ಅಂಕಣಇತಿಹಾಸ

ಒಬ್ಬ ಸೈನಿಕನನ್ನುಳಿಸುವುದಕ್ಕೋಸ್ಕರ ಇಸ್ರೇಲ್ 1,027 ಪ್ಯಾಲೆಸ್ತೇನಿ ಕೈದಿಗಳನ್ನು ಯಾಕೆ ಬಿಡುಗಡೆ ಮಾಡಿತು ಗೊತ್ತೇ?

ಎಷ್ಟು ಜನ ತಮ್ಮ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೋ ನಾ ಕಾಣೆ… ಆದರೆ ಇಸ್ರೇಲ್‍ನಂತಹ ಪುಟ್ಟ ರಾಷ್ಟ್ರ ಆತಂಕವಾದಿಗಳ ಬೇಗೆಯಲ್ಲಿ ಬೆಂದರೂ ದೇಶಾಭಿಮಾನದ ಜ್ಯೋತಿಯಲ್ಲಿ ಮಿಂದೆದ್ದು, ಕಠಿಣ ಸವಾಲುಗಳನ್ನು ಎದುರಿಸುವಂತಹ ಜನತೆಯನ್ನು ನಾನೆಂದೂ ಕಂಡಿಲ್ಲ, ಕಾಣೋದು ಇಲ್ಲ!!

ರಾಷ್ಟ್ರಾಭಿಮಾನದ ಬುಗ್ಗೆಯಲ್ಲಿ ತನ್ನ ಅದ್ಭುತ ಸಾಮಥ್ರ್ಯ, ಅಚಲ ನಿರ್ಧಾರ ಮತ್ತು ಕಠಿಣ ಪರಿಶ್ರಮದಲ್ಲಿ ಇಸ್ರೇಲ್ ದೇಶವೇ ಹೆಸರುವಾಸಿ. ತನ್ನ ದೇಶಕ್ಕಾಗಿ ಪ್ರತಿಯೊಬ್ಬ ಪ್ರಜೆಯ ದೇಶಾಭಿಮಾನವನ್ನು ಕಂಡರೆ ಮೈನವಿರೇಳಿಸುವಂತಹದ್ದು. ತನ್ನ ರಾಷ್ಟ್ರ, ರಾಷ್ಟ್ರದ ಪ್ರಜೆಗಳನ್ನು ಕಾಪಾಡುವಲ್ಲಿ ಹೋರಾಡುವ ಮನಸ್ಸಿನ ಇಸ್ರೇಲ್ ದೇಶವನ್ನು ಎಷ್ಟು ಹೊಗಳಿದರೂ ಸಾಲದು.

ಹೌದು.. ಒಂದು ಪುಟ್ಟ ರಾಷ್ಟ್ರವಾಗಿರುವ ಇಸ್ರೇಲ್‍ಗೆ ಸುತ್ತಮುತ್ತಲು ಶತ್ರುರಾಷ್ಟ್ರಗಳ ಕಾಟ. ಶತ್ರುಗಳಿಂದ ದಿನದ 24 ಗಂಟೆಯಲ್ಲಿ ಬರುವ ಬೆದರಿಕೆಯ ಕರೆಗಳಿಂದ, ಬಾಂಬ್ ಹಾಗೂ ಇನ್ನಿತರ ಆಕ್ರಮಣಕಾರಿ ದಾಳಿ ಸುಮಾರು 100 ವರುಷಗಳಿಂದ ನಡೆಯುತ್ತಿದ್ದರೂ ಕೂಡ ಇಲ್ಲಿನ ಪ್ರಜೆಗಳು ಭಯಭೀತರಾಗದೇ ತಮ್ಮ ವಿಶ್ವಾಸ ಹಾಗೂ ರಾಷ್ಟ್ರೀಯ ಮೌಲ್ಯತೆಯನ್ನು ಕಳೆದುಕೊಳ್ಳದೇ ನಿರ್ಭೀತರಾಗಿ ಇರುವಂತಹ ದೇಶ.

