ಅಂಕಣ

ಕಠಿಣ ಪರಿಶ್ರಮ ಪಡುವ ಪ್ರಧಾನ ಮಂತ್ರಿಯೊಬ್ಬರು ಅತ್ಯಂತ ದ್ವೇಷಿಸಲ್ಪಟ್ಟ ಪ್ರಧಾನ ಮಂತ್ರಿಯೂ ಆಗಿದ್ಯಾಕೆ?!

ಮೋದಿಯನ್ನು ದ್ವೇಷಿಸುವುದಕ್ಕೆ ಬಲವಾದ ಕಾರಣಗಳೇನೂ ಬೇಕಿಲ್ಲವೆನ್ನುವುದು ನಿಜವಾದರೂ ಸಹ, ಕೆಲವೊಂದಿಷ್ಟು ನೇರ ನಡೆಗಳಿಂದ, ಸಿದ್ದಾಂತಗಳಿಂದ ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರ ಹಾಟ್ ಫೇವರಿಟ್ ಶತ್ರುವಾಗಿಬಿಟ್ಟರು ಮೋದಿ!

ಬಿಜೆಪಿಯ ಯಾವ ರಾಜಕಾರಣಿಯನ್ನೂ ಇಷ್ಟು ದ್ವೇಷಿಸಿಲ್ಲದ ಕಾಂಗಿಗಳು ಹಾಗೂ ಕುಮ್ಮಿಗಳ ನಿಗೂಢಗಳು ಮೋದಿಯ ಕೈಗೆ ಸಿಕ್ಕು ಬಯಲಾಗಲು ಪ್ರಾರಂಭವಾಯಿತು ನೋಡಿ! ಅವತ್ತಿನಿಂದಲೇ ಸ್ಪಷ್ಠವಾಗಿತ್ತು!

ಸ್ವಚ್ಛ ಭಾರತ್ ಬರೀ ಬೀದಿಯ ಕಸಗಳಿಗೆ ಮಾತ್ರವಲ್ಲ, ಬದಲಾಗಿ ಎಲ್ಲಾ ರೀತಿಯಾಗಿಯೂ ಎಂದು! ಕಾಂಗ್ರೆಸ್ ಮುಕ್ತ ಭಾರತಕ್ಕೆ ಪೊರಕೆ ಹಿಡಿದೇ ಅಭಿಯಾನ ಶುರು ಮಾಡಿದ್ದ ಮೋದಿಗೆ ಇಡೀ ದೇಶವೇ ಬೆಂಬಲಿಸಿದಾಗ ಕಾಂಗ್ರೆಸ್ಸಿಗರ ನಿದ್ದೆಯಿಲ್ಲದ ರಾತ್ರಿಗಳು ಶುರುವಾದರೆ, ಕಮ್ಯುನಿಸ್ಟರ ಭಂಢ ಧೈರ್ಯವೊಂದು
ಕಡಿಮೆಯಾಗತೊಡಗಿತಷ್ಟೇ!!!

ಕಾಂಗಿಗಳ ಹಾಗು ಕಮ್ಯುನಿಷ್ಟರ ದ್ವೇಷದ ಹಿಂದಿನ ಕಾರಣಗಳೇನು ಗೊತ್ತಾ?!

1. 1993 ರ ದಾವೆಗೆ ಕೊನೆಗೂ ಅಂತ್ಯ ಹಾಡಿ ಅಬು ಸಲೇಮ್ ಜೈಲು ಸೇರಿದ!

2. ತಮಿಳುನಾಡಿನ ತಾಟಕಿ ಶಶಿಕಲಾಗೆ ಜೈಲೇ ಮನೆಯಾಯಿತು!

3.2002 ರಲ್ಲಿಯೇ ಜೈಲು ಪಾಲಾಗಬೇಕಿದ್ದ ರಾಮ್ ರಹೀಮ್ ಕಣ್ಣೀರಿಡುತ್ತಾ ಜೈಲು ಪಾಲಾದ! ಅತ್ಯಾಚಾರಕ್ಕೊಳಗಾದ ಸಾಧ್ವಿಗಳಿಗೆ ನೆಮ್ಮದಿ ಸಿಕ್ಕಿತ್ತು!

