ದೇಶ

ಮೋದಿಯವರ “ಟಾರ್ಗೆಟ್ ಚೀನಾ” ಕ್ಕೆ ದೊರೆಯಿತು ಅಗ್ನಿ ಬಲ!! ಸಂಪೂರ್ಣ ಸ್ವದೇಶೀ ನಿರ್ಮಿತ ಅಗ್ನಿ 5 ಉಡಾವಣೆ ಸಫಲ!! ಡಿ.ಆರ್.ಡಿ ಒ ಸಾಧನೆಗೆ ದಂಗಾದ ವಿಶ್ವ!!

ಭಾರತದ ಅಂತರಿಕ್ಷದ ಬಾಹುಬಲಿ ಇಸ್ರೋ ಆದರೆ, ರಕ್ಷಣಾ ವ್ಯವಸ್ತೆಯ ಬಾಹುಬಲಿ ಡಿ.ಆರ್.ಡಿ.ಒ. 1958 ರಲ್ಲಿ ಸ್ಥಾಪನೆಯಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ಭಾರತದ ರಕ್ಷಣಾ ಸಚಿವಾಲಯದ ಸುಪರ್ದಿಯಲ್ಲಿ ಕೆಲಸ ಮಾಡುತ್ತದೆ. ದೇಶದ ರಕ್ಷಣಾ ವ್ಯವಸ್ಥೆಗೆ ಬೇಕಾದ ಉಪಕರಣ, ಯುದ್ದ ವಿಮಾನ, ತಂತ್ರಜ್ಞಾನ, ಆಧುನಿಕ ಶಸ್ತ್ರಾಸ್ತಗಳು ಮತ್ತು ಕ್ಷಿಪಣಿಗಳನ್ನು ಭಾರತದಲ್ಲೆ ತಯಾರಿಸುವ ಸಲುವಾಗಿ ಡಿ.ಆರ್.ಡಿ ಒ ಸ್ಥಾಪನೆಯಾಯಿತು. ಇಂದು ಡಿ.ಆರ್.ಡಿ ಒ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ವಿದೇಶಗಳೆ ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿವೆ ಎಂದರೆ ಸಂಸ್ಥೆಯ ಕಾರ್ಯ ಕ್ಷಮತೆ ಎಷ್ಟು ಉನ್ನತ ಮಟ್ಟದ್ದಾಗಿರಬೇಕು ಯೋಚಿಸಿ. ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಪ್ರಪಂಚದ ರಾಷ್ಟ್ರಗಳೆ ಮನಸೋತಿವೆ ಮತ್ತು ತಮಗೂ ನಿರ್ಮಿಸಿ ಕೊಡಿ ಎಂದು ಭಾರತಕ್ಕೆ ದಂಬಾಲು ಬಿದ್ದಿವೆ!!

ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಸ್ರೋ ಮತ್ತು ಡಿ.ಆರ್.ಡಿ.ಒ ಭಾಗ್ಯವೆ ಖುಲಾಯಿಸಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಸಂಪೂರ್ಣ ಬಲ ತುಂಬುವ ನಿಟ್ಟಿನಲ್ಲಿ ಸ್ವದೇಶೀ ನಿರ್ಮಿತ ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಮೋದಿ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಿಂದಿನಿಂದಲೂ ಭಾರತಕ್ಕೆ ಪಾಕಿಸ್ತಾನವೆ ಅತಿ ದೊಡ್ಡ ಶತ್ರು ಎಂದು ಭಾವಿಸಲಾಗುತ್ತದೆ. ಆದರೆ ಭಾರತದ ಅತಿ ದೊಡ್ಡ ಶತ್ರು ಚೀನಾ. ಇದನ್ನು ಮನಗಂಡೆ ಮೋದಿ ತಮ್ಮ ರಕ್ಷಣಾ ನಿಲುವಿನಲ್ಲಿ ಬದಲಾವಣೆ ಮಾಡಿದ್ದಾರೆ. ಈಗ ಭಾರತದ ಟಾರ್ಗೆಟ್ ಪಾಕಿಸ್ತಾನ ಅಲ್ಲ. ಬದಲಾಗಿ ಚೀನಾ ಎಂದು ಅಮೇರಿಕಾದ ಪರಮಾಣು ವಿಶೇಷಜ್ಞರೆ ಹೇಳುತ್ತಿದ್ದಾರೆ. ಮೋದಿ ಅವರ “ಟಾರ್ಗೆಟ್ ಚೀನಾ” ಮಿಶನ್ ಶುರುವಾಗಿ ಆಗಲೆ ನಾಲ್ಕು ವರುಷಗಳು ಸಂದಿವೆ ಎಂದು ಬಹುತೇಕರಿಗೆ ಅರಿವಿಲ್ಲ.