ಹೌದು ಇಸ್ರೇಲ್ ಜನತೆಯ ಧೈರ್ಯವನ್ನು ನಾವು ಮೆಚ್ಚಲೇಬೇಕು. ಯಾಕಂದರೆ ದೇಶದ ರಕ್ಷಣೆಗೋಸ್ಕರ ಗಂಡು-ಹೆಣ್ಣೆಂಬ ಬೇಧವಿಲ್ಲದೇ ಹೋರಾಡುವ ಮನಸ್ಥಿತಿ ಬೇರೆಲ್ಲೂ ಕಾಣ ಸಿಗೋದಿಲ್ಲ. ಇಲ್ಲಿ ಪ್ರತಿಯೊಬ್ಬರು ದೇಶಕ್ಕೋಸ್ಕರ ಕೊನೆಪಕ್ಷ 2 ವರ್ಷವಾದರೂ ಕಡ್ಡಾಯವಾಗಿ ಸೇವೆ ಸಲ್ಲಿಸಲೇಬೇಕು ಎಂಬುವುದು ಕಳೆದ ಎರಡು ದಶಕಗಳಿಂದಲೂ ಚಾಲ್ತಿಯಲ್ಲಿರುವ ಕ್ರಮವಾಗಿದೆ. ರಾಷ್ಟ್ರಕ್ಕೆ ಯಾರಾದರೂ ಮುತ್ತಿಗೆ ಹಾಕಿದರೆ ಅಥವಾ ಯಾವುದೇ ಒಬ್ಬ ಸೈನಿಕನಿಗೆ ನೋವಾದರೆ ಈಡೀ ದೇಶವೇ ನೊಂದ ಜೀವಗಳಿಗೆ ಆಸರೆಯಾಗಲು ಮುಂದೆ ಬರುತ್ತೆ. ಇಲ್ಲಿ ಗಂಡು ಹೆಣ್ಣೆಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಒಂದೇ ಕಾನೂನು. ದೇಶವೆಂದರೆ ಪ್ರಾಣೆಂದು ತಿಳಿದಿರುವ ಜನತೆಗೆ ದೇಶಕೋಸ್ಕರ ದೇಶ ಸೇವೆ ಮಾಡೋದೆ ಇಲ್ಲಿನ ನಿಯಮ. ಆಹಾ……! ಎಂತಹ ದೇಶ ಪ್ರೇಮ? ಒಂದು ಸಲ ಮೈ ಜುಮ್ಎನ್ನುತ್ತೇ ಅಲ್ವೇ?.

ದೇಶದ ಬಗ್ಗೆ ದೇಶವನ್ನು ಕಾಪಾಡಿಕೊಳ್ಳುವ ದೇಶದ ಪ್ರಜೆಗಳು ಎಷ್ಟು ಪ್ರಯತ್ನ ಪಡುತ್ತಾರೋ ಅವರ ಬಗ್ಗೆ ಅಷ್ಟೇ ಕಾಳಜಿಯನ್ನು ವಹಿಸುತ್ತೆ ಇಸ್ರೇಲ್ ಸರಕಾರ. ಯಾವಾಗ ಇಲ್ಲಿನ ಪ್ರಜೆಗಳು ಸಂದಿಗ್ಧ ಪರಿಸ್ಥಿಯನ್ನು ಎದುರಿಸಿದರೆ ಅಥವಾ ಇಡೀ ಇಸ್ರೇಲ್ ಜನತೆ ಯುನೈಟೆಡ್ ನೇಶನ್‍ನನ್ನು ಎದುರು ಹಾಕಿದರೂ ಕೂಡ ಇಸ್ರೇಲ್ ಸರಕಾರ ತನ್ನ ಜನತೆಯ ಪರ ನಿಲ್ಲುತ್ತೆ. ಹೌದು ಜಗತ್ತಿನ ಯಾವ ದೇಶದ ಸರಕಾರ ಮಾಡದ ಸಾಧನೆಯನ್ನು ಇಸ್ರೇಲ್ ಮಾಡುತ್ತೆ ಅಂದರೆ ನಾವು ನಿಜವಾಗಲೂ ಮೆಚ್ಚಲೇ ಬೇಕಾದಂತಹ ಸಂಗತಿ. ತನ್ನ ದೇಶದ ಪ್ರತಿಯೊಬ್ಬ ಪ್ರಜೆಗಳಿಗೂ ನೆರವಿನ ಹಸ್ತವನ್ನು ನೀಡುವ ಇಸ್ರೇಲ್ ಸರಕಾರ ಈಡೀ ವಿಶ್ವವೇ ಮೂಕಸ್ತಬ್ಥರನ್ನಾಗಿ ಮಾಡಿದ ಘಟನೆ ನಡೆದಿದೆ. ಒಬ್ಬ ಸಾಮಾನ್ಯ ಸೈನಿಕನ ನೆರವಿಗೆ ನಿಂತ ಸರಕಾರ ತನ್ನ ದೇಶದ ಪ್ರಜೆಗೋಸ್ಕರ ಏನು ಮಾಡಿದೆ ಗೊತ್ತೇ?…

