾಗಾಂಧಿಯವರು ಚಿವುಟಿದ್ದರೇ ಅಷ್ಟೊಂದು ಯೋಧರ ಬಲಿಯಾಗುತ್ತಿರಲಿಲ್ಲ. ಇಂದಿರಾಗಾಂಧಿಯವರ ಕೆಟ್ಟ ರಾಜಕೀಯ ದಾಹಕ್ಕೆ ಆ ಶಮನವನ್ನು ಬೆಳೆಯಲು ಬಿಟ್ಟು,ಆಪರೇಷನ್ ಬ್ಲ್ಯೂ ಸ್ಟಾರ್ ಮಾಡಿಸಿ ಸುಮಾರು 700ರಿಂದ 900 ಸೈನಿಕರು ಬಲಿಯಾದರು.

5)1987ರ ಶ್ರೀಲಂಕಾದ ಐಪಿಕೆಎಫ್ ಕಾರ್ಯಾಚರಣೆಯಲ್ಲಿ 1157 ಯೋಧರು ಹುತಾತ್ಮರಾದರು.

6)1999ರ ಕಾರ್ಗಿಲ್ ಕದನದಲ್ಲಿ 527 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂದು ಅಟಲ್ ಬಿಹಾರಿ ವಾಜಪೇಯಿಯವರು ಭಾರತದ
ಪ್ರಧಾನಿಯಾಗಿದ್ದರು. ಭಾರತ-ಪಾಕಿಸ್ತಾನದ ಸಂಭಂದ ಗಟ್ಟಿಯಾಗಲೆಂದು ಭಾರತದಿಂದ ಪಾಕಿಸ್ತಾನಕ್ಕೆ ಬಸ್ಸು ಬಿಟ್ಟಿದ್ದರು. ಆದರೆ ಪಾಕಿಸ್ತಾನ ತನ್ನ ಬುದ್ಧಿ
ತೋರಿಸಿ,ಬೆನ್ನಿಗೆ ಚೂರಿ ಹಾಕಿತ್ತು.ನಮ್ಮ ಬಂಕರುಗಳನ್ನೇ ವಶಪಡಿಸಿಕೊಂಡು ನಮ್ಮ ಮೇಲೆಯೇ ದಾಳಿಗೆ ಯೋಜನೆ ಹಾಕಿತ್ತು. ಕಾರ್ಗಿಲ್ ನ ನಮ್ಮ ಬಂಕರುಗಳನ್ನು ವಶಪಡಿಸಿಕೊಂಡು ನಮ್ಮ ಮೇಲೆಯೇ ಯುದ್ಧ ಸಾರಿತ್ತು. ಅಟಲ್ ಜೀ ಯವರ ನೇತೃತ್ವದಲ್ಲಿ ಯುದ್ಧ ಘೋಷಣೆಯಾಗಿ. ನಮ್ಮ ವೀರ ಕಲಿಗಳು ಹೋರಾಡಿ ಪುನಃ ನಮ್ಮ ಕಾರ್ಗಿಲ್ ನ್ನು ನಮಗೆ ತಂದು ಕೊಟ್ಟರು. ಆ ಯುದ್ಧದಲ್ಲಿ ಸುಮಾರು 527 ಸೈನಿಕರು ಹುತಾತ್ಮರಾಧರು.

ಜಗತ್ತಿನಲ್ಲಿ ಅತೀ ಹೆಚ್ಚು ಯೋಧ ವಿಧವೆಯರನ್ನು ಹೊಂದಿರುವ ದೇಶ ನಮ್ಮದು. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಯೋಧ ವಿಧವೆಯರ ಸಂಖ್ಯೆ 25,000. ಪ್ರಥಮ(1914-1918) ಹಾಗೂ ದ್ವಿತೀಯ(1939-1942) ಜಾಗತಿಕ ಮಹಾಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸಂಖ್ಯೆಯೂ ಸಾಕಷ್ಟಿದೆ. ಯೋಧರು ಕೇವಲ ಯುದ್ಧ ರಂಗದಲ್ಲಿ ಮಾತ್ರವಲ್ಲ , ದೇಶದ ವಿವಿಧೆಡೆ ಭೂಕಂಪ, ಚಂಡಮಾರುತ, ಸುನಾಮಿಯಂತಹ ನೈಸರ್ಗಿಕ ವಿಕೋಪಗಳು ಬಂದೊದಗಿದಾಗ ನೆರವಿಗಾಗುವರು ಯೋಧರೇ. ಅವರಂತೆ ಎಲ್ಲರೂ ಯೋಧರಾಗಲು ಸಾಧ್ಯವಾಗದಿರಬಹುದು. ಆದರೆ ಅವರಂತೆ ದೇಶಕ್ಕಾಗಿ ಬದುಕುವ ಪಾಠವನ್ನು ನಾವೆಲ್ಲ ಕಲಿತರೆ ಅದೇ ಈ ವೀರಯೋಧರಿಗೆ ನಾವು ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ನಮಗೆ ದೇಶಕ್ಕಾಗಿ ಸಾಯುವ ಪರಿಸ್ಥಿತಿ ಒದಗಿಲ್ಲ. ಸೈನಿಕರು ನಮ್ಮ ನಾಳೆಗಾಗಿ ಗಡಿಗಳನ್ನು ಕಾಯುತ್ತಿದ್ದಾರೆ. ನಾವು ದೇಶಕ್ಕಾಗಿ ಸಾಯುವದಂತೂ ಆಗಲ್ಲ ಅದರೆ ದೇಶಕ್ಕಾಗಿ ಬದುಕುವುದು ಆಗುತ್ತೆ ತಾನೇ?

“ಜೈ ಹಿಂದ್”

-ಶಿವಾಂಶ

Tags

Related Articles

Close