4. ತೆರಿಗೆ ಅಧಿಕಾರಿಗಳಿಗೆ ಕಪ್ಪು ಹಣದ ಮಾಹಿತಿ ಸಿಕ್ಕಿದ್ದರೂ ಹಣಕಾಸು ಸಚಿವರಾದ ಚಿದಂಬರಮ್ ನ ಚಾಣಾಕ್ಷತನದಲ್ಲಿ ಕೈ ಕಟ್ಟಿ ಕುಳಿತಿದ್ದರು! ಮೋದಿಯ ನೋಟು ನಿಷೇಧದಲ್ಲಿ 99% ಬಿಳಿ ಹಣ ವಾಪಾಸು ಬಂದರೂ, ಅಷ್ಟೇ ಶೇಕಡವಿದ್ದ ಕಪ್ಪು ಹಣ ವಾಪಾಸು ಬರದಿದ್ದರೂ ‘ಕಸದ ಬುಟ್ಟಿ’ ಸೇರಿತ್ತು!

ಅಲ್ಲದೇ, ಚೀಲ ಚೀಲಗಳಲಿ ದೊರೆತ ಹಣವೆಲ್ಲ ಉಗ್ರ ಸಂಘಟನೆಗಳು ಮುದ್ರಿಸಿದ ಹಣ ಎಂಬುದು ಅರಿವಾಯಿತು! ಆದರೆ, ಅವೆಲ್ಲ ಬೆಲೆ ಇರದ ಹಾಳೆಗಳಾಗಿದ್ದವು! ಪಾಪ! ಕಾಂಗಿಗಳ ಹಾಗೂ ಉಗ್ರರ ಶ್ರಮ ವ್ಯರ್ಥವಾಗಿ ಹೋಯ್ತು!

5.ಉತ್ತರ ದಕ್ಷಿಣಾದ್ಯಂತ ನಗುತ್ತಿದ್ದ ಭ್ರಷ್ಟಾಚಾರನೆಂಬ ಗುಮ್ಮ ಅಳಲು ಶುರು ಮಾಡಿತು!

6. ಪ್ರತಿ ಭಾರತೀಯನ ಜಾತಕವೂ ಸಹ ಆಧಾರ್ ನಲ್ಲೇ ಅಡಕವಾಯಿತು! ಪ್ರತಿ ಕೆಲಸಕ್ಕೂ ಆಧಾರ್ ಗತಿಯಾಯ್ತು!

7. ಹತ್ತು ಲಕ್ಷವಷ್ಟಿದ್ದ ನಕಲಿ ಪಡಿತರ ಚೀಟಿ ಹೇಳ ಹೆಸರಿಲ್ಲದಂತೆ ನಿಷೇಧವಾಯಿತು!

8. ಒಂದು ಲಕ್ಷದಷ್ಟು ಅನಿಲ ಸಿಲಿಂಡರ್ಸ್ ಅಕ್ರಮವಾಗಿದ್ದದ್ದು ಬಟಾಬಯಲಾಗಿ ಮೋದಿ ಸರಕಾರಕೆ ಶರಣಾಯಿತು!

9. ಇಸ್ಲಾಂ ಸಮುದಾಯದ ಬಹುದೊಡ್ಡ ಅನಿಷ್ಟವಾದ ‘ತ್ರಿವಳಿ ತಲಾಕ್’ ಸಂಪೂರ್ಣವಾಗಿ ನಿಷೇಧವಾಯಿತು!

10. ನಲವತ್ತೈದು ಹೊಸ ತೆರಿಗೆಗಳು ಮೌಲ್ಯಮಾಪನಗೊಂಡವು!

11. ಭಾರತ ಮತ್ತು ಅಮೇರಿಕಾದ ಸಂಬಂಧವು ಇನ್ನಷ್ಟು ಗಟ್ಟಿಯಾಗಿದ್ದಲ್ಲದೇ, ಬ್ರಿಕ್ಸ್ ಸಮಿತಿಯಲ್ಲಿ ಪಾಕಿಸ್ಥಾನಕ್ಕೆ ಸಿಕ್ಕ ಪಟ್ಟ ‘ಭಯೋತ್ಪಾದಕ ದೇಶ’!