ಇಸ್ರೇಲ್ ಸರಕಾರ ತನ್ನ ಒಬ್ಬ ಸೈನಿಕನಿಗಾಗಿ 1027 ಖೈದಿಗಳನ್ನು ಬಿಡುಗಡೆ ಮಾಡಿತು!!!

ಹೌದು… ಅಂದು 2006ರ ಜೂನ್ 25ರ ಬೆಳಗ್ಗೆ 5.30ರ ಸುಮಾರಿಗೆ ಪಾಲೆಸ್ತೇನಿಯ ಸೈನ್ಯ ಗಾಜಾ ಪಟ್ಟಿಯಿಂದ ಇಸ್ರೇಲ್ ಸೀಮೆಯನ್ನು ದಾಟಿ, ಸುಮಾರು 300 ಮೀಟರ್ ಉದ್ದದ ಭೂಗತ ಸುರಂಗ ಮಾರ್ಗವನ್ನು ಕೆರೆಮ್ ಶಾಲೊಮ್‍ನ ಗಡಿಯವರೆಗೆ ಅಗೆದು, ಇಸ್ರೇಲ್‍ನ ಗಡಿ ಭದ್ರತಾ ಪಡೆಯ ಮೇಲೆ ದಾಳಿ ಮಾಡಿತು. ಪಾಲೆಸ್ತೇನಿಯರು ಇಸ್ರೇಲ್‍ನ ಟ್ಯಾಂಕರ್ಸ್, ಬಂಕರ್‍ಗಳನ್ನು ಸ್ಫೋಟಿಸಿ ನಾಶ ಮಾಡಿದ್ದಲ್ಲದೇ ಕೆಲ ಇಸ್ರೇಲ್ ಸೈನಿಕರ ಮೇಲೆ ದಾಳಿ ನಡೆಯಿತು. ದಾಳಿಯಲ್ಲಿ ಕೆಲ ಸೈನಿಕರು ಗಾಯಗೊಂಡಿದ್ದಲ್ಲದೇ ಇನ್ನೂ ಕೆಲವರು ದಾರುಣವಾಗಿ ಸಾವನ್ನಪ್ಪಿದ್ದರು. ಆದರೆ ಈ ಒಂದು ಘಟನೆಯಲ್ಲಿ ಇಸ್ರೇಲ್‍ನ ಒಬ್ಬ ಸೈನಿಕನನ್ನು ಪಾಲೆಸ್ತೇನಿಯರು ಅಪಹರಿಸಿ ಗಾಜಾ ಪಟ್ಟಿಗೆ ಕರೆತಂದರು.