‘ಆಫ್ಟರ್ ಮಿಡ್ ನಾಯಿಟ್’ ಎನ್ನುವ ಡಿಗಿಟಲ್ ಜರ್ನಲ್ ನಲ್ಲಿ ಪ್ರಕಟವಾದ ಬರವಣಿಗೆಯ ಪ್ರಕಾರ ಭಾರತವೀಗ ಬಹು ದೂರ ಕ್ರಮಿಸುವ ಸಾಮರ್ಥ್ಯ ಉಳ್ಳ ಕ್ಷಿಪಣಿಗಳನ್ನು ತಯಾರಿಸುತ್ತಲಿದೆ. ದಕ್ಷಿಣ ಭಾರತದಿಂದ ಯಾವ ಕ್ಷೇತ್ರದಲ್ಲಿ ನಿಂತು ಕ್ಷಿಪಣಿ ಉಡಾಯಿಸದರೂ ಅದು ನೇರವಾಗಿ ಚೀನಾ ಎದೆಯನ್ನು ಸೀಳಲಿದೆ ಎಂದು ಅನುಮಾನ ವ್ಯಕ್ತ ಪಡಿಸಲಾಗಿದೆ. ಭಾರತವು ‘ಸೂರ್ಯ’ ಎಂಬ ಕ್ಷಿಪಣಿಯೊಂದನ್ನು ತಯಾರಿಸುತ್ತಿದೆ ಮತ್ತು ಇದು 16 ಸಾವಿರ ಕಿಲೋಮೀಟರ್ ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ಹೆನ್ಸ್ ಮತ್ತು ರಾಬರ್ಟ್ ಎನ್ನುವ ಇಬ್ಬರು ವಿಶೇಷಜ್ಞರ ಪ್ರಕಾರ ಭಾರತದ ಹತ್ತಿರ ಈಗ 600 ಕಿಲೋಗ್ರಾಮ್ ಪ್ಲೂಟೋನಿಯಂ ಇದೆ ಮತ್ತು ಇದರಿಂದ 150-200 ಪ್ರಮಾಣು ಬಾಂಬುಗಳನ್ನು ತಯಾರಿಸಬಹುದು. ಈಗಾಗಲೆ ಭಾರತ 120 ರಿಂದ 130 ಪರಮಾಣು ಬಾಂಬ್ ಗಳನ್ನು ತಯಾರಿಸಿದೆ ಎನ್ನುವುದು ಇವರ ವಾದ.

ಭಾರತದ ಬತ್ತಳಿಕೆಯಲ್ಲಿ ಅಗ್ನಿ, ತ್ರಿಶೂಲ್, ಬ್ರಹ್ಮೋಸ್, ಶೌರ್ಯ, ನಿರ್ಭಯ್, ಪ್ರಹಾರ್, ಅಸ್ತ್ರ, ಬರಾಕ್, ನಾಗ್ ಮುಂತಾದ ಕ್ಷಿಪಣಿಗಳಿದ್ದರೆ, ಅಭ್ಯಾಸ್, ಔರಾ, ಫ್ಲಫಿ, ಇಂಪೀರಿಯಲ್ ಈಗಲ್, ಕಪೋತಕ, ಲಕ್ಷ್ಯ, ನಿಶಾಂತ್, ರುಸ್ತುಂ, ಉಲ್ಕಾ ಎನ್ನುವಂತಹ ಪೈಲಟ್ ರಹಿತ ವಿಮಾನಗಳಿವೆ. ಮಿಗ್, ಸುಖೋಯ್, ಜಾಗ್ವಾರ್ ನಂತಹ ಯುದ್ದ ವಿಮಾನಗಳನ್ನು ಅಭಿವೃದ್ದಿ ಪಡಿಸುತ್ತಲಿದೆ. ಭೂಸೇನೆ, ವಾಯುಸೇನೆ ಮತ್ತು ನೌಕಾದಳಕ್ಕೆ ಬೇಕಾದ ಎಲ್ಲಾ ಉಪಕರಣಗಳನ್ನು ಡಿ.ಆರ್.ಡಿ.ಒ ತಯಾರಿಸುತ್ತಿದೆ ಮತ್ತು ಹೆಚ್.ಎ.ಎಲ್, ಇಸ್ರೋ ಜೊತೆಗೂಡಿ ಹಲವಾರು ಸಂಶೋಧನೆಗಳಲ್ಲಿ ನಿರತವಾಗಿವೆ. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ಕಾಲದಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಾಗುವ ಸ್ಟೆಂಟ್ ಅನ್ನು(ಹೃದಯಾಘಾತ ತಡೆಯುವ ಉಪಕರಣ)ಡಿ.ಆರ್.ಡಿ.ಒ ತಯಾರಿಸಿತ್ತು ಆದರೆ ಕೇಂದ್ರದ ಯೂಪಿಎ ಸರಕಾರ ಅದನ್ನು ಖರೀದಿಸಿ ಜನರಿಗೆ ನೀಡಲು ಅನಾಸಕ್ತಿ ತೋರಿತ್ತು ಎಂದು ಹೇಳಲಾಗುತ್ತದೆ.