12. ಮಾರಾಟ ತೆರಿಗೆ ದೇಶದ ಬೊಕ್ಕಸಕ್ಕೆ ನೀಡುತ್ತಿದ್ದ ಹೊಡೆತವೊಂದು ಏಕರೂಪ ತೆರಿಗೆಯಿಂದ ಕಡಿಮೆಯಾಗಿದ್ದಲ್ಲದೇ, ದೇಶದ ಬೊಕ್ಕಸದ ಮೊತ್ತವೂ
ಹೆಚ್ಚಾಯಿತು!

13. ಎನ್ ಐ ಎ ದಾಳಿಯಿಂದ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಳಸುತ್ತಿದ್ದ ಅನುದಾನದ ಮಾರ್ಗವೆಲ್ಲ ಮುಚ್ಚಿ, ಪ್ರತ್ಯೇಕತಾವಾದಿಗಳು ಜೈಲಿನಲ್ಲಿ ಪಾಕಿಸ್ಥಾನದಿಂದ ಪ್ರತ್ಯೇಕಗೊಂಡು ಇರುವಂತಾಯ್ತು!

14. ಕ್ರೈಸ್ತ ಮಿಷನರಿಗಳ ಕಪ್ಪು ಹಣ ಶುದ್ಧೀಕರಣ (Money laundering) ಸ್ಥಗಿತಗೊಂಡು ಕ್ರೈಸ್ತ ಮಿಷನರಿಗಳು ಶಿಲುಬೆ ಹಿಡಿಯುವಂತಾಯ್ತು!

15. ಶೇಕಡ 70% ಭಾರತ ಕೇಸರೀಕರಣವಾದದ್ದಲ್ಲದೇ ನಿರ್ಧಾರಗಳಲಿ ಸಿದ್ಧಾಂತಗಳಲಿ ಭಾರತದ ಹಿತವನ್ನಷ್ಟೇ ಯೋಚಿಸುವ ಮಟ್ಟಕ್ಕೆ ಭಾರತ
ಮುಂದುವರೆಯುತ್ತಿರುವುದು!

16. ಕಪ್ಪು ಹಣವನ್ನೆಲ್ಲ ಬಿಳಿ ಹಣ ಮಾಡುತ್ತಿದ್ದ 30 ಲಕ್ಷಕ್ಕೂ ಹೆಚ್ಚು ಎನ್ ಜಿಓ ಗಳ ಮೇಲಿನ ದಾಳಿ ಭ್ರಷ್ಟಾಚಾರವನ್ನು ಮಕಾಡೆ ಮಲಗಿಸಿತು!

17.ಎಮ್ ಇಎ ಅದೆಷ್ಟೋ ಮುಸಲ್ಮಾನ ರಾಷ್ಟ್ರಗಳಿಂದ ಭಾರತೀಯ ನಿರಾಶ್ರಿತರನ್ನು ಮರಳಿ ಮಾತೃ ಭೂಮಿಗೆ ಬರಲು ಅವಕಾಶ ಕಲ್ಪಿಸಿತು!

18. ಯುದ್ಧದ ಅಮಲಿನಲ್ಲಿದ್ದ ಚೀನಾಕೆ ತಿರುಗೇಟು ಕೊಟ್ಟಿದ್ದೂ ಅಲ್ಲದೇ, ಬಾಲ ಮುದುರಿ ಹಿಂದೆ ಕಳಿಸುವಂತೆ ಮಾಡಿತು!

19. ಮಾಯ್ನ್ಮಾರಿನ ಮುಸಲ್ಮಾನ ನಿರಾಶ್ರಿರನ್ನು ತಡೆ ಹಿಡಿಯಿತು!

20. NEET ಪರೀಕ್ಷೆಯ ಹಿಂದಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಲ್ಲದೇ, ವೈದ್ಯಕೀಯ ಸೀಟುಗಳನ್ನು ನ್ಯಾಯವಾಗಿ ವಿದ್ಯಾರ್ಥಿಗಳಿಗೆ ದಕ್ಕುವಂತೆ ಮಾಡಿತು!
ಮ್ಯಾನೇಜ್ ಮೆಂಟ್ ಕೋಟಾವೊಂದು ಸರಕಾರೀ ಕೋಟವಾಗಿಯೇ ಉಳಿಯಿತು!