ಈ ಘಟನೆಯ ಸ್ಥಳಕ್ಕೆ ಧಾವಿಸಿದ ಇಸ್ರೇಲ್‍ನ ಪಡೆಗಳು ಗಾಯಗೊಂಡ ಸೋದರರಿಗೆ ಆರೈಕೆ ಮಾಡಲು ಪ್ರಾರಂಭಿಸಿದರು. ಘಟನೆಯಲ್ಲಿ ಸಾವನ್ನಪ್ಪಿದ್ದ ಇಬ್ಬರು ಸೈನಿಕರನ್ನು ಬಿಟ್ಟರೆ ಮತ್ತೆಲ್ಲ ಗಾಯಗೊಂಡಿದ್ದಾರೆ ಎಂದು ತಿಳಿದ ಸೇನಾಪಡೆಗಳು 4ನೇ ಸಿಬ್ಬಂದಿ ಕಾಣೆಯಾಗಿರುವ ವಿಷಯ ಗೊತ್ತಾಯಿತು. ಆತನೇ ಗಿಲಡ್ ಶಾಲಿಟ್. 1994ರಲ್ಲಿ ಅಪಹರಿಸಿ ಕೊಲೆಗೈಯಾಲಾದ ನಚ್ಶಾನ್ ವಾಚ್ಸ್ನನ್ ಬಿಟ್ಟರೆ ಇಸ್ರೇಲ್‍ನ ಇತಿಹಾಸದಲ್ಲಿ ಮತ್ತೆ 12 ವರ್ಷದ ಬಳಿಕ ಗಿಲಡ್ ಶಾಲಿಟ್‍ನ್ನು ಅಪರಿಸಿದ ಪ್ರಕರಣ ನಡೆದಿದೆ.

ವಿಷಯ ತಿಳಿದ ತಕ್ಷಣದಲ್ಲಿಯೇ ಇಸ್ರೇಲ್‍ನ ಸೇನಾ ಪಡೆ ಗಾಜಾ ಪಟ್ಟಿಗೆ ಬಂದು ಗಿಲಡ್ ಶಾಲಿಟ್‍ನನ್ನು ಹುಡುಕಾಟ ಆರಂಭಿಸಿದರು. ಆದರೆ ಆ ಹೊತ್ತಿಗೆ ಗಿಲಡ್ ಶಾಲಿಟ್‍ನನ್ನು ಪಾಲೇಸ್ತೇನಿಯ ಪಡೆ ನಿಗೂಢವಾದ ಜಾಗದಲ್ಲಿ ಇರಿಸಿದ್ದರು. ಈ ಸ್ಥಳಕ್ಕೆ ಅಂತರಾಷ್ಟ್ರೀಯ ರೆಡ್‍ಕ್ರಾಸ್ ತಂಡವನ್ನು ಕೂಡ ಪ್ರವೇಶ ಮಾಡಲು ನಿಷೇಧವಿರಿಸಿತ್ತು. ಆದರೆ ಇಸ್ರೇಲ್ ಸರಕಾರಕ್ಕೆ  ಶಾಲಿಟ್ ಬದುಕಿದ್ದಾನೋ ಅಥವಾ ಸತ್ತಿದ್ದನೋ ಎನ್ನುವುದರ ಮಾಹಿತಿಯೂ ಸಿಕ್ಕಿರದ ಸಂದರ್ಭದಲ್ಲಿ ಆಡಿಯೋ ಟೇಪ್, ವಿಡಿಯೋ ರೆಕಾರ್ಡಿಂಗ್ ಹಾಗೂ ಮೂರು ಪತ್ರ ಸಂದೇಶದಿಂದ ಈತನ ಬದುಕಿದ್ದಾನೆ ಎಂಬಮಾಹಿತಿ ಹೊರಬಿತ್ತು.