ಅಗ್ನಿ ಸರಣಿಯ 1-4 ಕ್ಷಿಪಣಿಗಳನ್ನು ಈಗಾಗಲೆ ಸಫಲತಾ ಪೂರ್ವಕವಾಗಿ ಪರೀಕ್ಷೆ ಮಾಡಲಾಗಿದೆ. ಇದೀಗ ಸರಣಿಯ ಇನ್ನೊಬ್ಬ ಸಹೋದರ ಅಗ್ನಿ-5 ಕೂಡ ತಾನು ಯುದ್ದ ಸನ್ನದ್ಧನಾಗಿದ್ದೇನೆ ಎನ್ನುವ ಸೂಚನೆ ನೀಡಿದೆ. ತನ್ನ ಸಹೋದದರಿಗಿಂತಲೂ ಹೆಚ್ಚು ದೂರ ಕ್ರಮಿಸಬಲ್ಲ ಅಗ್ನಿ 5 ಕ್ಷಿಪಣಿಯನ್ನು ಕೆಲ ದಿನಗಳ ಹಿಂದಷ್ಟೇ ಅಬ್ದುಲ್ ಕಲಾಂ ದ್ವೀಪ ದಿಂದ ಉಡಾಯಿಸಲಾಯಿತು. ಅಗ್ನಿ -5 ತನ್ನ ಪಥವನ್ನು ತಲುಪಿದ ತಕ್ಷಣ ಭೂಮಿಗೆ ತಿರುಗುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಗುರುತ್ವಾಕರ್ಷಣೆಯಿಂದಾಗಿ ಅಗ್ನಿ -5 ವೇಗ ಹೆಚ್ಚುತ್ತದೆ ಮತ್ತು ಉದ್ದೇಶಿತ ಗುರಿಯತ್ತ ಅತಿ ವೇಗವಾಗಿ ತಲುಪುತ್ತದೆ.

ಭೂಮಿಯ ಮೇಲೆ 5,000 ಕಿಲೋಮೀಟರ್ಗಳ ಸ್ಟ್ರೈಕ್ ವ್ಯಾಪ್ತಿ ಹೊಂದಿರುವ ಅಗ್ನಿ-5 ಯಶಸ್ವಿಯಾಗಿ ಬಂಗಾಳ ಕೊಲ್ಲಿಯಿಂದ ಉಡಾಯಿಸಲಾಗಿದೆ. ಅಗ್ನಿ -5ರ ಸಫಲತೆ ಚೀನಾ ನಿದ್ದೆ ಹಾರಿಸಿರುವುದಂತು ಸುಳ್ಳಲ್ಲ. ಮುಂದಿನ ದಿನಗಳಲ್ಲಿ ಭಾರತವು 12 ಸಾವಿರ ಕಿ.ಮೀ ದೂರ ಕ್ರಮಿಸುವ ಅಗ್ನಿ-6 ಅನ್ನು ಅಭಿವೃದ್ದಿ ಪಡಿಸಿ ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿಸಲಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದೇನಾದರೂ ಸಾಧ್ಯವಾದರೆ ಯುದ್ದ ಸಂಧರ್ಭದಲ್ಲಿ ಚೀನಾದ ರಾಜಧಾನಿ ಬೀಜಿಂಗ್ ಕೈ ಅಳತೆಯ ದೂರದಲ್ಲಿರುತ್ತದೆ!! ಭಾರತ ಮಹಾಭಾರತ ಕಾಲದ ಬ್ರಹ್ಮಾಸ್ತ್ರದಂತಹ ಕ್ಷಿಪಣಿ ತಯಾರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎನ್ನಲಾಗಿದೆ. ಬ್ರಹ್ಮಾಸ್ತ್ರ ದೇವತೆಗಳ ಅಸ್ತ್ರವಾಗಿತ್ತು ಮತ್ತು ತನ್ನ ಶತ್ರುವನ್ನು ನಿರ್ನಾಮ ಮಾಡಲು ಕಟ್ಟ ಕಡೆಯ ಅಸ್ತ್ರವಾಗಿ ಉಪಯೋಗಗೊಳ್ಳುತ್ತಿತ್ತು. ಅದಲ್ಲದೆ ತನ್ನ ಟಾರ್ಗೆಟ್ ಅನ್ನು ಧ್ವಂಸ ಮಾಡಿ ಮರಳಿ ಬತ್ತಳಿಕೆಗೆ ಬಂದು ಸೇರುತ್ತಿದ್ದ ಸರ್ಪಾಸ್ತ್ರದಂತಹ ಕ್ಷಿಪಣಿಗಳನ್ನು ತಯಾರಿಸುವ ನಿಟ್ಟಿನಲ್ಲೂ ಭಾರತ ಯೋಚಿಸುತ್ತಿದೆ ಎನ್ನಲಾಗಿದೆ.