21. ಗೋವು ಸಾಗಾಣಿಕೆಯ ಅತಿ ದೊಡ್ಡ ಅನಿಷ್ಟವೊಂದು ಕೊನೆಗೂ ಅಂತ್ಯ ಕಂಡಿತು!

22. 2ಜಿ, ನ್ಯಾಷನಲ್ ಹೆರಾಲ್ಡ್ ಮತ್ತು ಸುನಂದಾ ಹತ್ಯೆಯ ಹಗರಣಗಳು ಅಂತ್ಯ ಕಾಣುವತ್ತ ಹೆಜ್ಜೆ ಹಾಕಿತು!

23. ರಕ್ಷಣಾ ಪಡೆಯೂ ಸಹ ಇಸ್ರೇಲ್ ಹಾಗೂ ಅಮೇರಿಕಾದಿಂದ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳ ಜೊತೆ ಬಲವಾಗಿ ಬೇರೂರಿತು!

24. ಇಡೀ ಜಗತ್ತೇ ಒಮ್ಮೆ ಭಾರತದ ಕಡೆಗೆ ನೋಡುವಂತೆ ಮಾಡಿತು!

25. ಪಾಕಿಸ್ಥಾನ ಹಾಗೂ ಚೀನಾದ ವಿಚಾರವಾಗಿ ಇಸ್ರೇಲ್ ಹಾಗೂ ಅಮೇರಿಕಾ ಭಾರತಕ್ಕೆ ಜೊತೆಯಾಗಿ ನಿಂತಿತು!

26. ಮಾಲೇಗಾಂವ್ ಸ್ಫೋಟದಲ್ಲಿ ಅನ್ಯಾಯವಾಗಿ ಕಾಂಗಿಗಳ ಕುತಂತ್ರದಿಂದ ಜೈಲು ಸೇರಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಹಾಗೂ ಪುರೋಹಿತ್ ಗೆ ಜಾಮೀನು ಸಿಕ್ಕಿತು!

ಮೋದಿಯ ಈ ಮೂರು ವರ್ಷಗಳ ಸಾಧನೆ ಏನು ಎಂದು ಕೇಳುವವರಿಗೆ ಇದಕಿಂತ ಬೇರೆ ಉದಾಹರೆಗಳಾಗಲಿ ಸಾಧನೆಗಳ ಅವಶ್ಯಕತೆಯೂ ಇಲ್ಲ ಎಂದೆನಿಸುತ್ತದೆ! ನೀವು ಕೇಸರೀಕರಣ ಎನ್ನಿರಿ ಅಥವಾ ಕೇಸರೀ ಭಯೋತ್ಪಾದನೆ ಎನ್ನಿರಿ! ಹಿಂದೂಸ್ಥಾನದ ಕೇಸರೀಕರಣ ಒಂದು ಶುದ್ಧೀಕರಣವೆಂದೇ ಭಾವಿಸಬಹುದು! ದೇಶದ ಹಿತಕ್ಕೆ, ಹಿಂದುತ್ವದ ಉಳಿವಿಗೆ ಶ್ರಮಿಸುತ್ತಿರುವ ಮೋದಿಯ ಸರಕಾರದ ಸಾಧನೆಗಳು ಮುಂಬರುವ ದಿನಗಳಲಿ ಅರಿವಿಗೆ ಬರುತ್ತದೆ!

ಇಷ್ಟು ದಿನವೂ ಕಾಂಗ್ರೆಸ್ ಪಕ್ಷದ ಬಲದಿಂದ ಹಾರಾಡುತ್ತಿದ್ದವರೆಲ್ಲ ಹಲ್ಲು ಕಿತ್ತ ಹಾವಿನಂತೆ ಬೀಳಲು ಹೆಚ್ಚು ದಿನವಿಲ್ಲ!

– ಪೃಥ

Tags

Related Articles

Close