ಆ ಕೂಡಲೇ ಇಸ್ರೇಲ್ ರಾಷ್ಟ್ರ ತನ್ನೆಲ್ಲಾ ಸೈನಿಕರನ್ನು ಒಗ್ಗೂಡಿಸಿ ಕಾರ್ಯಾಚರಣೆ ಮಾಡಿತಾದರೂ ಸಫಲತೆ ಕಾಣಲಿಲ್ಲ. ತನ್ನ ಸೈನಿಕನನ್ನು ಉಳಿಸಿಕೊಳ್ಳಲು ಸಲುವಾಗಿ ಕಠಿಣವಾಗಿ ಪಣತೊಟ್ಟ ಸರಕಾರ 4 ವಿಮಾನ ನೌಕೆಯನ್ನು ಕಳುಹಿಸಿ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದು ಮಾತ್ರವಲ್ಲದೇ ಯುನೈಟೆಡ್ ನೇಶನ್‍ನ್ನು ಭೇಟಿ ಮಾಡಿ ಸಹಾಯ ಬೇಡಿತಾದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.

ಗಿಲಡ್ ಶಾಲಿಟ್ ಬಂಧನವಾಗಿ ಮೂರು ವರ್ಷ ಕಳೆಯಿತು, ಇಸ್ರೇಲ್ ತನ್ನ ದೇಶದ ಸೈನಿಕನ್ನು ಕರೆತರವಲ್ಲಿ ಸತತ ಪ್ರಯತ್ನ ಮಾಡುತ್ತಲೇ ಇತ್ತು.  ಆ ಸಂದರ್ಭದಲ್ಲಿ ಇಸ್ರೇಲ್‍ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದವರೇ ಬೆಂಜಮಿನ್ ನತನ್ಯಾಹು. ಪ್ರಬಲ ಹಾಗೂ ಉತ್ತಮ ಕ್ರಮ ಕೈಗೊಳ್ಳುವಲ್ಲಿ ಪ್ರಭಾವಿತರಾಗಿದ್ದಲ್ಲದೇ ಬಹಳ ಪ್ರಸಿದ್ಧಿಯನ್ನು ಪಡೆದವರೂ ನತನ್ಯಾಹು. ಬೆಂಜಮಿನ್ ನತನ್ಯಾಹು ಗಿಲಡ್ ಶಾಲಿಟ್ ಬಂಧನ ವಿರುದ್ಧವಾಗಿ ಕಡೆಯ ಎಚ್ಚರಿಕೆ ನೀಡಿದರು. ಕೊನೆಗೂ ಈ ವೇಳೆ ಶಾಲಿಟ್‍ನ ಬದಲಾಗಿ 1000 ಪಾಲೇಸ್ತೇನಿಯನ್ ಖೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸುವುದರೊಂದಿಗೆ ಹಮಾಸ್ ಲೀಡರ್‍ಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹೇಳಿದರು.

ಆದರೆ ನೆತನ್ಯಾಹು ಕೊನೆಗೂ ಹಮಾಸ್ ಲೀಡರ್‍ಗಳ ಪೈಕಿ ಒಬ್ಬಾತನಾದ ಅಹ್ಮದ್ ಜಬಾರಿಯ ಜೊತೆ 1027ಜನ ಖೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಯಿತು. ಇದಕ್ಕೊಪ್ಪಿದ ಪಾಲೇಸ್ತೇನಿಯರು “ಗಿಲಡ್ ಶಾಲಿಟ್ ಖೈದಿಗಳ ವಿನಿಮಯ ಒಪ್ಪಂದ” ಎನ್ನುವ  ಒಪ್ಪಂದವನ್ನು ಇಸ್ರೇಲ್ ಜೊತೆ ಮಾಡಿತು.