ಒಂದು ಕಾಲದಲ್ಲಿ ಈ ಎಲ್ಲಾ ಅಸ್ತ್ರಗಳು ನಮ್ಮಲ್ಲಿ ಇದ್ದವು ಎನ್ನುವುದು ಸತ್ಯ. ಮಹಾಭಾರತ ಕಾಲದಲ್ಲಿ ಪರಮಾಣು ಬಾಂಬ್ ಗಳನ್ನು ಉಪಯೋಗಿಸಲಾಗಿತ್ತು ಎನ್ನುವುದು ಈಗ ಸಂಶೋಧನೆಗಳಿಂದ ತಿಳಿದು ಬರುತ್ತಿದೆ. ಇಡಿಯ ವಿಶ್ವದಲ್ಲೆ ಜಂಬೂದ್ವೀಪ, ಆರ್ಯಾವರ್ತ ಭಾರತ ಶಕ್ತಿಶಾಲಿ ಭೂಭಾಗವಾಗಿತ್ತು. ಹಿಂದಿನಂತೆಯೆ ದಿನೇ ದಿನೇ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಲಿದೆ. ದೊಡ್ಡಣ್ಣ ಅಮೇರಿಕಾ ತನ್ನ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಕಮಾನಿಗೆ ಇಂಡೋ-ಪೆಸಿಫಿಕ್ ಕಮಾಂಡ್ ಎಂದು ಹೆಸರಿಸುವಷ್ಟರ ಮಟ್ಟಿಗೆ ಭಾರತ ತನಗೆ ಅನಿವಾರ್ಯ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಪ್ರಪಂಚದ ದೇಶಗಳೆಲ್ಲ ಭಾರತದ ಸ್ನೇಹಕ್ಕಾಗಿ ಹಾತೊರೆಯುತ್ತಿವೆ, ತಮ್ಮ ಭೂ ಪ್ರದೇಶಗಳನ್ನು ಭಾರತದ ರಕ್ಷಣಾ ನೆಲೆಗಳಿಗೆ ಬಿಟ್ಟುಕೊಡುತ್ತಿವೆ. ಇದೆಲ್ಲಾ ಸಾಧ್ಯವಾದದ್ದು ಮೋದಿ ಅವರಿಂದಾಗಿ.

ಮೋದಿ ಅವರ ಸಫಲ ವಿದೇಶಾಂಗ ನೀತಿಯಿಂದಾಗಿ ಇವತ್ತು ಭಾರತ ವಿಶ್ವ ಮಂಚದಲ್ಲಿ ವಿಶ್ವ ನಾಯಕನಾಗಿ ರೂಪುಗೊಳ್ಳುತ್ತಿದೆ. ಭಾರತ ಯಾವತ್ತೂ ಇತರರಿಗೆ ಕೇಡು ಬಯಸಿಲ್ಲ, ಮುಂದೆ ಕೇಡು ಬಯಸುವುದೂ ಇಲ್ಲ. ಭಾರತ ಯಾವತ್ತೂ ಸರ್ವಾಧಿಕಾರಿ ಧೋರಣೆ ತೋರಲಿಲ್ಲ. ಅಮೇರಿಕಾ ಮತ್ತು ಚೀನಾದ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತ ರಾಷ್ಟ್ರಗಳಿಗೀಗ ಭಾರತವೆ ದೊಡ್ಡಣ್ಣ. ವಿಶ್ವ ಗುರುವಾಗುವತ್ತ ಭಾರತದ ಪಯಣಕ್ಕೆ ಮೋದಿಯೆ ಸಮರ್ಥ ನಾವಿಕ. ಆದ್ದರಿಂದ 2019 ರಲ್ಲಿ ಮೋದಿ ಅವರನ್ನು ಮತ್ತೊಂದು ಅವಧಿಗೆ ಚುನಾಯಿಸಿ ಭಾರತವನ್ನು ಸೂಪರ್ ಪವರ್ ರಾಷ್ಟ್ರವಾಗಿಸಿ..

-ಶಾರ್ವರಿ

Tags

Related Articles

Close