ತದನಂತರದಲ್ಲಿ 1027 ಮಂದಿ ಖೈದಿಗಳನ್ನು ಇಸ್ರೇಲ್ 2011ರ ಒಕ್ಟೋಬರ್ 18 ರಂದು ಬಿಡುಗಡೆಗೊಳಿಸಿದ್ದಲ್ಲದೇ ಗಿಲಡ್ ಶಾಲಿಟ್‍ನನ್ನು ತಮ್ಮ ದೇಶಕ್ಕಾಗಿ ಕರೆತರುವ ಸಂಭ್ರಮ ಎಲ್ಲೆಡೆ ಹಬ್ಬಿತ್ತು. ಗಿಲಡ್ ಶಾಲಿಟ್‍ನನ್ನು ಸ್ವಾಗತಿಸಲು ಸ್ವತಃ ಇಸ್ರೇಲ್ ಪ್ರಧಾನಿ ತೆರಳಿದ್ದರು, ಅಲ್ಲದೇ ತನ್ನ ದೇಶದ ಸೈನಿಕನನ್ನು ಕಂಡೊಡಣೆ ಆನಂದಭಾಷ್ಪವನ್ನು ಮಿಡಿದರು ಅಲ್ಲಿನ ಪ್ರಧಾನಿ.<

1027 ಮಂದಿ ಖೈದಿಗಳನ್ನು ಬಿಡುಗಡೆ ಮಾಡಿರುವುದರ ವಿರುದ್ಧ ತೀವ್ರ ಪ್ರತಿಕ್ರಿಯೆಗಳು ಬಂದರೂ ಕೂಡ ಒಬ್ಬ ಸೈನಿಕನ ರಕ್ಷಣೆ ಮಾಡುವುದು ಹೆಮ್ಮೆಯ ವಿಚಾರ. ಒಬ್ಬ ಸಾಮಾನ್ಯ ಸೈನಿಕನ ನೆರವಿಗೆ ಬಂದ ಸರಕಾರದ ಮೇಲೆ ಪ್ರತಿಯೊಬ್ಬ ಸೈನಿಕನಿಗೂ, ಪ್ರತಿಯೊಬ್ಬ ಪ್ರಜೆಗಳಿಗೆ ತಮ್ಮ ಆತ್ಮವಿಶ್ವಾಸ ಇಮ್ಮಡಿಯಾಯಿತೇ ಹೊರತು, ಸದಾ ಶತ್ರು ಭಯದಿಂದಲೇ ಇರುವ ಇಸ್ರೇಲ್ ಜನತೆ ಯಾವತ್ತೂ ಓಡಿ ಹೋಗಲು ಪ್ರಯತ್ನಿಸಲಿಲ್ಲ.

ಇಸ್ರೇಲ್‍ನ ಈ ಒಂದು ಸನ್ನಿವೇಶ ಹೇಳುತ್ತೆ ಯಾವ ರೀತಿ ಇಸ್ರೇಲ್ ತನ್ನ ಜನತೆಯನ್ನು ಸದಾ ಕಾಪಾಡಿಕೊಳ್ಳುತ್ತೆ ಎಂದು. ಒಬ್ಬ ಸಾಮಾನ್ಯ ಸೈನಿಕನ ಬೆಂಬಲಕ್ಕೆ ಈಡೀ ಇಸ್ರೇಲ್ ಸರಕಾರ ನಿಂತಿದೆ ಎಂದರೆ ತನ್ನ ದೇಶಕ್ಕಾಗಿ, ದೇಶದ ಪ್ರಜೆಯನ್ನು ಯಾವ ಮಟ್ಟಿಗೆ ಇರಿಸಿಕೊಂಡಿದೆ ಎಂಬುವುದಕ್ಕೆ ಈ ಒಂದು ಸನ್ನಿವೇಶವೇ ಸಾಕ್ಷಿ. ಇಂತಹ ದೇಶದಲ್ಲಿ ದೇಶ ಪ್ರೇಮಿಗಳೊಂದು ದೇಶಕ್ಕಾಗಿ ಮಿಡಿಯುವ ಪ್ರತಿಯೊಬ್ಬ ಸೈನಿಕನ ಪರ, ಈಡೀ ಇಸ್ರೇಲ್ ನಿಲ್ಲುತ್ತೆ ಎಂದರೆ ಇಲ್ಲಿ ಹುಟ್ಟಿರುವ ಪ್ರಜೆಗಳು ನಿಜಕ್ಕೂ ಗ್ರೇಟ್.

-ಸರಿತಾ**

Tags

Related Articles

Close